ನಾಪೋಕ್ಲು, ಜೂ. ೭: ಸಮೀಪದ ಹಳೆ ತಾಲೂಕಿನಲ್ಲಿ ಆಟೋರಿಕ್ಷಾ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಆಟೋದಲ್ಲಿದ್ದ ಪ್ರಯಾಣಿಕರಿಗೆ ಗಂಭೀರ ಗಾಯಗಳಾದ ಘಟನೆ ಶುಕ್ರವಾರ ಸಂಭವಿಸಿದೆ.

ನಾಪೋಕ್ಲುವಿನಿAದ ಕೊಳಕೇರಿಯತ್ತ ತೆರಳುತ್ತಿದ್ದ ಆಕಾಶ್ ಎಂಬುವರ ಕಾರು (ಏಂ ೦೧ ಒಈ ೯೬೦೩) ಹಾಗೂ ಕೊಳಕೇರಿಯಿಂದ ನಾಪೋಕ್ಲುವಿಗೆ ಬರುತ್ತಿದ್ದ ಸಮ್ಮದ್ ಎಂಬವರಿಗೆ ಸೇರಿದ ಆಟೋರಿಕ್ಷಾ (ಏಂ ೧೨ ಃ ೧೭೬೬ ) ನಡುವೆ ಮುಖಾಮುಖಿ ಡಿಕ್ಕಿ ಆಗಿದ್ದು, ಕೊಳಕೇರಿ -ನಾಪೋಕ್ಲು ರಸ್ತೆಯ ಹಳೆ ತಾಲೂಕು ಸಮೀಪದ ನೂರಂಬಾಡ ಎಂಬಲ್ಲಿ ನಡೆದಿದ್ದು ಅಪಘಾತದ ರಭಸಕ್ಕೆ ಆಟೋರಿಕ್ಷಾ ಪಲ್ಟಿಯಾಗಿದೆ. ಆಟೋ ಚಾಲಕ ಹಾಗೂ ಮೂವರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

-ದುಗ್ಗಳ