ಸೋಮವಾರಪೇಟೆ, ಜೂ. ೬ : ಕಳೆದ ೨೦೨೨ರ ಜುಲೈನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ ರಾಷ್ಟಿçÃಯ ತನಿಖಾ ಸಂಸ್ಥೆಯು ಸೋಮವಾರಪೇಟೆ ಸಮೀಪದ ತಣ್ಣೀರುಹಳ್ಳ ಗ್ರಾಮದ ಯುವಕನನ್ನು ವಶಕ್ಕೆ ಪಡೆದಿದೆ. ಈ ಮೂಲಕ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ೧೯ಕ್ಕೆ ಏರಿದೆ.

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ದಲ್ಲಿ ಪ್ರಮುಖ ಆರೋಪಿಯಾಗಿರುವ ಮುಸ್ತಾಫ ಪೈಚಾರ್‌ಗೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಸುರಕ್ಷಿತ ಅಡಗುತಾಣ

(ಮೊದಲ ಪುಟದಿಂದ) ಒದಗಿಸಿರುವುದು ಹಾಗೂ ಇದೇ ಪ್ರಕರಣದಲ್ಲಿ ಆರೋಪಿಯಾಗಿರುವ ಅಬ್ದುಲ್ ರೆಹಮಾನ್‌ನೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇರೆ ತಣ್ಣೀರುಹಳ್ಳ ಗ್ರಾಮದ ಯೂಸುಫ್ ಅವರ ಪುತ್ರ ರಿಯಾಜ್ ಎಂಬಾತನನ್ನು ಎನ್‌ಐಎ ಅಧಿಕಾರಿಗಳು ಮುಂಬೈ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ.

ಪ್ರವೀಣ್ ಹತ್ಯೆ ಆರೋಪಿಗಳ ಬೆನ್ನಟ್ಟಿರುವ ಎನ್‌ಐಎ ಅಧಿಕಾರಿಗಳು, ಈವರೆಗೆ ೧೯ ಮಂದಿಯನ್ನು ಬಂಧಿಸಿದ್ದಾರೆ. ದಕ್ಷಿಣ ಕನ್ನಡದ ಬೆಳ್ಳಾರೆಯಲ್ಲಿ ನಡೆದ ಈ ಹತ್ಯೆಯ ಹಿಂದೆ ಕೊಡಗಿನ ವ್ಯಕ್ತಿಗಳೂ ಭಾಗಿಯಾಗಿರುವುದು ತಲ್ಲಣ ಮೂಡಿಸಿದೆ. ಈ ಹಿಂದೆ ಕಾನ್ವೆಂಟ್ ಬಾಣೆ ಹಾಗೂ ಕಲ್ಕಂದೂರು ಗ್ರಾಮಕ್ಕೆ ಆಗಮಿಸಿದ್ದ ಎನ್‌ಐಎ ಅಧಿಕಾರಿಗಳು, ಕಲ್ಕಂದೂರಿನ ಅಬ್ದುಲ್ ರೆಹಮಾನ್, ಕಾನ್ವೆಂಟ್ ಬಾಣೆಯ ನಾಸೀರ್ ಅವರುಗಳ ಮನೆಗೆ ಲುಕ್‌ಔಟ್ ನೋಟೀಸ್ ಜಾರಿಗೊಳಿಸಿ, ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ನೋಟೀಸ್ ಅಂಟಿಸಿ, ಈರ್ವರ ಬಗ್ಗೆ ಮಾಹಿತಿ ನೀಡಿದರೆ ತಲಾ ೫ ಮತ್ತು ೨.೫೦ ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದರು.

ಇದಾದ ನಂತರ ಮತ್ತೆ ಸೋಮವಾರಪೇಟೆ ಮೂಲದ ಯುವಕನನ್ನು ಇದೇ ಪ್ರಕರಣಕ್ಕೆ ಸಂಬAಧಿಸಿದAತೆ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದು, ಮತ್ತೊಮ್ಮೆ ಪಟ್ಟಣ ಸುದ್ದಿಯಲ್ಲಿದೆ. ತಣ್ಣೀರುಹಳ್ಳದ ರಿಯಾಜ್, ಮುಂಬೈ ವಿಮಾನ ನಿಲ್ದಾಣ ಮೂಲಕ ವಿದೇಶಕ್ಕೆ ತೆರಳಲು ಯತ್ನಿಸುತ್ತಿದ್ದ ಸಂದರ್ಭವೇ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ.

ಮೇ ೧೦ರಂದು ಮುಸ್ತಾಫ ಹಾಗೂ ಮನ್ಸೂರ್ ಪಾಷಾ ಅವರುಗಳನ್ನು ಬಂಧಿಸಿದ ಎನ್‌ಐಎ, ತಿಂಗಳು ಕಳೆಯುವು ದರೊಳಗೆ ಮತ್ತೋರ್ವನನ್ನು ವಶಕ್ಕೆ ಪಡೆದಿದೆ. ಈ ಹಿಂದೆ ವಿದೇಶದಲ್ಲಿದ್ದ ರಿಯಾಜ್, ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಅಬ್ದುಲ್ ರೆಹಮಾನ್ ನಿರ್ದೇಶನದ ಮೇರೆಗೆ ಭಾರತಕ್ಕೆ ಮರಳಿದ್ದು, ನಂತರ ಸಕಲೇಶಪುರದಲ್ಲಿ ಮುಸ್ತಾಫ ಪೈಚಾರ್‌ಗೆ ಸುರಕ್ಷಿತ ಅಡಗುತಾಣ ಒದಗಿಸಿದ್ದ. ಜೊತೆಗೆ ಇನ್ನಿತರ ವ್ಯವಸ್ಥೆಗಳನ್ನೂ ಕಲ್ಪಿಸಿದ್ದ ಎಂದು ಎನ್‌ಐಎ ಅಧಿಕೃತ ಪ್ರಕಟಣೆ ಹೊರಡಿಸಿದೆ.

೨೦೨೨ರ ಜುಲೈನಲ್ಲಿ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ನಡೆದಿದ್ದು, ಆಗಸ್ಟ್ ೪ ರಂದು ಎನ್‌ಐಎ ತನಿಖೆ ಆರಂಭಿಸಿ, ಈವರೆಗೆ ೨೧ ಮಂದಿಯ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದೆ. ಪ್ರಕರಣದಲ್ಲಿ ಪರಾರಿಯಾಗಿರುವ ಇತರ ಆರೋಪಿಗಳ ಪತ್ತೆಗೂ ತನಿಖೆ ಮುಂದುವರೆಸಿದೆ.

ಇತ್ತ ಮುಂಬೈನಲ್ಲಿ ಎನ್‌ಐಎ ಅಧಿಕಾರಿಗಳು ರಿಯಾಜ್‌ನನ್ನು ವಶಕ್ಕೆ ಪಡೆದ ನಂತರ, ಆತನ ಕುಟುಂಬಸ್ಥರಿಗೆ ಸ್ಥಳೀಯ ಪೊಲೀಸರ ಮೂಲಕ ಪ್ರಾಥಮಿಕ ಮಾಹಿತಿಯನ್ನು ರವಾನಿಸಿದ್ದಾರೆ ಎನ್ನಲಾಗಿದೆ.