ಕೋವರ್ ಕೊಲ್ಲಿ ಇಂದ್ರೇಶ್
ಬೆAಗಳೂರು, ಜೂ. ೪: ಇಂದು ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಾರಾಟವಾಗುತ್ತಿರುವ ಪೇಯ ಟೀ ಆಗಿದೆ. ಇದಕ್ಕೆ ಭಾರತವೂ ಹೊರತಲ್ಲ. ಆದರೆ ಕಳೆದ ೫-೬ ವರ್ಷಗಳಿಂದ ಭಾರತದಲ್ಲಿ ಕಾಫಿಯ ಆಂತರಿಕ ಬಳಕೆ ಹೆಚ್ಚಾಗುತ್ತಿದೆ. ಪ್ರತಿಷ್ಠಿತ ಕಂಪೆನಿಗಳು ತಮ್ಮ ಮಾರಾಟ ಮಳಿಗೆಗಳ ಸಂಖ್ಯೆಯನ್ನು ಹೆಚ್ಚಿಸತೊಡಗಿವೆ.
ಕಾಫಿಯ ಸುವಾಸನೆ ದಿನೇ ದಿನೇ ಹೆಚ್ಚು ಹೆಚ್ಚು ಜನರನ್ನು ಆಕರ್ಷಿಸುತ್ತಿದೆ ಎಂಬುದಕ್ಕೆ ಕಾಫಿ ಮಾರಾಟ ಮಳಿಗೆಗಳ ಸಂಖ್ಯೆ ಹೆಚ್ಚುತ್ತಿರುವುದೇ ಕಾರಣವಾಗಿದೆ. ಅಮೇರಿಕ ಮೂಲದ ಕಾಫಿ ಚೈನ್ ಸ್ಟಾರ್‌ಬಕ್ಸ್ ಭಾರತದಲ್ಲಿ ಟಾಟಾ ಕಾಫಿಯ ಸಹಯೋಗದೊಂದಿಗೆ ೨೦೧೨ರಲ್ಲಿ ಮುಂಬೈನಲ್ಲಿ ಮೊದಲ ಮಾರಾಟ ಮಳಿಗೆ ತೆರೆಯಿತು. ನಂತರ ಮೆಟ್ರೋ ನಗರಗಳಲ್ಲಿ ಹತ್ತಾರು ಮಳಿಗೆ ತೆರೆದ ಕಂಪೆನಿ ಇದೀಗ ದ್ವಿತೀಯ ಶ್ರೇಣಿ ನಗರಗಳಲ್ಲಿ ಮಳಿಗೆಗಳ ಆರಂಭಕ್ಕೆ ಮುಂದಾಗಿದೆ. ಇತ್ತೀಚೆಗೆ ಕಂಪೆನಿ ಕೊಯಮತ್ತೂರು ಮತ್ತು ವಾರಣಾಸಿಯಲ್ಲಿ ತನ್ನ ಮಳಿಗೆಗಳನ್ನು ತೆರೆಯಿತು. ನಂತರ ಇಂದೋರ್ ಮತ್ತು ವಿಶಾಖಪಟ್ಟಣವನ್ನು ಪ್ರವೇಶಿಸಿತು.
"ಭಾರತವು ಜಾಗತಿಕವಾಗಿ ಸ್ಟಾರ್‌ಬಕ್ಸ್ನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಒಂದಾಗಿದೆ, ಕಳೆದ ದಶಕದಲ್ಲಿ ದೇಶವು ತ್ವರಿತ ಪರಿವರ್ತನೆಗೆ ಒಳಗಾಗಿದೆ" ಎಂದು ಟಾಟಾ ಸ್ಟಾರ್‌ಬಕ್ಸ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಶಾಂತ್ ದಾಸ್ ತಿಳಿಸಿದರು. ಸ್ಟಾರ್‌ಬಕ್ಸ್ ಕಾಫಿ ಕಂಪನಿಯು ಮುಂದಿನ ಜನವರಿ ೨೦೨೮ ರ ವೇಳೆಗೆ ದೇಶದಲ್ಲಿ ತನ್ನ ಪ್ರಖ್ಯಾತಿಯನ್ನು ದ್ವಿಗುಣಗೊಳಿಸಲು ಯೋಜಿಸಿದೆ ಎಂದು ಹೇಳಿದೆ. ಅಂದರೆ ಆ ಹೊತ್ತಿಗೆ ಭಾರತದಲ್ಲಿ ೧,೦೦೦ ಸ್ಟಾರ್‌ಬಕ್ಸ್ ರೀಟೇಲ್ ಔಟ್‌ಲೆಟ್‌ಗಳನ್ನು ತೆರೆಯಲು ಕಂಪೆನಿ ನಿರ್ಧರಿಸಿದೆ.
ಆಂಧ್ರ ಪ್ರದೇಶದ ಸಾವಯವ ಕಾಫಿ ಕಂಪೆನಿ ಆಗಿರುವ ಅರಕು ಕಾಫಿ ಕೂಡ ಮಾರಾಟ ಮಳಿಗೆಗಳನ್ನು ತೆರೆಯಲು ಮುಂದಾಗಿದೆ.
ಭಾರತವು ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಒಂದಾಗಿದೆ, ಜಾಗತಿಕ ಮಾರುಕಟ್ಟೆಯ ಸಿಎಜಿಆರ್ ಶೇಕಡಾ ೫ಕ್ಕೆ ಹೋಲಿಸಿದರೆ ಇಲ್ಲಿ ಶೇಕಡಾ ೧೧ ರಷ್ಟು ಸಂಯುಕ್ತ ವಾರ್ಷಿಕ ಬೆಳವಣಿಗೆ ದರವನ್ನು ಹೊಂದಿದೆ" ಎಂದು ಕೋಸ್ಟಾ ಕಾಫಿಯ ಗ್ಲೋಬಲ್ ಸಿಇಒ ಫಿಲಿಪ್ ಸ್ಕೆöÊಲೀ ಅವರು ಕಳೆದ ಅಕ್ಟೋಬರ್‌ನಲ್ಲಿ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೇಳಿದರು.
ದೇಶೀಯ ಬ್ಲೂ ಟೋಕೈ ಮತ್ತು ಥರ್ಡ್ ವೇವ್ ಕಾಫಿ ರೋಸ್ಟರ್‌ಗಳು ಬಹುರಾಷ್ಟಿçÃಯ ಕಂಪನಿಗಳಿಗೆ ಸ್ಪರ್ಧೆ ನೀಡುತ್ತಿವೆ. ಕಾಫಿ ಕೆಫೆಗಳಲ್ಲಿ ಸಮಯ ಕಳೆಯಲು ಆಸಕ್ತಿ ಹೊಂದಿರುವ ಮಧ್ಯಮ ವರ್ಗದ ಜನಸಂಖ್ಯೆ ಬೆಳೆಯುತ್ತಿದೆ ಎಂದು ಬ್ಲೂ ಟೋಕೈ ಸಹ-ಸಂಸ್ಥಾಪಕ ಮತ್ತು ಸಿಇಒ ಮ್ಯಾಟ್ ಚಿತ್ರರಂಜನ್ ಹೇಳುತ್ತಾರೆ. ಪ್ರಸ್ತುತ ದೇಶಾದ್ಯಂತ ೧೦೧ ಔಟ್‌ಲೆಟ್‌ಗಳನ್ನು ಹೊಂದಿರುವ ಬ್ಲೂ ಟೋಕೈ, ಗುಜರಾತ್‌ನ ಅಹಮದಾಬಾದ್ ಮತ್ತು ತಮಿಳುನಾಡಿನ ಚೆನ್ನೆöÊನಂತಹ ಹೊಸ ಪ್ರದೇಶಗಳನ್ನು ಪ್ರವೇಶಿಸುವ ಯೋಜನೆಯೊಂದಿಗೆ ವಿಸ್ತರಣೆಯ ಭರಾಟೆಯಲ್ಲಿದೆ. "ಕಳೆದ ವರ್ಷದಲ್ಲಿ ನಾವು ಸುಮಾರು ೫೦ ಸ್ಥಳಗಳಲ್ಲಿ ಮಳಿಗೆಗಳನ್ನು ತೆರೆದಿದ್ದೇವೆ. ನಾವು ತಿಂಗಳಿಗೆ ಐದರಿಂದ ಏಳು ಮಳಿಗೆ ತೆರೆಯಲು ಯೋಜಿಸಿದ್ದೇವೆ ಮತ್ತು ಈ ವೇಗದಲ್ಲಿ ಮುಂದಿನ ಹಲವಾರು ವರ್ಷಗಳವರೆಗೆ ಈ ಬೆಳವಣಿಗೆಯು ಮುಂದುವರಿಯುತ್ತದೆ ಎಂದಿದ್ದಾರೆ.
ಏಪ್ರಿಲ್‌ನಲ್ಲಿ ಮುಂಬೈ ಮೂಲದ ಸಬ್‌ಕೋ ಕಾಫಿ ಸಿರೀಸ್ ಬಿ ಫಂಡಿAಗ್‌ನಲ್ಲಿ ರೂ. ೮೫ ಕೋಟಿ (ರೂ. ೮೫೦ ಮಿಲಿಯನ್) ಸಂಗ್ರಹಿಸಿದೆ. ಮಾರ್ಚ್ ೧೫, ೨೦೨೦ ರಂದು ಮುಂಬೈನ ಬಾಂದ್ರಾದಿAದ ಒಂದು ಮಳಿಗೆಯೊಂದಿಗೆ ಆರಂಭಗೊAಡ ಸಬ್ ಕೋ ಹಣ ಸಂಗ್ರಹಾತಿಯ ಮೂಲದ ದೇಶಾದ್ಯಂತ ಮಳಿಗೆ ತೆರೆಯಲು ಯೋಜಿಸಿದೆ.
ಈ ವರ್ಷದ ಆರಂಭದಲ್ಲಿ ನವದೆಹಲಿಯ ಮೆಟ್ರೋ ನಿಲ್ದಾಣದಲ್ಲಿ ಹೊಸ ಕಾಫಿ ಮಳಿಗೆ ತೆರೆದ ಸ್ವದೇಶೀ ಬರಿಸ್ಟಾ ಒಟ್ಟು ೪೦೦ ಮಳಿಗೆಗಳನ್ನು ತೆರೆದಿದೆ. ಹರಿಯಾಣ ಮೂಲದ ಈ ಕಾಫಿ ಸರಪಳಿಯು ೨೦೦೦ ರಲ್ಲಿ ಭಾರತದ ರಾಜಧಾನಿಯಲ್ಲಿ ತನ್ನ ಮೊದಲ ಮಳಿಗೆ ಅನ್ನು ತೆರೆಯಿತು ಮತ್ತು ೨೦೦೨ರಲ್ಲಿ ಶ್ರೀಲಂಕಾದಲ್ಲಿ ಪ್ರಾರಂಭವಾಯಿತು, ಅಲ್ಲಿ ಅದು ಪ್ರಸ್ತುತ ೨೯ ಮಳಿಗೆಗಳನ್ನು ನಿರ್ವಹಿಸುತ್ತದೆ. ಬರಿಸ್ಟಾ ಸ್ವತಂತ್ರ ಔಟ್‌ಲೆಟ್‌ಗಳು ಮತ್ತು ಎಕ್ಸ್ಪ್ರೆಸ್ ಕಿಯೋಸ್ಕ್ಗಳನ್ನು ನಿರ್ವಹಿಸುತ್ತದೆ.
೪೬೭ ಚಿಲ್ಲರೆ ಮಳಿಗೆಗಳನ್ನು ಹೊಂದಿರುವ ಬೆಂಗಳೂರು ಮೂಲದ ಕೆಫೆ ಕಾಫಿ ಡೇ ಮತ್ತು ೩೯೦ ಔಟ್‌ಲೆಟ್‌ಗಳನ್ನು ಹೊಂದಿರುವ ಸ್ಟಾರ್‌ಬಕ್ಸ್ ನಂತರ ಬರಿಸ್ಟಾ ಭಾರತದಲ್ಲಿ ಮೂರನೇ ಅತಿದೊಡ್ಡ ಬ್ರಾಂಡ್ ಕಾಫಿ ಸರಪಳಿಯಾಗಿದೆ. ಬರಿಸ್ಟಾ ಟಾಟಾ ಸ್ಟಾರ್‌ಬಕ್ಸ್ನಿಂದ ಕಠಿಣ ಸ್ಪರ್ಧೆಯನ್ನು ಎದುರಿಸುತ್ತಿದ್ದು, ಇದು ಮುಂದಿನ ನಾಲ್ಕು ವರ್ಷಗಳಲ್ಲಿ ಭಾರತದಲ್ಲಿ ೬೦೦ ಹೊಸ ಔಟ್‌ಲೆಟ್‌ಗಳನ್ನು ತೆರೆಯುವ ಯೋಜನೆಗಳನ್ನು ರೂಪಿಸಿದೆ.