ಪಾಲಿಬೆಟ್ಟ, ಜೂ. ೪: ಪಾಲಿಬೆಟ್ಟದ ಚೆಷೈರ್ ಹೋಮ್ಸ್ ವಿಶೇಷ ಶಾಲೆಯಲ್ಲಿ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ವಿವಿಧ ಕಾರ್ಯಕ್ರಮ ಗಳೊಂದಿಗೆ ನಡೆಯಿತು. ಹೈದರಾಬಾದ್ ಮೂಲದ ವೇಣಿ ರಾವ್ ಫೌಂಡೇಷನ್ ಪ್ರಾಯೋಜಿತ ಕೌಶಲ್ಯಾಭಿವೃದ್ಧಿ ಕೇಂದ್ರ ಹಾಗೂ ಅಡುಗೆ ಕೋಣೆ, ಕೋಡಿಮಣಿಯಂಡ ಎಸ್. ಸುಬ್ಬಯ್ಯ ಮತ್ತು ಮಂಡೇಪAಡ ವಿನಿತಾ ಗಣಪತಿ ಪ್ರಾಯೋಜಿತ ಡೈನಿಂಗ್ ಹಾಲ್ ಹಾಗೂ ಯೋಗ ಕೇಂದ್ರ ಕಟ್ಟಡವನ್ನು ಗಣ್ಯರು ಉದ್ಘಾಟನೆ ಮಾಡಿದರು. ಚೆಷೈರ್ ಹೋಮ್ಸ್ ವಿಶೇಷ ಶಾಲೆಯ ಮುಖ್ಯಸ್ಥೆ ಗೀತಾ ಚಂಗಪ್ಪ ಮಾತನಾಡಿ, ವಿಶೇಷ ಶಾಲೆಯ ಮಕ್ಕಳ ಉತ್ತಮ ಬೆಳವಣಿಗೆಗೆ ಹಾಗೂ ಕೌಶಲ್ಯಾಭಿವೃದ್ಧಿ ಮೂಲಕ ಮಹಿಳೆಯರ ಸಬಲೀಕರಣಕ್ಕಾಗಿ ಹಲವಾರು ಯೋಜನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಇದೀಗ ದಾನಿಗಳ ಸಹಕಾರದಿಂದ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ.

ವಿಶೇಷ ಶಾಲೆಯ ಬಗ್ಗೆ ಆಸಕ್ತಿ ತೋರಿ ಹಲವು ಸಮಾಜ ಸೇವಕರು ಕೈಜೋಡಿಸುತ್ತಿರುವ ಪರಿಣಾಮವೇ ವಿಶೇಷ ಶಾಲೆ ಮುನ್ನಡೆಯುತ್ತಿದೆ ಎಂದು ದಾನಿಗಳನ್ನು ಅಭಿನಂದಿಸಿದರು.

ಡಾ. ಎ.ಸಿ. ಗಣಪತಿ ಮಾತ ನಾಡಿ, ವಿಶೇಷ ಚೇತನ ಮಕ್ಕಳಿಗೆ ಯಾವುದೇ ಕೊರತೆ ಬಾರದಂತೆ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು ಮಕ್ಕಳ ಬೆಳವಣಿಗೆಗೆ ಪೂರಕವಾಗಿದೆ. ಸೇವಾ ಮನೋಭಾವದೊಂದಿಗೆ

ದಾನಿಗಳು ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸುತ್ತಿ ರುವುದು ಶಾಲೆಯ ಬೆಳವಣಿಗೆಗೆ ಕಾರಣವಾಗಿದೆ ಎಂದು ಸಮಾಜ ಸೇವಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭ ವಿಶೇಷಚೇತನ ಮಕ್ಕಳ ಕಾರ್ಯಕ್ರಮಗಳು ನೆರೆದಿದ್ದವರ ಗಮನ ಸೆಳೆಯಿತು.

ಈ ಸಂದರ್ಭ ವೇಣಿ ರಾವ್ ಫೌಂಡೇಶನ್ ಪ್ರಮುಖರಾದ ರತ್ನಾ ರೆಡ್ಡಿ, ಕೋಡಿಮಣಿಯಂಡ ಎಸ್. ಸುಬ್ಬಯ್ಯ ಮತ್ತು ಮಂಡೇಪAಡ ವಿನಿತಾ ಗಣಪತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ, ಪ್ರಮುಖರಾದ ಆಶಾ ಸುಬ್ಬಯ್ಯ, ಪುನೀತ್ ರಾಮಸ್ವಾಮಿ, ಪ್ರಭಾ ಅಪಚ್ಚು, ದಿವ್ಯ ಬಿದ್ದಪ್ಪ ಮುಖ್ಯ ಶಿಕ್ಷಕ ಶಿವರಾಜು ಸೇರಿದಂತೆ ಮತ್ತಿತರರು ಇದ್ದರು.