ಮೈಸೂರು, ಜೂ. ೪: ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಪಾರುಪತ್ಯ ಮುಂದು ವರಿದಿದೆ. ಸತತ ಮೂರನೇ ಬಾರಿಗೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯೇ ಲೋಕಸಭೆಯ ಮೆಟ್ಟಿಲನ್ನು ಏರುತ್ತಿದ್ದಾರೆ. ಈ ಬಾರಿ ಅಭ್ಯರ್ಥಿ ಬದಲಾದರೂ, ಪಕ್ಷ ಬದಲಾಗಿಲ್ಲ. ಬಿಜೆಪಿಯ ಹುರಿಯಾಳೇ ಮತ್ತೆ ಈ ಕ್ಷೇತ್ರದ ಪ್ರತಿನಿಧಿಯಾಗಿ ಆರಿಸಿ ಬಂದಿದ್ದಾರೆ. ಕೊಡಗು-ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಸದಸ್ಯರಾಗಿ ಈ ಬಾರಿ ರಾಜ ವಂಶಸ್ಥರೂ ಆಗಿರುವ ಯದುವೀರ್ ಒಡೆಯರಾಗಿ ಚುನಾಯಿತರಾಗಿದ್ದಾರೆ.

ರಾಜ್ಯದ ‘ಹೈವೋಲ್ಟೇಜ್’ ಕ್ಷೇತ್ರಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿದ್ದ ಮುಖ್ಯಮಂತ್ರಿಗಳ ತವರು ಜಿಲ್ಲೆಯೂ ಆಗಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಕನಸ್ಸು ಮತ್ತೊಮ್ಮೆ ಭಗ್ನಗೊಂಡಿದೆ. ನೇರ ಸ್ಪರ್ಧೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಯದುವೀರ್ ಒಡೆಯರ್ ಅವರು ತಮ್ಮ ಎದುರಾಳಿ ಕಾಂಗ್ರೆಸ್‌ನ ಎಂ. ಲಕ್ಷö್ಮಣ್ ವಿರುದ್ಧ ಪ್ರಚಂಡ ಜಯಭೇರಿ ಬಾರಿಸಿದ್ದಾರೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪಕ್ಷ ಐದು ಕ್ಷೇತ್ರಗಳಲ್ಲಿ ಅಧಿಕಾರದಲ್ಲಿದ್ದರೂ ಕೂಡ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಪ್ರಧಾನಿ ನರೇಂದ್ರ ಮೋದಿ ಮುಂದಾಳತ್ವದ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿ ಕೂಟವನ್ನು ಈ ಬಾರಿಯೂ ಬಿಟ್ಟುಕೊಟ್ಟಿಲ್ಲ.

ಯದುವೀರ್ ಒಡೆಯರ್ ಕಾಂಗ್ರೆಸ್‌ನ ಎಂ. ಲಕ್ಷö್ಮಣ್ ವಿರುದ್ಧ ೧,೩೯,೨೬೨ ಮತಗಳ ಅಂತರದೊAದಿಗೆ ಜಯ ಸಾಧಿಸುವುದರೊಂದಿಗೆ ಚೊಚ್ಚಲ ಬಾರಿಗೆ ಸಂಸತ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ.

(ಮೊದಲ ಪುಟದಿಂದ) ೨೦೦೮ರಲ್ಲಿ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದೊಂದಿಗೆ ಸೇರ್ಪಡೆಯಾಗಿತ್ತು. ಕ್ಷೇತ್ರ ಪುನರ್‌ವಿಂಗಡನೆ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಡಗೂರು ಎಚ್. ವಿಶ್ವನಾಥ್ ಚುನಾಯಿತರಾಗಿದ್ದರು. ನಂತರದಲ್ಲಿ ೨೦೧೪ ಹಾಗೂ ೨೦೧೯ರಲ್ಲಿ ನಡೆದ ಇನ್ನೆರಡು ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಪ್ರತಾಪ್ ಸಿಂಹ ಅವರು ಆರಿಸಿ ಬಂದಿದ್ದರು. ಆದರೆ ೨೦೨೪ರ ಚುನಾವಣೆಯಲ್ಲಿ ಬಿಜೆಪಿ ಪ್ರತಾಪ್ ಸಿಂಹ ಅವರ ಬದಲಿಗೆ ರಾಜವಂಶಸ್ಥರಾದ ಯದುವೀರ್ ಒಡೆಯರ್ ಅವರಿಗೆ ಟಿಕೆಟ್ ನೀಡುವ ಮೂಲಕ ಅಚ್ಚರಿ ಮೂಡಿಸಿತ್ತು. ಕ್ಷೇತ್ರದ ಹಾಲಿ ಅಭ್ಯರ್ಥಿಯ ಬದಲಾವಣೆ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರವೂ ಇದಾಗಿದ್ದರಿಂದ ಈ ಬಾರಿಯ ಚುನಾವಣೆ ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಆದರೂ ಕ್ಷೇತ್ರದ ಮತದಾರರು ಅಭ್ಯರ್ಥಿ ಬದಲಾದರೂ ಮತ್ತೆ ಬಿಜೆಪಿಯ ಹೊಸ ನಾಯಕನಿಗೇ ಮಣೆ ಹಾಕಿರುವುದು ವಿಶೇಷವಾಗಿದೆ.

ರಾಜ್ಯದಲ್ಲಿ ಎರಡನೇ ಹಂತವಾಗಿ ಏಪ್ರಿಲ್ ೨೬ ರಂದು ಕೊಡಗು-ಮೈಸೂರು ಕ್ಷೇತ್ರಕ್ಕೆ ಚುನಾವಣೆ ನಡೆದಿತ್ತು. ಸುಧೀರ್ಘ ಅಂತರದ ಬಳಿಕ ಇಂದು ಒಟ್ಟಾರೆಯಾಗಿ ದೇಶವ್ಯಾಪಿಯಾಗಿ ಮತ ಎಣಿಕೆ ನಡೆದಿದ್ದು, ಫಲಿತಾಂಶ ಪ್ರಕಟವಾಗಿದೆ. ಕ್ಷೇತ್ರದಲ್ಲಿ ಬಿಜೆಪಿ ‘ಹ್ಯಾಟ್ರಿಕ್’ ಗೆಲುವಿನ ಸಂತಸದಲ್ಲಿದ್ದರೆ. ಹೊಸ ಮುಖವಾಗಿ ಯದುವೀರ್ ಒಡೆಯರ್ ಸಂಸತ್ ಪ್ರವೇಶಿಸುತ್ತಿದ್ದಾರೆ.