ಮಡಿಕೇರಿ, ಜೂ. ೬: ಕೊಡಗು ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳನ್ನು ಒಳಗೊಂಡ ಕರ್ನಾಟಕ ವಿಧಾನ ಪರಿಷತ್ತಿನ ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಬೆಂಬಲಿತ ಅಭ್ಯರ್ಥಿ ಎಸ್.ಎಲ್. ಬೋಜೇಗೌಡ ಭರ್ಜರಿ ಜಯ ಸಾಧಿಸಿ ಮೇಲ್ಮನೆ ಪ್ರವೇಶಿಸುವಲ್ಲಿ ೨ನೇ ಬಾರಿಗೆ ಯಶಸ್ವಿಯಾಗಿದ್ದಾರೆ.

ಮೊದಲ ಪ್ರಾಶಸ್ತö್ಯ ಮತಗಳ ಲ್ಲಿಯೇ ೯.೮೨೯ ಮತಗಳನ್ನು ಪಡೆ ಯುವ ಮೂಲಕ ಬೋಜೇಗೌಡ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತರಾಗಿ ಸ್ಪರ್ಧಿಸಿದ್ದ ಕೊಡಗು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್ ೪.೫೬೨ ಮತಗಳನ್ನು ಪಡೆದುಕೊಂಡು ಸೋಲಿಗೆ ಶರಣಾದರು.

ಮೈಸೂರಿನ ಜೆಎಲ್‌ಬಿ ರಸ್ತೆಯಲ್ಲಿ ರುವ ಮಹಾರಾಣಿ ವಿಜ್ಞಾನ ಕಾಲೇಜಿ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಶಾಂತಿ ಯುತವಾಗಿ ನಡೆಯಿತು. ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು ೨೩,೪೦೨ ಮತದಾರರಿದ್ದು, ಈ ಪೈಕಿ ೧೯,೪೭೯ ಮತಗಳು ಚಲಾವಣೆಗೊಂಡಿದ್ದವು. ಕೊಡಗಿನಲ್ಲಿ ೧,೫೭೮ ಶಿಕ್ಷಕ ಮತದಾರರ ಪೈಕಿ ೧,೩೭೧ ಮಂದಿ ಮತದಾನ ಮಾಡಿದ್ದರು. ಪದವೀಧರ ಕ್ಷೇತ್ರದಲ್ಲಿ ಒಟ್ಟು ೮೫,೦೮೯ ಮತಗಳ ಪೈಕಿ ೬೬,೫೨೯ ಮತಗಳು ಚಲಾವಣೆಗೊಂಡಿ ದ್ದವು. ಕೊಡಗು ಜಿಲ್ಲೆಯಲ್ಲಿ ೩,೯೦೯ ಪದವೀಧರ ಮತದಾರರ ಪೈಕಿ ೩,೧೭೦ ಮತದಾನ ನಡೆದಿತ್ತು.

ವಿಧಾನ ಪರಿಷತ್ ಚುನಾವಣೆ ಸಂಬAಧ ಪ್ರಾದೇಶಿಕ ಆಯುಕ್ತÀ ಡಾ. ಜಿ.ಸಿ. ಪ್ರಕಾಶ್ ಹಾಗೂ ಚುನಾವಣೆ ವೀಕ್ಷಕ ಡಾ. ಜೆ. ರವಿಶಂಕರ್ ಅವರ ಸಮ್ಮುಖದಲ್ಲಿ ಭದ್ರತಾ ಕೊಠಡಿ ತೆರೆದು ಮತಪೆಟ್ಟಿಗೆಗಳನ್ನು ಎಣಿಕೆ ಕೇಂದ್ರಕ್ಕೆ ರವಾನಿಸಲಾಯಿತು. ೧೪ ಟೇಬಲ್‌ಗಳಲ್ಲಿ ಎಣಿಕೆ ನಡೆಯಿತು. ಪ್ರತಿ ಟೇಬಲ್‌ಗೂ ಒಬ್ಬರು ಮೇಲ್ವಿಚಾರಕರು, ಇಬ್ಬರು ಸಹಾಯಕರು ನಿಯೋಜನೆಗೊಂಡಿ ದ್ದರು. ಮತಪತ್ರಗಳನ್ನು ತಲಾ ೨೫ ಬಂಡಲ್‌ಗಳAತೆ ಮಾಡಿ ಮತ ಎಣಿಕೆ ಆರಂಭಿಸಲಾಯಿತು. ಪ್ರಾಶಸ್ತö್ಯ ಮತಗಳ ಆಧಾರದಲ್ಲಿ ಎಣಿಕೆ ಹಿನ್ನೆಲೆ ಪ್ರಕ್ರಿಯೆಗೆ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಂಡಿತು.

ರಾಜಕೀಯ ಪಕ್ಷಗಳ ಚಿಹ್ನೆಯಡಿ ಈ ಚುನಾವಣೆ ನಡೆಯದಿದ್ದರು, ಮೇಲ್ಮನೆ ಪ್ರತಿನಿಧಿಯಾಗುವ ಹಿನ್ನೆಲೆ ರಾಜಕೀಯ ಪಕ್ಷಗಳಿಗೆ ಈ ಚುನಾ ವಣೆ ಮಹತ್ವ ಎನಿಸಿಕೊಂಡಿತ್ತು. ಈ ಬಾರಿ ಕಾಂಗ್ರೆಸ್ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ಕಂಡು ಬಂದಿತ್ತು. ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಹಾಲಿ ಸದಸ್ಯ ಎಸ್.ಎಲ್. ಬೋಜೇಗೌಡ ಹಾಗೂ ಹಿಂದಿನ

(ಮೊದಲ ಪುಟದಿಂದ) ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಯಾಗಿ ಸ್ಪರ್ಧಿಸಿ ೧೭೩ ಮತಗಳ ಅಂತರದಿAದ ಸೋಲು ಅನುಭವಿಸಿದ್ದ ಕೆ.ಕೆ. ಮಂಜುನಾಥ್ ಕುಮಾರ್ ಕಾಂಗ್ರೆಸ್ ಬೆಂಬಲಿತರಾಗಿ ಸ್ಪರ್ಧಿ ಸಿದ್ದರು. ಕಳೆದ ಚುನಾವಣೆಯಲ್ಲಿ ಮಂಜುನಾಥ್ ಅಲ್ಪ ಮತಗಳ ಸೋಲು ಕಂಡಿದ್ದ ಹಿನ್ನೆಲೆ ಈ ಬಾರಿ ಇವರಿಬ್ಬರ ನಡುವೆ ಗೆಲುವಿಗಾಗಿ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಕೊನೆಗೆ ಬೋಜೇಗೌಡ ಅವರೇ ಹೆಚ್ಚಿನ ಮತಗಳಿಸಿ ಗೆಲುವು ಪಡೆದು ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಶಿಕ್ಷಕರ ಕ್ಷೇತ್ರದ ಫಲಿತಾಂಶ

ಶಿಕ್ಷಕರ ಕ್ಷೇತ್ರಕ್ಕೆ ಒಟ್ಟು ೮ ಮಂದಿ ಸ್ಪರ್ಧಿಸಿದ್ದರು. ಈ ಪೈಕಿ ಬೋಜೇಗೌಡ ೯,೮೨೯ ಮತಗಳನ್ನು ಪಡೆದು ಗೆಲುವು ದಾಖಲಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ. ಮಂಜುನಾಥ್ ಕುಮಾರ್ ೪,೫೬೨ ಮತಗಳು, ಪಕ್ಷೇತರರಾಗಿ ಸ್ಪರ್ಧಿಸಿದ್ದ ಡಾ. ಅರುಣ್ ಹೊಸಕೊಪ್ಪ ೧,೧೮೫, ಡಾ. ನರೇಶ್ಚಂದ್ ಹೆಗ್ಡೆ ೧೮೪, ನಂಜೇಶ್ ಬೆಣ್ಣೂರು ೬೨೧, ಟಿ. ಭಾಸ್ಕರ್ ಶೆಟ್ಟಿ ೭೩, ಕೆ.ಕೆ. ಮಂಜುನಾಥ್ ಕುಮಾರ್ ೧೦೩, ಡಾ. ಎಸ್.ಆರ್. ಹರೀಶ್ ಆಚಾರ್ಯ ೨೧೦೧ ಮತಗಳಿಸಿ ಕೊಂಡರು. ಇದರೊಂದಿಗೆ ೮೨೧ ಮತಗಳು ತಿರಸ್ಕೃತಗೊಂಡವು.

ಪದವೀಧರ ಕ್ಷೇತ್ರದ ಫಲಿತಾಂಶ

ಪದವೀಧರ ಕ್ಷೇತ್ರಕ್ಕೆ ಮೈತ್ರಿ ಅಭ್ಯರ್ಥಿಯಾಗಿ ಡಾ. ಧನಂಜಯ ಸರ್ಜಿ, ಎಂ.ಎಲ್.ಸಿ. ಸ್ಥಾನ ತೊರೆದು, ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದ ಆಯನೂರು ಮಂಜುನಾಥ್ ಹಾಗೂ ಬಿಜೆಪಿಯಿಂದ ಟಿಕೆಟ್ ಸಿಗದ ಹಿನ್ನೆಲೆ ಪಕ್ಷೇತರರಾಗಿ ಸ್ಪರ್ಧಿಸಿದ್ದ ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಕಣದಲ್ಲಿರುವುದರಿಂದ ಫಲಿತಾಂಶದ ಕುರಿತು ಹೆಚ್ಚಿನ ಕೌತುಕ ಮೂಡುವಂತೆ ಮಾಡಿದೆ.

ಪದವೀಧರ ಕ್ಷೇತ್ರಕ್ಕೆ ಪಕ್ಷೇತರರಾಗಿ ಸ್ಪರ್ಧಿಸಿದ್ದ ಮಾಜಿ ಶಾಸಕ ಕೆ. ರಘುಪತಿ ಭಟ್, ಜಿ.ಸಿ. ಪಟೇಲ್, ದಿನಕರ ಉಳ್ಳಾಲ್, ಎಸ್.ಪಿ. ದಿನೇಶ್, ಬಿ. ಮಹಮ್ಮದ್ ತುಂಬೆ, ಡಾ. ಶೇಖ್ ಬಾವ, ಜಿ.ಆರ್. ಷಡಾಕ್ಷರಪ್ಪ, ಷಹಾರಾಜ್ ಮುಜಾಹಿದ್ ಸಿದ್ದಿಕ್ಕಿ. ಅವರುಗಳ ಫಲಿತಾಂಶದ ಏಣಿಕೆ ಪ್ರಗತಿಯಲ್ಲಿದೆ.