ಮಡಿಕೇರಿ, ಜೂ. ೪: ರಾಷ್ಟçದಾದ್ಯಂತ ತೀವ್ರ ಕುತೂಹಲ ಮೂಡಿಸಿದ್ದ ಲೋಕಸಭಾ ಚುನಾವಣೆಯ ಫಲಿತಾಂಶ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ೨೮ ಕ್ಷೇತ್ರಗಳ ಪೈಕಿ ೧೭ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಹಲವು ಗ್ಯಾರಂಟಿ ಯೋಜನೆಗಳ ಜಾರಿಯೊಂದಿಗೆ ಬಹುಮತ ಪಡೆಯುವ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಪಕ್ಷ ೯ ಸ್ಥಾನ ಗಳಿಸಿದರೆ, ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಭಾರೀ ಜಿದ್ದಾ ಜಿದ್ದಿನಿಂದ ಕೂಡಿದ್ದ ಈ ಬಾರಿಯ ಕರ್ನಾಟಕ ರಾಜ್ಯದಲ್ಲಿನ ಫಲಿತಾಂಶ ಬಿಜೆಪಿ ಪರವಾಗಿದೆ. ಆದರೂ ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಇದ್ದ ಸ್ಥಾನದಲ್ಲಿ ಕುಸಿತ ಕಂಡಿದೆ. ಕಳೆದ ಚುನಾವಣೆಯಲ್ಲಿ ೨೫ ಸ್ಥಾನ ಹೊಂದಿದ್ದ ಬಿಜೆಪಿ ಈ ಬಾರಿ ೧೭ ಸ್ಥಾನಗಳಲ್ಲಿ ಮಾತ್ರ ಜಯಗಳಿಸುವಲ್ಲಿ ಸಾಧ್ಯವಾಗಿದ್ದು, ೮ ಸ್ಥಾನ ಕಡಿಮೆಯಾಗಿದೆ. ಆದರೆ ಕಳೆದ ಬಾರಿ ಕೇವಲ ಒಂದು ಸ್ಥಾನ ಹೊಂದಿದ ಕಾಂಗ್ರೆಸ್ ಪಕ್ಷದ ಬಲ ಈ ಬಾರಿ ೯ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಜಾರಿಗೊಳಿಸಿದ ‘ಗ್ಯಾರಂಟಿ’ ಯೋಜನೆ ಕೊಂಚ ಮಟ್ಟಿಗೆ ಇಲ್ಲಿ ಕಾಂಗ್ರೆಸ್ಗೆ ಫಲಪ್ರದವಾಗಿದೆ. ಇನ್ನು ಜೆಡಿಎಸ್ ಪಕ್ಷ ಕೂಡ ಈ ಬಾರಿ ಒಂದು ಸ್ಥಾನ ಹೆಚ್ಚಿಸಿಕೊಂಡಿದೆ. ಕಳೆದ ಬಾರಿ ಒಂದು ಸ್ಥಾನ ಗಳಿಸಿದ್ದ ಜೆಡಿಎಸ್ ಈ ಬಾರಿ ಬಿಜೆಪಿ ಮೈತ್ರಿಯೊಂದಿಗೆ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, ಎರಡು ಕ್ಷೇತ್ರದಲ್ಲಿ ಜಯಗಳಿಸಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೇರಿದ ಕಾಂಗ್ರೆಸ್ ಆಡಳಿತದ ಕೇವಲ ಒಂದು ವರ್ಷದ ಬಳಿಕ ನಡೆದ ಲೋಕಸಭಾ ಚುನಾವಣೆಯಲ್ಲಿ ಮತದಾರರು ಬದಲಾವಣೆ ಬಯಸಿದ್ದು ಸರಕಾರಕ್ಕೆ ಆಘಾತ ಮೂಡಿಸಿದೆ. ಮುಖ್ಯವಾಗಿ ೫ ಗ್ಯಾರಂಟಿಗಳನ್ನೇ ಅಸ್ತçವಾಗಿಸಿ ಚುನಾವಣಾ ಪ್ರಚಾರ ಕೈಗೊಂಡಿದ್ದ ಕಾಂಗ್ರೆೆಸ್ಗೆ ಅದರ ಪೂರ್ಣ ಸ್ಪಂದನ ಮತದಾರರಿಂದ ಲಭ್ಯವಾಗಿಲ್ಲ. ರಾಜ್ಯದಲ್ಲಿ ಈಗಿನ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಪ್ರಯೋಜನವುಂಟು ಮಾಡಿರುವುದಕ್ಕೆ ಈ ಫಲಿತಾಂಶವೇ ಸಾಕ್ಷಿಯಾಗಿದೆ. ರಾಜ್ಯದಲ್ಲಿ ಅನೇಕ ಸಚಿವರ ಮಕ್ಕಳು ಕಾಂಗ್ರೆಸ್ನಿAದ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ. ಅಲ್ಲದೆ, ಉಪ ಮುಖ್ಯಮಂತ್ರಿ ಶಿವಕುಮಾರ್ ಅವರ ಸಹೋದರ, ಕಾಂಗ್ರೆಸ್ನ ಪರವಾಗಿ ಮೂರು ಬಾರಿ ಆಯ್ಕೆಗೊಂಡಿದ್ದ ಸಂಸದ ಡಿ.ಕೆ ಸುರೇಶ್ ಇದೀಗ ನೂತನವಾಗಿ ಬಿಜೆಪಿಯಿಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿದ ಮಾಜಿ ಪ್ರಧಾನಿ ದೇವೇಗೌಡರ ಅಳಿಯ, ಡಾ. ಮಂಜುನಾಥ್ ಅವರಿಂದ ಭಾರೀ ಮತಗಳ ಅಂತರದಲ್ಲಿ ಸೋಲನುಭವಿಸಿರುವುದು ಕಾಂಗ್ರೆಸ್ನಲ್ಲಿ ತಲ್ಲಣ ಮೂಡಿಸಿದೆ. ಇನ್ನೊಂದೆಡೆÉ ರಾಜ ಮನೆತನದಿಂದ ಬಿಜೆಪಿ ಮೂಲಕ ರಾಜಕೀಯ ಅಖಾಡಕ್ಕಿಳಿದ ಯದುವೀರ್ ಅವರು ಕೊಡಗು-ಮೈಸೂರು ಕ್ಷೇತ್ರದಲ್ಲಿ ಭಾರೀ ಮತಗಳ ಅಂತರದಿAದ ಕಾಂಗ್ರೆಸ್ನÀ ಲಕ್ಷö್ಮಣ್ ಅವರನ್ನು ಪರಾಭವಗೊಳಿಸಿ ರುವುದೂ ಮತ್ತೊಂದು ವಿಶೇಷ ಬೆಳವಣಿಗೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಅತ್ಯಧಿಕ ಮತಗಳ ಅಂತರದಿAದ ಮಂಡ್ಯದಲ್ಲಿ ಸ್ಟಾರ್ ಚಂದ್ರು ಅವರನ್ನು ಸೋಲಿಸಿರುವುದು ಗಮನಾರ್ಹವಾಗಿದೆ.
(ಮೊದಲ ಪುಟದಿಂದ) ಈಗಾಗಲೇ ದೇಶದ ಮುಂದಿನ ರಾಜಕೀಯ ಬೆಳವಣಿಗೆ ಕುರಿತು ಬಿಜೆಪಿ ರಾಷ್ಟಿçÃಯ ಚತುರ ಅಮಿತ್ ಶಾ ಅವರು ಕುಮಾರಸ್ವಾಮಿಯವರನ್ನು ನವದೆಹಲಿಗೆ ಚರ್ಚೆಗೆ ಆಹ್ವಾನಿಸಿರುವುದು ಅವರನ್ನು ಕೇಂದ್ರದಲ್ಲಿ ಪ್ರಮುಖ ನಾಯಕತ್ವಕ್ಕೆ ಸೆಳೆಯಲು ತಿರುವು ಕಲ್ಪಿಸಿದೆ. ಈ ನಡುವೆ ಕಲಬುರ್ಗಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಗೆಲುವುಗಳಿಸಿರುವುದು ಖರ್ಗೆ ಅವರಿಗೆ ಸಮಾಧಾನವುಂಟು ಮಾಡಿದ ವಿದ್ಯಮಾನವಾಗಿದೆ. ಮಾಜಿ ಮುಖ್ಯಮಂತ್ರಿಗಳಾದ ಬಿಜೆಪಿಯ ಬಸವರಾಜ ಬೊಮ್ಮಾಯಿ ಹಾಗೂ ಜಗದೀಶ್ ಶೆಟ್ಟರ್ ಅವರುಗಳ ಗೆಲುವು ಪಕ್ಷÀಕ್ಕೆ ನಿರಾಳ ಮೂಡಿಸಿದೆ. ಹಾಸನದ ಸಂಸದ ಲೈಂಗಿಕ ಹಗರಣಗಳನ್ನು ಎದುರಿಸುತ್ತಿರುವ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಕಾಂಗ್ರೆಸ್ನ ಶ್ರೇಯಸ್ ಪಟೇಲ್ ಅವರಿಂದ ಪರಾಭವಗೊಂಡಿರುವುದು ಗಮನಾರ್ಹ. ಶಿವಮೊಗ್ಗದಲ್ಲಿ ಬಿಜೆಪಿಯ ರಾಘವೇಂದ್ರ ಅವರಿಗೆ ಸವಾಲೆಸೆÀದು ಬಂಡಾಯವಾಗಿ ಸ್ಪರ್ಧಿಸಿದ್ದ ಕೆ.ಎಸ್. ಈಶ್ವರಪ್ಪ ಮೂರನೇ ಸ್ಥಾನಕ್ಕೆ ತಳ್ಳಲ್ಪಟಿದ್ದಾರೆ. ಈಗಿನ ಚುನಾವಣಾ ಫಲಿತಾಂಶ ರಾಜ್ಯ ಕಾಂಗ್ರೆಸ್ ಆಡಳಿತ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳಿಗೆ ಕಾರಣವಾಗಬಹುದು ಎಂದು ರಾಜಕೀಯ ಪರಿಣಿತರು ವಿಶ್ಲೇಷಿಸಿದ್ದಾರೆ.
ದಾಖಲೆ ಬರೆದ ಜೋಷಿ
೨೦೨೪ರ ಲೋಕಸಭಾ ಚುನಾವಣೆಗೆ ಹಲವು ಅಭ್ಯರ್ಥಿಗಳು ಎರಡನೇ, ಮೂರನೇ, ನಾಲ್ಕನೇ, ಐದನೇ ಬಾರಿಗೂ ಆಯ್ಕೆ ಬಯಸಿ ಸ್ಪರ್ಧೆ ಮಾಡಿದ್ದರು. ಈ ಪೈಕಿ ಕೆಲವರು ಜಯಗಳಿಸಿದ್ದರೆ, ಇನ್ನು ಕೆಲವರು ಸೊಲನುಭವಿಸಿದ್ದಾರೆ. ಈ ಪೈಕಿ ಐದನೇ ಬಾರಿಗೆ ಸ್ಪರ್ಧಿಸಿದ್ದ ಪ್ರಹ್ಲಾದ್ ಜೋಷಿ ಐದನೇ ಬಾರಿಯೂ ಗೆಲುವು ಸಾಧಿಸಿ ದಾಖಲೆ ಬರೆದಿದ್ದಾರೆ. ಅದೂ ಕೂಡ ಧಾರವಾಡ ಒಂದೇ ಕ್ಷೇತ್ರದಲ್ಲಿ ಸತತ ಗೆಲುವು ಸಾಧಿಸಿರುವದು ವಿಶೇಷ. ಈ ಬಾರಿ ಕಾಂಗ್ರೆಸ್ನ ವಿನೋದ್ ಅಸೂಟಿ ಅವರನ್ನು ಸೋಲಿಸಿ ಮತ್ತೆ ಸಂಸತ್ ಪ್ರವೇಶಿಸಿದ್ದಾರೆ. ಇನ್ನುಳಿದಂತೆ ಬಿ.ವೈ.ರಾಘವೇಂದ್ರ, ಪಿ.ಸಿ.ಮೋಹನ್, ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ ಅವರುಗಳು ಮರು ಆಯ್ಕೆಯಾಗಿರುವ ಸಂಸದರುಗಳಾಗಿದ್ದಾರೆ.೨೫ ವರ್ಷಗಳ ನಂತರ ಕಾಂಗ್ರೆಸ್
ಪೆನ್ ಡ್ರೆöÊವ್ ಹಗರಣದಿಂದ ವಿಶ್ವದಲ್ಲೇ ಸುದ್ದಿಗೆ ಗ್ರಾಸವಾಗಿರುವ ಹಾಸನ ಲೋಕಸಭಾ ಕ್ಷೇತ್ರ ೨೫ ವರ್ಷಗಳ ನಂತರ ಕಾಂಗ್ರೆಸ್ ಕೈ ವಶವಾಗಿದೆ. ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡರನ್ನು ಸೋಲಿಸಿದ್ದ ಮಾಜಿ ಸಚಿವ ದಿ.ಜಿ.ಪುಟ್ಟಸ್ವಾಮಿಗೌಡ ಅವರ ಮೊಮ್ಮಗ ಶ್ರೇಯಸ್ ಪಟೇಲ್ ಇದೀಗ ದೇವೇಗೌಡ ಅವರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರನ್ನು ಸೋಲಿಸಿ ಕಾಂಗ್ರೆಸ್ ಪಕ್ಷಕ್ಕೆ ಜಯ ತಂದುಕೊಟ್ಟಿದ್ದಾರೆ.ಅತಿ ಕಿರಿಯ ಸಂಸದ
ಬೀದರ್ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಕೇಂದ್ರ ಸಚಿವ ಬಿಜೆಪಿಯ ಭಗವಂತ ಖೂಬಾ ವಿರುದ್ಧ ೧ ಲಕ್ಷ ೨೫ ಸಾವಿರ ಮತಗಳ ಅಂತರದಿAದ ಗೆಲುವು ಸಾಧಿಸಿದ್ದಾರೆ. ಖೂಬಾ ಅವರ ಹ್ಯಾಟ್ರಿಕ್ ಕನಸು ಭಗ್ನ ಮಾಡಿರುವ ೨೬ ವರ್ಷ ಪ್ರಾಯದ ಸಾಗರ್ ಅತಿ ಕಿರಿಯ ಸಂಸದರಾಗಿದ್ದಾರೆ. ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ಮೊಮ್ಮಗ, ಸಚಿವ ಈಶ್ವರ ಖಂಡ್ರೆ ಅವರ ಪುತ್ರ ಸಾಗರ್ ಪ್ರಥಮ ಬಾರಿಗೆ ಸ್ಪರ್ಧಿಸಿ ಭರ್ಜರಿ ಯಶ ಕಂಡಿದ್ದಾರೆ. ಇವರ ನಂತರದಲ್ಲಿ ೨೭ ವರ್ಷ ಪ್ರಾಯದ ಪ್ರಿಯಾಂಕ ಜಾರಕಿಹೊಳಿ, ೩೨ ವರ್ಷದ ಶ್ರೇಯಸ್ ಪಟೇಲ್ ಕಿರಿಯ ಸಂಸದರಾಗಿದ್ದಾರೆ.