ಮಡಿಕೇರಿ, ಜೂ. ೩: ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ತಾ. ೧೩ ರಂದು ನಡೆಯಲಿರುವ ಚುನಾವಣೆಗೆ ಸಂಬAಧಿಸಿದAತೆ ಆಡಳಿತಾರೂಢ ಕಾಂಗ್ರೆಸ್‌ನಿAದ ಕೊಡಗು ಜಿಲ್ಲೆಯಿಂದ ಯಾರಿಗಾದರೊಬ್ಬರಿಗೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇದೀಗ ಹುಸಿಯಾಗಿದೆ. ವಿಧಾನಸಭೆಯಲ್ಲಿನ ಸಂಖ್ಯಾಬಲದ ಆಧಾರದಲ್ಲಿ ಒಟ್ಟು ೧೧ ಎಂಎಲ್‌ಸಿ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ೭ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿತ್ತು. ೭ ಸ್ಥಾನಗಳು ಇದ್ದ ಕಾರಣದಿಂದಾಗಿ ಸಹಜವಾಗಿಯೇ ಇಡೀ ರಾಜ್ಯದಿಂದ ಸಾಕಷ್ಟು ಆಕಾಂಕ್ಷಿಗಳಿದ್ದರು. ಇದರಂತೆ ಕೊಡಗಿನಿಂದಲೂ ನಾಲ್ಕು ಮಂದಿಯ ಹೆಸರು ಕೇಳಿ ಬಂದಿತ್ತು. ಆದರೆ ಜಿಲ್ಲೆಯ ಯಾರನ್ನೂ ಪಕ್ಷ ಈ ಸ್ಥಾನಕ್ಕೆ ಪರಿಗಣಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಬೋಸ್‌ರಾಜ್ ಅವರ ಅಧಿಕಾರಾವಧಿಯೂ ಮುಕ್ತಾಯಗೊಳ್ಳುತ್ತಿದ್ದು, ಅವರನ್ನು ಪಕ್ಷ ಮತ್ತೆ ಮುಂದುವರಿಸುತ್ತದೆಯೇ ಎಂಬ ಚರ್ಚೆಯೂ ಕೇಳಿ ಬಂದಿತ್ತು.

ಆದರೆ, ಬೋಸ್‌ರಾಜ್ ಅವರು ಮತ್ತೆ ಎಂಎಲ್‌ಸಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಇವರ ಗೆಲುವೂ ಹೆಚ್ಚು ಕಮ್ಮಿ ಖಚಿತವಾಗಿರುವುದರಿಂದ ಮತ್ತೆ ಸಚಿವರಾಗಿ ಇವರೇ ಮುಂದುವರಿಯುವ ಸಾಧ್ಯತೆಯೂ ಇದೀಗ ಹೆಚ್ಚಿದೆ.