ನವದೆಹಲಿ, ಜೂ. ೪: ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ಭಾರತ ದೇಶದ ಮುಂದಿನ ಐದು ವರ್ಷಗಳ ಅಧಿಕಾರಕ್ಕೆ ಸಂಬAಧಿಸಿದAತೆ ನಡೆದಿದ್ದ ಪ್ರತಿಷ್ಠಿತ ಚುನಾವಣೆಯ ಮಹಾಜನಾದೇಶ ಇಂದು ಪ್ರಕಟಗೊಂಡಿದೆ. ಜಾಗತಿಕ ಮಟ್ಟದಲ್ಲಿ ಕೂಡ ಈ ಬಾರಿಯ ಚುನಾವಣೆ ಭಾರೀ ಕುತೂಹಲ ಸೃಷ್ಟಿಸಿತ್ತು. ನೂತನ ಜನಾದೇಶದಂತೆ ಕಳೆದ ಅವಧಿಯಲ್ಲಿ ಅಧಿಕಾರದಲ್ಲಿದ್ದ ಎನ್.ಡಿ.ಎ ಮೈತ್ರಿಕೂಟದ ಸಂಖ್ಯಾಬಲದಲ್ಲಿ ಕುಸಿತ ಕಂಡಿದೆಯಾದರೂ ಅಗತ್ಯ ಬಹುಮತವನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ. ಎನ್.ಡಿ.ಎ ಮೈತ್ರಿಕೂಟಕ್ಕೆ ಪ್ರಬಲ ಎದುರಾಳಿಯಾಗಿ ಇಂಡಿಯಾ ಮಹಾಘಟ್ಬಂಧನ್ ಮೈತ್ರಿಕೂಟ ನಿರೀಕ್ಷೆಗೂ ಮೀರಿದ ಸಾಧನೆ ತೋರಿರುವದು ವಿಶೇಷವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಕೂಟ ಈ ಬಾರಿ ಅತ್ಯಧಿಕ ಸ್ಥಾನಗಳಲ್ಲಿ ಕಮಾಲ್ ಮಾಡಲಿದೆ ಎಂಬ ಬಹುತೇಕ ಮತದಾನೋತ್ತರ ಸಮೀಕ್ಷೆಗಳು ಒಂದು ರೀತಿಯಲ್ಲಿ ತಲೆಕೆಳಗಾದಂತಾಗಿರುವದು ಈ ಬಾರಿಯ ಫಲಿತಾಂಶದ ಮತ್ತೊಂದು ಗಮನಾರ್ಹ ಸಂಗತಿಯಾಗಿದೆ. ಒಟ್ಟಾರೆಯಾಗಿ ದೇಶದ ೫೪೩ ಲೋಕಸಭಾ ಕ್ಷೇತ್ರಗಳಿಗೆ ನಡೆದಿರುವ ಚುನಾವಣೆಯಲ್ಲಿ ಬಿ.ಜೆ.ಪಿ ಮುಂದಾಳತ್ವದ ಎನ್ಡಿಎ ಮೈತ್ರಿಕೂಟಕ್ಕೆ ೨೯೦ ಸ್ಥಾನಗಳು ಲಭಿಸಿದ್ದು, ೩ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ ಹಾಗೂ ಕಾಂಗ್ರೆಸ್ ಮುಂದಾಳತ್ವದ ಇಂಡಿಯಾ ಮೈತ್ರಿಕೂಟಕ್ಕೆ ೨೨೭ ಸ್ಥಾನಗಳು ಲಭಿಸಿದ್ದು, ೬ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇತರ ಪಕ್ಷಗಳು ೧೭ ಸ್ಥಾನಗಳಲ್ಲಿ ಜಯಗಳಿಸಿವೆ. ಎನ್.ಡಿ.ಎ ಮೈತ್ರಿಕೂಟ ಅಧಿಕ ಸ್ಥಾನಗಳೊಂದಿಗೆ ಬಹುಮತ ಗಳಿಸಿದೆಯಾದರೂ ಇಂಡಿಯಾ ಮೈತ್ರಿಕೂಟ ಕೂಡ ಸಂಖ್ಯಾಬಲದಲ್ಲಿ ಸನಿಹದಲ್ಲಿರುವುದರಿಂದ ನೂತನ ಸರಕಾರ ರಚನೆಯ ಕುರಿತಾದ ಕುತೂಹಲ ಮತ್ತು ಮುಂದುವರಿದಿದ್ದು ಬುಧವಾರ (ಇಂದು) ಸ್ಪಷ್ಟ ಚಿತ್ರಣ ಹೊರಬೀಳಲಿದೆ. ಲೋಕಸಭೆಯಲ್ಲಿ ವಿರೋಧ ಪಕ್ಷದಲ್ಲಿ ಕೂರಬೇಕೇ ಅಥವಾ ಎನ್.ಡಿ.ಎ ಕೂಟದ ಹಲವರನ್ನು ತನ್ನ ತೆಕ್ಕೆಗೆ ಸೆಳೆದು ಕೇಂದ್ರದಲ್ಲಿ ಸರಕಾರ ರಚಿಸಲು ಪ್ರಯತ್ನ ಪಡಬೇಕೇ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲು ಇಂಡಿಯಾ ಮೈತ್ರಿ ಕೂಟ ತಾ.೫ ರಂದು (ಇಂದು) ಸಭೆ ಸೇರಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರಸ್ ರಾಷ್ಟಿçÃಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
‘ಮ್ಯಾಜಿಕ್ ಸಂಖ್ಯೆ’ ೨೭೨ ಗಡಿಯನ್ನು ೨೦೧೪ ಹಾಗೂ ೨೦೧೯ರ ಚುನಾವಣೆಗಳಲ್ಲಿ ಸುಲಭವಾಗಿ ದಾಟಿದ್ದ ಬಿ.ಜೆ.ಪಿ ಈ ಬಾರಿ ೨೪೧ ಸ್ಥಾನಗಳನ್ನಷ್ಟೆ ಪಡೆದಿದೆ. (ಇದರಲ್ಲಿ ೩ ಮುನ್ನಡೆ) ಕಳೆದೆರಡು ಚುನಾವಣೆಗಳಲ್ಲಿ ಹೀನಾಯವಾಗಿ ಸೋತಿದ್ದ ಕಾಂಗ್ರೆಸ್ ಈ ಬಾರಿ ಸ್ವಲ್ಪ ಮಟ್ಟಿಗೆ ಸುಧಾರಿಸಿ ೯೯ ಸ್ಥಾನಗಳನ್ನು ಗೆದ್ದುಕೊಂಡಿದೆ. (ಇದರಲ್ಲಿ ೬ ಮುನ್ನಡೆ) ೨೦೧೪ರಲ್ಲಿ ೪೪ ಸ್ಥಾನ ಹಾಗೂ ೨೦೧೯ರಲ್ಲಿ ೫೨ ಸ್ಥಾನಗಳನ್ನು ಕಾಂಗ್ರೆಸ್ ಗಳಿಸಿತ್ತು.
೨೦೧೪ರಲ್ಲಿ ೨೮೨ ಮತ್ತು ೨೦೧೯ ರಲ್ಲಿ ೩೦೩ ಸ್ಥಾನಗಳನ್ನು ಗಳಿಸಿದ್ದ ಬಿ.ಜೆ.ಪಿ ಈ ಬಾರಿ ೨೪೧ ಸ್ಥಾನಗಳನ್ನು ಪಡೆದ ಬಗ್ಗೆ ತೀವ್ರ ಚರ್ಚೆ ಆರಂಭಗೊAಡಿದೆ. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಎನ್.ಡಿ.ಎ ಕೂಟದ ಪ್ರಮುಖ ಪಕ್ಷ ತೆಲಂಗಾಣದ ತೆಲುಗು ದೇಸಾಮ್ ಪಾರ್ಟಿ ಪ್ರಮುಖ ಚಂದ್ರಬಾಬು ನಾಯ್ಡು, ಬಿಹಾರ ಜನತಾ ದಳದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು (ಮೊದಲ ಪುಟದಿಂದ) ದೆಹಲಿಗೆ ತೆರಳಿದ್ದು, ಎನ್.ಡಿ.ಎ ಸಭೆಯಲ್ಲಿ ಇಂದು ಪಾಲ್ಗೊಳ್ಳಲಿದ್ದು, ಸರಕಾರ ರಚನೆಯಾದ ಬಳಿಕ ಮಂತ್ರಿ ಸ್ಥಾನಗಳು ದೊರಕುವ ಸಾಧ್ಯತೆಗಳು ಇವರುಗಳಿಗಿವೆ. ಕರ್ನಾಟಕದಲ್ಲಿ ಕಾಂಗ್ರಸ್ ಸರಕಾರವಿದ್ದರೂ ಆ ಪಕ್ಷಕ್ಕೆ ೯ ಸ್ಥಾನಗಳು ಮಾತ್ರ ಲಭ್ಯವಾಗಿದ್ದು, ಬಿ.ಜೆ.ಪಿ ೧೭ ಸ್ಥಾನಗಳನ್ನು ಪಡೆದುಕೊಂಡಿದೆ. ಈ ಬಾರಿ ಬಿ.ಜೆ.ಪಿ ಮೈತ್ರಿ ಮಾಡಿಕೊಂಡಿದ್ದ ಜೆ.ಡಿ.ಎಸ್ನ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮಂಡ್ಯದಲ್ಲಿ ಗಮನಾರ್ಹ ಗೆಲುವು ಸಾಧಿಸಿದ್ದು, ಕೇಂದ್ರದಲ್ಲಿ ಸಚಿವ ಸ್ಥಾನ ಪಡೆಯುವ ನಿರೀಕ್ಷೆಯಿದೆ. ೬೦ ವರ್ಷಗಳ ಬಳಿಕ ಇತಿಹಾಸ ನಿರ್ಮಾಣ - ಮೋದಿ
೧೯೬೨ರ ಬಳಿಕ ೨೦೨೪ರಲ್ಲಿ ಮೂರನೇ ಬಾರಿಗೆ ಸರ್ಕಾರಕ್ಕೆ ಜನ ಬಹುಮತ ನೀಡಿದ್ದು, ಎನ್ಡಿಎ ಸರ್ಕಾರ ಇತಿಹಾಸ ನಿರ್ಮಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಮೂಲಕ ವಿಶ್ವಾಸವಿಟ್ಟ ಭಾರತದ ಜನತೆಯ ನಿರೀಕ್ಷೆ ಹುಸಿಯಾಗದಂತೆ ನೂತನ ಸರ್ಕಾರ ಕಾರ್ಯನಿರ್ವಹಿಸಲಿದೆ ಎಂದು ಭರವಸೆ ನೀಡಿದ್ದಾರೆ. ಫಲಿತಾಂಶ ಬಳಿಕ ದೆಹಲಿಯ ಬಿಜೆಪಿ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ರಾತ್ರಿ ಮಾತನಾಡಿದರು.
ದೇಶದ ಸೇನಾವಲಯ ಆತ್ಮನಿರ್ಭರವಾಗುವವರೆಗೆ ತಾನು ವಿರಮಿಸುವುದಿಲ್ಲ, ಉದ್ಯೋಗಾವಕಾಶ, ವೈದ್ಯಕೀಯ ಸೌಲಭ್ಯ, ಶಿಕ್ಷಣ, ಆಧುನಿಕ ನೀತಿಗಳ ಜಾರಿಗೂ ಮೂರನೇ ಅವಧಿಯಲ್ಲಿ ಪ್ರಾಧಾನ್ಯತೆ ನೀಡುವುದಾಗಿ ಪ್ರಧಾನಿ ಮೋದಿ, ನುಡಿದಿದ್ದಾರೆ, ಭವಿಷ್ಯದ ದಿನಗಳು ಹಸಿರು ಕ್ರಾಂತಿಯ ಯುಗವಾಗಿದ್ದು , ಪ್ರಗತಿ, ಪ್ರಕೃತ್ತಿ, ಸಂಸ್ಕೃತಿ ಸಂರಕ್ಷಣೆಗಳಿಗೆ ಮಹತ್ವ ನೀಡಲಾಗುತ್ತದೆ ಎಂದೂ ಮುಂದಿನ ಯೋಜನೆಗಳ ಬಗ್ಗೆ ನರೇಂದ್ರ ಮೋದಿ ಮಾಹಿತಿ ನೀಡಿದರು, ಭಾರತಕ್ಕಾಗಿ ಕಾರ್ಯನಿರ್ವಹಿಸುವುದಕ್ಕಿಂತ ಮುಖ್ಯವಾದದ್ದು ತನ್ನ ಪಾಲಿಗೆ ಬೇರೊಂದಿಲ್ಲ, ಈ ನಿಟ್ಟಿನಲ್ಲಿ ಪ್ರತೀ ಭಾರತೀಯರೂ ತನ್ನೊಂದಿಗೆ ಕೈ ಜೋಡಿಸುವಂತೆ ಮೋದಿ ಮನವಿ ಮಾಡಿದ್ದಾರೆ.
ದೇಶದ ಸುರಕ್ಷೆ, ದೇಶದ ಅಭಿವೃದ್ದಿಗೇ ನನ್ನ ಆದ್ಯತೆ ಎಂದು ನುಡಿದ ಮೋದಿ ಈ ನಿಟ್ಟಿನಲ್ಲಿ ನೀವು ಎರಡು ಹೆಜ್ಜೆ ಹಾಕಿದರೆ ನಾನು ನಾಲ್ಕು ಹೆಜ್ಜೆ ಹಾಕುವುದಾಗಿ ಹೇಳಿದರಲ್ಲದೇ ಭಾರತದ ಪ್ರಗತಿಯ ಸಂಕಲ್ಪದಲ್ಲಿ ಹೊಸ ಅಧ್ಯಾಯ ಮೋದಿ ಗ್ಯಾರಂಟಿಯಾಗಿ ಮೂರನೇ ಅವಧಿಯಲ್ಲಿ ಪ್ರಾರಂಭಿಸುವುದಾಗಿ ಭರವಸೆ ನೀಡಿದರು ಭಾರತದಲ್ಲಿ ಬಡತನ ನಿರ್ಮೂಲನೆಯಾಗುವವರೆಗೆ ವಿರಮಿಸುವುದಿಲ್ಲ ಎಂದು ವಿಶ್ವಾಸದಿಂದ ನುಡಿದ ಮೋದಿ, ಕ್ರೀಡೆ, ಮಹಿಳೆಯರ ಅಭ್ಯುದಯಕ್ಕಾಗಿ ವಿವಿಧ ಯೋಜನೆ ಜಾರಿಗೊಳಿಸುವುದಕ್ಕೆ ಆದ್ಯತೆ ನೀಡುವುದಾಗಿ ನುಡಿದರು. ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ಹಿಂದಿನ ಸರ್ಕಾರದಲ್ಲಿ ಪಣ ತೊಟ್ಟಿದ್ದು, ಮುಂದೆ ಅತ್ಯಂತ ಕಠಿಣವಾದ ಕ್ರಮಗಳು ಕಾದಿವೆ ಎಂದು ನರೇಂದ್ರ ಮೋದಿ ಎಚ್ಚರಿಕೆ ನೀಡಿದರು. ಉತ್ತರ ಪ್ರದೇಶದಲ್ಲಿ ತತ್ತರಿಸಿದ ಬಿ.ಜೆ.ಪಿ
ರಾಷ್ಟçದ ಪ್ರಮುಖ ರಾಜ್ಯ, ಬಿ.ಜೆ.ಪಿಯ ಭದ್ರಕೋಟೆ, ಯೋಗಿ ಆದಿತ್ಯನಾಥ್ ಆಳ್ವಿಕೆಯ ಉತ್ತರ ಪ್ರದೇಶ ರಾಜ್ಯದಲ್ಲಿ ಈ ಬಾರಿ ಬಿ.ಜೆ.ಪಿಗೆ ತೀವ್ರ ಆಘಾತ ಉಂಟಾಗಿದೆ. ೮೦ ಲೋಕಸಭಾ ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ೨೦೧೪ ರಲ್ಲಿ ೭೧ ಸ್ಥಾನಗಳನ್ನು ಪಡೆದಿದ್ದ ಬಿ.ಜೆ.ಪಿ ೨೦೧೯ರಲ್ಲಿ ೬೨ ಸ್ಥಾನಗಳನ್ನು ಗೆದ್ದು ೯ ಸ್ಥಾನಗಳನ್ನು ಕಳೆದುಕೊಂಡಿತ್ತು. ಈ ವರ್ಷ ಅಯೋಧ್ಯೆ ರಾಮಮಂದಿರ ನಿರ್ಮಾಣದ ಬಳಿಕ ಅಸಂಖ್ಯಾತ ರಾಮಭಕ್ತ ಹಿಂದೂ ಮತಗಳನ್ನು ಸೆಳೆದು ಹೆಚ್ಚಿನ ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಲ್ಲಿದ್ದ ಪಕ್ಷವು ಮುಗ್ಗರಿಸಿ ೩೩ ಸ್ಥಾನಗಳನ್ನಷ್ಟೆ ಪಡೆಯಲು ಶಕ್ತವಾಗಿದೆ. ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವು ತನ್ನ ಸ್ಥಾನಗಳನ್ನು ಕೇವಲ ೫ ರಿಂದ ೩೭ಕ್ಕೇರಿಸಿದೆ. ಕಾಂಗ್ರೆಸ್ ೬ ಸ್ಥಾನಗಳನ್ನು ಪಡೆದರೆ, ರಾಷ್ಟಿçÃಯ ಲೋಕ ದಳ ೨ ಸ್ಥಾನಗಳನ್ನು ಗಿಟ್ಟಿಸಿಕೊಂಡಿದೆ. ಮಾಯಾವತಿ ನೇತೃತ್ವದ ಬಿ.ಎಸ್.ಪಿ ಯಾವುದೇ ಸ್ಥಾನ ಗಳಿಸದೆ ಹೀನಾಯ ಸೋಲನುಭವಿಸಿದೆ. ಮಧ್ಯಪ್ರದೇಶದ, ನವದೆಹಲಿಯ ಎಲ್ಲ ಸ್ಥಾನಗಳು ಬಿ.ಜೆ.ಪಿ ಮಡಿಲಿಗೆ
ದೇಶದ ಹೃದಯಭಾಗ ಮಧ್ಯಪ್ರದೇಶ ರಾಜ್ಯದ ೨೯ ಸ್ಥಾನಗಳನ್ನೂ ಬಿ.ಜೆ.ಪಿ ಕಬಳಿಸಿ ತನ್ನ ಪ್ರಾಬಲ್ಯ ಮೆರೆದಿದೆ. ಕಳೆದ ಬಾರಿ ೨೮ ಸ್ಥಾನಗಳನ್ನು ಪಡೆದಿದ್ದು, ೧ ಸ್ಥಾನ ಕಾಂಗ್ರೆಸ್ ಪಾಲಾಗಿತ್ತು. ಈ ಬಾರಿ ಸಂಪೂರ್ಣ ರಾಜ್ಯವನ್ನು ಬಿ.ಜೆ.ಪಿ ‘ಕ್ಲೀನ್ ಸ್ವೀಪ್’ ಮಾಡಿದೆ. ನವದೆಹಲಿಯ ೭ ಸ್ಥಾನಗಳನ್ನೂ ಬಿ.ಜೆ.ಪಿ ತನ್ನದಾಗಿಸಿಕೊಂಡಿದೆ.
ರಾಜಸ್ಥಾನದಲ್ಲಿ ಖಾತೆ ತೆರೆದ ಕಾಂಗ್ರೆಸ್
ಕಳೆದ ಚುನಾವಣೆಯಲ್ಲಿ ರಾಜಸ್ಥಾನದಲ್ಲಿ ಒಂದು ಸ್ಥಾನವನ್ನು ಪಡೆಯಲೂ ವಿಫಲವಾಗಿದ್ದ ಕಾಂಗ್ರೆಸ್ ಈ ಬಾರಿ ೮ ಸ್ಥಾನಗಳನ್ನು ಗಳಿಸಿಕೊಂಡಿದೆ. ೨೦೧೯ ರಲ್ಲಿ ೨೪ ಸ್ಥಾನಗಳನ್ನು ಪಡೆದಿದ್ದ ಬಿ.ಜೆ.ಪಿ ೧೪ ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಬಿಹಾರದಲ್ಲಿನ ೪೦ ಸ್ಥಾನಗಳಲ್ಲಿ ೧೨ ಬಿ.ಜೆ.ಪಿ, ರಾಜ್ಯದ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜನತಾ ದಳ ಯುನೈಟೆಡ್ಗೆ ೧೨, ೪ ಸ್ಥಾನಗಳನ್ನು ಲಾಲುಪ್ರಸಾದ್ ನೇತೃತ್ವದ ರಾಷ್ಟಿçÃಯ ಜನತಾದಳ, ೩ ಸ್ಥಾನಗರಾಜಸ್ಥಾನದಲ್ಲಿ ಖಾತೆ ತೆರೆದ ಕಾಂಗ್ರೆಸ್
ಕಳೆದ ಚುನಾವಣೆಯಲ್ಲಿ ರಾಜಸ್ಥಾನದಲ್ಲಿ ಒಂದು ಸ್ಥಾನವನ್ನು ಪಡೆಯಲೂ ವಿಫಲವಾಗಿದ್ದ ಕಾಂಗ್ರೆಸ್ ಈ ಬಾರಿ ೮ ಸ್ಥಾನಗಳನ್ನು ಗಳಿಸಿಕೊಂಡಿದೆ. ೨೦೧೯ ರಲ್ಲಿ ೨೪ ಸ್ಥಾನಗಳನ್ನು ಪಡೆದಿದ್ದ ಬಿ.ಜೆ.ಪಿ ೧೪ ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಬಿಹಾರದಲ್ಲಿನ ೪೦ ಸ್ಥಾನಗಳಲ್ಲಿ ೧೨ ಬಿ.ಜೆ.ಪಿ, ರಾಜ್ಯದ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜನತಾ ದಳ ಯುನೈಟೆಡ್ಗೆ ೧೨, ೪ ಸ್ಥಾನಗಳನ್ನು ಲಾಲುಪ್ರಸಾದ್ ನೇತೃತ್ವದ ರಾಷ್ಟಿçÃಯ ಜನತಾದಳ, ೩ ಸ್ಥಾನಗಳನ್ನು ಕಾಂಗ್ರೆಸ್ ಪಡೆದುಕೊಂಡಿವೆ. ಳನ್ನು ಕಾಂಗ್ರೆಸ್ ಪಡೆದುಕೊಂಡಿವೆ.
ರಾಜಸ್ಥಾನದಲ್ಲಿ ಖಾತೆ ತೆರೆದ ಕಾಂಗ್ರೆಸ್
ಕಳೆದ ಚುನಾವಣೆಯಲ್ಲಿ ರಾಜಸ್ಥಾನದಲ್ಲಿ ಒಂದು ಸ್ಥಾನವನ್ನು ಪಡೆಯಲೂ ವಿಫಲವಾಗಿದ್ದ ಕಾಂಗ್ರೆಸ್ ಈ ಬಾರಿ ೮ ಸ್ಥಾನಗಳನ್ನು ಗಳಿಸಿಕೊಂಡಿದೆ. ೨೦೧೯ ರಲ್ಲಿ ೨೪ ಸ್ಥಾನಗಳನ್ನು ಪಡೆದಿದ್ದ ಬಿ.ಜೆ.ಪಿ ೧೪ ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಬಿಹಾರದಲ್ಲಿನ ೪೦ ಸ್ಥಾನಗಳಲ್ಲಿ ೧೨ ಬಿ.ಜೆ.ಪಿ, ರಾಜ್ಯದ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜನತಾ ದಳ ಯುನೈಟೆಡ್ಗೆ ೧೨, ೪ ಸ್ಥಾನಗಳನ್ನು ಲಾಲುಪ್ರಸಾದ್ ನೇತೃತ್ವದ ರಾಷ್ಟಿçÃಯ ಜನತಾದಳ, ೩ ಸ್ಥಾನಗಳನ್ನು ಕಾಂಗ್ರೆಸ್ ಪಡೆದುಕೊಂಡಿವೆ. ತೆಲಂಗಾಣದಲ್ಲಿ ಸಮಬಲ
ತೆಲಂಗಾಣದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಸಮಬಲ ಸಾಧಿಸಿವೆ. ಒಟ್ಟು ೧೭ ಸ್ಥಾನಗಳ ಪೈಕಿ ೨ ಪಕ್ಷಗಳು ತಲಾ ೮ ಸ್ಥಾನಗಳನ್ನು ಪಡೆದಿವೆ. ಉಳಿದ ೧ ಕ್ಷೇತ್ರದಲ್ಲಿ ಎಐಎಂಐಎA ಅಭ್ಯರ್ಥಿ ಗೆಲುವು ದಾಖಲಿಸಿದ್ದಾರೆ.ಅಯೋಧ್ಯೆ ರಾಮಮಂದಿರವಿರುವ ಕ್ಷೇತ್ರದಲ್ಲಿ ಬಿ.ಜೆ.ಪಿಗೆ ಸೋಲು
ಜನವರಿಯಲ್ಲಿ ಉದ್ಘಾಟನೆಗೊಂಡ ಐತಿಹಾಸಿಕ ಅಯೋಧ್ಯೆ ರಾಮಮಂದಿರವಿರುವ ಉತ್ತರಪ್ರದೇಶದ ಫೈಜಾಬಾದ್ ಕ್ಷೇತ್ರದಲ್ಲಿ ಬಿ.ಜೆ.ಪಿ ಸೋಲನುಭವಿಸಿದ್ದು, ಪಕ್ಷಕ್ಕೆ ತೀವ್ರ ಮುಖಭಂಗ ಎದುರಾಗಿದೆ. ಈ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅವದೇಶ್ ಪ್ರಸಾದ್ ಗೆಲುವು ಸಾಧಿಸಿದ್ದು ಎದುರಾಳಿ ಬಿ.ಜೆ.ಪಿಯ ಲಲ್ಲು ಸಿಂUಹರ್ಯಾಣದಲ್ಲಿ ಬಿಜೆಪಿ - ಕಾಂಗ್ರೆಸ್ ಸಮಬಲ
ಹರ್ಯಾಣದಲ್ಲಿ ಕಳೆದ ಚುನಾವಣೆಯಲ್ಲಿ ೧೦ಕ್ಕೆ ೧೦ ಸ್ಥಾನಗಳನ್ನು ಪಡೆದಿದ್ದ ಬಿ.ಜೆ.ಪಿ ಈ ಬಾರಿ ಕೇವಲ ೫ ಸ್ಥಾನಗಳನ್ನು ಪಡೆಯಲಷ್ಟೆ ಸಫಲವಾಗಿದೆ. ಉಳಿದ ೫ ಸ್ಥಾನಗಳನ್ನು ಕಾಂಗ್ರೆಸ್ ಪಕ್ಷ ತನ್ನದಾಗಿಸಿಕೊಂಡಿದೆ. ಜಮ್ಮು ಹಾಗೂ ಕಾಶ್ಮೀರದ ೫ ಲೋಕಸಭಾ ಸ್ಥಾನಗಳಲ್ಲಿ ೨ ಸ್ಥಾನಗಳನ್ನು ಬಿ.ಜೆ.ಪಿ ಪಡೆದುಕೊಂಡರೆ, ಜಮ್ಮು ಹಾಗೂ ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ೨ ಸ್ಥಾನಗಳನ್ನು ಗಳಿಸಿದೆ. ಇತರ ಪಕ್ಷ ೧ ಸ್ಥಾನ ಪಡೆದುಕೊಂಡಿದೆ. ಪಂಜಾಬ್ನಲ್ಲಿನ ೧೨ ಸ್ಥಾನಗಳ ಪೈಕಿ ಕಾಂಗ್ರೆಸ್ ೭ ಸ್ಥಾನಗಳನ್ನು ಪಡೆದುಕೊಂಡರೆ, ಆಮ್ ಆದ್ಮಿ ಪಕ್ಷ ೩ ಕ್ಷೇತ್ರಗಳಲ್ಲಿ ಜಯಗಳಿಸಿದೆ. ಶಿರೋಮಣಿ ಅಕಾಲಿ ದಳ ೧ ಸ್ಥಾನ ಪಡೆದಿದ್ದು, ಬಿ.ಜೆ.ಪಿಗೆ ಸ್ಥಾನ ಪಡೆಯಲು ವಿಫಲವಾಗಿದೆ. ï ಸೋಲನುಭವಿಸಿದ್ದಾರೆ.ಛತ್ತೀಸ್ಘಡದಲ್ಲಿ ಬಿ.ಜೆ.ಪಿಗೆ ೧೦, ಕಾಂಗ್ರೆಸ್ಗೆ ೧ ಸ್ಥಾನ ಲಭಿಸಿದೆ. ಸಿಕ್ಕಿಂನಲ್ಲಿನ ೧ ಸ್ಥಾನವನ್ನು ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ, ಪುದುಚೇರಿಯ ೧ ಕ್ಷೇತ್ರವನ್ನು ಕಾಂಗ್ರೆಸ್, ಅಂಡಮಾನ್ನಲ್ಲಿನ ೧ ಸ್ಥಾನವನ್ನು ಬಿ.ಜೆ.ಪಿ, ಲಡಾಕ್ನಲ್ಲಿನ ೧ ಸ್ಥಾನವನ್ನು ಸ್ವತಂತ್ರ ಅಭ್ಯರ್ಥಿ ಹನೀಫಾ ಅವರು ಪಡೆದುಕೊಂಡಿದ್ದಾರೆ. ಲಕ್ಷದ್ವೀಪದಲ್ಲಿನ ೧ ಸ್ಥಾನವನ್ನು ಕಾಂಗ್ರೆಸ್ ಪಡೆದುಕೊಂಡಿದೆ.ಜಾರ್ಖAಡ್ - ಒಡಿಸ್ಸಾ - ಉತ್ತರಾಖಂಡದ ಫಲಿತಾಂಶ
ಜಾರ್ಖAಡ್ನಲ್ಲಿನ ೧೪ ಕ್ಷೇತ್ರಗಳಲ್ಲಿ ೮ ಬಿ.ಜೆಪಿ, ೨ ಕಾಂಗ್ರೆಸ್ ಹಾಗೂ ಉಳಿದ ಕ್ಷೇತ್ರಗಳಲ್ಲಿ ಇತರ ಪಕ್ಷಗಳು ಸ್ಥಾನ ಪಡೆದುಕೊಂಡಿವೆ. ಒಡಿಸ್ಸಾದಲ್ಲಿನ ೨೧ ಸ್ಥಾನಗಳಲ್ಲಿ ೧೯ ಬಿ.ಜೆ.ಪಿ, ೧ ಬಿಜು ಜನತಾದಳ ಹಾಗೂ ೧ ಸ್ಥಾನವನ್ನು ಕಾಂಗ್ರೆಸ್ ಪಡೆದುಕೊಂಡಿದೆ. ಉತ್ತರಾಖಂಡದ ೫ಕ್ಕೆ ೫ ಸ್ಥಾನಗಳನ್ನೂ ಬಿ.ಜೆ.ಪಿ ಪಡೆದುಕೊಂಡಿದೆ.ಈಶಾನ್ಯ ರಾಜ್ಯಗಳ ಫಲಿತಾಂಶ
ಚೀನಾದೊAದಿಗೆ ಗಡಿ ಹಂಚಿಕೊAಡಿರುವ ಅರುಣಾಚಲಪ್ರದೇಶ ರಾಜ್ಯದಲ್ಲಿ ಪೂರ್ವ-ಪಶ್ಚಿಮ ೨ ಕ್ಷೇತ್ರದಲ್ಲಿಯೂ ಬಿ.ಜೆ.ಪಿ ಜಯಗಳಿಸಿ ೨೦೧೯ರ ಚುನಾವಣಾ ಫಲಿತಾಂಶವೇ ಪುನರಾವರ್ತಿತಗೊಂಡಿದೆ. ಜಾತೀಯ ಗಲಭೆಯಿಂದ ತತ್ತರಿಸಿ ಅಂತರರಾಷ್ಟಿçÃಯ ಸುದ್ದಿಯಾಗಿದ್ದ ಮಣಿಪುರದಲ್ಲಿ ಈ ಬಾರಿ ಕಾಂಗ್ರೆಸ್ ಪ್ರಾಬಲ್ಯ ಮೀರಿದೆ. ಕಳೆದ ಚುನಾವಣೆಯಲ್ಲಿ ರಾಜ್ಯದಲ್ಲಿನ ಒಂದೇ ಲೋಕಸಭಾ ಸ್ಥಾನದ ಚುಕ್ಕಾಣಿಯನ್ನು ಬಿ.ಜೆ.ಪಿ ಹಿಡಿದಿತ್ತು. ಉಳಿದಂತೆ ತ್ರಿಪುರದಲ್ಲಿನ ೨ ಸ್ಥಾನಗಳನ್ನು ಬಿ.ಜೆ.ಪಿ ಉಳಿಸಿಕೊಂಡಿದೆ. ಮೆಘಾಲಯದಲ್ಲಿ ಒಂದು ಸ್ಥಾನವನ್ನು ಕಾಂಗ್ರೆಸ್, ಮತ್ತೊಂದನ್ನು ರಾಷ್ಟಿçÃಯ ಪೀಪಲ್ಸ್ ಪಾರ್ಟಿ ಪಕ್ಷ ಪಡೆದುಕೊಂಡಿದೆ. ನಾಗಾಲ್ಯಾಂಡ್ನಲ್ಲಿನ ೧ ಸ್ಥಾನವನ್ನು ಕಾಂಗ್ರೆಸ್, ಮಿಜೋರಾಮ್ನಲ್ಲಿ ಝೋರಾಮ್ ಪೀಪಲ್ಸ್ ಮೋವಮೆಂಟ್ ೧ ಸ್ಥಾನ ಪಡೆದಿದೆ. ಅಸ್ಸಾಂನಲ್ಲಿನ ೧೪ ಸ್ಥಾನಗಳಲ್ಲಿ ಬಿ.ಜೆ.ಪಿ ೯ ಗಳಿಸಿದ್ದು, ೩ ಕಾಂಗ್ರಸ್ಗೆ ೧ ಅಸ್ಸಾಂ ಗಣ ಪರಿಷದ್ಗೆ ದೊರಕಿದೆ. ಮತ್ತೊಂದು ಸ್ಥಾನ ಇತರ ಪಕ್ಷ ಪಡೆದುಕೊಂಡಿದೆ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪ್ರಾಬಲ್ಯ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಪ್ರಾಬಲ್ಯ ಸಾರಿದೆ. ಅಲ್ಲಿನ ೪೨ ಸ್ಥಾನಗಳ ಪೈಕಿ ಟಿ.ಎಂ.ಸಿ ೨೯ ಪಡೆದುಕೊಂಡಿದೆ. ಬಿ.ಜೆ.ಪಿ ೧೨ ಸ್ಥಾನಗಳನ್ನು ಪಡೆದಿದ್ದು, ಕಳೆದ ಚುನಾವಣೆಗೆ ಹೋಲಿಸಿದರೆ ೬ ಸ್ಥಾನಗಳನ್ನು ಕಳೆದುಕೊಂಡಿದೆ.
ಪ್ರಮುಖರ ಗೆಲುವು - ಸೋಲು
ಒಂದೂವರೆ ಲಕ್ಷ ಅಂತರದಲ್ಲಿ ಗೆದ್ದ ಮೋದಿ
ಉತ್ತರಪ್ರದೇಶದ ವಾರಣಾಸಿ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ೬,೧೨,೯೭೦ ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ಅಜಯ್ ರೈ ವಿರುದ್ಧ ೧,೫೨,೫೧೩ ಮತಗಳಿಂದ ಗೆಲುವು ಸಾಧಿಸಿದ್ದಾರೆ.ರಾಹುಲ್ ಗಾಂಧಿಗೆ ೩.೬, ೩.೯ ಲಕ್ಷ ಮತಗಳ ಅಂತರದಲ್ಲಿ ಗೆಲುವು
ಕೇರಳ ರಾಜ್ಯದ ವಯಾನಾಡಿನಲ್ಲಿ ಹಾಗೂ ಉತ್ತರಪ್ರದೇಶದ ರಾಯ್ಬರೇಲಿಯಲ್ಲಿ ನಿಂತಿದ್ದ ಕಾಂಗ್ರೆಸ್ ಸಂಭಾವ್ಯ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿ ೨ ಕ್ಷೇತ್ರಗಳಲ್ಲೂ ಭರ್ಜರಿ ಗೆಲುವು ಸಾಧಿಸಿದ್ದಾರೆ. ವಯನಾಡಿನಲ್ಲಿ ೬,೪೭,೪೪೫ ಮತಗಳನ್ನು ಪಡೆದು ೩,೬೪,೪೨೨ ಅಂತರದಿAದ ಗೆಲುವು ಸಾಧಿಸಿದ್ದಾರೆ. ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ೬,೮೭,೬೪೯ ಮತಗಳನ್ನು ಪಡೆದು ೩,೯೦೦೩೦ ಮತಗಳಿಂದ ಗೆಲುವು ಸಾಧಿಸಿದ್ದಾರೆ.
೭.೪ ಲಕ್ಷ ಅಂತರದಲ್ಲಿ ಅಮಿತ್ ಶಾಗೆ ಭರ್ಜರಿ ಜಯ
ಬಿ.ಜೆ.ಪಿ ಪಕ್ಷದ ಚಾಣಕ್ಯ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಗುಜರಾತ್ನ ಗಾಂಧಿನಗರ ಕ್ಷೇತ್ರದಲ್ಲಿ ನಿಂತು ೧೦,೧೦,೯೭೨ ಮತಗಳನ್ನು ಪಡೆದು ಕಾಂಗ್ರಸ್ನ ಸೋನಲ್ ರಮನ್ಬಾಯ್ ಪಟೇಲ್ ಅವರ ವಿರುದ್ಧ ೭,೪೪,೭೧೬ ಮತಗಳಿಂದ ಭರ್ಜರಿ ಜಯ ಸಾಧಿಸಿದ್ದಾರೆ.ಸಚಿವೆ ಸ್ಮೃತಿ ಇರಾನಿಗೆ ಸೋಲು
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಬಿ.ಜೆ.ಪಿಯ ಪ್ರಮುಖರಾದ ಸ್ಮೃತಿ ಇರಾನಿ ಅವರು ಉತ್ತರಪ್ರದೇಶದ ಅಮೇತಿ ಕ್ಷೇತ್ರದಲ್ಲಿ ೧,೬೭,೧೯೬ ಮತಗಳ ಅಂತರದಲ್ಲಿ ಸೋಲನುಭವಿಸಿದ್ದಾರೆ. ಕಾಂಗ್ರೆಸ್ನ ಕಿಶೋರಿ ಲಾಲ್ ಅವರು ಇಲ್ಲಿ ಜಯ ಸಾಧಿಸಿದ್ದಾರೆ.ಅಖಿಲೇಶ್ ಯಾದವ್ಗೆ ಗೆಲುವು
ಉತ್ತರ ಪ್ರದೇಶದಲ್ಲಿ ಬಿ.ಜೆ.ಪಿಗೆ ಆಘಾತ ನೀಡಿದ ಸಮಾಜವಾದಿ ಪಕ್ಷದ ಮುಂದಾಳು ಅಖಿಲೇಶ್ ಯಾದವ್ ಅಲ್ಲಿನ ಕನೌಜ್ ಕ್ಷೇತ್ರದಲ್ಲಿ ಬಿ.ಜೆ.ಪಿ ಸುಬ್ರತ್ ಪ್ರತಾಪ್ ವಿರುದ್ಧ ೧.೭೦ ಲಕ್ಷ ಮತಗಳ ಅಂತರದಿAದ ಜಯ ಸಾಧಿಸಿದ್ದಾರೆ. ಸಚಿವ ರಾಜೀವ್ ಚಂದ್ರಶೇಖರ್ಗೆ ತರೂರ್ ವಿರುದ್ಧ ಸೋಲು
ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಕೇರಳದ ತಿರುವನಂತಪುರA ಕ್ಷೇತ್ರದಲ್ಲಿ ಸೋಲನುಭವಿಸಿದ್ದಾರೆ. ಕಾಂಗ್ರೆಸ್ನ ಶಶಿ ತರೂರ್ ೩,೫೮,೧೫೫ ಮತಗಳನ್ನು ಪಡೆಯುವ ಮೂಲಕ ಒಟ್ಟು ೧೬,೦೭೭ ಮತಗಳಿಂದ ಚಂದ್ರಶೇಖರ್ ಅವರ ವಿರುದ್ಧ ಗೆದ್ದಿದ್ದಾರೆ.ಅಣ್ಣಾಮಲೈಗೆ ಸೋಲು
ದೇಶವ್ಯಾಪಿ ಕುತೂಹಲಕ್ಕೆ ಕಾರಣವಾಗಿದ್ದ ತಮಿಳುನಾಡು ಬಿಜೆಪಿ ಅಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಸೋಲನುಭವಿಸಿದ್ದಾರೆ. ಕೊಯಮತ್ತೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಣ್ಣಾಮಲೈ ಡಿಎಂಕೆ ಅಭ್ಯರ್ಥಿ ಗಣಪತಿ ರಾಜ್ಕುಮಾರ್ ವಿರುದ್ಧ ಸೋಲುನುಭವಿಸಿದ್ದಾರೆ. ತಮಿಳುನಾಡಿನಲ್ಲಿ ೩೯ ಸ್ಥಾನಗಳ ಪೈಕಿ ಡಿಎಂಕೆ ೨೨, ಕಾಂಗ್ರೆಸ್ ೯, ಸಿಪಿಐಎಂ ೨, ವಿಸಿಕೆ ೨, ಸಿಪಿಐ ೨, ಎಂಡಿಎAಕೆ ೨, ಐಯುಎಂಎಲ್ ೧ ಸ್ಥಾನ ಗಳಿಸಿದೆ.ಕೇರಳದಲ್ಲಿ ಖಾತೆ ತೆರೆದ ಬಿಜೆಪಿ
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೇರಳ ರಾಜ್ಯದಲ್ಲಿ ಬಿಜೆಪಿ ಖಾತೆ ತೆರೆದಿದೆ. ತ್ರಿಶೂರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಚಿತ್ರನಟ ಸುರೇಶ್ಗೋಪಿ ೭೪ ಸಾವಿರ ಮತಗಳ ಅಂತರದಿAದ ಭರ್ಜರಿ ಗೆಲುವು ದಾಖಲಿಸುವ ಮೂಲಕ ಕೇರಳದಲ್ಲಿ ಖಾತೆ ತೆರೆಯುವ ಬಿಜೆಪಿಯ ಕನಸು ನನಸಾಗಿದೆ. ಸಿಪಿಐನ ವಿ.ಎಸ್. ಸುನಿಲ್ಕುಮಾರ್, ಕಾಂಗ್ರೆಸ್ನ ಕೆ. ಮುರಳೀಧರನ್ ಸೋಲನುಭವಿಸಿದ್ದಾರೆ.