ಅನಿಲ್ ಎಚ್.ಟಿ.

ಮಡಿಕೇರಿ, ಜೂ. ೪: ಭಾರತಕ್ಕೆ ಸ್ವಾತಂತ್ರö್ಯ ಲಭಿಸುವುದಕ್ಕೆ ಮುನ್ನವೇ ಭಾರತದಲ್ಲಿಯೇ ಪ್ರಥಮ ಬಾರಿಗೆ ಪ್ರಜಾತಂತ್ರ ವ್ಯವಸ್ಥೆಯನ್ನು ಮೈಸೂರು ಪ್ರಾಂತ್ಯದಲ್ಲಿ ಮೈಸೂರಿನ ಅರಸರು ಜಾರಿಗೆ ತಂದಿದ್ದರು, ಅದೇ ಮೈಸೂರು ಅರಸರ ವಂಶಸ್ಥರಾಗಿರುವ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಇದೀಗ ಅದೇ ಪ್ರಜಾತಂತ್ರ ವ್ಯವಸ್ಥೆಯಡಿಯಲ್ಲಿ ಲೋಕಸಭೆಯಲ್ಲಿ ಕೊಡಗು - ಮೈಸೂರು ಕ್ಷೇತ್ರವನ್ನು ಪ್ರತಿನಿಧಿಸಲು ಮತದಾನ ಎಂಬ ಪ್ರಜಾತಂತ್ರ ವ್ಯವಸ್ಥೆಯಡಿಯಲ್ಲಿಯೇ ಆಯ್ಕೆಯಾಗಿದ್ದಾರೆ.

ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಗೆಲವು ಸಾಧಿಸುವ ಮೂಲಕ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ದೇಶದ ಗಮನವನ್ನು ಸೆಳೆದಿದ್ದಾರೆ. ಭಾರತದಲ್ಲಿ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಗಣ್ಯಾತಿಗಣ್ಯ ಅಭ್ಯರ್ಥಿಗಳ ಪೈಕಿ ಮೈಸೂರು ರಾಜವಂಶಸ್ಥರಾಗಿ ಯದುವೀರ್ ಒಡೆಯರ್ ಗಮನ ಸೆಳೆದಿದ್ದರು.

ಕಾಂಗ್ರೆಸ್‌ನಿAದ ಎಂ. ಲಕ್ಷö್ಮಣ್ ತಾನೋರ್ವ ಸಾಮಾನ್ಯ ಕಾರ್ಯಕರ್ತ, ಸದಾ ಜನರ ಕೈಗೆ ಸಿಗುತ್ತೇನೆ ಎಂದು ಬಿಂಬಿಸಿಕೊAಡು ಪ್ರಚಾರ ಕೈಗೊಂಡಿದ್ದರು, ಕೊಡಗು ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ೫ ಶಾಸಕರಿದ್ದು, ಜೆಡಿಎಸ್‌ನ ೨ ಮತ್ತು ಬಿಜೆಪಿಯ ಓರ್ವ ಶಾಸಕರಿದ್ದರು,

ಗಮನಾರ್ಹ ಎಂದರೆ ೮ ಶಾಸಕರಿದ್ದ ಕ್ಷೇತ್ರದಲ್ಲಿ ಯದುವೀರ್ ಸ್ಪರ್ಧಿಸಿದ್ದ ಬಿಜೆಪಿಯಲ್ಲಿ ಕೃಷ್ಣರಾಜ ಕ್ಷೇತ್ರದಲ್ಲಿ ಶ್ರೀವತ್ಸ ಮೂಲಕ ಕೇವಲ ಓರ್ವ ಶಾಸಕರು ಮಾತ್ರ ಇದ್ದರು, ಹೀಗಿದ್ದರೂ ಈ ಕ್ಷೇತ್ರದಲ್ಲಿ ಜೆಡಿಎಸ್ ಜತೆ ಬಿಜೆಪಿ ಮೈತ್ರಿ ಮಾಡಿಕೊಂಡ ಪರಿಣಾಮವೇ ಯದುವೀರ್ ಗೆಲುವು ಸುಲಭ ಸಾಧ್ಯವಾಯಿತು ಎಂಬುದು ಸ್ಪಷ್ಟವಾಗಿದೆ.

ಹುಣಸೂರು ಕ್ಷೇತ್ರದಲ್ಲಿ ಹರೀಶ್ ಗೌಡ, ಚಾಮುಂಡೇಶ್ವರಿ ಕ್ಷೇತ್ರಗಳಲ್ಲಿ ಜಿ.ಟಿ. ದೇವೇಗೌಡ ಶಾಸಕರಾಗಿರುವುದರಿಂದ ಇಲ್ಲಿ ಜೆಡಿಎಸ್ ಪ್ರಭಾವವಿದೆ, ಹಾಗೇ ಕ್ಷೇತ್ರ ವ್ಯಾಪ್ತಿಯ ೮ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಜೆಡಿಎಸ್‌ನ ಬಹುಪಾಲು ಮತಗಳು ಮಿತ್ರ ಪಕ್ಷ ಬಿಜೆಪಿಗೆ ಲಭಿಸಿದ್ದು ಕೂಡ ಬಿಜೆಪಿ ಅಭ್ಯರ್ಥಿಯಾಗಿ ಯದುವೀರ್ ಜಯ ಸಾಧಿಸಲು ಕಾರಣವಾಗಿದೆ.

ಈ ಬಾರಿ ಲೋಕಸಭಾ ಚುನಾವಣೆ ಘೋಷಣೆಯಾಗುವವರೆಗೂ ಪ್ರತಾಪ್ ಸಿಂಹ ಮೂರನೇ ಸಲ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದೇ ನಂಬಲಾಗಿತ್ತು. ಆದರೆ ಕೊನೇ ಕ್ಷಣದಲ್ಲಿ ಸಿಂಹಗೆ ನಿರಾಶೆಯಾಗುವಂತೆ ಅರಮನೆಯಲ್ಲಿದ್ದ ಯದುವೀರ್‌ಗೆ ಬಿಜೆಪಿ ವರಿಷ್ಠರು ಅವಕಾಶ ಕಲ್ಪಿಸಿ ಅಚ್ಚರಿಗೆ ಕಾರಣರಾದರು, ಯದುವೀರ್‌ಗೆ ಟಿಕೆಟ್ ನೀಡುವಲ್ಲಿ ಯದುವೀರ್ ಪತ್ನಿ ತ್ರಿಶಿಕಾಕುಮಾರಿ ಅವರ ತಂದೆ ಮಧ್ಯಪ್ರದೇಶದ ಪ್ರಭಾವೀ ಮುಖಂಡ, ರಾಜ್ಯಸಭೆಯ ಮಾಜಿ ಸಂಸದ ಹರ್ಷವರ್ಧನ್ ಸಿಂಗ್ ದುಂಗಾದಪುರ ಅವರ ಪಾತ್ರ ಇತ್ತು ಎನ್ನಲಾಗುತ್ತಿದೆಯಾದರೂ ಬಿಜೆಪಿ ಮೊದಲೇ ಯದುವೀರ್ ಹೆಸರನ್ನು ಗಮನದಲ್ಲಿರಿಸಿಕೊಂಡಿತ್ತು ಎಂಬುದು ರಹಸ್ಯವೇನಲ್ಲ, ಮೈಸೂರಿಗೆ ಪ್ರತ್ಯೇಕವಾಗಿ ಭೇಟಿ ನೀಡಿದ್ದ ಸಂದರ್ಭ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಅರಮನೆಗೆ ತೆರಳಿ ರಾಜಮಾತೆ ಪ್ರಮೋದಾದೇವಿ ಮತ್ತು ಯದುವೀರ್ ಅವರನ್ನು ಭೇಟಿಯಾಗಿ ರಾಜಕೀಯಕ್ಕೆ ಯದುವೀರ್ ಅವರನ್ನು ಕರೆತರುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇರಿಸಿದ್ದರು,

ಇದೀಗ ಯದುವೀರ್ ಗೆಲುವಿನ ಮೂಲಕ ಅರಮನೆ ಯುವರಾಜ ದೆಹಲಿಯ ಜನರ ಅರಮನೆಯಾದ ಸಂಸತ್ತನ್ನು ಪ್ರವೇಶಿಸಿದ್ದಾರೆ, ಮೈಸೂರಿನ ರಾಜವಂಶಸ್ಥರು ಈ ರೀತಿ ಸಂಸದರಾಗುವುದು ಹೊಸದ್ದೇನಲ್ಲ, ಈ ಮೊದಲು ಮೈಸೂರಿನ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಕೂಡ ನಾಲ್ಕು ಬಾರಿ ಮೈಸೂರು ಲೋಕಸಭಾ ಕ್ಷೇತ್ರದ ಸಂಸದರಾಗಿದ್ದರು, ಈ ಮೂಲಕ ಮೈಸೂರು ಕ್ಷೇತ್ರದಿಂದ ಅತ್ಯಧಿಕ ಸಲ ಗೆಲವು ಸಾಧಿಸಿದ ಸಂಸತ್ ಸದಸ್ಯ ಎಂಬ ದಾಖಲೆಯೂ ಶ್ರೀಕಂಠದತ್ತ ಹೆಸರಿನಲ್ಲಿತ್ತು, ೧೯೮೪, ೧೯೮೯, ೧೯೯೬, ೧೯೯೯ ರಲ್ಲಿ ಶ್ರೀಕಂಠದತ್ತ ನರಸಿಂಹರಾಜರು ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದರು ಈ ನಾಲ್ಕೂ ಬಾರಿಯೂ ಅವರು ಕಾಂಗ್ರೆಸ್‌ನಿAದ ಗೆಲುವು ಸಾಧಿಸಿದ್ದರು ಎಂಬುದು ವಿಶೇಷ.

೧೯೯೧ ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಶ್ರೀಕಂಠದತ್ತ ಒಡೆಯರ್ ಆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಚಂದ್ರಪ್ರಭ ಅರಸ್ (ಮಾಜಿ ಮುಖ್ಯಮಂತ್ರಿ ದೇವರಾಜ ಅರಸ್ ಮಗಳು) ವಿರುದ್ಧ ಸೋಲು ಕಂಡಿದ್ದರು ಮತ್ತೆ ೧೯೯೬ರ ಚುನಾವಣೆಯಲ್ಲಿ ಶ್ರೀಕಂಠದತ್ತರು ಕಾಂಗ್ರೆಸ್‌ನಿAದಲೇ ಮರಳಿ ಸ್ಪರ್ಧಿಸಿ ಸಂಸತ್ ಸದಸ್ಯರಾದರು, ನಂತರ ೨೦೦೪ ರಲ್ಲಿ ಮತ್ತೆ ಕಾಂಗ್ರೆಸ್‌ನಿAದ ಸ್ಪರ್ಧಿಸಿದ್ದ ಶ್ರೀಕಂಠದತ್ತ ಒಡೆಯರ್ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿದ್ದ ವಿಜಯಶಂಕರ್ ಗೆಲವು ಸಾಧಿಸಿದ್ದರೆ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಗುರುಸ್ವಾಮಿ ಎರಡನೇ ಸ್ಥಾನ ಗಳಿಸಿದರು, ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟ ಶ್ರೀಕಂಠದತ್ತ ಒಡೆಯರ್ ಆ ನಂತರ ಚುನಾವಣಾ ರಾಜಕೀಯದಿಂದಲೇ ದೂರ ಉಳಿದರು, ಇದೀಗ ೨೦ ವರ್ಷಗಳ ಬಳಿಕ ಮತ್ತೆ ಮೈಸೂರು ಅರಮನೆಯಿಂದ ಸಂಸತ್ ಸದಸ್ಯರಾಗಿ ಯದುವೀರ್ ದೆಹಲಿಯ ಸಂಸತ್ ಭವನ ಪ್ರವೇಶಿಸುತ್ತಿದ್ದಾರೆ.

ವಿಶೇಷ ಎಂದರೆ ಯಾವ ರಾಜವಂಶಸ್ಥ ಬಿಜೆಪಿಯಿಂದ ಸೋತಿದ್ದರೋ ಇದೀಗ ಮತ್ತೆ ಅದೇ ರಾಜಮನೆತನದಿಂದ ಯದುವೀರ್ ಮೂಲಕ ಸಂಸತ್ ಸ್ಥಾನವನ್ನು ಮೈಸೂರು ರಾಜಮನೆತನ ಮರಳಿ ಗಳಿಸಿಕೊಂಡಿದೆ. ೨೦ ವರ್ಷಗಳ ಬಳಿಕ ಮೈಸೂರು ರಾಜಮನೆತನದಿಂದ ೩೨ ವರ್ಷದ ಯದುವೀರ್ ಲೋಕಸಭೆಗೆ ಪ್ರವೇಶಿಸಿದ್ದಾರೆ. ಆ ಮೂಲಕ ರಾಜಮನೆತನದ ಪ್ರಭಾವ ಸಾಕಷ್ಟಿರುವ ಮೈಸೂರು ಪ್ರಾಂತ್ಯದಲ್ಲಿ ಮತ್ತೊಮ್ಮೆ ತನ್ನ ಪ್ರಾಬಲ್ಯವನ್ನು ರಾಜಮನೆತನ ತೋರಿಸಿದಂತಾಗಿದೆ, ಯದುವೀರ್ ಗೆಲುವು ಈ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಗೆ ಮತ್ತಷ್ಟು ಬಲತಂದಿದೆ.

ಸವಾಲುಗಳೇನಿತ್ತು?

ಕೊನೇ ಹಂತದಲ್ಲಿ ರಾಜಕೀಯಕ್ಕೆ ಬಂದದ್ದು, ಕೊನೇ ಹಂತದಲ್ಲಿ ಬಿಜೆಪಿಯಿಂದ ಅಭ್ಯರ್ಥಿಯಾಗಿದ್ದು, ರಾಜಮನೆತನದವರು ಜನರ ಕೈಗೆ ಸಿಗುವುದಿಲ್ಲ, ಅರಮನೆಗೆ ತೆರಳಿ ಸಂಸದರನ್ನು ಭೇಟಿಯಾಗುವುದು ಕಷ್ಟ ಎಂಬ ಆರೋಪ. ಜನರೊಂದಿಗೆ ರಾಜವಂಶಸ್ಥ ಬೆರೆಯುವುದು ಕಷ್ಟ, ಹೇಳಿ ಕೇಳಿ ಅರಮನೆಯಲ್ಲಿ ಬೆಳೆದವರು, ಜನಸಾಮಾನ್ಯರೊಂದಿಗೆ ಬೆರೆಯಲಾರರು ಎಂಬ ಸಂಶಯ.

ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರ ಸಂಖ್ಯೆ ೪ ಲಕ್ಷದಷ್ಟಿತ್ತು, ಈ ಮತ ಗಳಿಸಲು ಕಾಂಗ್ರೆಸ್ ೪೭ ವರ್ಷಗಳ ಬಳಿಕ ಒಕ್ಕಲಿಗ ಅಭ್ಯರ್ಥಿಯಾಗಿ ಲಕ್ಷö್ಮಣ್ ಅವರನ್ನೇ ಕಣಕ್ಕಿಳಿಸಿತ್ತು. ಎರಡು ಬಾರಿ ಸಂಸದರಾಗಿದ್ದ ಪ್ರತಾಪ್ ಸಿಂಹ ಈ ಬಾರಿ ಸ್ಪರ್ಧಿಸಲು ಅವಕಾಶ ನಿರಾಕರಣೆಯಾದ ಹಿನ್ನೆಲೆ ಪ್ರಚಾರದಿಂದ ದೂರವಾಗಿದ್ದರು.

ಕ್ಷೇತ್ರದಲ್ಲಿ ಹಿಂದುತ್ವದಿAದಾಗಿ ಪ್ರತಾಪ್‌ಸಿಂಹ ಜನಪ್ರಿಯ ನಾಯಕರಾಗಿದ್ದರು, ಸಾಕಷ್ಟು ಯುವಮತದಾರರೂ ಸಿಂಹ ಬೆಂಬಲಿಗರಾಗಿದ್ದರು. ಕ್ಷೇತ್ರದ ಒಳಹೊರಗೂ ಪರಿಚಯವೇ ಇರಲಿಲ್ಲ, ಕ್ಷೇತ್ರ ವ್ಯಾಪ್ತಿ ಸುತ್ತಾಡಿ ಪ್ರಚಾರ ಮಾಡುವುದೇ ಸವಾಲಾಗಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದದ್ದು, ಕ್ಷೇತ್ರದಲ್ಲಿ ೫ ಶಾಸಕರು ಕೂಡ ಕಾಂಗ್ರೆಸ್ಸಿಗರೇ ಇದ್ದದ್ದು ಕೂಡ ಪ್ರಚಾರದಲ್ಲಿ ತೊಡಕಾಗಿತ್ತು.

ಕ್ಷೇತ್ರದಲ್ಲಿ ಬಿಜೆಪಿಯ ಏಕೈಕ ಶಾಸಕರಿದ್ದರು, ಮೈತ್ರಿ ಪಕ್ಷವಾದ ಜೆಡಿಎಸ್ ಶಾಸಕರಾದ ಜಿ.ಟಿ. ದೇವೇಗೌಡ ಮತ್ತು ಹರೀಶ್ ಗೌಡ ಬೆಂಬಲ ದೊರಕಿತ್ತು. ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಕ್ಷೇತ್ರವಾಗಿದ್ದ ಮೈಸೂರಿನಲ್ಲಿ ಗೆಲುವು ಸಾಧಿಸುವುದು ಸುಲಭ ಸಾಧ್ಯವಾಗಿರಲಿಲ್ಲ. ಏಕಾಏಕಿ ರಾಜಕೀಯ ಕಣಕ್ಕೆ ಧುಮ್ಮಿಕ್ಕಿದ್ದರಿಂದಾಗಿ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ, ಚುನಾವಣಾ ತಂತ್ರಗಾರಿಕೆಯ ಸವಾಲು ಕೂಡ ಎದುರಾಗಿತ್ತು.