ಸೋಮವಾರಪೇಟೆ, ಜೂ. ೭: ತಾಲೂಕಿನ ಕೂತಿ ಗ್ರಾಮದಲ್ಲಿ ವಿದ್ಯುತ್ ಮಾರ್ಗಕ್ಕೆ ತಡೆಯಾಗಿದ್ದ ಮರದ ರೆಂಬೆಗಳನ್ನು ಗ್ರಾಮಸ್ಥರೇ ಶ್ರಮದಾನದ ಮೂಲಕ ತೆರವು ಮಾಡಿ ವಿದ್ಯುತ್ ಮಾರ್ಗ ಸುಗಮಗೊಳಿಸಿದರು. ತೋಳೂರುಶೆಟ್ಟಳ್ಳಿ, ಹರಪಳ್ಳಿ ಮುಖ್ಯ ರಸ್ತೆಯಿಂದ ಕೂತಿ ಗ್ರಾಮದ ಕೆರೆಕೊಪ್ಪ, ಹೊಸಮನೆ, ದೀಣೆಕೇರಿ ಭಾಗದ ರಸ್ತೆಗಳಲ್ಲಿ ಬಾಗಿದ್ದ ಮರಗಳು ಹಾಗೂ ೧೧ಕೆವಿ ಮತ್ತು ಸರ್ವಿಸ್ ಲೈನ್ ವಿದ್ಯುತ್ ತಂತಿಮೇಲೆ ಬೀಳುವ ಹಂತದಲ್ಲಿದ್ದ ಚಿಕ್ಕಪುಟ್ಟ ಮರಗಳ ರೆಂಬೆ-ಕೊAಬೆಗಳನ್ನು ಶ್ರಮದಾನದ ಮೂಲಕ ತೆರವು ಮಾಡಿದರು.

ಪ್ರತಿ ಮಳೆಗಾಲದಲ್ಲೂ ಮರದ ಕೊಂಬೆಗಳಿAದ ಗ್ರಾಮಕ್ಕೆ ವಿದ್ಯುತ್ ವ್ಯತ್ಯಯವಾಗುತ್ತಿತ್ತು. ವಿದ್ಯುತ್ ತಂತಿಗಳು ಹಾದು ಹೋಗಿರುವ ಪ್ರದೇಶದಲ್ಲಿ ಮರದ ಕೊಂಬೆಗಳು ಗಾಳಿ ಮಳೆಗೆ ಬಿದ್ದು, ವಾರಗಟ್ಟಲೆ ಕತ್ತಲೆಯಲ್ಲಿ ರಾತ್ರಿ ಕಳೆಯುವ ಸ್ಥಿತಿ ನಿರ್ಮಾಣವಾಗುತ್ತಿತ್ತು. ಈ ಹಿನ್ನೆಲೆ ವಿದ್ಯುತ್ ಇಲಾಖೆಯ ಸಹಕಾರ ದೊಂದಿಗೆ ಗ್ರಾಮಸ್ಥರು ಸೇರಿ ಅಪಾಯಕಾರಿ ಮರಗಳ ರೆಂಬೆ ಕೊಂಬೆಗಳನ್ನು ತೆರವುಗೊಳಿಸಲಾಗಿದೆ ಎಂದು ಕೂತಿ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎ. ಜಯರಾಮ್ ತಿಳಿಸಿದರು.

ಶ್ರಮದಾನದಲ್ಲಿ ಸಮಿತಿ ಉಪಾಧ್ಯಕ್ಷ ಕೆ.ಡಿ. ಗಿರೀಶ್, ಕಾರ್ಯದರ್ಶಿ ಯಾದವ್ ಕುಮಾರ್, ಖಜಾಂಚಿ ಲಕ್ಷö್ಮಣ್, ಭರತ್, ಭಾನುಪ್ರಸಾದ್, ಲೈನ್‌ಮನ್ ನಾಗೇಂದ್ರ ಸೇರಿದಂತೆ ಗ್ರಾಮಸ್ಥರು ಭಾಗಿಯಾಗಿದ್ದರು.