ಸುಂಟಿಕೊಪ್ಪ, ಜೂ. ೭: ಚೆಟ್ಟಳ್ಳಿ ರಸ್ತೆಯ ಬಳಿ ಶ್ರೀದೇವಿ ತೋಟದಲ್ಲಿದ್ದ ಒಣಗಿದ ಬೃಹತ್ ಮರ ಬಿದ್ದು ಎರಡು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಮರ ಬುಡ ಸಹಿತ ರಸ್ತೆಗೆ ಬಿದ್ದಿದ್ದು, ಯಾವುದೇ ವಾಹನಗಳು, ಪಾದಚಾರಿ ಗಳಿಲ್ಲದ್ದರಿಂದ ಪ್ರಾಣಹಾನಿ ಸಂಭವಿಸಲಿಲ್ಲ. ಇದರಿಂದ ಸುಂಟಿಕೊಪ್ಪ- ಚೆಟ್ಟಳ್ಳಿಗೆ ತೆರಳುವ ವಾಹನಗಳಿಗೆ ಕೆಲಕಾಲ ಅಡ್ಡಿಯಾಯಿತು.