ನವದೆಹಲಿ, ಜೂ.೬: ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ ೯ರಂದು ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರಕ್ಕೆ ದಿನಾಂಕ ನಿಗದಿಗೊಂಡಿದೆ. ಇದಕ್ಕೂ ಮುನ್ನ ಜೂನ್ ೮ರಂದು ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ ಎಂದು ಸುದ್ದಿಯಾಗಿತ್ತು. ಆದರೆ ಇದೀಗ ಅಧಿಕೃತವಾಗಿ ದಿನಾಂಕ ನಿಗದಿಗೊಂಡಿದ್ದು, ಜೂನ್ ೯ರಂದು ಸಂಜೆ ೬ ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.

ಮೋದಿ ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಪ್ರಮಾಣ ವಚನ ಸಮಾರಂಭಕ್ಕೂ ಮುನ್ನ ರಾಷ್ಟçಪತಿ

(ಮೊದಲ ಪುಟದಿಂದ) ದ್ರೌಪದಿ ಮುರ್ಮು ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು. ರಾಷ್ಟ್ರಪತಿಗಳು ಪ್ರಧಾನಿ ಮತ್ತು ಮಂತ್ರಿ ಪರಿಷತ್ತಿನ ರಾಜೀನಾಮೆಯನ್ನು ಅಂಗೀಕರಿಸಿದ್ದು ಹಂಗಾಮಿ ಪ್ರಧಾನಿಯಾಗಿ ಇದೀಗ ಪ್ರಧಾನಿ ಮೋದಿ ಮುಂದುವರಿದಿದ್ದಾರೆ.