ವೇಗಕ್ಕೆ ಕಡಿವಾಣ ಇಲ್ಲದಿದ್ದಾಗ ಅಪಘಾತಗಳು ಹೆಚ್ಚು ಹೆಚ್ಚು ಸಂಭವಿಸುತ್ತವೆ ಎಂಬುದನ್ನು ಅಂಕಿ ಅಂಶಗಳು ಹೇಳುತ್ತಿವೆಯಾದರೂ, ನಿಜವಾಗಿಯೂ ವಾಹನಗಳ ವೇಗಕ್ಕೆ ಕಡಿವಾಣ ಹಾಕುವಲ್ಲಿ ಸಾರ್ವಜನಿಕರು ವಿಫಲವಾಗುತ್ತಿದ್ದಾರೆ. ಕಾರಣಗಳನ್ನು ಹುಡುಕುತ್ತಿದ್ದರೆ ಆಧುನಿಕತೆಯ ಭರದಲ್ಲಿ ಹೆಚ್ಚು ಹೆಚ್ಚು ವೇಗದಲ್ಲಿ ಚಲಿಸುವ ವಾಹನಗಳನ್ನು ತಯಾರು ಮಾಡುವಲ್ಲಿ ವಾಹನಗಳ ಕಂಪೆನಿಗಳು ತಮ್ಮ ಪ್ರತಿಷ್ಠೆಯನ್ನಾಗಿ ಮಾಡುವಲ್ಲಿ ಸಫಲತೆಯನ್ನು ಕಂಡುಕೊAಡು ದೇಶ ವಿದೇಶದಲ್ಲಿ ತಾವು ತಮ್ಮ ವಾಹನಗಳ ತಯಾರಿಕೆಯನ್ನು ಹೆಚ್ಚು ಮಾಡುತ್ತಿವೆ.

ಯುವ ಪೀಳಿಗೆಯನ್ನು ವಾಹನಗಳತ್ತಾ ಆಕರ್ಷಿಸುವಲ್ಲಿ ತಕ್ಕುದಾದ ಜಾಹೀರಾತನ್ನು ತಯಾರು ಮಾಡಿ ವಾಹನಗಳನ್ನು ಕೊಂಡುಕೊಳ್ಳುವAತೆ ಮಾಡಿ ವ್ಯಾಪಾರವನ್ನು ವೃದ್ಧಿಸುವಲ್ಲಿ ತಮ್ಮ ಗುರಿಯನ್ನು ಮುಟ್ಟುತ್ತಿವೆ. ಮಾಸಿಕ, ತ್ರೈಮಾಸಿಕ ಹಾಗೂ ವಾರ್ಷಿಕವಾಗಿ ಬರುವ ಲಾಭವನ್ನು ಗಳಿಸುತ್ತಿವೆ. ಮಾಧ್ಯಮಗಳಲ್ಲಿ ಅದನ್ನು ಪ್ರಚುರಪಡಿಸುತ್ತವೆ.

ವಾರ್ಷಿಕವಾಗಿ ಅಪಘಾತಗಳು ಹೆಚ್ಚುತ್ತಿದ್ದು, ಸಾವು-ನೋವುಗಳು ಜಾಸ್ತಿಯಾಗುತ್ತಿವೆ. ವೇಗದ ಮಿತಿ ಮೀರುತ್ತಿರುವುದರಿಂದ ಅನ್ನುವುದು ಕೂಡ ಸತ್ಯ. ಜನಸಂಖ್ಯೆ ಹೆಚ್ಚಾದಂತೆ ವಾಹನಗಳು ಹೆಚ್ಚಾಗುತ್ತಿವೆ. ಬೇಡಿಕೆಯನ್ನು ಪೂರೈಸುವಲ್ಲಿ ಹೆಚ್ಚಾದ ಒತ್ತಡವನ್ನು ವಾಹನ ಕಂಪೆನಿಗಳು ತಾಮುಂದು ನಾಮುಂದು ಎಂದು ಯುವ ಪೀಳಿಗೆಯನ್ನು ತಮ್ಮತ್ತಾ ಆಕರ್ಷಿಸುವಲ್ಲಿ ಕಾರಣವನ್ನು ಕಂಡುಕೊಳ್ಳುತ್ತಿರುವುದಾಗಿದೆ. ಅಪಘಾತಗಳು ಸಂಭವಿಸಿದಾಗ ನೆನಪಾಗುವುದು ಪೊಲೀಸರು ಮಾತ್ರ. ಕೆಲವು ಮಾಧ್ಯಮಗಳು ಕೂಡಲೇ ವರದಿಯನ್ನು ಪೊಲೀಸರ ವಿಫಲತೆ ಎಂದೇ ಬಿಂಬಿಸುತ್ತವೆ. ಅಪಘಾತಕ್ಕೆ ಯಾವುದೇ ಉದ್ದೇಶವಿಲ್ಲದಿದ್ದರೂ ಕಾರಣ ಮಾತ್ರ ವೇಗ. ಶೇ. ೯೦ ರಷ್ಟು ಚಾಲಕನ ನಿರ್ಲಕ್ಷವೇ ಕಾರಣ. ಗುಂಡಿ ಬಿದ್ದ ರಸ್ತೆಗಳು ಶೇ. ೪ ರಷ್ಟಾದರೆ, ಶೇ. ೩ ರಷ್ಟು ಅಪಘಾತಗಳು ಪ್ರಾಣಿಗಳಿಂದ ಸಂಭವಿಸುತ್ತವೆ. ಶೇ. ೧ ರಷ್ಟು ವಾಹನಗಳು ಅದರ ಕಾರ್ಯಕ್ಷಮತೆ ಮತ್ತು ತಯಾರಿಕೆಯಲ್ಲಿಯ ದೋಷಗಳು ಕಾರಣ ಅನ್ನುವುದು ಮತ್ತು ಶೇ. ೨ ರಷ್ಟು ಮಾತ್ರ ಪ್ರಾಕೃತಿಕ ವಿಕೋಪಗಳು ಕಾರಣ ಎನ್ನುತ್ತಾರೆ ತಜ್ಞರು.

ವಾಹನ ತಯಾರಿಸುವ ಕಂಪೆನಿಗಳು ಮುಂದುವರೆದ ರಾಷ್ಟçಗಳಂತೆ ತಯಾರು ಮಾಡಿದರೂ ಸರಿಯಾದ ರಸ್ತೆಗಳು ಆ ವಾಹನಗಳಿಗೆ ಹೊಂದಿಕೊಳ್ಳುವಲ್ಲಿ ನಿಖರವಾದ ಕ್ಷಮತೆಯನ್ನು ತೋರಿಸಲಾರದು ಎನ್ನುವುದು ಕೂಡ ಚರ್ಚೆಯ ವಿಷಯ.

ಇತ್ತೀಚಿನ ದಿನಗಳಲ್ಲಿ ಪ್ರಬಲವಾದ ಇನ್ನೊಂದು ಕಾರಣ ಮೊಬೈಲ್. ಯುವ ಪೀಳಿಗೆ ಬೆರಳು ತುದಿಯಲ್ಲಿ ಪ್ರಪಂಚವನ್ನು ಕಾಣುವ ಭರದಲ್ಲಿ ವಾಹನ ಚಲಾಯಿಸುವಾಗಲು ಮೊಬೈಲ್ ಬಳಸಿ ಅಪಘಾತಕ್ಕೆ ಕಾರಣರಾಗುತ್ತಾರೆ. ಹೆತ್ತವರಿಗೆ ಮಾತ್ರವಲ್ಲದೇ ಕುಟುಂಬದ ಜವಾಬ್ದಾರಿ ಹೊತ್ತವರಿಗೆ ಜೀವನ ಪರ್ಯಂತ ಕೊರಗುವಂತೆ ಮಾಡಿ ತಮ್ಮ ಜೀವವನ್ನೇ ಕಳೆದುಕೊಳ್ಳುತ್ತಾರೆ. ಕೆಲವೊಮ್ಮೆ ಕೊನೆಯವರೆಗೂ ಹಾಸಿಗೆಯಲ್ಲಿಯೇ ಜೀವನ ಕಳೆಯುತ್ತಾರೆ.

ಇನ್ನೊಂದು ವಿಷಯವೂ ಸೋಜಿಗವಾದರೂ ಅಷ್ಟೇ ಸತ್ಯ. ವಿದೇಶಗಳಲ್ಲಿ ಚಾಲನ ಪರವಾನಿಗೆ ಇಲ್ಲದ ವಾಹನ ಚಾಲನೆ ಅಪರಾಧ ಮತ್ತು ಚಾಲಕನ ಸೀಟಿನಲ್ಲಿ ಕುಳಿತುಕೊಳ್ಳುವುದು ಕಾನೂನಿನಂತೆ ಅಪರಾಧವು ಹೌದು. ಅಮೇರಿಕಾದಲ್ಲಿ ವಯಸ್ಸಾದವರು ರಸ್ತೆ ದಾಟುತ್ತಿದ್ದರೆ ಯಾವುದೇ ವಾಹನವಿರಲಿ ತಕ್ಷಣ ನಿಲ್ಲಿಸಿ ಅವರಿಗೆ ರಸ್ತೆ ದಾಟಲು ಅನುವು ಮಾಡಿಕೊಡಲಾಗುತ್ತದೆ. ಅದೇ ಭಾರತದಲ್ಲಿ ಹೇಗೆ ಎನ್ನುವುದನ್ನು ಬರೆಯುವಂತಿಲ್ಲ. ಓದುಗರ ವಿವೇಚನೆಗೆ ಬಿಡಬೇಕಾಗುತ್ತದೆ. ವಿದೇಶದಲ್ಲಿರುವಂತೆ ವಾಹನ ತಯಾರಿಕೆಯಲ್ಲಿ ಭಾರತವು ಕೂಡ ಮುನ್ನಲೆಗೆ ಬರುತ್ತಿದೆ. ವಿದೇಶಿ ಸಹಯೋಗದೊಂದಿಗೆ ಭಾರತದಲ್ಲಿ ವಾಹನಗಳನ್ನು ತಯಾರು ಮಾಡಿ ತಮ್ಮ ಕಂಪೆನಿಗಳನ್ನು ಜಾಗತಿಕ ಮಟ್ಟದಲ್ಲಿ ಬೆಳೆಯುವಂತೆ ನೋಡಿಕೊಳ್ಳುತ್ತಿವೆ. ಅತಿ ಜನಸಂದಣಿ ಹೊಂದಿದ ನಗರಗಳಲ್ಲಿ ಇತ್ತೀಚೆಗೆ ನಮ್ಮ ರಾಜಧಾನಿ ಬೆಂಗಳೂರು ಕೂಡ ಒಂದು. ಜಾಗತಿಕ ಮಟ್ಟದಲ್ಲಿ ಸಿಲಿಕಾನ್ ಸಿಟಿ ಎಂದು ಗೌರವ ಪಡೆದರೂ ವಾಹನಗಳಲ್ಲಿ ಪ್ರಯಾಣಿಸುವುದು ಅಷ್ಟೇ ಕಷ್ಟ. ಸರಕಾರ ವಿವಿಧ ರೀತಿಯ ಸಾರಿಗೆ ವ್ಯವಸ್ಥೆಯನ್ನು ಮಾಡುತ್ತಿದ್ದರೂ, ವಾಹನಗಳ ಸಂಖ್ಯೆ ದಿನ ದಿನ ಹೆಚ್ಚುತ್ತಲೇ ಇದ್ದು ಅತಿ ಕಳವಳಕಾರಿಯೂ ಆಗಿದೆ. ವಾಹನಗಳು ಸೂಸುವ ಹೊಗೆ ಪರಿಸರ ಮಾಲಿನ್ಯವನ್ನುಂಟು ಮಾಡುತ್ತಲೇ ಇದ್ದು, ಜನರ ಬದುಕನ್ನು ಆಸ್ಪತ್ರೆ ಕಡೆಗೆ ಒಯ್ಯುವಂತೆ ಮಾಡಿ, ಜೀವಿತದ ಅವಧಿಯನ್ನು ಕಡಿಮೆ ಮಾಡುವಷ್ಟು ಕಾರಣವಾಗಿದೆ. ಆಧುನಿಕತೆಯಲ್ಲಿ ವಿದ್ಯುತ್ ಚಾಲಿತ ವಾಹನಗಳು ರಸ್ತೆಗೆ ಬಂದಿದ್ದು ನಿಧಾನವಾಗಿ ಅದರೆಡೆಗೆ ಜನರು ಒಲವು ತೋರುತ್ತಿರುವುದು ಸಂತಸವನ್ನುAಟು ಮಾಡಿದೆ. ಇದರಿಂದ ವಾಯು ಮಾಲಿನ್ಯ ಕಡಿಮೆಯಾಗುವು ದರಲ್ಲಿ ಸಂಶಯವಿಲ್ಲ. ದೇಶದ ರಾಜಧಾನಿಯಂತೂ ಜನರ ಬದುಕನ್ನೇ ಪರಿಸರ ಮಾಲಿನ್ಯದಿಂದ ಕಸಿದುಕೊಳ್ಳುತ್ತಿದೆ. ಸರಕಾರ ವಿವಿಧ ರೀತಿಯಲ್ಲಿ ಹಲವು ಹೊಸ-ಹೊಸ ಯೋಜನೆಗಳನ್ನು ತಂದಿದ್ದರೂ ಸಫಲತೆ ಕಾಣಲು ಹೆಣಗಾಡುತ್ತಿದೆ. ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಸಮ ಸಂಖ್ಯೆ ಮತ್ತು ಬೆಸ ಸಂಖ್ಯೆಯ ವಾಹನಗಳನ್ನು ದಿನ ಬಿಟ್ಟು ದಿನ ರಸ್ತೆಯಲ್ಲಿ ಚಲಾಯಿಸಲು ಅನುಮತಿಸುವುದು ಕೂಡ ಒಂದು. ಸರಕಾರಿ ವಾಹನಗಳಲ್ಲಿ ಸಂಚರಿಸುವಾಗ ಬಳಕೆಯನ್ನು ಕಡಿಮೆ ಮಾಡುವುದು ಮತ್ತು ಅವಧಿ ಮೀರಿದ ವಾಹನಗಳನ್ನು ಕಡ್ಡಾಯವಾಗಿ ರಸ್ತೆಗೆ ಬಿಡದೆ ವಾಪಸ್ ನೀಡಿ ಅದರಂತೆ ಹೊಸ ವಾಹನಕೊಂಡುಕೊಳ್ಳಲು ತೆರಿಗೆ ರಿಯಾಯಿತಿ ಘೋಷಿಸಿರುವುದು ಒಂದು ಉತ್ತಮ ಕೆಲಸವಾಗಿದೆ. ವಾಹನಗಳನ್ನು ಕಡ್ಡಾಯವಾಗಿ ತನ್ನ ಮನೆಯ ಒಳಗಡೆ ನಿಲ್ಲಿಸುವುದು ಕೂಡ ಒಂದು. ತಮಗೆ ವಾಹನ ನಿಲ್ಲಿಸಲು ಸ್ಥಳವಕಾಶವಿಲ್ಲದಿದ್ದರೆ ವಾಹನಕೊಳ್ಳಲು ಅನುಮತಿಸದಿರುವುದು, ದೇಶದ ರಾಜಧಾನಿ ಮಾತ್ರವಲ್ಲದೇ ಯಾವುದೇ ನಗರ, ಪಟ್ಟಣಗಳಲ್ಲಿ ರಾತ್ರಿ ಒಂದು ಸುತ್ತು ಹೊರಟರೇ ಅದರ ಅರಿವಾಗುತ್ತದೆ. ಎಷ್ಟು ವಾಹನಗಳು ರಸ್ತೆಯ ಬದಿಯಲ್ಲಿ ನಿಲುಗಡೆಗೊಳ್ಳುತ್ತವೆಂಬುದು. ಇದು ಪೊಲೀಸರಿಗೆ ತಲೆನೋವು, ಸಂಕಷ್ಟದ ಕೆಲಸವಾಗಿದೆ. ಕಳ್ಳರ ಕೈಚಳಕ ಕೂಡ ಇಲ್ಲಿ ವ್ಯವಸ್ಥಿತವಾಗಿ ಆಗುತ್ತಿರುವುದು, ನಂತರ ಪೊಲೀಸ್ ಠಾಣೆಗೆ ದೂರು ನೀಡಿ ನಮ್ಮ ವಾಹನವನ್ನು ಪೊಲೀಸರು ಪತ್ತೆ ಮಾಡಲಿಲ್ಲ ಎಂಬ ದೂರು ಕೂಡ ಸುಲಭವಾಗಿ ಬರುತ್ತದೆ. ತಮ್ಮ ತಪ್ಪನ್ನು ಸಾರ್ವಜನಿಕರು ಒಪ್ಪಲು ತಯಾರಿರುವುದಿಲ್ಲ.

ನಗರ ಪ್ರದೇಶಗಳಲ್ಲಿ ಪೊಲೀಸರು ಎಷ್ಟು ದಂಡ ಹಾಕಿದರೂ, ಸರಕಾರಗಳು ಎಷ್ಟೇ ಕಾನೂನನ್ನು ಬಿಗಿಗೊಳಿಸಿದರೂ ವಿಫಲವಾಗುತ್ತಿರುವುದು ಸಹಜವಾಗಿದೆ. ಸುಪ್ರಿಂಕೋರ್ಟ್ ನೀಡಿರುವ ಕಾನೂನನ್ನು ಎಷ್ಟು ಕಡೆ ಪಾಲಿಸಲಾಗುತ್ತಿದೆ ಎಂಬುದು. ಸಾರ್ವಜನಿಕರು ಪತ್ರಿಕೆಯಲ್ಲಿ ಓದಿ ಅಲ್ಲಿಗೆ ಮರೆತು ಬಿಡುತ್ತಾರೆ. ದಿನಬೆಳಗಾದರೆ ಪತ್ರಿಕೆಗಳು ಅಪಘಾತಗಳ ಸುದ್ದಿಗಳನ್ನು, ದೃಶ್ಯ ಮಾಧ್ಯಮಗಳು ಪುನ: ಪುನ: ಬಿತ್ತರಿಸಿದರೂ ದ್ವಿಚಕ್ರ ವಾಹನದಲ್ಲಿ ಮೂವರು ಪ್ರಯಾಣಿಸು ವುದು, ಕೆಲವರಂತೂ ಹೆಲ್ಮೆಟ್ ಹಾಕದೇ ಪ್ರಯಾಣಿಸುವುದನ್ನು ಹಲವು ಕಡೆಗಳಲ್ಲಿ ನೋಡಬಹುದು. ಸಣ್ಣ ಪಟ್ಟಣಗಳಲ್ಲಿ ಅದರಲ್ಲೂ ಕೆಲವೆಡೆ ಹೆಚ್ಚಾಗಿ ಹೆಲ್ಮೆಟ್ ಅನ್ನುವುದು ಮರೆತು ಬಿಟ್ಟಿರುವುದು ನಿಜ. ಕೆಲವರಂತೂ ಹೆಲ್ಮೆಟ್ ತಲೆಗೆ ಧರಿಸದೇ ಕೈಯಲ್ಲಿ ನೇತು ಹಾಕಿ ಜೀವ ಕಳೆದುಕೊಂಡಿದ್ದನ್ನು ನೋಡುತ್ತಲೇ ಇದ್ದೇವೆ. ಮೊಬೈಲ್ ಬಂದ ನಂತರ ಮಾತುಕತೆಯೇ ಕಡಿಮೆಯಾಗುತ್ತಿದ್ದು, ಎಲ್ಲಿ ನೋಡಿದರೂ ಮೊಬೈಲಲ್ಲೇ ಪ್ರಪಂಚವನ್ನೂ ನೋಡುವ ತವಕ, ವಾಹನವನ್ನು ನಿಲ್ಲಿಸಿ ಮಾತನಾಡುವ ಗೋಡವೆಯೇ ಇರದೇ ತಮ್ಮದೇ ಮಾತಿನ ಗುಂಗಿನಲ್ಲೇ ವಾಹನವನ್ನು ಚಲಾಯಿಸಿ ಅಪಘಾತಕ್ಕೆ ಅವಕಾಶವನ್ನು ತಾವೇ ಕಲ್ಪಿಸುತ್ತಾರೆ.

ಹೆಚ್ಚು ವಾಹನಗಳು ರಸ್ತೆಗೆ ಇಳಿಯುತ್ತಿದ್ದಂತೆ, ಅದರ ಒಲವು ಸಾರ್ವಜನಿಕರಲ್ಲಿ ಹೆಚ್ಚುತ್ತಿದೆ. ಕೆಲವರಿಗೆ ತಮ್ಮ ಮಕ್ಕಳು ದ್ವಿಚಕ್ರ ವಾಹನವನ್ನು ಅದಷ್ಟು ಬೇಗನೇ ಕಲಿಯಬೇಕೆಂಬ ತವಕ. ಕಾನೂನು ಬಿಗಿಯಾಗಿದ್ದರೂ ತಮಗೆ ತಿಳಿದಿದ್ದರೂ ಸಣ್ಣ ಮಕ್ಕಳಿಗೆ ವಾಹನ ಕಲಿಸುತ್ತಿರುವುದು ಸತ್ಯ. ಇಲ್ಲದ ಆಸಕ್ತಿಯನ್ನು ಪುಟ್ಟ ಮಕ್ಕಳಲ್ಲಿ ಮೂಡಿಸಿ ಪರೋಕ್ಷವಾಗಿ ಅಪಘಾತಕ್ಕೆ ಪೋಷಕರೇ ಕಾರಣರಾಗುತ್ತಾರೆ. ಬಾಲಕ-ಬಾಲಕಿಯರು ಇಂದಿಗೂ ರಸ್ತೆಗಳಲ್ಲಿ ವಾಹನಗಳನ್ನು ಚಲಾಯಿಸಿ ಹಲವರ ಸಾವು ನೋವಿಗೆ ಗುರಿ ಮಾಡುತ್ತಿರುವುದಾಗಿದೆ. ಇದಕ್ಕೆ ಕಡಿವಾಣ ಹಾಕಲು ಕಡಿಮೆ ಇರುವ ಪೊಲೀಸರು ಯಾವ ರೀತೀಯಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ ಎಂಬುದು ಕೂಡ ಪ್ರಮುಖ ಪ್ರಶ್ನೆಯಾಗಿದೆ.

ವಾಹನ ಚಲಾಯಿಸುತ್ತಿರುವವರ ಮಹತ್ವದ ಪಾತ್ರ

೧. ಮಾನವ ನಿರ್ಮಿತ ವಾಹನಗಳ ಮೇಲೆ ಅತಿಯಾದ ಭರವಸೆ ಒಳಿತಲ್ಲ. ವಾಹನದ ವೇಗಕ್ಕೆ ಕಡಿವಾಣವಿರಲಿ.

೨. ಬಳಸುವ ಮುನ್ನ ವಾಹನದ ಬಗ್ಗೆ ತಿಳುವಳಿಕೆ ಅತ್ಯಗತ್ಯ. ಸರಿಯಾಗಿ ಪರೀಕ್ಷಿಸಿ, ಚಲಾಯಿಸಿರಿ.

೩. ರಸ್ತೆ ನಿಯಮಗಳನ್ನು, ನಿರ್ಬಂಧಗಳನ್ನು ಕಡ್ಡಾಯವಾಗಿ ಪಾಲಿಸುವುದು.

೪. ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಿ. ಉದಾಹರಣೆಗೆ ಹೆಲ್ಮೆಟ್ ಧರಿಸಿ, ಸೀಟು ಬೆಲ್ಟ್ ಹಾಕಿಕೊಳ್ಳಿ.

೫. ಚಾಲನೆ ಮಾಡುವಾಗ ಗಮನವಿರಲಿ. ಸುತ್ತಲಿನ ವಾತಾವರಣವನ್ನು ಸರಿಯಾಗಿ ಗಮನಿಸಿ. ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ.

೬. ಸಂಗೀತವನ್ನು ಕೇಳುವ ಪ್ರಯತ್ನದಿಂದ ಸಾರ್ವಜನಿಕರಿಗೆ ಕಿರಿಕಿರಿ ಆಗುವಂತೆ ವರ್ತಿಸುವ ಕೆಲವು ಚಾಲಕರು ಕಡಿಮೆ ಪ್ರಮಾಣದ ಶಬ್ದದಿಂದ ಸಂಗೀತವನ್ನು ಕೇಳುವುದು.

೭. ಸಾರಿಗೆ ವಾಹನವನ್ನು ಬಳಸುವವರು ಅನಗತ್ಯ ಹೆಚ್ಚು ತೂಕವನ್ನು ಹಾಕದೇ ವಾಹನಕ್ಕೆ ನೀಡಿರುವ ಸಾಮರ್ಥ್ಯದಷ್ಟನ್ನು ಮಾತ್ರ ತುಂಬಿ ಸಂಚರಿಸುವುದು.

೮. ರಾತ್ರಿ ಪ್ರಯಾಣಿಸುವ ಚಾಲಕರು ತಮ್ಮಂತೆಯೇ ಇತರ ವಾಹನಗಳಿಗೆ ಪ್ರಖರ ಬೆಳಕನ್ನು ಡಿಮ್ ಡಿಪ್ ಬಳಸಿ ಅಪಘಾತಗಳನ್ನು ತಪ್ಪಿಸಬಹುದು.

೯. ಹೆದ್ದಾರಿಗಳಲ್ಲಿ ಅದರಲೂ ್ಲಚತುಷ್ಪಪಥದಲ್ಲಿ ಸಾಗುವಾಗ ಕಡ್ಡಾಯವಾಗಿ ವಾಹವನ್ನು ಆಗಾಗ್ಗೆ ಪಥ ಬದಲಿಸದೇ ಅನಿವಾರ್ಯ ಸಂದರ್ಭದಲ್ಲಿ ಬಲಗಡೆಯಿಂದಲೇ ಓವರ್ ಟೇಕ್ ಮಾಡುವುದು.

ಸಾರ್ವಜನಿಕರ ಸೊತ್ತುಗಳನ್ನು, ಸಾರ್ವಜನಿಕರನ್ನು ರಕ್ಷಿಸಲು ಇರುವ ಪೊಲೀಸರನ್ನು ದೂಷಿಸದೇ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ, ಸರಕಾರಕ್ಕೆ ದಂಡವನ್ನು ಕಟ್ಟುವ ಪರಿಪಾಠವನ್ನು ಕಡಿಮೆ ಮಾಡಿಕೊಂಡು ಇತರರಿಗೂ ಮಾದರಿ ಆಗಿ. ಅಪಘಾತಗಳು ಆಗದಂತೆ ಪ್ರಯತ್ನಿಸುವುದು ಕೂಡ ನಮ್ಮ ಕರ್ತವ್ಯ ಅನ್ನುವುದನ್ನು ಮರೆಯಬಾರದು. ಅಪಘಾತ ಸಂಭವಿಸಿದಾಗ ಮತ್ತು ಕಂಡಾಗ ಕೂಡಲೇ ೧೧೨ ಸಂಖ್ಯೆಗೆ ಕರೆ ಮಾಡಿ ಗಾಯಾಳುಗಳನ್ನು ಆಸ್ಪತ್ರೆಗೆ ಒಯ್ಯಲು ಸಹಕರಿಸಿರಿ.

ಕೊಡಗು ಜಿಲ್ಲೆಯ ವಾಹನಗಳು ಮತ್ತು ಸವಾರರು

ದಕ್ಷಿಣದ ಕಾಶ್ಮೀರ ಎಂಬ ಖ್ಯಾತಿ ಪಡೆದಿದ್ದರೂ ಅತೀ ಹೆಚ್ಚು ವಾಹನ ಬಳಕೆ ಈ ಜಿಲ್ಲೆಯ ಖ್ಯಾತಿ, ಜನಸಂಖ್ಯೆಗೆ ಅನುಗುಣವಾಗಿ ಅತಿ ಹೆಚ್ಚು ವಾಹನಗಳು ಈ ಜಿಲ್ಲೆಯಲ್ಲಿ ಇವೆ. ಇತ್ತೀಚಿನ ದಿನಗಳಲ್ಲಿ ವಾಹನಗಳ ಅಪಘಾತ ಸಂಖ್ಯೆಯು ಮೀತಿ ಮೀರಿದೆ. ಇದಕ್ಕೆ ಕಾರಣ ಅತೀ ವೇಗ.

ಯುವಕರು ಮಾತ್ರವಲ್ಲದೇ ಹಲವು ಯುವತಿಯರು, ಮಹಿಳೆಯರು ಕೂಡ ಅತಿ ವೇಗದ ಚಾಲನೆಯಿಂದ ಅಪಘಾತಕ್ಕೆ ಒಳಗಾಗುವುದನ್ನು ದೈನಂದಿನ ಬದುಕಿನಲ್ಲಿ ನೋಡುತ್ತಿದ್ದೇವೆ. ವೇಗವಾಗಿ ಸಾಗುತ್ತಿರುವ ನಾವು ವಾಹನದ ವೇಗಕ್ಕೆ ಕಡಿವಾಣ ಹಾಕದಿದ್ದರೆ ಅಷ್ಟೇ ವೇಗವಾಗಿ ನಮ್ಮ ಜೀವವನ್ನು ಬಲಿ ಕೊಡ ಬೇಕಾಗಬಹುದು ಅನ್ನುವುದನ್ನು ಮರೆಯ ಬಾರದಲ್ಲವೇ ?

- ಅಂತೋಣಿ ಡಿಸೋಜ, ನಿವೃತ್ತ ಪೊಲೀಸ್ ಅಧಿಕಾರಿ, ಸೋಮವಾರಪೇಟೆ. ಮೊ. ೯೪೪೮೪೪೮೬೦೩ ೩. ರಸ್ತೆ ನಿಯಮಗಳನ್ನು, ನಿರ್ಬಂಧಗಳನ್ನು ಕಡ್ಡಾಯವಾಗಿ ಪಾಲಿಸುವುದು.

- ಅಂತೋಣಿ ಡಿಸೋಜ, ನಿವೃತ್ತ ಪೊಲೀಸ್ ಅಧಿಕಾರಿ, ಸೋಮವಾರಪೇಟೆ. ಮೊ. ೯೪೪೮೪೪೮೬೦೩