ವೀರಾಜಪೇಟೆ, ಜೂ. ೪: ಕಾವೇರಿ ವಿದ್ಯಾಸಂಸ್ಥೆಯಲ್ಲಿ ಸತತ ೩೦ ವರ್ಷಗಳ ಕಾಲ ವಾಣಿಜ್ಯ ಶಾಸ್ತç ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ವೀರಾಜಪೇಟೆ ಕಾವೇರಿ ಕಾಲೇಜಿನ ಪ್ರಾಂಶುಪಾಲರಾಗಿದ್ದ ಡಾ. ಆನಂದ ಕಾರ್ಲ ಅವರು ವಯೋ ನಿವೃತ್ತಿಯನ್ನು ಹೊಂದಿದ್ದು, ಕಾವೇರಿ ಕಾಲೇಜಿನ ವತಿಯಿಂದ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.

ಡಾ. ಆನಂದ ಕಾರ್ಲ ಅವರು ಉಪನ್ಯಾಸಕರಾಗಿ ಎನ್‌ಎಸ್‌ಎಸ್ ಅಧಿಕಾರಿಯಾಗಿ ಪ್ರಾಧ್ಯಾಪಕರಾಗಿ, ೧೯೯೪ರಲ್ಲಿ ಸೇವೆಗೆ ನಿಯೋಜನೆ ಆದ ಇವರು ೧೮ ವರ್ಷಗಳ ಕಾಲ ಗೋಣಿಕೊಪ್ಪ ಕಾವೇರಿ ಕಾಲೇಜು, ೧೨ ವರ್ಷಗಳ ಕಾಲ ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಸೇವೆ vಸಲ್ಲಿಸಿದ್ದು ಕೇವಲ ಪ್ರಾಧ್ಯಾಪಕರಾಗಿ ಹಲವಾರು ವಿದ್ಯಾರ್ಥಿಗಳ ಶಿಕ್ಷಣದ ಶುಲ್ಕವನ್ನು ಭರಿಸುವ ಕಾರ್ಯವನ್ನು ಕೂಡ ಮಾಡುತ್ತಿದ್ದರು.

ಬೀಳ್ಕೊಡುಗೆ ಸಮಾರಂಭದಲ್ಲಿ ಕಾಲೇಜಿನ ಮಂಡಳಿ ಉಪನ್ಯಾಸಕ ವರ್ಗ ಆಡಳಿತ ಸಿಬ್ಬಂದಿಗಳು ಆನಂದ್ ಕಾರ್ಲ ಅವರನ್ನು ಕಾಲೇಜೀನ ಪರವಾಗಿ ಸನ್ಮಾನಿಸಿದರು.

ಈ ಸಂದರ್ಭ ಮಾತನಾಡಿದ ಆನಂದ್ ಕಾರ್ಲ ಕಾರ್ಕಳ ದವನಾದ ನಾನು ಇದುವರೆಗೆ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದು ಇನ್ನು ಮುಂದೆ ಸಮಾಜ ಸೇವೆಯಲ್ಲಿ ತೊಡಗುವೆ ಎಂದರು

ಬೀಳ್ಕೊಡುಗೆ ಸಮಾರಂಭದಲ್ಲಿ ಕಾಲೇಜಿನ ಕಾರ್ಯದರ್ಶಿಗಳಾದ ಬೋಪಣ್ಣ, ಉಪ ಪ್ರಾಂಶುಪಾÀ ಬೆನಾಡಿಕ್ಟ ಆರ್ ಸಾಲ್ಡಾನ, ಪದವಿ ಕಾಲೇಜಿನ ಪ್ರಾಂಶುಪಾಲ ನಾಣಯ್ಯ, ಕಾಲೇಜಿನ ಉಪನ್ಯಾಸಕರು, ಆಡಳಿತ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದರು.