ಮೈಸೂರು, ಜೂ. ೪: ಬಿಜೆಪಿ ಭದ್ರಕೋಟೆಯಾಗಿದ್ದ ಕೊಡಗಿನಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲುಂಡು ನಿರಾಸೆ ಅನುಭ ವಿಸಿತ್ತು. ಆದರೆ, ಲೋಕಸಭಾ ಚುನಾ ವಣೆಯಲ್ಲಿ ಗಳಿಸಿದ ಮತಗಳು ಕಮಲ ಪಾಳಯಕ್ಕೆ ‘ಬೂಸ್ಟರ್ ಡೋಸ್’ ನೀಡಿದೆ.

ಕಳೆದ ವಿಧಾನಸಭಾ ಚುನಾವಣೆ ಯಲ್ಲಿ ಬಿಜೆಪಿಯ ಅಪ್ಪಚ್ಚು ರಂಜನ್ ಹಾಗೂ ಕೆ.ಜಿ. ಬೋಪಯ್ಯ ಸೋಲು ಅನುಭವಿಸಿದ್ದರು. ಇದರಿಂದ ಕೊಡಗಿ ನಲ್ಲಿ ೨೦-೨೫ ವರ್ಷಗಳ ಬಳಿಕ ಕಾಂಗ್ರೆಸ್ ರಾಜಕೀಯವಾಗಿ ಪ್ರವರ್ಧ ಮಾನಕ್ಕೆ ಬಂದು ಹೊಸ ಶಖೆ ಆರಂಭಿಸಿತು. ನೂತನ ಶಾಸಕರಾದ ಎ.ಎಸ್. ಪೊನ್ನಣ್ಣ ಹಾಗೂ ಡಾ. ಮಂತರ್ ಗೌಡ ಆಯ್ಕೆಗೊಂಡ ಬಳಿಕ ಕೊಡಗಿನಲ್ಲಿ ರಾಜಕಾರಣದ ದಿಕ್ಕು ಬದಲಾಗಿದೆ. ಬಿಜೆಪಿ ಮುದುಡಿತು ಎಂಬೆಲ್ಲ ವ್ಯಾಖ್ಯಾನದ ನಡುವೆ ಇದೀಗ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ, ಯದುವಂಶದ ಕುಡಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಗೆಲುವಿನ ನಗೆ ಬೀರುವ ಮೂಲಕ ಕಾರ್ಯಕರ್ತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದಾರೆ.

ವಿಧಾನಸಭಾ ಚುನಾವಣೆ ಸೋಲಿನ ಬಳಿಕ ಮೈಕೊಡವಿ ಎದ್ದು ನಿಂತಿರುವ ಬಿಜೆಪಿ ಪಕ್ಷ ಗೆಲುವಿನ ಕಹಳೆ ಮೊಳಗಿಸಿದೆ. ಮಡಿಕೇರಿ ಹಾಗೂ ವೀರಾಜಪೇಟೆ ಕ್ಷೇತ್ರದಲ್ಲಿ ಇಬ್ಬರು ಕಾಂಗ್ರೆಸ್ ಶಾಸಕರೇ ಇರುವ ಹಿನ್ನೆಲೆ ದೊಡ್ಡ ಮಟ್ಟದ ಮತ ಈ ಬಾರಿ ಕಾಂಗ್ರೆಸ್ ಪಡೆಯುತ್ತದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಅದರೊಂದಿಗೆ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆ, ಇಂಡಿಯಾ ಒಕ್ಕೂಟದ ನ್ಯಾಯಪತ್ರ ಈ ಚುನಾವಣೆಯಲ್ಲಿ ‘ವರ್ಕ್ಔಟ್’ ಆಗಲಿದೆ ಎಂದು ಕೈ ನಾಯಕರು ಅಚಲ ವಿಶ್ವಾಸ ಹೊಂದಿದ್ದರು. ಆದರೆ, ಇದೀಗ ಅವೆಲ್ಲ ಹುಸಿಯಾಗಿದ್ದು, ಕೊಡಗು ಕಮಲದ ಭದ್ರಕೋಟೆ ಎಂದು ಬಿಜೆಪಿ ಮತ್ತೆ ಸಾಬೀತುಗೊಳಿಸಿದೆ.

ಕಾಂಗ್ರೆಸ್ ಹಲವು ದಶಕಗಳ ಬಳಿಕ ಒಕ್ಕಲಿಗ ಗೌಡ ಜನಾಂಗದ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಅಲ್ಲದೆ ಹ್ಯಾಟ್ರಿಕ್ ಕನಸು ಹೊಂದಿದ್ದ, ಪ್ರಧಾನಿ ಮೋದಿ ಅವರ ಆತ್ಮೀಯ ಬಳಗದಲ್ಲಿ ಗುರುತಿಸಿಕೊಂಡಿದ್ದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನಿರಾಕರಿಸಿ ರಾಜವಂಶದ ಯದುವೀರ್ ಕೊಡಗು-ಮೈಸೂರು ಅಖಾಡದಲ್ಲಿ ಕಣಕ್ಕಿಳಿದಿದ್ದು ಇವೆಲ್ಲ ಅಂಶಗಳಿAದ ಈ ಕ್ಷೇತ್ರ ‘ಹೈವೊಲ್ಟೇಜ್’ ಕ್ಷೇತ್ರದೊಂದಿಗೆ ಫಲಿತಾಂಶದ ಮೇಲೆ ಅತ್ಯಂತ ಕೌತುಕ ಮೂಡುವಂತೆ ಮಾಡಿತ್ತು. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಈ ಕ್ಷೇತ್ರ ಪ್ರತಿಷ್ಠೆಯ ಪ್ರಶ್ನೆಯೂ ಆಗಿತ್ತು.

೨೦ ಸುತ್ತುಗಳ ಎಣಿಕೆ

ವೀರಾಜಪೇಟೆ ಹಾಗೂ ಮಡಿ ಕೇರಿ ಕ್ಷೇತ್ರದ ತಲಾ ೨೭೩ ಮತಗಟ್ಟೆಗಳ ಮತ ಎಣಿಕೆ ತಲಾ ೨೦ ಸುತ್ತುಗಳಲ್ಲಿ ನಡೆಯಿತು. ಮೊದಲ ಸುತ್ತಿನಿಂದಲೆ ಬಿಜೆಪಿ ಹೆಚ್ಚು ಮತಗಳ ಅಂತರದಿAದ ಗೆಲುವಿನ ದಾಪುಗಾಲಿ ಡುತಿತ್ತು.

ಮಡಿಕೇರಿ ಕ್ಷೇತ್ರದಿಂದ ೨,೩೮,೭೩೩ ಮತದಾರರ ಪೈಕಿ ೧,೮೦,೦೩೭ ಮತದಾರರು, ವೀರಾಜಪೇಟೆ ಕ್ಷೇತ್ರದಿಂದ ೨,೩೨,೦೩೩ ಪೈಕಿ ೧,೭೧,೪೨೬ ಮತದಾರರು ಹಕ್ಕು ಚಲಾವಣೆ ಮಾಡಿದ್ದರು. ಇದರೊಂದಿಗೆ ಕ್ಷೇತ್ರ ವ್ಯಾಪಿ ಒಟ್ಟು ೨೦೮೮ ಸೇವಾ ಮತದಾರರ ಪೈಕಿ ೧೦೧೨, ೧೦,೯೯೦ ಅಂಚೆ ಮತ ಪೈಕಿ ೮,೬೦೬ ಮತದಾರರು ಮತ ಹಾಕಿದ್ದರು.

ಕಾಂಗ್ರೆಸ್ ಅಭ್ಯರ್ಥಿಗೆ ಅಂತರ ಹೆಚ್ಚಿಸಿಕೊಳ್ಳಲು ಅವಕಾಶ ನೀಡದೆ ಯದುವೀರ್ ಎಲ್ಲಾ ಸುತ್ತಿನಲ್ಲೂ ಗೆಲುವಿನ ಲಯ ಕಾಯ್ದುಕೊಂಡು ಮುನ್ನಡೆಯನ್ನು ಹೆಚ್ಚಿಸಿಕೊಂಡು ಗೆಲುವಿನ ನಾಗಲೋಟ ಬೀರಿ ಜಯದ ಮಾಲೆ ಕೊರಳಿಗೇರಿಸಿಕೊಂಡರು.

ಕಾಂಗ್ರೆಸ್ ಫೈಟ್

ಜಿದ್ದಾಜಿದ್ದಿನ ಕಣದಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿದರೂ ೨೦೧೯ ರ ಚುನಾವಣೆ ಹೋಲಿಸಿದರೆ ಪೈಪೋಟಿ ನೀಡಿರುವÀ ಕಾಂಗ್ರೆಸ್ ಮತ ಗಳಿಕೆಯಲ್ಲಿ ಬೆಳವಣಿಗೆ ಸಾಧಿಸಿರುವುದು ಗಮನಾರ್ಹವಾಗಿದೆ.

ಕಳೆದ ೨೦೧೯ರ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ಬಿಜೆಪಿ ೧,೦೨,೧೬೧, ಕಾಂಗ್ರೆಸ್ ೫೮,೧೮೫, ವೀರಾಜಪೇಟೆ ಕ್ಷೇತ್ರದಲ್ಲಿ ಬಿಜೆಪಿ ೯೬,೨೩೫, ಕಾಂಗ್ರೆಸ್ ೫೪,೭೩೮ ಮತಗಳನ್ನು ಪಡೆದುಕೊಂಡಿ ದ್ದವು. ಮಡಿಕೇರಿ ಕ್ಷೇತ್ರದಲ್ಲಿ ಒಟ್ಟಾರೆ ೪೩,೯೭೬, ವೀರಾಜಪೇಟೆ ಕ್ಷೇತ್ರದಲ್ಲಿ ೪೧,೪೯೭ ಮತಗಳ ಮುನ್ನಡೆಯನ್ನು ಕಳೆದ ಅವಧಿಯಲ್ಲಿ ಬಿಜೆಪಿ ಸಾಧಿಸಿತ್ತು. ಎರಡೂ ಕ್ಷೇತ್ರಗಳಿಂದ ಒಟ್ಟು ೮೫,೪೭೩ ಮತಗಳನ್ನು ಕಾಂಗ್ರೆಸ್‌ಗಿAತ ಹೆಚ್ಚುವರಿ ಮತ ಬಿಜೆಪಿ ಪಡೆದಿತ್ತು. ಕಳೆದ ವರ್ಷ ಕೊಡಗು ಜಿಲ್ಲೆಯ ಒಟ್ಟು ೪,೪೦,೭೩೦ರ ಪೈಕಿ ೩,೨೮,೫೩೩ ಮತದಾರರು ಮತ ಚಲಾಯಿಸಿದ್ದರು. ಪ್ರಮುಖ ರಾಜ ಕೀಯ ಪಕ್ಷಗಳಾದ ಬಿಜೆಪಿ ೧,೯೮,೩೯೬, ಕಾಂಗ್ರೆಸ್ ೧,೧೨,೯೨೩ ‘ವೋಟ್ ಶೇರ್’ ಪಡೆದು ಕೊಂಡಿದ್ದವು.

ಈ ಬಾರಿ ಮಡಿಕೇರಿ ವಿಧಾನ ಸಭಾ ಕ್ಷೇತ್ರದಿಂದ ಬಿಜೆಪಿಯ ಯದು ವೀರ್ ೧,೦೮,೪೦೨, ಕಾಂಗ್ರೆಸ್‌ನ ಲಕ್ಷö್ಮಣ್ ೬೬,೯೯೪ ಮತ ಗಳಿಸುವ ಮೂಲಕ ಬಿಜೆಪಿ ೪೧,೪೦೮ ಮತಗಳ ಮುನ್ನಡೆ ಪಡೆದುಕೊಂಡಿದೆ. ವೀರಾಜಪೇಟೆ ಕ್ಷೇತ್ರದಲ್ಲಿ ಬಿಜೆಪಿ ೯೯,೮೦೪, ಕಾಂಗ್ರೆಸ್ ೬೭,೩೫೩ ಮತಗಳನ್ನು ಪಡೆಯುವ ಮೂಲಕ ಬಿಜೆಪಿ ೩೨,೪೫೧ ಮತಗಳ ಅಂತರ ದಾಖಲಿಸಿದೆ. ಒಟ್ಟಾರೆ ಕೊಡಗಿನಲ್ಲಿ ಕಳೆದ ಬಾರಿ ೮೫,೪೭೩ ಮತಗಳ ಮುನ್ನಡೆ ಕಂಡಿದ್ದರೆ, ಈ ಬಾರಿ ೭೩,೮೫೯ ಮತಗಳನ್ನು ಗಳಿಸುವ ಮೂಲಕ ಅಂತರವನ್ನು ೧೧,೬೧೪ರಷ್ಟು ಕಡಿಮೆ ಮಾಡಿದೆ. ಕಳೆದ ಬಾರಿ ಬಿಜೆಪಿ ಕೊಡಗಿನಲ್ಲಿ ೧,೯೮,೩೯೬ ಮತಗಳನ್ನು ಗಳಿಸಿದ್ದರೆ ಈ ಬಾರಿ ೨,೦೮,೨೦೬ ಮತಗಳು, ಕಾಂಗ್ರೆಸ್ ೧,೧೨,೯೨೩ ಮತಗಳಿಸಿದ್ದರೆ ಈ ಬಾರಿ ೧,೩೪,೩೪೭ ಮತಗಳಿಸಿದೆ. ಆ ಮೂಲಕ ಕಳೆದ ಬಾರಿ ಗಿಂತ ೨೧,೪೨೪ ಮತಗಳನ್ನು ಕಾಂಗ್ರೆಸ್ ಹೆಚ್ಚುವರಿಯಾಗಿ ಪಡೆದಿದ್ದು, ಬಿಜೆಪಿ ೯,೮೧೦ ಮತಗಳನ್ನು ಹೆಚ್ಚಿಸಿಕೊಂಡಿದೆ.

v