*ಗೋಣಿಕೊಪ್ಪ: ಪ್ರತಿಯೊಬ್ಬರು ಒಂದೊAದು ಗಿಡವನ್ನು ದತ್ತು ಪಡೆದು ಅವುಗಳ ಪೋಷಿಸಿ ಉಳಿಸಬೇಕು ಎಂದು ಬಾಳೆಲೆ ಪ್ರತಿಭಾ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಗೀತಾ ನಾಯ್ಡು ಹೇಳಿದರು.

ಬಾಳೆಲೆ ಗ್ರಾಮ ಪಂಚಾಯಿತಿಯಿAದ ವಿತರಿಸಿದ ಸಸಿಗಳನ್ನು ಶಿಕ್ಷಕರ ವಿದ್ಯಾರ್ಥಿಗಳು ಶಾಲೆಯ ಅವರಣದಲ್ಲಿ ನೆಟ್ಟು ಹಸಿರೀಕರಣಕ್ಕೆ ಪ್ರತಿಜ್ಞೆ ತೊಟ್ಟರು. ಶಾಲಾ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕಿ ಯಶಸ್ವಿನಿ ಸಾನಿಫ್ಫಾ, ಮೋನಿಷಾ, ಸುಮಾ, ಅಫ್ರಿನ್, ಸೋನಿ, ಅಶ್ವಿನಿ, ದೈಹಿಕ ಶಿಕ್ಷಕ ಮಾಚಂಗಡ ಅಯ್ಯಪ್ಪ ಇದ್ದರು. ವಿದ್ಯಾರ್ಥಿಗಳಾದ ಚೈತನ್ಯ, ಭವೀನ್ ಬಿದ್ದಪ್ಪ, ಪ್ರಣಿತ ಪರಿಸರದ ಬಗ್ಗೆ ಮಾತನಾಡಿದರು.*ಗೋಣಿಕೊಪ್ಪ: ವಿವಿಧ ಬಗೆಯ ಹಣ್ಣಿನ ಗಿಡಗಳನ್ನು ನೆಟ್ಟು ಪೊನ್ನಂಪೇಟೆಯ ಸಂತ ಅಂತೋಣಿ ವಿದ್ಯಾಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪರಿಸರ ಉಳಿಸಿ ಬೆಳೆಸುವ ಬಗ್ಗೆ ಮಕ್ಕಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಶಾಲಾ ಸಂಚಾಲಕರು, ಕಾಲೇಜು ಪ್ರಾಂಶುಪಾಲರು, ಶಾಲಾ ಮುಖ್ಯೋಪಾಧ್ಯಾಯರು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಮುಳ್ಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವರ್ಷಪೂರ್ತಿ ತಮಗೆ ಮನೆಗಳಲ್ಲಿ ಸಿಗುವ ಹಣ್ಣಿನ ಬೀಜಗಳನ್ನು ಶಾಲೆಯ ಶಿಕ್ಷಕ ಸತೀಶ್ ಶಾಲೆಯಲ್ಲಿ ಸ್ಥಾಪಿಸಿರುವ ಬೀಜ ಭಂಡಾರದಲ್ಲಿ ಸಂಗ್ರಹಿಸುತ್ತಾರೆ. ಹೀಗೆ ಸಂಗ್ರಹಿಸಲಾದ ಬೀಜಗಳನ್ನು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮಣ್ಣು ಮತ್ತು ಸಗಣಿ ಗೊಬ್ಬರ ಸೇರಿಸಿ ಬೀಜದ ಉಂಡೆಗಳನ್ನಾಗಿ ಮಾಡಲಾಗುತ್ತದೆ. ಜೂನ್ ತಿಂಗಳಿನಲ್ಲಿ ಮಳೆಬೀಳುವ ಸಮಯವನ್ನು ನೋಡಿಕೊಂಡು ಎರಡು ಅಥವಾ ಮೂರನೇ ವಾರದಲ್ಲಿ ಅವುಗಳನ್ನು ಬಿತ್ತುವ ಕಾರ್ಯದಲ್ಲಿ ತೊಡಗುತ್ತಾರೆ. ಬಯಲು ಪ್ರದೇಶಗಳು, ರಸ್ತೆಯ ಎರಡು ಬದಿಗಳು ಅರಣ್ಯ ಸಿಬ್ಬಂದಿಗಳ ಸಹಕಾರದೊಂದಿಗೆ ಅರಣ್ಯ ಪ್ರದೇಶಗಳನ್ನು ಆಯ್ದುಕೊಂಡು ಬಿತ್ತನೆ ಮಾಡಲಾಗುತ್ತದೆ. ಇಲ್ಲಿ ಮಾವು-ಹಲಸು, ಬೈನೆ ಬೀಜ, ನೇರಳೆ, ಪನ್ನೇರಳೆ, ಸೀಬೆ, ಸಪೋಟ, ರಾಂಫಲ ಹೀಗೆ ನಾನಾ ಬಗೆಯ ಹಣ್ಣಿನ ಬೀಜಗಳನ್ನು ಬಿತ್ತುವ ಕಾರ್ಯವನ್ನು ಮಾಡಲಾಗುತ್ತಿದೆ. ಈ ಬಾರಿ ವಿದ್ಯಾರ್ಥಿಗಳು ಸಾಕಷ್ಟು ಹಣ್ಣುಗಳ ಬೀಜಗಳನ್ನು ಸಂಗ್ರಹಿಸಿ ಬೀಜದುಂಡೆಗಳನ್ನಾಗಿ ಮಾಡಿ ಕ್ಯಾಟರ್‌ಬಿಲ್‌ನ ಸಹಾಯ ಪಡೆದು ಕಾಡಿನೊಳಗೆ ದೂರ ದೂರದವರೆಗೂ ಬೀಜದುಂಡೆ ಗಳನ್ನು ಕಳುಹಿಸಿದರು. ಅಲ್ಲದೆ ಶಿಕ್ಷಕ ಸತೀಶ್ ವಿದ್ಯಾರ್ಥಿಗಳಿಗೆ ಪರಿಸರದ ಮಹತ್ವವನ್ನು ಸಾರುವ ಪರಿಸರ ಕಾಳಜಿಯ ನಾಟಕವನ್ನು ಮಾಡಿಸುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾದರು. ನಾವಿಂದು ವಾಣಿಜ್ಯ ಉದ್ದೇಶದ ಮರಗಳನ್ನು ಬೆಳೆಸಲು ಆದ್ಯತೆ ನೀಡುವುದಕ್ಕಿಂತ ಹೆಚ್ಚಾಗಿ ಹಣ್ಣಿನ ಮರಗಳನ್ನು ಬೆಳೆಯು ವುದರ ಮುಖಾಂತರ ವೇಗವಾಗಿ ಅರಣ್ಯೀಕರಣ ಮಾಡಲು ಸಾಧ್ಯವಿದೆ. ಹಣ್ಣುಗಳನ್ನು ತಿನ್ನುವ ಪಕ್ಷಿಗಳು ಹಿಕ್ಕೆಗಳನ್ನು ಎಲ್ಲೆಂದರಲ್ಲಿ ಹಾಕುವುದರ ಮೂಲಕ ಅಲ್ಲಲ್ಲಿ ಮರ ಗಿಡಗಳು ಬೆಳೆದು ಅರಣ್ಯ ತನ್ನಿಂದ ತಾನೇ ವೃದ್ಧಿಯಾಗುತ್ತದಲ್ಲದೆ ಹಣ್ಣಿನ ಮರಗಳು ಬೆಳೆಸುವುದರಿಂದ ಕಾಡಿನಲ್ಲಿರುವ ಪ್ರಾಣಿ ಪಕ್ಷಿಗಳಿಗೂ ಆಹಾರ ದೊರೆತಂತಾಗುತ್ತದೆ ಎಂದು ಶಿಕ್ಷಕ ಸತೀಶ್ ಅವರು ಅಭಿಪ್ರಾಯಿಸಿದ್ದಾರೆ.ಹಾಕತ್ತೂರು: ಹಾಕತ್ತೂರು ಸರಕಾರಿ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಹೆಚ್.ಡಿ.ಎಫ್.ಸಿ ಬ್ಯಾಂಕ್ ಮಡಿಕೇರಿಯ ಶಾಖೆ, ಹಾಕತ್ತೂರು ತೊಂಭತ್ತುಮನೆಯ ತ್ರಿನೇತ್ರ ಯುವಕ ಸಂಘ, ಕೊಡಗು ಜಿಲ್ಲಾ ಹಾಗೂ ಮಡಿಕೇರಿ ತಾಲೂಕು ಯುವ ಒಕ್ಕೂಟ ಮತ್ತು ಹಾಕತ್ತೂರು ಸರಕಾರಿ ಪ್ರೌಢ ಶಾಲೆಯ ಸಹಯೋಗದಲ್ಲಿ ಶಾಲಾ ಮೈದಾನದಲ್ಲಿ ಗಣ್ಯರು ಹಾಗೂ ವಿದ್ಯಾರ್ಥಿಗಳು ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸಿದರು.ಈ ಸಂದರ್ಭ ಹೆಚ್‌ಡಿಎಫ್‌ಸಿ ಬ್ಯಾಂಕ್ ಮಡಿಕೇರಿ ಶಾಖೆ ವ್ಯವಸ್ಥಾಪಕ ನಾರಾಯಣ್, ಸಿಬ್ಬಂದಿಗಳಾದ ಕವನ, ಮಂಜುಳಾ, ಹಿತೇಶ್, ಕುಮಾರ್, ಭರತ್ ಶ್ರೀನಿವಾಸ್, ತ್ರಿನೇತ್ರ ಯುವಕ ಸಂಘದ ಅಧ್ಯಕ್ಷ ಪಿ.ಪಿ.ಸುಕುಮಾರ್, ಮಾಜಿ ಅಧ್ಯಕ್ಷ ಟಿ.ಕೆ. ಸಂತೋಷ್. ಗ್ರಾ.ಪಂ. ಸಿಬ್ಬಂದಿಗಳಾದ ಸೋವಿಯತ್, ಅಹ್ಮದ್, ಗ್ರಂಥಪಾಲಕಿ ಸುನೀತಾ, ಹಾಕತ್ತೂರು ಸರಕಾರಿ ಪ್ರೌಢಶಾಲೆ ಶಿಕ್ಷಕರಾದ ಎಂ.ವನಜ, ಸಿ.ಎಂ. ಮುನೀರ್, ಬಿ.ಎನ್. ಜಯಂತಿ, ಕೆ.ಕೆ. ಪುಷ್ಪ, ಕೆ.ಜಿ. ಭವಾನಿಶಂಕರ್, ಕೆ.ಎಸ್. ಸಹನಾ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.

ಮದೆನಾಡು: ಮದೆ ಮಹೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಸಿದ್ದರಾಜು ಬೆಳ್ಳಯ್ಯ ಪರಿಸರ ದಿನಾಚರಣೆ ಕುರಿತು ಮಾತನಾಡಿದರು. ಇಡೀ ವಿಶ್ವಕ್ಕೆ ಇರುವುದು ಒಂದೇ ಭೂಮಿ. ಈ ಭೂಮಿಯನ್ನು ರಕ್ಷಿಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು. ಅರ್ಥಶಾಸ್ತç ಉಪನ್ಯಾಸಕಿ ವಾಣಿ, ರಾಜ್ಯಶಾಸ್ತç ಉಪನ್ಯಾಸಕಿ ಯೋಗಿತ, ಇತಿಹಾಸ ಉಪನ್ಯಾಸಕ ಪರಶುರಾಮಪ್ಪ, ಕನ್ನಡ ಉಪನ್ಯಾಸಕ ಶ್ರೀನಿವಾಸ್ ಮತ್ತು ಧರ್ಮಸ್ಥಳ ಸ್ವಸಹಾಯ ಸಂಘದ ಕ್ಷೇತ್ರ ಸಹಾಯಕರಾದ ಸಬೀನಾ ಮತ್ತು ಸಂತೋಷ್ ಹಾಜರಿದ್ದರು.ಕಡಂಗ: ವಿಜಯ ವಿದ್ಯಾಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ವಿದ್ಯಾರ್ಥಿಗಳು ಹಾಗೂ ಶಿಕ್ಷಕರುಗಳು ಸಸಿಗಳನ್ನು ನೆಡುವುದರ ಮೂಲಕ

ಆಚರಿಸಲಾಯಿತು. ವಿದ್ಯಾರ್ಥಿಗಳು ಪರಿಸರದ ಮಹತ್ವವನ್ನು ಸಾರುವ ಚಿತ್ರವನ್ನು ಬಿಡಿಸುವುದ ರೊಂದಿಗೆ ಪರಿಸರ ಜಾಗೃತಿ ಮೂಡಿಸಿದರು.

ಮುಳ್ಳೂರು: ವಿಶ್ವ ಪರಿಸರ ದಿನವನ್ನು ಸಮೀಪದ ನಿಡ್ತ ಸರಕಾರಿ ಪ್ರೌಢಶಾಲೆಯಲ್ಲಿ ಆಚರಿಸಲಾಯಿತು. ಶಾಲೆಯ ನಿಸರ್ಗ ಇಕೋ ಕ್ಲಬ್ ವತಿಯಿಂದ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ದಿನದ ಮಹತ್ವ ಕುರಿತು ಶಾಲಾ ವಿಜ್ಞಾನ ಶಿಕ್ಷಕ ಡಿ.ಎಸ್. ಮಧುಕುಮಾರ್ ಮಾತನಾಡಿ ಪರಿಸರದ ಮೇಲೆ ಹಾನಿಯಾದರೆ ಭೂಮಿಯ ಮೇಲೆ ತೀವ್ರವಾದ ಪರಿಣಾಮ ಬೀರುತ್ತದೆ. ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರು ಗಿಡಗಳನ್ನು ಬೆಳೆಯುವ ಮೂಲಕ ಹಸಿರು ಪರಿಸರದಿಂದ ಕೂಡಿದ ಭೂಮಿಯನ್ನು ಸೃಷ್ಟಿಸುವ ಕಾರ್ಯದಲ್ಲಿ ಭಾಗಿಯಾಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಎಂ.ಸಿ. ನಳಿನಿ, ಶಿಕ್ಷಕರಾದ ಮಾರುತಿ ಅರೇರ್, ಎಂ.ವಿ. ರೂಪ, ಪ್ರಿಯಾಂಕ ಚಿಪಳೂಣಕರ್, ಮಹಾದೇವಿ, ದೈಹಿಕ ಶಿಕ್ಷಣ ಶಿಕ್ಷಕ ಡಿ.ಸಿ. ಕುಶಾಲಪ್ಪ, ಗೀತಾ ಮುಂತಾದವರು ಹಾಜರಿದ್ದರು.ವೀರಾಜಪೇಟೆ: ಪಾಲಂಗಾಲದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ವಿವಿಧ ಸಸಿಗಳನ್ನು ನೆಡುವ ಮೂಲಕ ಆಚರಿಸಲಾಯಿತು.

ಈ ಸಂದರ್ಭ ಕೆದಮುಳ್ಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯ ನಡಿಕೇರಿಯಂಡ ಶೀಲಾ ಮೇದಪ್ಪ, ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಪರಮೇಶ್ವರ್, ಮುಖ್ಯೋಪಾಧ್ಯಾಯ ದೇವರಾಜ್. ಬಿ.ಟಿ, ಶಿಕ್ಷಕರು, ಅಕ್ಷರ ದಾಸೋಹ ಸಿಬ್ಬಂದಿ, ಅಂಗನವಾಡಿ ಸಿಬ್ಬಂದಿ ವರ್ಗ, ಪೋಷಕರು, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಜಂಬೂರು: ಶ್ರೀ ವಿನಾಯಕ ಮಿತ್ರ ಮಂಡಳಿ ವತಿಯಿಂದ ಜಂಬೂರಿನ ಎಫ್‌ಎಂಸಿ ಬಡಾವಣೆ ಯಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ವೀರಾಜಪೇಟೆ: ಸೆಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಗಿಡ ನೆಡುವುದರ ಮೂಲಕ ಆಚರಿಸಲಾಯಿತು.

ಕಾಲೇಜಿನ ಎನ್.ಎಸ್.ಎಸ್ ಘಟಕ, ನೇಚರ್ ಕ್ಲಬ್ ಘಟಕ, ಯುವ ರೆಡ್ ಕ್ರಾಸ್ ಘಟಕ, ಅರಣ್ಯ ಇಲಾಖೆ, ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜುವಿನ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ವೀರಾಜಪೇಟೆಯ ಉಪ ಅರಣ್ಯಾಧಿಕಾರಿ ಮಧುಕುಮಾರ್ ಮಾತನಾಡಿ, ಗಿಡ ನೆಡುವುದರ ಮತ್ತು ಪರಿಸರ ಸಂರಕ್ಷಣೆಯಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೆಂಟ್ ಆನ್ಸ್ ಪದವಿ ಕಾಲೇಜಿನ ವ್ಯವಸ್ಥಾಪಕರು ಮತ್ತು ಪಿಯು ಕಾಲೇಜು ಪ್ರಾಂಶುಪಾಲರಾದ ರೆ.ಫಾ. ಮದಲೈ ಮುತ್ತು ಮಾತನಾಡಿ, ನಾವು ಪರಿಸರವನ್ನು ಸಂರಕ್ಷಿಸಿದರೆ ಮುಂದೊAದು ದಿನ ಅದು ನಮ್ಮನ್ನು ಸಂರಕ್ಷಿಸುತ್ತದೆ ಎಂದರು.

ಅತಿಥಿಗಳು ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಸಂತ ಅನ್ನಮ್ಮ ಚರ್ಚ್ನ ಪ್ರಧಾನ ಗುರುಗಳು ಮತ್ತು ವಿದ್ಯಾಸಂಸ್ಥೆಯ ವ್ಯವಸ್ಥಾಪಕ ರೆ.ಫಾ. ಜೇಮ್ಸ್ ಡೊಮಿನಿಕ್, ಪದವಿ ಕಾಲೇಜು ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ಐಕ್ಯೂಎಸಿ ಸಂಚಾಲಕಿ ಹೇಮ, ನೇಚರ್ ಕ್ಲಬ್ ಸಂಚಾಲಕ ಜೇಮ್ಸ್ ಆಂಟೋನಿ, ಯುವ ರೆಡ್ ಕ್ರಾಸ್ ಅಧಿಕಾರಿ ವಿಲೀನ ಗೋನ್ಸಾಲ್ವೇಸ್, ಪದವಿ ಹಾಗೂ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು, ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿ ಬಿ.ಎನ್. ಶಾಂತಿ ಭೂಷಣ್, ಅರಣ್ಯ ಇಲಾಖೆಯ ಹಮೀದ್ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಳ್ಳೂರು: ಸಮೀಪದ ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಮಕ್ಕಳು ಪರಿಸರ ಜಾಗೃತಿ ಮೂಡಿಸುವ ಕಿರು ನಾಟಕದ ಅಭಿನಯ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಿದರು. ಕಾರ್ಯಕ್ರಮದಲ್ಲಿ ದಿನದ ಮಹತ್ವ ಕುರಿತು ಪರಿಸರ ಪ್ರೇಮಿ ಡಾ. ರಾಮಚಂದ್ರ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ವೀರಾಜಪೇಟೆ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವೀರಾಜಪೇಟೆ ವಿಭಾಗದ ವೀರಾಜಪೇಟೆ ಪ್ರಾದೇಶಿಕ ಅರಣ್ಯ ವಲಯದ ವತಿಯಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯಿಂದ ಶಾಲಾ ಆವರಣದಲ್ಲಿ ವಿವಿಧ ಗಿಡಗಳನ್ನು ನೆಡಲಾಯಿತು.

ಬಳಿಕ ವಿದ್ಯಾರ್ಥಿಗಳಿಗೆ ಪರಿಸರ ದಿನಾಚರಣೆ ಹಾಗೂ ಗಿಡಗಳನ್ನು ನೆಡುವುದರ ಮಹತ್ವದ ಬಗ್ಗೆ ಅರಿವು ಮೂಡಿಸಲಾಯಿತು. ಪರಿಸರ ಸಂರಕ್ಷಣೆ ಮಾಡುವುದರ ಕುರಿತು ಮಾಹಿತಿ ನೀಡಲಾಯಿತು.

ಈ ಸಂದರ್ಭ ವೀರಾಜಪೇಟೆ ಡಿ.ಸಿ.ಎಫ್. ಜಗನ್ನಾಥ್ ಎನ್.ಹೆಚ್., ಎಸಿಎಫ್ ನೆಹರು ಕೆ.ಎ, ಪ್ರೊಬೇಷನರಿ ಎಸಿಎಫ್ ಮಹಾಲಕ್ಷಿ÷್ಮ, ಆರ್.ಎಫ್.ಓ ದೇವಯ್ಯ ಕೆ.ಎಂ, ಉಪ ವಲಯ ಅರಣ್ಯಾಧಿಕಾರಿ ಆನಂದ ಕೆ.ಆರ್., ಮೋನಿಷಾ ಎಂ.ಎಸ್, ಸಚಿನ್ ನಿಂಬಾಳ್ಕರ್, ಜನಾರ್ಧನ, ಸಂಜಿತ್ ಡಿ.ಪಿ., ಗಸ್ತು ಅರಣ್ಯ ಪಾಲಕ ಚಂದ್ರಶೇಖರ ಅಮರಗೋಳ, ವೀರಾಜಪೇಟೆ ಅರಣ್ಯ ಇಲಾಖೆ ಸಿಬ್ಬಂದಿಗಳು, ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಈ ಸಂದರ್ಭ ವೀರಾಜಪೇಟೆ ಡಿ.ಸಿ.ಎಫ್. ಜಗನ್ನಾಥ್ ಎನ್.ಹೆಚ್., ಎಸಿಎಫ್ ನೆಹರು ಕೆ.ಎ, ಪ್ರೊಬೇಷನರಿ ಎಸಿಎಫ್ ಮಹಾಲಕ್ಷಿ÷್ಮ, ಆರ್.ಎಫ್.ಓ ದೇವಯ್ಯ ಕೆ.ಎಂ, ಉಪ ವಲಯ ಅರಣ್ಯಾಧಿಕಾರಿ ಆನಂದ ಕೆ.ಆರ್., ಮೋನಿಷಾ ಎಂ.ಎಸ್, ಸಚಿನ್ ನಿಂಬಾಳ್ಕರ್, ಜನಾರ್ಧನ, ಸಂಜಿತ್ ಡಿ.ಪಿ., ಗಸ್ತು ಅರಣ್ಯ ಪಾಲಕ ಚಂದ್ರಶೇಖರ ಅಮರಗೋಳ, ವೀರಾಜಪೇಟೆ ಅರಣ್ಯ ಇಲಾಖೆ ಸಿಬ್ಬಂದಿಗಳು, ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಷಡಾಕ್ಷರಿ ಹಾಗೂ ಶಿಕ್ಷಕರುಗಳು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಇದ್ದರು.ಶುಪಾಲ ಷಡಾಕ್ಷರಿ ಹಾಗೂ ಶಿಕ್ಷಕರುಗಳು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಇದ್ದರು.