ಕಡAಗ, ಜೂ. ೬: ಕಡಂಗ-ವೀರಾಜಪೇಟೆ ಮುಖ್ಯರಸ್ತೆಯಲ್ಲಿರುವ ಕಲ್ಲುಮೊಟ್ಟೆಯಲ್ಲಿ ಬುಧವಾರ ರಾತ್ರಿ ಬೃಹತ್ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ವಿದ್ಯುತ್ ಕಂಬ ಕೂಡ ಬಿದ್ದು ಮುಖ್ಯರಸ್ತೆಯಲ್ಲಿ ಸಂಚಾರ ಮಾಡಲು ಸಾಧ್ಯವಾಗದೇ ವಾಹನ ಸವಾರರು ಜೌಕಿ, ಕಾಕೋಟುಪರಂಬು ಮಾರ್ಗವಾಗಿ ಸಂಚರಿಸುವAತಾಯಿತು. ಇಂದು ಗ್ರಾಮಸ್ಥರ ಸಹಕಾರದೊಂದಿಗೆ ಸಂಚಾರಕ್ಕೆ ಅನುವುಮಾಡಿ ಕೊಡಲಾಯಿತು.