ಮಡಿಕೇರಿ, ಜೂ. ೪: ಕೊಡಗು ಜಿಲ್ಲಾ ಮರಾಠ-ಮರಾಟಿ ಸಮಾಜ ಸೇವಾ ಸಂಘದ ೨೮ನೇ ವಾರ್ಷಿಕ ಮಹಾಸಭೆ ಹಾಗೂ ವಾರ್ಷಿಕೋತ್ಸವ ತಾಳತ್ತಮನೆಯ ಸಂಘದ ನಿವೇಶನದಲ್ಲಿ ಸಂಭ್ರಮದಿAದ ನಡೆಯಿತು.

ಕೊಡಗು ಜಿಲ್ಲಾ ಮರಾಠ-ಮರಾಟಿ ಸಮಾಜ ಸೇವಾ ಸಂಘ, ಮಹಿಳಾ ವೇದಿಕೆ ಮತ್ತು ಯುವ ವೇದಿಕೆಯ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮನ್ನು ಕಾಸರಗೋಡಿನ ನಿವೃತ್ತ ಹಿರಿಯ ಮಕ್ಕಳ ತಜ್ಞ ಡಾ. ಬಿ. ನಾರಾಯಣ ಉದ್ಘಾಟಿಸಿದರು.

ಮಕ್ಕಳು ಮೊಬೈಲ್ ಬಳಸುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು, ಆರೋಗ್ಯವನ್ನು ಕಾಪಾಡಿಕೊಳ್ಳಲು ಹೆಚ್ಚಿನ ನೀರನ್ನು ಸೇವಿಸಬೇಕೆಂದು ಸಲಹೆ ನೀಡಿದರು.

ಬೆಂಗಳೂರಿನ ರಾಷ್ಟಿçÃಯ ವೈಮಾಂತರಿಕ್ಷ ಪ್ರಯೋಗ ಶಾಲೆಯ ಮುಖ್ಯ ವಿಜ್ಞಾನಿ ಎಂ.ಟಿ. ಶೋಭಾವತಿ ಮಾತನಾಡಿ, ೮೫ ಸದಸ್ಯರಿಂದ ಸ್ಥಾಪನೆಯಾದ ಸಂಘದ ಸದಸ್ಯತ್ವವನ್ನು ೭೬೩ಕ್ಕೆ ಹೆಚ್ಚಿಸಿದ ಆಡಳಿತ ಮಂಡಳಿಯ ಶ್ರಮ ಶ್ಲಾಘನೀಯವೆಂದರು.

ಸAಘದ ಬೆಳವಣಿಗೆ, ಸಂಘ ಹೊಂದಿರುವ ಆಸ್ತಿ ಮತ್ತು ಕಟ್ಟಡ ನಿರ್ಮಾಣದ ವಿವಿಧ ಹಂತಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಸಮಾಜದ ಕಟ್ಟಡ ಕಾಮಗಾರಿ ಸಂಪೂರ್ಣಗೊಳ್ಳಲು ಸರ್ವರೂ ಸಹಕರಿಸಬೇಕೆಂದು ಮನವಿ ಮಾಡಿದರು.

ಸಂಘದ ಹಿರಿಯ ಪದಾಧಿಕಾರಿ ಬಿ.ಎ. ಗಣೇಶ್ ಮಾತನಾಡಿ, ಸಂಘ ಸ್ಥಾಪನೆಯಾದ ರೀತಿಯನ್ನು ಮೆಲುಕು ಹಾಕಿದರು. ಸಂಘ ಸ್ಥಾಪನೆಗೆ ಶ್ರಮಿಸಿದ ಹಿರಿಯರನ್ನ ಸ್ಮರಿಸಬೇಕು. ಸ್ವಜಾತಿ ಸಮಾಜ ಬಾಂಧವರು ಅಂತರ್ಜಾತಿ ವಿವಾಹಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕು. ಸಂಘದ ಆಡಳಿತ ಮಂಡಳಿ ಇನ್ನೂ ಹೆಚ್ಚಿನ ಸಮಾಜ ಸೇವಾ ಕಾರ್ಯವನ್ನು ಸಂಘದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಎA.ಪರಮೇಶ್ವರ್, ಸಂಘದ ಸ್ಥಿರ ಮತ್ತು ಚರಾಸ್ತಿಗಳನ್ನು ಕಾಪಾಡಿ ಕೊಳ್ಳಲು ಜನಾಂಗ ಬಾಂಧವರು ಸಹಾಯ ಹಸ್ತ ನೀಡಿ ಅಭಿವೃದ್ಧಿಗೆ ಸಹಕರಿಸಬೇಕು. ಸಂಘದ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರ ಉದ್ಘಾಟನೆ ಕಾರ್ಯಕ್ರಮದಲ್ಲಿ ಜನಾಂಗ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಸಂಘದ ಎಲ್ಲಾ ಉಪ ಸಮಿತಿಯ ಅಧ್ಯಕ್ಷರು ಹಾಗೂ ಸಂಘಟನಾ ಕಾರ್ಯದರ್ಶಿಗಳು ಸಂಘಟನೆಗಾಗಿ ಹೆಚ್ಚಿನ ಶ್ರಮ ವಹಿಸಬೇಕೆಂದ ಅವರು, ಸಂಘದ ಏಳಿಗೆಗಾಗಿ ದುಡಿದ ಹಿರಿಯರನ್ನು ಸ್ಮರಿಸಿ, ಅವರ ಮಾರ್ಗದರ್ಶನದಲ್ಲಿ ಸಂಘವನ್ನು ಮುನ್ನಡೆಸುವುದಾಗಿ ತಿಳಿಸಿದರು.

ಸಂಘದ ಉಪಾಧ್ಯಕ್ಷೆ ಜಿ.ಆರ್. ದೇವಕಿ ನಾಯ್ಕ್, ಮಹಿಳಾ ವೇದಿಕೆ ಅಧ್ಯಕ್ಷೆ ರತ್ನಮಂಜರಿ ನರಸಿಂಹ, ಕಟ್ಟಡ ಸಮಿತಿ ಅಧ್ಯಕ್ಷ ಎಂ.ಟಿ. ಗುರುವಪ್ಪ, ೨ನೇ ಮೊಣ್ಣಂಗೇರಿ ಉಪಸಮಿತಿ ಅಧ್ಯಕ್ಷ ಎಂ.ಎಸ್. ವೆಂಕಪ್ಪ ಉಪಸ್ಥಿತ ರಿದ್ದರು. ಹರ್ಷಿತಾ ಮಂಜುನಾಥ್ ಪ್ರಾರ್ಥಿಸಿ, ಸಂಘದ ಸಹ ಕಾರ್ಯದರ್ಶಿ ಎ.ಎಂ. ನರಸಿಂಹ ಸ್ವಾಗತಿಸಿ, ಯುವ ವೇದಿಕೆ ಅಧ್ಯಕ್ಷ ಎಂ.ಆರ್. ಮೋಹನ ವಂದಿಸಿದರು.

ಸಂಘದ ಹಂಗಾಮಿ ಕಾರ್ಯದರ್ಶಿ ಹೂವಮ್ಮ ೨೦೨೩-೨೪ನೇ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕಪತ್ರವನ್ನು ಮಂಡಿಸಿದರು. ಸಭೆಯ ಅನುಮೋದನೆಯ ಬಳಿಕ ಸಂಘದ ಯುವ ವೇದಿಕೆ ಕಾರ್ಯದರ್ಶಿ ಎಂ.ಕೆ.ಸAತೋಷ್ ಯುವ ವೇದಿಕೆಯ ೨೦೨೩-೨೪ನೇ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕಪತ್ರವನ್ನು ಮಂಡನೆ ಮಾಡಿದರು.

ಸನ್ಮಾನ

ಕಾರ್ಯಕ್ರಮದಲ್ಲಿ ೭ನೇ ತರಗತಿ, ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ, ಸ್ನಾತಕೋತ್ತರ, ವೃತ್ತಿಪರ ಪದವಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ನಂತರ ಸಂಘದ ಹಿರಿಯ ಪದಾಧಿಕಾರಿಗಳಾದ ಬಿ.ಎ.ಗಣೇಶ್, ಬಾಲಕೃಷ್ಣ, ಪಿ.ಎಸ್. ತಿಮ್ಮಪ್ಪ ನಾಯ್ಕ್ ಹಾಗೂ ವಿಶೇಷ ಪ್ರತಿಭೆ ನಾಗರಾಜು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ನೂತನ ಪದಾಧಿಕಾರಿಗಳ ಆಯ್ಕೆ

೨೦೨೪-೨೫ರ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಎಂ.ಎA. ಪರಮೇಶ್ವರ್, ಉಪಾಧ್ಯಕ್ಷರಾಗಿ ಜಿ.ಆರ್. ದೇವಕಿ ನಾಯ್ಕ್, ಕಾರ್ಯದರ್ಶಿಯಾಗಿ ಹೂವಮ್ಮ, ಖಜಾಂಚಿಯಾಗಿ ಎಂ.ಎಸ್. ಕಾಂತಿ ಹಾಗೂ ಸಹಕಾರ್ಯದರ್ಶಿಯಾಗಿ ಎಂ.ಪಿ. ನವೀನ್ ಆಯ್ಕೆಯಾದರು. ನಾಲ್ವರು ಸಂಘಟನಾ ಕಾರ್ಯದರ್ಶಿಗಳು ಹಾಗೂ ೧೨ ಸದಸ್ಯರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಂಘದ ಸಮಾಜ ಬಾಂಧವರಿAದ ರೂ.೨೫ ಸಾವಿರ ಕಟ್ಟಡ ನಿಧಿಯನ್ನು ಸ್ವೀಕರಿಸಲಾಯಿತು. ಮೂವರು ಆಜೀವ ಸದಸ್ಯರನ್ನು ನೋಂದಾಯಿಸಿಕೊಳ್ಳಲಾಯಿತು.

ಸಂತಾಪ

ಮೃತಪಟ್ಟ ಸಮಾಜ ಬಾಂಧವರಿಗೆ ಮೌನಚಾರಣೆಯ ಮೂಲಕ ಸಂತಾಪ ಸೂಚಿಸಲಾಯಿತು.

ಕ್ರೀಡಾಕೂಟ

ಯುವ ವೇದಿಕೆ ಅಧ್ಯಕ್ಷ ಎಂ.ಆರ್. ಮೋಹನ ಹಾಗೂ ಕಾರ್ಯದರ್ಶಿ ಎಂ.ಕೆ. ಸಂತೋಷ್ ಮುಂದಾಳತ್ವದಲ್ಲಿ ವಿವಿಧ ಆಟೋಟ ಸ್ಪರ್ಧೆಗಳು ನಡೆದವು. ವಿಜೇತರಿಗೆ ಅತಿಥಿಗಳು ಬಹುಮಾನ ವಿತರಿಸಿದರು.

ಮಕ್ಕಳಿಂದ ಸಾಂಸ್ಕöÈತಿಕ ಕಾರ್ಯಕ್ರಮಗಳು ಆಕರ್ಷಣೀಯ ವಾಗಿ ಮೂಡಿ ಬಂತು. ಕಾರ್ಯಕ್ರಮ ದಲ್ಲಿ ಗೋಣಿಕೊಪ್ಪ, ಚೆನ್ನಂಗೊಲ್ಲಿ, ಕಾನೂರು, ಹುಲಿತಾಳ ಮತ್ತು ೨ನೇ ಮೊಣ್ಣಂಗೇರಿ ಗ್ರಾಮದ ಮಕ್ಕಳು ಭಾಗವಹಿಸಿದ್ದರು.