ಸೋಮವಾರಪೇಟೆ, ಜೂ. ೪: ಸಮೀಪದ ಐಗೂರು ಗ್ರಾಮದಲ್ಲಿ ಜೀರ್ಣೋದ್ದಾರಗೊಂಡಿರುವ ಶ್ರೀ ಮುತ್ತಪ್ಪ ದೇವಾಲಯದ ಲೋಕಾರ್ಪಣೆ, ಶ್ರೀ ಮುತ್ತಪ್ಪ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠಾಪನಾ ಮಹೋತ್ಸವ, ದೈವಗಳ ಕೋಲ ಉತ್ಸವ ತಾ. ೮ ರಿಂದ ೧೦ ರವರೆಗೆ ನಡೆಯಲಿದೆ ಎಂದು ದೇವಾಲಯ ಸಮಿತಿ ಪ್ರಕಟಣೆ ತಿಳಿಸಿದೆ.

ತಾ. ೮ರಿಂದ ಕೇರಳದ ಪನ್ನಿಯೋಟ್ ಇಲ್ಲತ್ ಶ್ರೀ ಮಾಧವನ್ ನಂಬೂದರಿ ಅವರ ಪೌರೋಹಿತ್ಯದಲ್ಲಿ ಪೂಜಾ ಮಹೋತ್ಸವಗಳು ನಡೆಯಲಿವೆ. ತಾ. ೮ ರ ಸಂಜೆ ೫ ಗಂಟೆಯಿAದ ೮.೩೦ರವರೆಗೆ ಪುಣ್ಯಾಹ, ಆಚಾರ್ಯ ಭರಣ ಕ್ರಿಯಾ ಮತ್ತು ಪ್ರಸಾದ ಪೀಠ ಪರಿಗ್ರಹ ಹಾಗೂ ವಾಸ್ತು ಪೂಜೆ, ತಾ. ೯ರಂದು ಬೆಳಿಗ್ಗೆ ೮ ಗಂಟೆಯಿAದ ಗಣಪತಿ ಹೋಮ, ೧೧ರಿಂದ ೧೨.೩೦ರವರೆಗೆ ದೇವರ ಆವಾಹನೆ, ಪ್ರತಿಷ್ಠಾಪನೆ, ಜೀವ ಕಳಶಾಭಿಷೇಕಂ ನಡೆಯಲಿದೆ.

ಸಂಜೆ ೪ ಗಂಟೆಯಿAದ ಮಲಯರಕ್ಕಲ್ ಮತ್ತು ಮುತ್ತಪ್ಪನ್ ವೆಳ್ಳಾಟಂ, ಸಂಜೆ ೬.೩೦ ಗಂಟೆಗೆ ತಿರುವಪ್ಪನ್ ವೆಳ್ಳಾಟಂ, ರಾತ್ರಿ ೮ ಗಂಟೆಗೆ ಕುಟ್ಟಿಚಾತನ್ ವೆಳ್ಳಾಟಂ, ೧೦ ಗಂಟೆಗೆ ಗುಳಿಗ ವೆಳ್ಳಾಟಂ, ೧೧ ಗಂಟೆಗೆ ಕಳಿಕ್ಕಾಪಾಟ್, ರಾತ್ರಿ ೧೨.೩೦ ಗಂಟೆಗೆ ಪೋದಿ ವೆಳ್ಳಾಟಂ ಮತ್ತು ಕಳಸ ಆಗಮನ ನೆರವೇರಲಿದೆ.

ತಾ. ೧೦ ರಂದು ಬೆಳಗ್ಗಿನ ಜಾವ ೩ ಗಂಟೆಗೆ ಗುಳಿಗನ ಕೋಲ, ೫ ಗಂಟೆಗೆ ಮುತ್ತಪ್ಪ ದೇವರ ಕೋಲ, ೫.೩೦ಕ್ಕೆ ತಿರುವಪ್ಪನ ಕೋಲ, ೬ ಗಂಟೆಗೆ ಕುಟ್ಟಿಚಾತನ್ ಕೋಲ, ೯ ಗಂಟೆಗೆ ಪೋದಿ ಕೋಲ, ೧೧.೩೦ ಗಂಟೆಗೆ ಗುರುಶ್ರೀ ದರ್ಪಣ, ಮಧ್ಯಾಹ್ನ ೧ ಗಂಟೆಗೆ ಮತ್ತು ರಾತ್ರಿ ೮.೩೦ ಗಂಟೆಗೆ ಅನ್ನದಾನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.