೪ಕೋವರ್‌ಕೊಲ್ಲಿ ಇಂದ್ರೇಶ್

ನವದೆಹಲಿ, ಜೂ. ೬: ಈ ಬಾರಿಯ ದೇಶದ ಎಲ್ಲಾ ಚುನಾವಣಾ ಸಮೀಕ್ಷೆಗಳೂ ಭಾರೀ ಏರುಪೇರಾಗಿವೆ. ಇದು ತೀವ್ರ ಟೀಕೆಗೂ ಗುರಿಯಾಗಿದ್ದು ಮಾಧ್ಯಮಗಳ ವಿಶ್ವಾಸಾ ರ್ಹತೆಗೆ ಧಕ್ಕೆ ಆಗಿದೆ. ಸಮೀಕ್ಷೆಗಳ ಪ್ರಕಾರ ೩೦೦ ಪ್ಲಸ್ ಸ್ಥಾನ ಪಡೆಯಬೇಕಿದ್ದ ಬಿಜೆಪಿ ೨೪೦ ಸ್ಥಾನ ಪಡೆಯಲು ಸಾಧ್ಯವಾಗಿದ್ದರೂ ದೇಶದ ಶೇಕಡಾವಾರು ಮತಗಳಿಕೆ ನೋಡಿದಾಗ ಬಿಜೆಪಿಗೆ ತೀವ್ರ ಹಿನ್ನಡೆ ಏನೂ ಆಗಿಲ್ಲ.

೨೦೨೪ ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಒಟ್ಟು ಚಲಾವಣೆ ಆದ ಮತಗಳ ಶೇಕಡಾ ೩೬.೫೬ ರಷ್ಟು ಗಳಿಸಿತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ರಾಜಕೀಯ ಪಕ್ಷವು ೨೦೧೯ ರ ಲೋಕಸಭಾ ಚುನಾವಣೆಯಲ್ಲಿ ಶೇಕಡಾ ೩೭.೭ ರಷ್ಟು ಮತಗಳನ್ನು ಗಳಿಸಿತ್ತು. ಆದರೆ ಸುಮಾರು ೧ ಪ್ರತಿಶತದಷ್ಟು ಕುಸಿತವು ಬಿಜೆಪಿಗೆ ದುಬಾರಿ ಆಗಿ ಪರಿಣಮಿಸಿದ್ದು ಬರೋಬ್ಬರಿ ೬೩ ಲೋಕಸಭಾ ಸ್ಥಾನಗಳನ್ನು ಕಳೆದುಕೊಂಡಿದೆ.

ಇದೇ ಸಮಯದಲ್ಲಿ ಕಾಂಗ್ರೆಸ್ ಡಬಲ್ ಧಮಾಕ ಪಡೆದುಕೊಂಡಿದೆ. ಕಳೆದ ಚುನಾವಣೆಯಲ್ಲಿ ಶೇ.೧೯.೫ರಷ್ಟು ಮತಗಳನ್ನು ಪಡೆದಿದ್ದ ಪಕ್ಷ ಈ ಬಾರಿ ಶೇ.೨೧.೨ರಷ್ಟು ಮತಗಳನ್ನಷ್ಟೇ ಪಡೆದುಕೊಂಡಿದೆ. ಅಂದರೆ ಶೇ. ೧.೭ರಷ್ಟು ಮತಗಳು ಹೆಚ್ಚಿಗೆ ಪಡೆದುಕೊಂಡಿದ್ದರೂ ಸೀಟುಗಳ ಸಂಖ್ಯೆ ೫೨ ರಿಂದ ೯೯ ಕ್ಕೆ ಜಿಗಿತ ಕಂಡಿವೆ. ಚುನಾವಣೆಗಳಲ್ಲಿ ಮತಗಳಿಕೆಯ ಶೇಕಡಾವಾರು ವ್ಯತ್ಯಾಸ ಅಲ್ಪ ಪ್ರಮಾಣದ್ದೇ ಆಗಿದ್ದರೂ ಸ್ಥಾನಗಳ ವಿಚಾರದಲ್ಲಿ ಅಗಾಧ ವ್ಯತ್ಯಾಸಕ್ಕೆ ಕಾರಣ ಆಗಿರುವುದು ಅಂಕಿ ಅಂಶಗಳಿAದ ಧೃಢಪಟ್ಟಿದೆ. ಇದು ಎರಡೂ ಪಕ್ಷಗಳು ಪಡೆದ ಸ್ಥಾನಗಳಲ್ಲಿ ಪ್ರತಿಫಲನಗೊಂಡಿದೆ.

(ಮೊದಲ ಪುಟದಿಂದ) ಉದಾಹರಣೆಗೆ ತಮಿಳುನಾಡಿನಲ್ಲಿ ಈ ಬಾರಿ ಬಿಜೆಪಿ ಮತಗಳಿಗೆ ಶೇಕಡಾ ೮ ರಷ್ಟು ಹೆಚ್ಚಾಗಿದೆ. ೨೦೧೯ರಲ್ಲಿ ಬಿಜೆಪಿ ತಮಿಳುನಾಡಿನಲ್ಲಿ ಪಡೆದಿದ್ದ ಶೇಕಡಾವಾರು ಮತ ಶೇಕಡಾ ೩.೨ ರಷ್ಟಿತ್ತು. ಅದು ಈ ಬಾರಿ ಶೇಕಡಾ ೧೧.೨ ಕ್ಕೆ ಏರಿಕೆ ಆಗಿದೆ. ಬಿಜೆಪಿ ದಕ್ಷಿಣದ ರಾಜ್ಯಗಳಲ್ಲಿ ಬಲವರ್ಧನೆ ಆಗುತ್ತಿರುವುದನ್ನು ಇದು ಸೂಚಿಸುತ್ತದೆ. ಆದರೆ ಶೇಕಡಾವಾರು ೮ ರಷ್ಟು ಹೆಚ್ಚು ಮತಗಳಿಕೆ ಮಾಡಿದ್ದರೂ ತಮಿಳುನಾಡಿನಲ್ಲಿ ಬಿಜೆಪಿ ಒಂದು ಸ್ಥಾನವನ್ನೂ ಪಡೆಯಲು ಸಾಧ್ಯವಾಗಿಲ್ಲ. ಕೇರಳದಲ್ಲಿ ಬಿಜೆಪಿ ಮತಗಳಿಕೆ ಕಳೆದ ಬಾರಿ ಶೇಕಡಾ ೧೫ ರಷ್ಟಿತ್ತು. ಈ ಬಾರಿ ಶೇಕಡಾ ೨೦ ರಷ್ಟು ಮತ ಪಡೆದಿದ್ದರೂ ತ್ರಿಶೂರಿನಲ್ಲಿ ಬಿಜೆಪಿ ಒಂದು ಸ್ಥಾನ ಪಡೆದಿದೆ. ತಿರುವನಂತಪುರದಲ್ಲಿ ಉದ್ಯಮಿ ರಾಜೀವ್ ಚಂದ್ರಶೇಖರ್ ೧೬ ಸಾವಿರ ಮತಗಳ ಅಂತರದಿAದ ಶಶಿ ತರೂರ್ ಎದುರು ಸೋತಿದ್ದಾರೆ.

ಪಂಜಾಬ್‌ನಲ್ಲಿ ಬಿಜೆಪಿ ಮತಗಳು ಶೇಕಡಾ ೯.೬ ರಿಂದ ೧೮.೬ ಕ್ಕೆ ಏರಿಕೆ ಆಗಿದೆ. ಆದರೆ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದ ಕಾರಣ ಭಾರತೀಯ ಜನತಾ ಪಕ್ಷ ಈ ಹಿಂದೆ ಗೆದ್ದಿದ್ದ ಎರಡೂ ಸ್ಥಾನಗಳನ್ನು ಕಳೆದುಕೊಳ್ಳ ಬೇಕಾಯಿತು. ಬಿಹಾರದಲ್ಲಿ ಬಿಜೆಪಿ ಮತಗಳಿಕೆ ಶೇ.೨೩.೬ ರಿಂದ ಶೇ.೨೦.೫ಕ್ಕೆ ಕುಸಿದಿದ್ದು ಬಿಜೆಪಿ ಐದು ಸ್ಥಾನಗಳನ್ನು ಕಳೆದುಕೊಂಡಿದೆ. ಬಂಗಾಳದಲ್ಲಿ ಬಿಜೆಪಿ ಶೇ.೧.೬ರಷ್ಟು ಮತಗಳನ್ನು ಕಳೆದುಕೊಂಡಿದ್ದರಿAದ ಆರು ಸ್ಥಾನಗಳನ್ನು ಕಳೆದುಕೊಳ್ಳ ಬೇಕಾಯಿತು. ೨೦೧೯ ರಲ್ಲಿ ಬಂಗಾಳದಲ್ಲಿ ಬಿಜೆಪಿ ೧೮ ಸ್ಥಾನಗಳನ್ನು ಗೆದ್ದಿತ್ತು, ಆದರೆ ಈ ಬಾರಿ ಅದು ೧೨ ಕ್ಕೆ ಸೀಮಿತವಾಗಿದೆ. ಮಹಾರಾಷ್ಟçದಲ್ಲಿ ಪಕ್ಷದ ಮತಗಳ ಪ್ರಮಾಣವು ಶೇಕಡಾ ೨೭.೮೪ ರಿಂದ ಶೇಕಡಾ ೨೬.೪೫ ಕ್ಕೆ ಇಳಿದಿದೆ. ಶೇಕಡಾ ೧.೪ರಷ್ಟು ಮಾತ್ರ ಕಡಿಮೆ ಮತ ಪಡೆದಿದ್ದರೂ ಮಹಾರಾಷ್ಟçದಲ್ಲಿ ಸೀಟುಗಳ ಸಂಖ್ಯೆ ೨೩ ರಿಂದ ೯ಕ್ಕೆ ಕುಸಿದಿದೆ.

ಬಿಜೆಪಿಯ ನಷ್ಟ ಕಾಂಗ್ರೆಸ್‌ಗೆ ವರವಾಗಿದೆ. ಮಹಾರಾಷ್ಟçದಲ್ಲಿ ಕಾಂಗ್ರೆಸ್ ೧೬.೩ ಪ್ರತಿಶತದಿಂದ ೧೭.೧ಕ್ಕೆ ಮತಗಳನ್ನು ಹೆಚ್ಚಿಸಿಕೊಂಡಿದೆ. ಶೇಕಡಾ ೦.೮ ರಷ್ಟು ಹೆಚ್ಚು ಮತಗಳಿಕೆ ಮಾಡಿರುವ ಕಾಂಗ್ರೆಸ್ ೨೦೧೯ ರಲ್ಲಿ ಒಂದು ಸ್ಥಾನ ಪಡೆದಿದ್ದು ಈ ಬಾರಿ ತನ್ನ ಸಂಖ್ಯೆಯನ್ನ ೧೩ಕ್ಕೆ ಹೆಚ್ಚಿಸಿ ಕೊಂಡಿದೆ. ರಾಜಸ್ಥಾನದಲ್ಲಿ, ಅದು ಶೇ ೩.೭ರಷ್ಟು ಹೆಚ್ಚು ಮತ ಪಡೆಯುವ ಮೂಲಕ ಶೂನ್ಯದಿಂದ ಎಂಟು ಸ್ಥಾನಗಳನ್ನು ಗಳಿಸಿದೆ. ಉತ್ತರ ಪ್ರದೇಶದಲ್ಲಿ ಶೇಕಡಾ ೬.೩ ರಿಂದ ೯.೫ ಕ್ಕೆ ಕಾಂಗ್ರೆಸ್ ತನ್ನ ವೋಟ್ ಶೇರ್ ಹೆಚ್ಚು ಮಾಡಿಕೊಂಡಿದ್ದು ಒಂದು ಸ್ಥಾನದಿಂದ ಆರು ಸ್ಥಾನಗಳಿಗೆ ಜಿಗಿದಿದೆ. ಇಲ್ಲಿ ಸಮಾಜವಾದಿ ಪಕ್ಷದ ಮತಗಳ ಪ್ರಮಾಣವು ಶೇ ೧೮ ರಿಂದ ಶೇ ೩೩.೫ಕ್ಕೆ ಏರಿಕೆ ಆಗಿದ್ದು ಪಕ್ಷವು ತನ್ನ ಇತಿಹಾಸದಲ್ಲೇ ದಾಖಲೆಯ ೩೭ ಸ್ಥಾನಗಳನ್ನು ಗೆದ್ದು ಹೊರಹೊಮ್ಮಿದೆ. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ೨೦೧೯ರಲ್ಲಿ ಶೇಕಡಾ ೧೮.೨ ರಷ್ಟು ಮತ ಪಡೆದಿತ್ತು. ಈ ಬಾರಿ ಅದು ಶೇಕಡಾ ೨೪.೧೪ ಕ್ಕೆ ಮತಗಳಿಕೆ ಪ್ರಮಾಣ ಹೆಚ್ಚಿಸಿ ಕೊಂಡಿದ್ದರೂ ಸ್ಥಾನ ಪಡೆಯುವಲ್ಲಿ ವಿಫಲವಾಗಿದೆ. ಇಲ್ಲಿ ೭ ಸ್ಥಾನಗಳನ್ನೂ ಬಿಜೆಪಿ ಗೆದ್ದುಕೊಂಡಿದೆ.