ಮಡಿಕೇರಿ, ಜೂ. ೩: ಕೊಡಗು ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳನ್ನು ಒಳಗೊಂಡ ಕರ್ನಾಟಕ ವಿಧಾನ ಪರಿಷತ್ತಿನ ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಜಿಲ್ಲೆಯಲ್ಲಿ ಶಾಂತಿಯುತ ಹಾಗೂ ವ್ಯವಸ್ಥಿತವಾಗಿ ನಡೆಯಿತು. ಜಿಲ್ಲೆಯ ೫ ತಾಲೂಕುಗಳಲ್ಲಿ ನಡೆದ ಮತದಾನದಲ್ಲಿ ನೋಂದಣಿಗೊAಡ ಅರ್ಹ ಮತದಾರರು ಹಕ್ಕು ಚಲಾಯಿಸಿದರು.

ವಿಧಾನ ಪರಿಷತ್ತಿನಲ್ಲಿ ಪದವೀಧರರು ಹಾಗೂ ಶಿಕ್ಷಕರನ್ನು ಪ್ರತಿನಿಧಿಸುವ ಸದಸ್ಯರನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಈ ಚುನಾವಣೆ ನಡೆಯಿತು. ೩,೯೦೯ ಪದವೀಧರ ಮತದಾರರ ಪೈಕಿ ೩,೧೭೦ ಮತದಾರರು ಮತಚಲಾವಣೆಯಾಗಿ ಶೇ ೮೧.೦೯ ಗುರಿ ಸಾಧಿಸಲಾಯಿತು. ೧೫೭೮ ಶಿಕ್ಷಕ ಮತದಾರರ ಪೈಕಿ ೧೩೭೧ ಮತದಾರರ ಮತದಾನದಲ್ಲಿ ಪಾಲ್ಗೊಂಡು ಶೇ.೮೬.೮೮ ಗುರಿ ತಲುಪಿತು.

ಪದವೀಧರ ಕ್ಷೇತ್ರಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಆಯನೂರು ಮಂಜುನಾಥ್, ಬಿಜೆಪಿ-ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಡಾ. ಧನಂಜಯ ಸರ್ಜಿ, ಪಕ್ಷೇತರರಾಗಿ ಕೆ. ರಘುಪತಿ ಭಟ್, ಜಿ.ಸಿ. ಪಟೇಲ್, ದಿನಕರ ಉಳ್ಳಾಲ್, ಎಸ್.ಪಿ. ದಿನೇಶ್, ಬಿ. ಮಹಮ್ಮದ್ ತುಂಬೆ, ಡಾ. ಶೇಖ್ ಬಾವ, ಜಿ.ಆರ್. ಷಡಾಕ್ಷರಪ್ಪ, ಷಹಾರಾಜ್ ಮುಜಾಹಿದ್ ಸಿದ್ದಿಕ್ಕಿ ಸ್ಪರ್ಧೆ ಮಾಡಿದ್ದಾರೆ. ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಎಸ್.ಎಲ್. ಭೋಜೇಗೌಡ, ಕಾಂಗ್ರೆಸ್ ಬೆಂಬಲಿತರಾಗಿ ಕೆ.ಕೆ. ಮಂಜುನಾಥ್ ಕುಮಾರ್, ಪಕ್ಷೇತರರಾಗಿ ಡಾ. ಅರುಣ್ ಹೊಸಕೊಪ್ಪ, ಡಾ. ನರೇಶ್ಚಂದ್ ಹೆಗ್ಡೆ, ನಂಜೇಶ್ ಬೆಣ್ಣೂರು, ಟಿ. ಭಾಸ್ಕರ್ ಶೆಟ್ಟಿ, ಕೆ.ಕೆ. ಮಂಜುನಾಥ್ ಕುಮಾರ್, ಡಾ. ಎಸ್.ಆರ್. ಹರೀಶ್ ಆಚಾರ್ಯ ಕಣದಲಿದ್ದಾರೆ.

ಮತದಾನ ವಿವರ ಪದವೀಧರ ಕ್ಷೇತ್ರಕ್ಕೆ ಜಿಲ್ಲೆಯ ೫ ತಾಲೂಕುಗಳ ೬ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಿತು. ಜಿಲ್ಲೆಯಲ್ಲಿ ಒಟ್ಟು ೩೯೦೯ ಪದವೀಧರ ಮತದಾರರ ಪೈಕಿ ೩೧೭೦ ಮತದಾರರು ಮತ ಚಲಾವಣೆ ಮಾಡಿದರು.

ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ಬಲಪಾರ್ಶ್ವ ಕೇಂದ್ರದಲ್ಲಿ ೮೧೧ ಮತದಾರರ ಪೈಕಿ ೬೩೯ ಮಂದಿ ಮತ ಚಲಾಯಿಸಿದರು. ಕುಶಾಲನಗರದ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಬಲಪಾರ್ಶ್ವ ಕೇಂದ್ರದಲ್ಲಿ ೭೯೫ ಮತದಾರರ ಪೈಕಿ ೬೧೬ ಮಂದಿ, ಮಡಿಕೇರಿ ನಗರಸಭೆಯ ಬಲಪಾರ್ಶ್ವ ಕೇಂದ್ರದಲ್ಲಿ ೫೭೩ ಮತದಾರರಲ್ಲಿ ೪೮೧ ಮಂದಿ, ನಗರಸಭೆ ಎಡಪಾರ್ಶ್ವದಲ್ಲಿ ೫೭೦ ಮಂದಿ ಮತದಾರರ ಪೈಕಿ ೪೫೦ ಮಂದಿ, ವೀರಾಜಪೇಟೆ ಪುರಸಭೆ ಬಲಪಾರ್ಶ್ವ ಕೇಂದ್ರದಲ್ಲಿ ೬೩೦ ಮತದಾರÀದಲ್ಲಿ ೫೨೫ ಮಂದಿ, ಪೊನ್ನಂಪೇಟೆ ಸರಕಾರಿ ಪದವಿ ಪೂರ್ವ ಕಾಲೇಜು ಬಲಪಾರ್ಶ್ವ ಕೇಂದ್ರದಲ್ಲಿ ೫೩೦ ಮತದಾರರ ಪೈಕಿ ೪೫೯ ಮಂದಿ ಮತದಾನ ಮಾಡಿದರು.

ಜಿಲ್ಲೆಯ ೫ ಮತದಾನ ಕೇಂದ್ರಗಳಲ್ಲಿ ಶಿಕ್ಷಕರ ಕ್ಷೇತ್ರಕ್ಕೆ ಮತದಾನ ನಡೆಯಿತು. ಒಟ್ಟು ೧೫೭೮ ಮತದಾರರಲ್ಲಿ ೧೩೭೧ ಮಂದಿ ಮತದಾನ ಮಾಡಿದರು.

(ಮೊದಲ ಪುಟದಿಂದ) ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಎಡಪಾರ್ಶ್ವ ಕೇಂದ್ರದಲ್ಲಿ ೨೩೪ ಮತದಾರರ ಪೈಕಿ ೨೧೩ ಮಂದಿ, ಕುಶಾಲನಗರ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಎಡಪಾರ್ಶ್ವ ಕೇಂದ್ರದಲ್ಲಿ ೩೩೭ ಮತದಾರರಲ್ಲಿ ೩೦೧ ಮಂದಿ, ಮಡಿಕೇರಿ ಕಾವೇರಿ ಕಲಾಕ್ಷೇತ್ರದ ಕೇಂದ್ರದಲ್ಲಿ ೪೪೧ ಮತದಾರರಲ್ಲಿ ೩೭೨ ಮಂದಿ, ವೀರಾಜಪೇಟೆ ಪುರಸಭೆ ಎಡಪಾರ್ಶ್ವದಲ್ಲಿ ೨೬೮ ಮತದಾರರಲ್ಲಿ ೨೨೮ ಮಂದಿ, ಪೊನ್ನಂಪೇಟೆ ಸರಕಾರಿ ಪದವಿ ಪೂರ್ವ ಕಾಲೇಜು ಎಡಪಾರ್ಶ್ವ ಕೇಂದ್ರದಲ್ಲಿ ೨೯೮ ಮತದಾರರ ಪೈಕಿ ೨೫೭ ಮಂದಿ ಮತದಾನ ಮಾಡಿದರು.

ಉತ್ಸಾಹದ ವೋಟಿಂಗ್

ಜಿಲ್ಲೆಯಲ್ಲಿ ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿದ ಮತದಾರರು ಮತದಾನದಲ್ಲಿ ತೊಡಗಿಸಿಕೊಂಡರು. ಬೆಳಿಗ್ಗೆ ೮ ಗಂಟೆಗೆ ಮತದಾನ ಪ್ರಕ್ರಿಯೆ ಆರಂಭಗೊAಡಿತು. ಪ್ರತಿ ಮತಗಟ್ಟೆಗಳಲ್ಲಿ ತಲಾ ನಾಲ್ಕು ಸಿಬ್ಬಂದಿ ಕಾರ್ಯನಿರ್ವಹಿಸಿದರು. ಬ್ಯಾಲೆಟ್ ಪೇಪರ್‌ನಲ್ಲಿ ಪ್ರಾಶಸ್ತö್ಯ ಮತಗಳ ಆಧಾರದಲ್ಲಿ ಮತದಾರರು ಮತ ಚಲಾವಣೆ ಮಾಡಿದರು. ಸಂಜೆ ೪ ಗಂಟೆ ತನಕ ಮತದಾನ ನಡೆಯಿತು. ಮತಗಟ್ಟೆ ವ್ಯಾಪ್ತಿಯಲ್ಲಿ ಸೂಕ್ತ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು.

ಬೆಳಿಗ್ಗೆ ೮ ರಿಂದ ೧೦ ಗಂಟೆ ಅವಧಿಯಲ್ಲಿ ೩,೯೦೯ ಪದವೀಧರ ಮತದಾರರ ಪೈಕಿ ೭೮೫ ಮತದಾರರು (ಶೇ ೨೦.೮), ಶಿಕ್ಷಕರ ಕ್ಷೇತ್ರದ ೧೫೭೮ ಮತದಾರರ ಪೈಕಿ ೩೫೮ ಮತದಾರರು (ಶೇ ೨೨.೬೯), ೧೨ ಗಂಟೆ ಹೊತ್ತಿಗೆ ಪದವೀಧರ ಕ್ಷೇತ್ರದಲ್ಲಿ ೧,೬೭೫ (ಶೇ ೪೨.೮೫), ಶಿಕ್ಷಕರರ ಕ್ಷೇತ್ರದಲ್ಲಿ ೭೪೬ (ಶೇ ೪೭.೨೮), ಮ. ೨ ಗಂಟೆಯಲ್ಲಿ ಪದವೀಧರ ಕ್ಷೇತ್ರದಲ್ಲಿ ೨,೪೪೦ (ಶೇ ೬೨.೪೨), ಶಿಕ್ಷಕರ ಕ್ಷೇತ್ರದಲ್ಲಿ ೧,೦೪೮ (ಶೇ ೬೬.೪೧),

ಸಂಜೆ ೪ ಗಂಟೆ ಹೊತ್ತಿಗೆ ಪದವೀಧರ ಕ್ಷೇತ್ರದಲ್ಲಿ ೩೧೭೦ (ಶೇ ೮೧.೯), ಶಿಕ್ಷಕರ ಕ್ಷೇತ್ರದಲ್ಲಿ ೧,೩೭೧ ಮತಗಳು (ಶೇ ೮೬.೮೮) ಚಲಾವಣೆಗೊಂಡವು.

ಪಕ್ಷದ ಚಿಹ್ನೆಗಳಡಿ ಚುನಾವಣೆ ನಡೆಯದಿದ್ದರೂ ಮೇಲ್ಮನೆಯಲ್ಲಿ ರಾಜಕೀಯ ಪಕ್ಷಗಳ ಪ್ರಾತಿನಿಧ್ಯ ಇರಬೇಕೆಂಬ ಸಲುವಾಗಿ ಬೆಂಬಲಿತರನ್ನು ಪಕ್ಷಗಳು ಕಣಕ್ಕಿಳಿಸಿವೆ. ಈ ಹಿನ್ನೆಲೆ ಮತಕೇಂದ್ರದ ಹೊರಭಾಗದಲ್ಲಿ ಕೊನೆಘಳಿಗೆಯಲ್ಲಿ ಮತದಾರರನ್ನು ಮನವೊಲಿಸುವ ಕೆಲಸಗಳು ಪಕ್ಷಗಳ ಕಾರ್ಯಕರ್ತರು ಮಾಡುತ್ತಿದದ್ದು ಕಂಡುಬAತು.

ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಪೊನ್ನಂಪೇಟೆಯಲ್ಲಿ, ಮಡಿಕೇರಿ ಶಾಸಕ ಮಂತರ್ ಗೌಡ ಸೋಮವಾರಪೇಟೆಯಲ್ಲಿ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ, ಉಪವಿಭಾಗಾಧಿಕಾರಿ ವಿನಾಯಕ್ ನರ್ವಾಡೆ, ಅಪರ ಜಿಲ್ಲಾಧಿಕಾರಿ ಬಿ.ಎನ್. ಮಡಿಕೇರಿ : ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ವ್ಯವಸ್ಥಿತವಾಗಿ ಮತದಾನ ಪ್ರಕ್ರಿಯೆ ನಡೆಯಿತು. ನಗರಸಭೆ ಹಾಗೂ ಕಾವೇರಿ ಕಲಾಕ್ಷೇತ್ರದಲ್ಲಿ ಪ್ರತ್ಯೇಕ ಮತಗಟ್ಟೆಗಳನ್ನು ೨ ಕ್ಷೇತ್ರಗಳ ಮತದಾನಕ್ಕಾಗಿ ತೆರೆೆಯಲಾಗಿತ್ತು.

ಕೇಂದ್ರದ ಸುತ್ತ ಬಿಗಿ ಪೊಲೀಸ್ ಭದ್ರತೆಯನ್ನು ವಹಿಸಲಾಗಿತ್ತು. ಕಾಂಗ್ರೆಸ್, ಬಿಜೆಪಿ ಪಕ್ಷಗಳ ಕಾರ್ಯಕರ್ತರು ರಸ್ತೆಯ ಬದಿಗಳಲ್ಲಿ ನಿಂತು ತಮ್ಮ ತಮ್ಮ ಅಭ್ಯರ್ಥಿಗಳ ಪರ ಮತಯಾಚಿಸುತ್ತಿದದ್ದು ಕಂಡು ಬಂತು. ಅರ್ಹ ಮತದಾರರು ಉತ್ಸಾಹದಿಂದ ಕೇಂದ್ರಕ್ಕೆ ಆಗಮಿಸಿ ಹಕ್ಕು ಚಲಾವಣೆ ಮಾಡಿದರು.

ಪದವೀಧರ ಕ್ಷೇತ್ರಕ್ಕೆ ಮಡಿಕೇರಿ ನಗರಸಭೆಯ ಬಲಪಾರ್ಶ್ವ ಕೇಂದ್ರದಲ್ಲಿ ೫೭೩ ಮತದಾರರಲ್ಲಿ ೪೮೧ ಮಂದಿ, ನಗರಸಭೆ ಎಡಪಾರ್ಶ್ವದಲ್ಲಿ ೫೭೦ ಮಂದಿ ಮತದಾರರ ಪೈಕಿ ೪೫೦ ಮಂದಿ ಮತ ಚಲಾವಣೆಗೈದರು. ಶಿಕ್ಷಕರ ಕ್ಷೇತ್ರಕ್ಕೆ ಕಾವೇರಿ ಕಲಾಕ್ಷೇತ್ರದಲ್ಲಿ ಚುನಾವಣೆ ನಡೆಯಿತು. ೪೪೧ ಮತದಾರರಲ್ಲಿ ೩೭೨ ಮಂದಿ ಮತದಾನ ಮಾಡಿದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ವರ್ಣಿತ್ ನೇಗಿ, ಉಪವಿಭಾ ಗಾಧಿಕಾರಿ ವಿನಾಯಕ್ ನರ್ವಾಡೆ, ಅಪರ ಜಿಲ್ಲಾಧಿಕಾರಿ ಬಿ.ಎನ್. ವೀಣಾ, ಮಾಜಿ ಶಾಸಕ ಕೆ.ಜಿ. ಬೋಪಯ್ಯ ಪತ್ನಿ ಕುಂತಿ ಅವರೊಂದಿಗೆ ನಗರಸಭೆ ಯಲ್ಲಿ ಮತದಾನ ಮಾಡಿದರು. ಸೋಮವಾರಪೇಟೆ : ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿರುವ ನೈಋತ್ಯ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದ ಚುನಾವಣೆ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಮತಗಟ್ಟೆ ಎದುರು ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳ ಪರವಾಗಿ ಕಾರ್ಯಕರ್ತರುಗಳು ಹಾಗೂ ಬೆಂಬಲಿಗರು ಅಂತಿಮ ಹಂತದಲ್ಲೂ ಭರ್ಜರಿ ಪ್ರಚಾರ ಮಾಡಿದರು.

ಸೋಮವಾರಪೇಟೆ ತಾಲೂಕು ವ್ಯಾಪ್ತಿಗೆ ಒಳಪಟ್ಟ ಮತದಾರರಿಗೆ ಪಟ್ಟಣ ಪಂಚಾಯಿತಿಯಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರಕ್ಕೆ ಪ್ರತ್ಯೇಕ ಮತಗಟ್ಟೆಗಳನ್ನು ತೆರೆದು ಸುಸೂತ್ರವಾಗಿ ಮತದಾನ ಪ್ರಕ್ರಿಯೆ ನಡೆಸಲಾಯಿತು.

ಬೆಳಿಗ್ಗೆ ೮ ಗಂಟೆಯಿAದ ಸಂಜೆ ೪ ಗಂಟೆಯವರೆಗೆ ನಡೆದ ಮತದಾನ ಪ್ರಕ್ರಿಯೆ ಶಾಂತಿಯುತವಾಗಿತ್ತು. ಬೆಳಿಗ್ಗೆ ಮಂದಗತಿಯಲ್ಲಿದ್ದ ಮತದಾನ ಮಧ್ಯಾಹ್ನ ನಂತರ ಚುರುಕು ಪಡೆಯಿತು. ಅಂತಿಮವಾಗಿ ಶಿಕ್ಷಕರ ಕ್ಷೇತ್ರದಲ್ಲಿ ಶೇ. ೯೧.೦೩ ಹಾಗೂ ಪದವೀಧರ ಕ್ಷೇತ್ರದಲ್ಲಿ ೭೮.೭೯ರಷ್ಟು ಮತದಾನವಾಯಿತು.

ಶಿಕ್ಷಕರ ಕ್ಷೇತ್ರದಿಂದ ೯೪ ಶಿಕ್ಷಕರು, ೧೧೯ ಶಿಕ್ಷಕಿಯರು ಸೇರಿದಂತೆ ಒಟ್ಟು ೨೩೧ ಮಂದಿ ಮತದಾನ ಮಾಡಿದರು. ಪದವೀಧರ ಕ್ಷೇತ್ರದಿಂದ ೩೨೩ ಪುರುಷರು, ೩೧೬ ಮಹಿಳಾ ಮತದಾರರು ಸೇರಿದಂತೆ ಒಟ್ಟು ೬೩೯ ಮಂದಿ ಮತದಾನ ಮಾಡಿದರು. ಈ ಕ್ಷೇತ್ರಕ್ಕೆ ಸಂಬAಧಿಸಿAತೆ ಒಟ್ಟು ೮೧೧ ಮತದಾರರಿದ್ದರು. ಶಿಕ್ಷಕರ ಕ್ಷೇತ್ರದಿಂದ ೨೩೪ ಮಂದಿ ಮತದಾರರಿದ್ದರು.

ಬೆಳಿಗ್ಗೆ ೮ ಗಂಟೆಗೆ ಆರಂಭವಾದ ಮತದಾನದಲ್ಲಿ ಬ್ಯಾಲೆಟ್ ಪೇಪರ್ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಒಂದು ಮತಗಟ್ಟೆಯಲ್ಲಿ ಮೂವರು ಪೋಲಿಂಗ್ ಆಫೀಸರ್, ಓರ್ವ ಮೈಕ್ರೋ ಅಬ್ಸರ್‌ವರ್, ಈರ್ವರು ಪೊಲೀಸ್ ಸಿಬ್ಬಂದಿ ಸೇರಿದಂತೆ ಒಟ್ಟು ೬ ಮಂದಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಮಾದರಿ ನೀತಿ ಸಂಹಿತೆ ಅಧಿಕಾರಿಯಾಗಿ ತಾಲೂಕು ತಹಶೀಲ್ದಾರ್ ನವೀನ್‌ಕುಮಾರ್ ಅವರು ಕಾರ್ಯ ನಿರ್ವಹಿಸಿದರು.

ಭರ್ಜರಿ ಪ್ರಚಾರ: ಅಂತಿಮ ಕ್ಷಣದವರೆಗೂ ಸ್ಥಳೀಯ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಕಾರ್ಯಕರ್ತರುಗಳು ತಮ್ಮ ಅಭ್ಯರ್ಥಿಗಳ ಪರವಾಗಿ ಮತಗಟ್ಟೆಯ ಹೊರಭಾಗದಲ್ಲಿ ಪ್ರಚಾರ ನಡೆಸಿದರು. ಇವರುಗಳೊಂದಿಗೆ ಪಕ್ಷೇತರ ಅಭ್ಯರ್ಥಿಗಳಾದ ರಘುಪತಿ ಭಟ್ ಹಾಗೂ ಎಸ್.ಪಿ. ದಿನೇಶ್ ಅವರುಗಳ ಪರವಾಗಿ ಬೆಂಬಲಿಗರು ಮಂಗಳೂರು ಹಾಗೂ ಶಿವಮೊಗ್ಗದಿಂದ ಆಗಮಿಸಿ ಪ್ರಚಾರ ಕಣದಲ್ಲಿ ಇದ್ದು, ಮತದಾರರ ಮನವೊಲಿಕೆ ಮಾಡುತ್ತಿದ್ದುದು ವಿಶೇಷವಾಗಿತ್ತು.

ಮತದಾನದ ವಿಶೇಷತೆ: ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಪದವೀಧರ ಕ್ಷೇತ್ರದ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತಗಟ್ಟೆಯ ಹೊರಗೆ ಭರ್ಜರಿ ಪ್ರಚಾರ ನಡೆಸಿದರು.

ತಮ್ಮ ಪಕ್ಷದ ಅಭ್ಯರ್ಥಿಗಳ ಬಗ್ಗೆ ಮಾಹಿತಿಯುಳ್ಳ ಕರಪತ್ರವನ್ನು ನೀಡಿ ಮನವೊಲಿಸುವ ಪ್ರಯತ್ನ ಮುಂದುವರೆಸಿದ್ದರು. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಕಾರ್ಯಕರ್ತರು ಜೊತೆಯಾಗಿ ಮತಯಾಚನೆ ಮಾಡಿದರು. ಕಾಲಿನ ಮೂಳೆ ಮುರಿತಕ್ಕೊಳಗಾಗಿದ್ದ ಕಿರಿಕೊಡ್ಲಿ ಮಠದ ಪಿಯು ಕಾಲೇಜಿನ ಪ್ರಾಂಶುಪಾಲೆ ತನುಜ ನಂಜುAಡ ಅವರು ವಾಕಿಂಗ್ ಸ್ಟಿಕ್ ಹಿಡಿದುಕೊಂಡು ತಮ್ಮ ಪತಿಯ ಸಹಾಯದಿಂದ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು. ಶನಿವಾರಸಂತೆ ಸೆಕ್ರೇಡ್ ಹಾರ್ಟ್ ಶಾಲೆಯ ಶಿಕ್ಷಕಿಯೋರ್ವರು ತಮ್ಮ ಹಸುಗೂಸನ್ನು ಎತ್ತಿಕೊಂಡೇ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.

ಶಾಸಕ ಮಂತರ್ ಗೌಡ ಅವರು ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ ನಂತರ ಹೊರಭಾಗದಲ್ಲಿದ್ದ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದರು. ಮಾಜಿ ಶಾಸಕ ಅಪ್ಪಚ್ಚು ರಂಜನ್ ಅವರು ಮತಗಟ್ಟೆಗೆ ಆಗಮಿಸಿ ಬಿಜೆಪಿ ಕಾರ್ಯಕರ್ತರೊಂದಿಗೆ ಬೆರೆತು ಕೆಲಕಾಲ ಮತಯಾಚನೆ ಮಾಡಿದರು. ಒಟ್ಟಾರೆ ಮತದಾನ ಪ್ರಕ್ರಿಯೆ ಯಾವುದೇ ಗೊಂದಲಗಳಿಲ್ಲದೇ ಸುಸೂತ್ರವಾಗಿ ನಡೆಯಿತು.