(ಹೆಚ್.ಜೆ. ರಾಕೇಶ್-ವಿಜಯ್ ಹಾನಗಲ್)

ಮೈಸೂರು, ಜೂ. ೪: ಮೂರನೇ ಬಾರಿ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಬಿಜೆಪಿ ತನ್ನ ಪಾರುಪತ್ಯ ಮುಂದುವರೆಸಿದೆ. ಅರಮನೆಯಲ್ಲಿದ್ದ ಮೈಸೂರಿನ ಮಹಾರಾಜರು ಇದೀಗ ಅಧಿಕೃತವಾಗಿ ಕೊಡಗು-ಮೈಸೂರಿನ ಸಂಸದ ಸ್ಥಾನದ ಕಿರೀಟ ಮುಡಿಗೇರಿಸಿಕೊಂಡು, ಜನ ಸೇವಕರಾಗಿದ್ದಾರೆ.

ಕೊಡಗು ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಕಮಲ ಕದಲದೇ ತನ್ನ ಅಸ್ತಿತ್ವ ಉಳಿಸಿಕೊಂಡಿದ್ದರೆ, ಮ್ಯಾಜಿಕ್ ಮಾಡುವ ಆಶಾಭಾವನೆಯಲ್ಲಿದ್ದ ಕೈಪಾಳಯ ಸೋಲಿನ ಕಹಿ ರುಚಿ ಕಂಡಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು, ಕಾಂಗ್ರೆಸ್ ಪಕ್ಷದ ನ್ಯಾಯಪತ್ರ ಸೇರಿದಂತೆ ಇನ್ನಿತರ ಆಶ್ವಾಸನೆಗಳ ನಡುವೆಯೂ ಬಿಜೆಪಿ ಜನ ಬೆಂಬಲ ಪಡೆದುಕೊಂಡಿರುವುದು ಫಲಿತಾಂಶದಿAದ ಅನಾವರಣಗೊಂಡಿದೆ.

ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ, ಮೈಸೂರು ಸಂಸ್ಥಾನದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ. ಲಕ್ಷö್ಮಣ್ ಅವರ ವಿರುದ್ಧ ೧,೩೯,೨೬೨ ಮತಗಳ ಅಂತರದಿAದ ಭರ್ಜರಿ ಗೆಲುವು ಸಾಧಿಸಿ, ವಿಜಯದ ನಗೆ ಬೀರಿದ್ದಾರೆ. ಇದರೊಂದಿಗೆ ಚೊಚ್ಚಲ ಪ್ರಯತ್ನದಲ್ಲೇ ಸಂಸತ್ ಪ್ರವೇಶಿಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ.

ಯದುವೀರ್ ಅವರು ೭,೯೫,೫೦೩ ಮತಗಳನ್ನು ಗಳಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ಲಕ್ಷö್ಮಣ್ ಅವರು ೬,೫೬,೨೪೧ ಮತಗಳಿಸುವ ಮೂಲಕ ಗಮನಾರ್ಹ ಸಾಧನೆಯ ನಡುವೆಯೂ ಸೋಲು ಅನುಭವಿಸಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಶೇ. ೫೩.೫೯ ಹಾಗೂ ಕಾಂಗ್ರೆಸ್ ಶೇ. ೪೪.೨೧ ಮತ ಹಂಚಿಕೊAಡಿದೆ.

ಕೊಡಗು ಮೈಸೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ತವರು ಕ್ಷೇತ್ರವಾಗಿರುವ ಹಿನ್ನೆಲೆ ಈ ಬಾರಿ ಕಾಂಗ್ರೆಸ್ ಪರವಾದ ಅಲೆ ಸೃಷ್ಟಿಯಾಗಿದೆ ಎಂದೇ ಭಾವಿಸಲಾಗಿತ್ತು. ಇದರೊಂದಿಗೆ ರಾಜಕೀಯಕ್ಕೆ ಹೊಸ ಮುಖವಾಗಿರುವ ಯದುವೀರ್ ಅವರಿಗೆ ಸ್ವಪಕ್ಷದವರಿಂದಲೂ ನಿರೀಕ್ಷಿತ ಬೆಂಬಲ ಲಭಿಸದ ಹಿನ್ನೆಲೆ ಕಾಂಗ್ರೆಸ್ ಮ್ಯಾಜಿಕ್ ಮಾಡಬಹುದೆಂಬ ನಿರೀಕ್ಷೆ ಸೃಷ್ಟಿಸಿತ್ತು.

ಕ್ಷೇತ್ರದಲ್ಲಿ ೫ ಮಂದಿ ಕಾಂಗ್ರೆಸ್ ಶಾಸಕರು, ಈರ್ವರು ಜೆಡಿಎಸ್ ಹಾಗೂ ಓರ್ವ ಬಿಜೆಪಿ ಶಾಸಕರಿದ್ದು, ಕೊಡಗಿನ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿರುವುದರಿಂದ ಈ ಬಾರಿ ಕೊಡಗಿನಿಂದ ಬಿಜೆಪಿಯ ಅಂತರ ಭಾರೀ ಕಡಿಮೆಯಾಗುವ ನಿರೀಕ್ಷೆಯನ್ನೂ ಹುಟ್ಟಿಸಿತ್ತು. ಆದರೆ ಅಂತಿಮವಾಗಿ ಮತದಾರರ ಮನದಾಳ ಬಯಲಾಗಿದ್ದು, ಬಿಜೆಪಿ ಅಭ್ಯರ್ಥಿ ಭರ್ಜರಿ ಗೆಲುವಿನ ನಗೆ ಬೀರಿದ್ದಾರೆ.

ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿಯ ಕೇವಲ ಓರ್ವ ಶಾಸಕರಿದ್ದರೂ ಮೋದಿ ಅಲೆ ಹಾಗೂ ಜೆಡಿಎಸ್ ಮೈತ್ರಿಯಿಂದಾಗಿ ಗೆಲುವಿನ ದಡ ಸೇರುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಇದರೊಂದಿಗೆ ಹಿಂದುತ್ವದ ವಿಚಾರವೂ ಚುನಾವಣೆಯಲ್ಲಿ ವರ್ಕ್ಔಟ್ ಆಗಿರುವುದು ಫಲಿತಾಂಶದಿAದ ಪ್ರತಿಫಲಿಸಿದೆ.

ಮತ ಎಣಿಕೆ ಹೇಗಿತ್ತು?

ಆರಂಭದ ಹಂತದಲ್ಲಿ ಕಾಂಗ್ರೆಸ್‌ನ ಲಕ್ಷö್ಮಣ್ ಅವರು ೪೦೬೪ ಮತಗಳ ಅಂತರದಿAದ ಮುನ್ನಡೆ ಕಾಯ್ದು ಕೊಂಡಿದ್ದನ್ನು ಹೊರತುಪಡಿಸಿದರೆ,

(ಮೊದಲ ಪುಟದಿಂದ) ನಂತರದಲ್ಲಿ ಮತ ಎಣಿಕೆ ಪೂರ್ಣಗೊಳ್ಳುವವರೆಗೂ ಬಿಜೆಪಿ ಅಭ್ಯರ್ಥಿ ಯದುವೀರ್ ಅವರು ‘ಲೀಡ್’ ಪಡೆದುಕೊಂಡು ಬಿಜೆಪಿಗೆ ಹೊಸ ‘ಲೀಡರ್’ ಆಗಿ ಹೊರಹೊಮ್ಮಿದರು.

ಎರಡನೇ ಸುತ್ತಿನಲ್ಲಿ ೫೩೪೪ ಮತಗಳ ಅಂತರದಿAದ ಮುನ್ನಡೆ ಕಾಯ್ದುಕೊಂಡ ಬಿಜೆಪಿ, ೧೧ ಗಂಟೆಯ ಸುಮಾರಿಗೆ ೯೯,೧೯೭ ಮತಗಳ ಮುನ್ನಡೆಯಲ್ಲಿತ್ತು. ನಂತರ ಈ ಅಂತರ ೭೫,೬೦೦ಕ್ಕೆ ಇಳಿಕೆಯಾಯಿತು. ಮಧ್ಯಾಹ್ನ ೧ ಗಂಟೆಯ ವೇಳೆಗೆ ಮತ್ತೆ ೧ ಲಕ್ಷಗಳ ಅಂತರ ಆರಂಭವಾಗಿ ೪ ಗಂಟೆಯ ವೇಳೆಗೆ ಅಂತಿಮವಾಗಿ ೧,೩೯,೨೬೨ ಮತಗಳ ಅಂತರದಿAದ ಕೊಡಗು-ಮೈಸೂರು ಕ್ಷೇತ್ರದಲ್ಲಿ ಕಮಲ ಅಧಿಕೃತವಾಗಿ ಅರಳಿತು.

ಸೇವಾ ಮತದಾರರು ಹಾಗೂ ಅಂಚೆ ಮತಗಳ ಪೈಕಿ ಯದುವೀರ್ ಅವರಿಗೆ ೪,೫೯೮ ಅಂಚೆ ಮತ, ೫೧೪ ಇಟಿಪಿಬಿಎಸ್ ಮತಗಳು, ಲಕ್ಷö್ಮಣ್ ಅವರಿಗೆ ೨,೩೪೮ ಅಂಚೆ, ೧೫೪ ಇಟಿಪಿಬಿಎಸ್ ಮತಗಳು ದೊರೆತವು. ಇವಿಎಂ ಯಂತ್ರಗಳಿAದ ಬಿಜೆಪಿಗೆ ೭,೯೦,೩೯೧, ಕಾಂಗ್ರೆಸ್‌ಗೆ ೬,೫೩,೭೩೯ ಮತಗಳು ಲಭಿಸಿದವು.

ಆರಂಭದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಬೂತ್ ಏಜೆಂಟರು ಅತ್ಯುತ್ಸಾಹದಿಂದ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ್ದರು. ಸಣ್ಣ ಪ್ರಮಾಣದ ಅಂತರದ ಏರಿಳಿತ ಆಗುತ್ತಿದ್ದ ಸಂದರ್ಭ ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ತಳಮಳ ಏರ್ಪಟ್ಟಿತ್ತು. ಆದರೆ ಪೂರ್ವಾಹ್ನ ೧೧ ಗಂಟೆಯ ವೇಳೆಗೆ ಬಿಜೆಪಿ ಅಭ್ಯರ್ಥಿ ೯೦ ಸಾವಿರ ಮತಗಳ ಅಂತರ ಕಾಯ್ದುಕೊಂಡು ಮುನ್ನುಗ್ಗುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಹಲವು ಬೂತ್ ಏಜೆಂಟರು ಮತ ಎಣಿಕೆ ಕೇಂದ್ರದಿAದ ತೆರಳುತ್ತಿದ್ದುದು ಕಂಡು ಬಂತು.ಬಿಜೆಪಿ ಅಭ್ಯರ್ಥಿ ಯದುವೀರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಲಕ್ಷö್ಮಣ್ ಅವರುಗಳು ಆರಂಭದಲ್ಲಿ ಕೇಂದ್ರಕ್ಕೆ ಆಗಮಿಸಿದ್ದರು. ಲೀಡ್‌ನ ಅಂತರ ಹೆಚ್ಚುತ್ತಿದ್ದಂತೆ ಲಕ್ಷö್ಮಣ್ ಅವರು ನಿರಾಶಾಭಾವನೆಯಿಂದ ನಿರ್ಗಮಿಸಿದರು. ಇವರೊಂದಿಗೆ ಕೆಲ ಏಜೆಂಟರೂ ತೆರಳಿದರು. ಬಿಜೆಪಿ ಅಭ್ಯರ್ಥಿ ಯದುವೀರ್ ಅವರು ೧ ಲಕ್ಷ ಮುನ್ನಡೆ ಬಂದ ನಂತರ ಮತ ಎಣಿಕೆ ಕೇಂದ್ರದಿAದ ಹೊರ ತೆರಳಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ, ಗೆಲುವು ಪ್ರಕಟವಾಗುತ್ತಿದ್ದಂತೆ ಮತ್ತೆ ವಾಪಸ್ ಆದರು. ಈ ಸಂದರ್ಭ ಚುನಾವಣಾಧಿಕಾರಿಗಳಾಗಿರುವ ಮೈಸೂರು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರು ಚುನಾವಣೆ ಗೆಲುವಿನ ಪ್ರಮಾಣ ಪತ್ರ ಹಸ್ತಾಂತರಿಸಿದರು.

ಪ್ರಕ್ರಿಯೆ: ಕಳೆದ ಏಪ್ರಿಲ್ ೨೬ರಂದು ನಡೆದಿದ್ದ ಮತದಾನದ ಮತ ಎಣಿಕೆ ಕಾರ್ಯ ಇಂದು ಮೈಸೂರಿನ ಪಡುವಾರಹಳ್ಳಿಯ ಮಹಾರಾಣಿ ಕಾಲೇಜಿನಲ್ಲಿ ವ್ಯವಸ್ಥಿತವಾಗಿ ನಡೆಯಿತು. ಖಾಕಿ ಸರ್ಪಗಾವಲು ಕೇಂದ್ರದ ಸುತ್ತ ಕಂಡು ಬಂತು. ಪೊಲೀಸರೊಂದಿಗೆ ಅರೆಸೇನಾ ಪಡೆ ಯೋಧರು ಭದ್ರತೆಗಾಗಿ ನಿಯೋಜನೆಗೊಂಡಿದ್ದರು. ಕೇವಲ ಮತ ಎಣಿಕೆ ಕೇಂದ್ರದ ಸುತ್ತವಲ್ಲದೆ ಇಡೀ ನಗರದಲ್ಲಿ ಪೊಲೀಸ್ ಪಡೆ ಸುತ್ತುವರೆದಿತ್ತು.

ಮತ ಎಣಿಕೆ ಕೇಂದ್ರದ ಪ್ರವೇಶದ್ವಾರದಲ್ಲಿ ಪೊಲೀಸ್ ತಪಾಸಣೆ ನಡೆಸಿ ಪಾಸ್ ಹೊಂದಿದ ಅಧಿಕಾರಿಗಳು, ನಿಯೋಜಿತ ಸಿಬ್ಬಂದಿ, ಅಭ್ಯರ್ಥಿಗಳ ಪರ ಏಜೆಂಟರಿಗೆ ಹಾಗೂ ಮಾಧ್ಯಮದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಕಾಲೇಜಿನ ಹಿಂಭಾಗದ ಮೈದಾನದಲ್ಲಿ ವಾಹನ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ಬೆಳಿಗ್ಗೆ ೭.೩೦ಕ್ಕೆ ಸ್ಟಾçಂಗ್ ರೂಂನಲ್ಲಿ ಭದ್ರವಾಗಿದ್ದ ಮತಯಂತ್ರಗಳನ್ನು ಜಿಲ್ಲಾ ಚುನಾವಣಾಧಿಕಾರಿ ಡಾ. ರಾಜೇಂದ್ರ ಅವರ ಸಮ್ಮುಖದಲ್ಲಿ ತೆರೆದು ಮತಗಟ್ಟೆಗಳಿಗೆ ರವಾನಿಸಲಾಯಿತು.

ಬೆಳಿಗ್ಗೆ ೮ ಗಂಟೆಗೆ ಮೊದಲು ಸೇವಾ ಹಾಗೂ ಅಂಚೆ ಮತ ಎಣಿಕೆ ಆರಂಭಿಸುವ ಮೂಲಕ ಪ್ರಕ್ರಿಯೆಗೆ ಮುನ್ನುಡಿ ಇಡಲಾಯಿತು. ನಂತರ ಇವಿಎಂ ಯಂತ್ರಗಳ ಎಣಿಕೆ ಕಾರ್ಯ ಆರಂಭಗೊAಡಿತು.

ಪ್ರತ್ಯೇಕ ಎಣಿಕೆ ಕೇಂದ್ರಗಳು

ಸೇವಾ ಮತದಾರರು ಮತ್ತು ಅಂಚೆ ಮತಗಳ ಎಣಿಕೆಗೆ ಪ್ರತ್ಯೇಕ ೨ ಕೊಠಡಿಗಳ ವ್ಯವಸ್ಥೆಯನ್ನು ಮಾಡಲಾಗಿತ್ತು. ಹುಣಸೂರು, ಚಾಮರಾಜ, ಕೃಷ್ಣರಾಜ, ಚಾಮುಂಡೇಶ್ವರಿ, ಪಿರಿಯಾಪಟ್ಟಣ, ವೀರಾಜಪೇಟೆ, ಮಡಿಕೇರಿ, ನರಸಿಂಹರಾಜ ಕ್ಷೇತ್ರಗಳ ಮತ ಎಣಿಕೆಗೆ ತಲಾ ಒಂದು ಕೊಠಡಿಯನ್ನು ಮೀಸಲಿಡಲಾಗಿತ್ತು.

ಮತಗಳ ಎಣಿಕೆಗಾಗಿ ಪ್ರತಿ ಕ್ಷೇತ್ರಕ್ಕೆ ೧೪ ಎಣಿಕೆ ಮೇಜುಗಳನ್ನು ಹಾಗೂ ಅಂಚೆ ಮತ ಪತ್ರ ಮತ್ತು ಸೇವಾ ಮತದಾರರ ಅಂಚೆ ಮತ ಪತ್ರಗಳ ಎಣಿಕೆಗೆ ೨೫ ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿತ್ತು.

ಇ.ವಿ.ಎಂ. ಮತ ಎಣಿಕೆ ಮತ್ತು ಅಂಚೆ ಮತಪತ್ರ/ ಇ.ಟಿ.ಪಿ.ಬಿ.ಎಂ.ಎಸ್ ಮತ ಎಣಿಕೆ ಕಾರ್ಯಕ್ಕೆ ಮೀಸಲು ಸಿಬ್ಬಂದಿ ಸೇರಿದಂತೆ ಒಟ್ಟು ೧೬೦ ಮತ ಎಣಿಕೆ ಮೇಲ್ವಿಚಾರಕರು, ೧೮೭ ಮತ ಎಣಿಕೆ ಸಹಾಯಕರು ಮತ್ತು ೧೭೧ ಮತ ಎಣಿಕೆ ಮೈಕ್ರೋಅಬ್ಸರ್‌ವರ್‌ಗಳು ನಿಯೋಜನೆಗೊಂಡಿದ್ದರು.

ಕಟ್ಟುನಿಟ್ಟಿನ ಕ್ರಮಗಳು

ಮತ ಎಣಿಕೆ ಕೇಂದ್ರದ ಸುತ್ತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಬಿಗಿ ಪೊಲೀಸ್ ಬಂದೋಬಸ್ತ್ ಜೊತೆ ಜಿಲ್ಲಾಡಳಿತದಿಂದ ಬಿಗಿನಿಯಮ ಅಳವಡಿಸಲಾಗಿತ್ತು. ಚುನಾವಣಾ ಆಯೋಗದಿಂದ ನೀಡಲಾದ ಫೋಟೋ ಸಹಿತ ಗುರುತಿನ ಚೀಟಿ ಹೊಂದಿದ ಅಭ್ಯರ್ಥಿ ಪರ ಏಜೆಂಟರಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿತ್ತು.

ಮತ ಎಣಿಕೆ ಮುಖ್ಯ ಪ್ರವೇಶದ್ವಾರದ ಬಳಿ ತಪಾಸಣೆ ನಡೆಸಿ ನಂತರ ಕೇಂದ್ರದೊಳಗೆ ಬರುವಾಗ ಮತ್ತೊಂದು ಸುತ್ತು ತಪಾಸಣೆ ನಡೆಸಲಾಯಿತು. ಏಜೆಂಟರು ತಮಗೆ ನಿಗದಿಪಡಿಸಿದ ಟೇಬಲ್ ಮತ್ತು ಕ್ಷೇತ್ರಕ್ಕೆ ನಿಗದಿಪಡಿಸಿರುವ ಕೌಂಟಿAಗ್ ಕೊಠಡಿಯನ್ನು ಬಿಟ್ಟು ಬೇರೆ ಕಡೆಗೆ ಹೋಗದಂತೆ ನಿರ್ಬಂಧ ವಿಧಿಸಲಾಗಿತ್ತು. ಮೊಬೈಲ್ ಫೋನ್‌ಗಳನ್ನು ಕೇಂದ್ರದ ಹೊರಭಾಗದಲ್ಲಿಡಲು ಪ್ರತ್ಯೇಕ ಕೌಂಟರ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೇಂದ್ರದೊಳಗೆ ಮೊಬೈಲ್ ಕೊಂಡೊಯ್ಯುವುದಕ್ಕೆ ಕಡಿವಾಣ ಹಾಕಲಾಗಿತ್ತು.

ಮತ ಎಣಿಕೆ ಕೇಂದ್ರದೊಳಗೆ ಕತ್ತರಿ/ಚಾಕು ಅಥವಾ ಇನ್ನಿತರೆ ಹರಿತವಾದ ವಸ್ತು, ಲೈಟರ್, ಬೆಂಕಿ ಪೊಟ್ಟಣ, ಸ್ಫೋಟಕ ಸಾಮಗ್ರಿಗಳನ್ನು ಕೊಂಡೊಯ್ಯುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು. ಯಾವುದೇ ಮೆರವಣಿಗೆ ನಡೆಸುವುದು ಹಾಗೂ ಪ್ರಚೋದನಕಾರಿ ಭಾಷಣ ಮಾಡುವುದನ್ನು, ಧ್ವನಿವರ್ಧಕ, ಡಿ.ಜೆ ಉಪಯೋಗಿಸುವುದು ಮತ್ತು ಬೈಕ್ ರ‍್ಯಾಲಿ ನಡೆಸುವುದನ್ನು ನಿಷೇಧಿಸಲಾಗಿತ್ತು. ಮತ ಎಣಿಕೆ ಕಾರ್ಯಕ್ಕೆ ನಿಯೋಜಿಸಲಾದ ಅಧಿಕಾರಿಗಳು, ಸಿಬ್ಬಂದಿ, ಅಭ್ಯರ್ಥಿಗಳು, ಚುನಾವಣಾ ಏಜೆಂಟ್, ಎಣಿಕೆ ಏಜೆಂಟ್‌ಗಳನ್ನು ಹೊರತುಪಡಿಸಿ ಅನಧಿಕೃತ ವ್ಯಕ್ತಿಗಳ ಪ್ರವೇಶಕ್ಕೆ ನಿರ್ಬಂಧದ ಜೊತೆಗೆ ಗೆದ್ದ ಅಭ್ಯರ್ಥಿಗಳ ವಿಜಯೋತ್ಸವ ಮೆರವಣಿಗೆಯನ್ನು ನಿಷೇಧಿಸಲಾಗಿತ್ತು.

ಎಣಿಕೆ ಸುತ್ತುಗಳ ವಿವರ

ಮಡಿಕೇರಿ ಹಾಗೂ ವೀರಾಜಪೇಟೆ ಕ್ಷೇತ್ರದ ತಲಾ ೨೭೩ ಮತಗಟ್ಟೆಗಳಲ್ಲಿ ನಡೆದ ಮತದಾನದ ಎಣಿಕೆ ಕಾರ್ಯ ತಲಾ ೨೦ ಸುತ್ತುಗಳಲ್ಲಿ ನಡೆಯಿತು. ಪಿರಿಯಾಪಟ್ಟಣ ಕ್ಷೇತ್ರದ ೨೩೫ ಮತಗಟ್ಟೆಗಳ ಎಣಿಕೆ ೧೭ ಸುತ್ತುಗಳಲ್ಲಿ, ಹುಣಸೂರಿನ ೨೭೪ ಮತಗಟ್ಟೆಗಳ ಎಣಿಕೆ ೨೦, ಚಾಮುಂಡೇಶ್ವರಿಯ ೩೪೩ ಮತಗಟ್ಟೆಗಳ ಎಣಿಕೆ ೨೫, ಕೃಷ್ಣರಾಜ ಕ್ಷೇತ್ರದ ೨೬೫ ಮತಗಟ್ಟೆಗಳ ಎಣಿಕೆ ೧೯, ಚಾಮರಾಜ ಕ್ಷೇತ್ರದ ೨೪೮ ಮತಗಟ್ಟೆಗಳ ಎಣಿಕೆ ೧೮, ನರಸಿಂಹರಾಜ ಕ್ಷೇತ್ರದ ೨೯೧ ಮತಗಟ್ಟೆಗಳ ಎಣಿಕೆ ೨೧ ಸುತ್ತುಗಳಲ್ಲಿ ನಡೆದವು. ಸಂಜೆ ೩ ಗಂಟೆಯ ಸುಮಾರಿಗೆ ವೀರಾಜಪೇಟೆ ಕ್ಷೇತ್ರದ ೨ ಇವಿಎಂಗಳಲ್ಲಿ ತಾಂತ್ರಿಕ ದೋಷ ಕಂಡು ಬಂದು, ನಂತರ ಸರಿಪಡಿಸಲಾಯಿತು.