ಕೋವರ್ ಕೊಲ್ಲಿ ಇಂದ್ರೇಶ್

ಮುಂಬೈ, ಜೂ. ೪: ದೇಶದ ಲೋಕಸಭಾ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಎಕ್ಸಿಟ್ ಪೋಲ್‌ಗಳ ಫಲಿತಾಂಶಗಳು ನಿರೀಕ್ಷಿತ ಮಟ್ಟ ತಲುಪದ ಕಾರಣ ಇಂದು ದೇಶದ ಷೇರುಪೇಟೆಯಲ್ಲಿ ಮಹಾ ಕುಸಿತ ದಾಖಲಿಸಿದೆ. ಇಂದು ಒಂದೇ ದಿನ ಹೂಡಿಕೆದಾರರು ಬರೋಬ್ಬರಿ ೪೦ ಲಕ್ಷ ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.

ಎಕ್ಸಿಟ್‌ಪೋಲ್‌ಗಳಲ್ಲಿ ಬಹುತೇಕ ಎನ್‌ಡಿಎ ಒಕ್ಕೂಟಕ್ಕೆ ೩೫೦ ಸ್ಥಾನ ಹಾಗೂ ಬಿಜೆಪಿಗೆ ೩೦೦ ಸ್ಥಾನ ಎಂದು ಪ್ರಕಟಿಸಿದ್ದವು. ಆದರೆ ಬಿಜೆಪಿ ಸ್ವಂತವಾಗಿ ೨೫೦ ಸ್ಥಾನವನ್ನು ಪಡೆಯಲು ವಿಫಲವಾಗುತ್ತಿದ್ದ ಸೂಚನೆ ಸಿಕ್ಕ ಬೆನ್ನಲ್ಲೇ ಪೇಟೆ ಕುಸಿಯಲು ಆರಂಭಿಸಿತು. ಇದರ ಜತೆಗೇ ಬಿಹಾರದ ನಿತೀಶ್ ಕುಮಾರ್ ಹಾಗೂ ಆಂಧ್ರದ ಚಂದ್ರಬಾಬು ನಾಯ್ಡು ಅವರನ್ನು ಇಂಡಿ ಒಕ್ಕೂಟ ಸೆಳೆದು ಸರ್ಕಾರ ರಚನೆಗೆ ಮುಂದಾಗುತ್ತಿದೆ ಎಂಬ ವದಂತಿ ಹರಡಿದ ಬೆನ್ನಲ್ಲೇ ಷೇರುಪೇಟೆ ಭೀಕರ ಕುಸಿತ ದಾಖಲಿಸಿತು.

ಸ್ವತಃ ಎನ್‌ಡಿಎ ತನಗಾಗಿ ನಿಗದಿಪಡಿಸಿದ ಗುರಿ ೪೦೦ ಆಗಿದ್ದು, ಅಬ್ ಕಿ ಬಾರ್ ಚಾರ್ ಸೌ ಪಾರ್' ಎಂಬ ಘೋಷಣೆಯನ್ನು ಹುಟ್ಟುಹಾಕಿತ್ತು. ಬಿಜೆಪಿಯು ತನ್ನದೇ ಬಲದ ಮೇಲೆ ಸುಮಾರು ೩೩೦ ಸ್ಥಾನಗಳನ್ನು ಪಡೆಯಬಹುದು ಎಂದು ಅಂದಾಜಿಸಲಾಗಿತ್ತು. ಕಳೆದ ಬಾರಿ ಅದು ೩೦೩ ಸ್ಥಾನ ಗೆದ್ದಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಉತ್ತರಪ್ರದೇಶದಲ್ಲಿ ಬಿಜೆಪಿ ಕಳೆದ ಬಾರಿ ೬೨ ಸ್ಥಾನ ಗಳಿಸಿತ್ತು. ಈ ಬಾರಿ ಸಮೀಕ್ಷೆ ಪ್ರಕಾರ ೬೬ ಕ್ಕೂ ಹೆಚ್ಚು ಬರಬೇಕಿತ್ತಾದರೂ ಅಷ್ಟು ಸ್ಥಾನ ಪಡೆಯಲಿಲ್ಲ.

ಜೂನ್ ೧ರಂದು ದೇಶಾದ್ಯಂತ ಒಟ್ಟು ೧೪ ಎಕ್ಸಿಟ್ ಪೋಲ್ ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸಿದ್ದವು. ಎಲ್ಲಾ ಎಕ್ಸಿಟ್ ಪೋಲ್‌ಗಳೂ ಈ ಬಾರಿ ಎನ್‌ಡಿಎ ೩೬೫ಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗಳಿಸಲಿದೆ ಎಂದು ವರದಿ ನೀಡಿದ್ದವು.

ಮುಂಬೈ ಷೇರುಪೇಟೆಯು ಮಧ್ಯಾಹ್ನದ ಹೊತ್ತಿಗೆ ೬೦೦೦ ಅಂಶಗಳ ಕುಸಿತ ದಾಖಲಿಸಿ ದಿನದಾಂತ್ಯಕ್ಕೆ ೪೨೫೫ ಅಂಶಗಳ ಮಹಾ ಕುಸಿತ ದಾಖಲಿಸಿದೆ. ರಾಷ್ಟಿçÃಯ ಪೇಟೆ ಸೂಚ್ಯಂಕ ನಿಫ್ಟಿ ೧೨೫೫ ಅಂಶ ಕುಸಿತ ದಾಖಲಿಸಿದೆ. ಒಂದು ವೇಳೆ ಬಿಜೆಪಿ ಏಕಾಂಗಿಯಾಗಿ ೨೭೫ ಸ್ಥಾನ ಗಳಿಸಿದ್ದರೂ ಪೇಟೆಯಲ್ಲಿ ಏರಿಳಿತ ಇರುತಿತ್ತಾದರೂ ಕುಸಿತ ೫೦೦ ಅಂಶಗಳ ಒಳಗೇ ಇರುತಿತ್ತು ಎಂದು ಹೂಡಿಕೆ ತಜ್ಞರು ಅಭಿಪ್ರಾಯಿಸಿದ್ದಾರೆ.

ಮಾರುಕಟ್ಟೆಯ ಕುಸಿತದ ಕಾರಣದಿಂದ ರಿಲಯನ್ಸ್ ಇಂಡಸ್ಟಿçÃಸ್ ಲಿಮಿಟೆಡ್ ಷೇರುದಾರರು ಭಾರಿ ನಷ್ಟವನ್ನು ಅನುಭವಿಸಿದರು. ಷೇರುಗಳು ಬಾಂಬೆ ಸ್ಟಾಕ್ ಎಕ್ಸ್ಚೇಂಜ್‌ನಲ್ಲಿ ಶೇ. ೯.೬ನಷ್ಟು ಕುಸಿದವು. ಇದು ೧.೬೭ ಲಕ್ಷ ಕೋಟಿ ರೂ.ಗಳಷ್ಟು ನಷ್ಟಕ್ಕೆ ಕಾರಣವಾಯಿತು. ಅದಾನಿ ಎಂಟರ್‌ಪ್ರೆöÊಸಸ್ ಮತ್ತು ಅದಾನಿ ಪೋರ್ಟ್ಗಳು ಶೇ. ೨೫ರಷ್ಟು ಕುಸಿದು ಅದಾನಿ ಗ್ರೂಪ್ ಷೇರುಗಳಲ್ಲಿ ಕೆಲವು ದೊಡ್ಡ ನಷ್ಟವನ್ನು ಅನುಭವಿಸಿತ್ತು. ಮಂಗಳವಾರ ಮಧ್ಯಾಹ್ನ ೧.೨೨ರ ಸುಮಾರಿಗೆ, ಎನ್‌ಎಸ್‌ಇಯಲ್ಲಿ ಅದಾನಿ ಪೋರ್ಟ್ಸ್ ಷೇರುಗಳು ಶೇ. ೧೬.೦೭ರಷ್ಟು ಕುಸಿತ ದಾಖಲಿಸಿದವು. ಎನ್‌ಡಿಎ ಒಕ್ಕೂಟ ಯಾವುದೇ ಅಡತಡೆ ಇಲ್ಲದೆ ಸರ್ಕಾರ ರಚಿಸುವ ಹಾದಿ ಸುಗಮವಾದರೆ ಬುಧವಾರ ಪೇಟೆ ಏರಿಕೆ ಕಾಣಲಿದೆ ಇಲ್ಲವಾದರೆ ಮತ್ತೆ ಕುಸಿಯಲಿದೆ ಎಂದು ಹೂಡಿಕೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.