ಮಡಿಕೇರಿ, ಜೂ. ೬: ಜಿಲ್ಲೆಯ ವಿವಿಧೆಡೆಗಳಲ್ಲಿ ಪ್ರಸಕ್ತ ವರ್ಷ ಜನವರಿಯಿಂದ ಈತನಕ ಒಟ್ಟು ೬೮ ಡೆಂಗ್ಯೂ ಜ್ವರ ಪ್ರಕರಣಗಳು ವರದಿಯಾಗಿದ್ದು, ಆರೋಗ್ಯ ಇಲಾಖೆ ಈ ಬಗ್ಗೆ ಅಗತ್ಯ ಮುಂಜಾಗ್ರತಾ ಕ್ರಮ ವಹಿಸುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್‌ಕುಮಾರ್ ಅವರು ತಿಳಿಸಿದ್ದಾರೆ.

ತಾ. ೫ ರಂದು ಹಮ್ಮಿಯಾಲ ಗ್ರಾಮದ ಯುವಕ ಶೇಖರ್ ಎಂಬವರು ಡೆಂಗ್ಯೂ ಜ್ವರದಿಂದ ಸಾವಿಗೀಡಾಗಿರುವುದಾಗಿ ವರದಿಯಾಗಿದೆ. ಆದರೆ ಇದು ಡೆಂಗ್ಯೂ ಜ್ವರ ಎಂದು ಇನ್ನೂ ಖಚಿತವಾಗಿಲ್ಲ. ತಾ. ೪ ರಂದು ಯುವಕ ಜ್ವರದಿಂದ ಬಳಲುತ್ತಿದ್ದು, ಜಿಲ್ಲಾ ಆಸ್ಪತ್ರೆಗೆ ಬಂದಿದ್ದರು.

ಇವರಿಗೆ ಪ್ಲೇಟ್‌ಲೆಟ್ಸ್ ಕಡಿಮೆಯಿದ್ದ ಕಾರಣ ಆಸ್ಪತ್ರೆಯಲ್ಲಿ ದಾಖಲಾಗಲು ವೈದ್ಯರು ಹೇಳಿದ್ದರಾದರೂ ಇವರು ದಾಖಲಾಗದೆ ಹಿಂತಿರುಗಿದ್ದರು. ಮರುದಿನ ಮತ್ತೆ ಅಸ್ವಸ್ಥತೆಗೆ ಒಳಗಾಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆದರೆ ಇದು ಡೆಂಗ್ಯೂ ಎಂದು ಖಚಿತವಾಗಿಲ್ಲ. ಈ ಬಗ್ಗೆ ಹೆಚ್ಚಿನ ಪರೀಕ್ಷೆಗೆ ಕ್ರಮವಹಿಸಲಾಗಿದೆ. ಮೃತ ಯುವಕನಿಗೆ ಪ್ಲೇಟ್‌ಲೆಟ್ಸ್ ತೀರಾ ಕಡಿಮೆಯಿದ್ದ ಕುರಿತು ಮಾಹಿತಿ ಬಂದಿದೆ.

ಈ ಬಗ್ಗೆ ಹೆಚ್ಚಿನ ವರದಿ ಪಡೆಯಲು ಕ್ರಮ ವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಸಾಧಾರಣವಾಗಿ

(ಮೊದಲ ಪುಟದಿಂದ) ಮೇ - ಜೂನ್ ತಿಂಗಳಿನಲ್ಲಿ ಅಧಿಕ ಡೆಂಗ್ಯೂ ಪ್ರಕರಣ ಕಂಡು ಬರುತ್ತದೆ. ಕಳೆದ ಇಡೀ ವರ್ಷದಲ್ಲಿ ಜಿಲ್ಲೆಯಲ್ಲಿ ೧೬೩ ಪ್ರಕರಣಗಳು ವರದಿಯಾಗಿತ್ತು. ಈ ಬಾರಿ ಈತನಕ ೬೮ ಪ್ರಕರಣ ವರದಿಯಾಗಿದ್ದು, ಎಲ್ಲರೂ ಚೇತರಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಸದ್ಯಕ್ಕೆ ಅಗತ್ಯವಾಗಿರುವ ಪ್ಲೇಟ್‌ಲೆಟ್ಸ್ ಸಂಗ್ರಹವಿದ್ದು, ಜೂನ್ ೨೦ರ ತನಕ ಯಾವುದೇ ಸಮಸ್ಯೆ ಇಲ್ಲ ಎಂದು ಡಿಎಚ್‌ಓ ಸತೀಶ್‌ಕುಮಾರ್ ಮಾಹಿತಿ ನೀಡಿದ್ದಾರೆ.

ನಿನ್ನೆ ದಿನ ಯುವಕ ಸಾವಿಗೀಡಾದ ಪ್ರಕರಣಕ್ಕೆ ಸಂಬAಧಿಸಿದAತೆ ಇಂದು ಅವರ ನಿವಾಸಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಈ ಪ್ರದೇಶ ತೀರಾ ಗ್ರಾಮೀಣ ಭಾಗವಾಗಿದ್ದು, ಅಕ್ಕಪಕ್ಕದಲ್ಲಿ ಇತರ ಮನೆಗಳಿಲ್ಲ. ಅಲ್ಲದೆ ಸೊಳ್ಳೆಗಳು ಉತ್ಪತ್ತಿಯಾಗುವಂತಹ ಲಕ್ಷಣಗಳು ಕಂಡು ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.