ಮಡಿಕೇರಿ, ಜೂ. ೭: ಅತ್ಯಂತ ಕೌತುಕ ಮೂಡಿಸಿದ್ದ ನೈಋತ್ಯ ಪದವೀಧರ ಕ್ಷೇತ್ರದ ಚುನಾವಣಾ ಫಲಿತಾಂಶ ಘೋಷಣೆಯಾಗಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಚೊಚ್ಚಲ ಪ್ರಯತ್ನದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಮೇಲ್ಮನೆಗೆ ಪ್ರವೇಶಿಸುವÀಲ್ಲಿ ಯಶಸ್ವಿಯಾಗಿದ್ದಾರೆ.

ಡಾ. ಧನಂಜಯ ಸರ್ಜಿ ೩೭,೬೨೭ ಮೊದಲ ಪ್ರಾಶಸ್ತö್ಯ ಮತಗಳನ್ನು ಪಡೆಯುವ ಮೂಲಕ ಗೆಲುವು ದಾಖಲಿಸಿದರೆ, ಪೈಪೋಟಿ ನೀಡಿದ ಕಾಂಗ್ರೆಸ್ ಬೆಂಬಲಿತ ಆಯನೂರು ಮಂಜುನಾಥ್ ೧೩,೫೧೬ ಮತಗಳು, ಬಿಜೆಪಿಯಿಂದ ಟಿಕೆಟ್ ಲಭಿಸದೆ ಪಕ್ಷೇತರರಾಗಿ ಸ್ಪರ್ಧಿಸಿದ್ದ ಉಡುಪಿ ಮಾಜಿ ಶಾಸಕ ಕೆ. ರಘುಪತಿ ಭಟ್ ೭,೦೩೯ ಮತಗಳನ್ನು ಪಡೆದು ಸೋಲಿಗೆ ಶರಣಾದರು. ಈ ಮೂಲಕ ಧನಂಜಯ ಅವರು ೨೪,೧೧೧ ಮತಗಳ ಅಂತರದ ಭರ್ಜರಿ ಗೆಲುವು ತಮ್ಮದಾಗಿಸಿಕೊಂಡರು.

ಮೈಸೂರಿನ ಜೆಎಲ್‌ಬಿ ರಸ್ತೆಯಲ್ಲಿರುವ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಮತ ಎಣಿಕೆ ಪ್ರಕ್ರಿಯೆಯು ತಡ ರಾತ್ರಿ ತನಕ ನಡೆಯಿತು. ಶಿಕ್ಷಕರ ಕ್ಷೇತ್ರದ ಚುನಾವಣೆ ಫಲಿತಾಂಶ ತಾ. ೬ ರ ಸಂಜೆ ೬ ಗಂಟೆ ಹೊತ್ತಿಗೆ ಹೊರಬಿದ್ದು, ಮೈತ್ರಿ ಅಭ್ಯರ್ಥಿ ಎಸ್.ಎಲ್. ಭೋಜೇಗೌಡ ಗೆಲುವು ಸಾಧಿಸಿದ್ದರು. ಆದರೆ, ಪದವೀಧರ ಕ್ಷೇತ್ರದಲ್ಲಿ ಹೆಚ್ಚಿನ ಮತದಾರರಿರುವ ಹಿನ್ನೆಲೆ ಮತ ಎಣಿಕೆಗೆ ಹೆಚ್ಚು ಸಮಯ ತೆಗೆದುಕೊಂಡು ಮಧ್ಯರಾತ್ರಿ ತನಕ ಮುಂದುವರೆಯಿತು.

ಪದವೀಧರ ಕ್ಷೇತ್ರದಲ್ಲಿ ಒಟ್ಟು ೮೫,೦೮೯ ಮತಗಳ ಪೈಕಿ ೬೬,೫೨೯ ಮತಗಳು ಚಲಾವಣೆಗೊಂಡಿದ್ದವು. ಕೊಡಗು ಜಿಲ್ಲೆಯಲ್ಲಿ ೩,೯೦೯ ಪದವೀಧರ ಮತದಾರರ ಪೈಕಿ ೩,೧೭೦ ಮತದಾನ ನಡೆದಿತ್ತು.

ಬಂಡಾಯ, ಪ್ರಬಲ ಪೈಪೋಟಿ ನಡುವೆ

ನಿರಾಯಾಸದ ಗೆಲುವು

ಬಂಡಾಯ, ಪ್ರಬಲ ಪೈಪೋಟಿಯ ನಡುವೆಯೂ ಡಾ. ಧನಂಜಯ ಸರ್ಜಿ ನಿರಾಯಾಸದ ಗೆಲುವು ದಾಖಲಿಸಿದ್ದಾರೆ. ಹಿಂದಿನ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯಿಂದ ಜಯ ಸಾಧಿಸಿ ವಿಧಾನ ಪರಿಷತ್ತಿನಲ್ಲಿ ಪ್ರತಿನಿಧಿಯಾಗಿದ್ದ ಆಯನೂರು ಮಂಜುನಾಥ್ ಒಂದು ವರ್ಷದ ಹಿಂದೆ ಬಿಜೆಪಿ ಹಾಗೂ ತಮ್ಮ ಎಂ.ಎಲ್.ಸಿ. ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿ ಈ ಬಾರಿ ಸ್ಪರ್ಧೆಗಿಳಿದಿದ್ದರು. ಇದರೊಂದಿಗೆ ಉಡುಪಿಯ ಮಾಜಿ ಶಾಸಕ, ಹಿಂದೂಪರ ಪ್ರಬಲ ನಾಯಕ ಎಂದು ಕರೆಸಿಕೊಳ್ಳುವ ಕೆ. ರಘುಪತಿ ಭಟ್ ಬಿಜೆಪಿಯಿಂದ ಟಿಕೆಟ್ ಸಿಗದೆ ಪಕ್ಷೇತರರಾಗಿ ಸ್ಪರ್ಧಿಸಿ ಕಣದಲ್ಲಿರುವುದರಿಂದ ತ್ರಿಕೋನ ಹಣಾಹಣಿ ಏರ್ಪಟ್ಟು, ಈ ಕ್ಷೇತ್ರದ ಫಲಿತಾಂಶದ ಮೇಲೆ ಹೆಚ್ಚಿನ ಕುತೂಹಲ ಸೃಷ್ಟಿಯಾಗಿತ್ತು.

ಆಯನೂರು ಮಂಜುನಾಥ್ ಅವರು ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಹಾಗೂ ವಿಧಾನ ಪರಿಷತ್ತಿಗೆ ಚುನಾಯಿತಗೊಂಡು ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಹೀಗೆ ನಾಲ್ಕು ಸದನಗಳಲ್ಲಿ ಕಾರ್ಯ ನಿರ್ವಹಿಸಿದವರು ದೇಶದಲ್ಲಿ ನಾಲ್ಕು ಜನ ಮಾತ್ರ ಈ ಪೈಕಿ ಮಂಜುನಾಥ್ ಅವರು ಮಾತ್ರ ಸಕ್ರಿಯ ರಾಜಕಾರಣ ದಲ್ಲಿ ಉಳಿದುಕೊಂಡಿದ್ದಾರೆ. ರಾಜಕಾರಣದಲ್ಲಿ ಅಪಾರ ಅನುಭವ ಹೊಂದಿರುವ ಕಾರಣ ಆಯನೂರು ಮಂಜುನಾಥ್ ಪ್ರಬಲ ಪೈಪೋಟಿ ಎಂದು ನಿರೀಕ್ಷಿಸಲಾಗಿತ್ತು.

ಜೊತೆಗೆ ಉಡುಪಿ ಮಾಜಿ ಶಾಸಕ ಟಿಕೆಟ್ ಲಭ್ಯವಾಗದೆ ‘ರೆಬಲ್’ ಆಗಿ ಕಣದಲ್ಲಿದ್ದರು. ಹಿಂದೂಪರ ಕಾರ್ಯಕರ್ತರ ಬೆಂಬಲದಿAದ ಸ್ಪರ್ಧೆ ಬಯಸಿದ ರಘುಪತಿ ಅವರು ಬಿಜೆಪಿ ಕಾರ್ಯ ಕರ್ತರ ಬೆಂಬಲಿತ ಅಭ್ಯರ್ಥಿ ಎಂದು ಘೋಷಣೆ ಮಾಡಿ ಕೊಂಡು ಸ್ಪರ್ಧೆಯಲ್ಲಿದ್ದರು. ಪರಿಣಾಮ ಬಿಜೆಪಿ ಯಿಂದ ಅವರು ಉಚ್ಛಾಟನೆ ಕೂಡ ಆದರು.

(ಮೊದಲ ಪುಟದಿಂದ) ಯಾವುದನ್ನು ಲೆಕ್ಕಿಸದೆ ಗೆಲುವಿಗಾಗಿ ಪಣತೊಟ್ಟಿದ್ದ ರಘುಪತಿ ಅವರು ಇದೀಗ ಸೋಲು ಕಂಡಿದ್ದು, ಅವರ ಮುಂದಿನ ನಡೆ ಏನಿರಬಹುದು? ಎಂಬ ಪ್ರಶ್ನೆಯೂ ಉದ್ಭವಿಸಿದೆ.

‘ಬಿಜೆಪಿ ವಿರುದ್ಧ ಮನಸ್ಥಿತಿ ಹೊಂದಿದ್ದಾರೆ. ಹಿಂಬಾಗಿಲಿನಿAದ ಬಂದು ಟಿಕೆಟ್ ಪಡೆದುಕೊಂಡರು’ ಸೇರಿದಂತೆ ಇನ್ನಿತರ ಚುನಾವಣಾ ಪೂರ್ವ ಟೀಕೆಯ ನಡುವೆಯೂ ಡಾ. ಧನಂಜಯ ಸರ್ಜಿ ಗೆಲುವು ದಾಖಲಿಸುವ ಮೂಲಕ ವಿಧಾನ ಪರಿಷತ್‌ಗೆ ಚುನಾಯಿತಗೊಂಡಿದ್ದಾರೆ.

ಮತಗಳ ವಿವರ : ಉಳಿದಂತೆ ಪಕ್ಷೇತರರಾಗಿ ಕಣದಲ್ಲಿದ್ದ ಜಿ.ಸಿ. ಪಟೇಲ್ ೨೨, ದಿನಕರ್ ಉಲ್ಲಾಳ್ ೧೦೮, ಎಸ್.ಪಿ. ದಿನೇಶ್ ೨,೫೧೮, ಬಿ. ಮಹಮ್ಮದ್ ತುಂಬೆ ೨೨೧, ಡಾ. ಶೇಖ್ ಬಾವ ೭೭, ಜಿ.ಆರ್. ಷಡಕ್ಷರಪ್ಪ ೨೬, ಶಹರಾಜ್ ಮುಜೀದ್ ಸಿದ್ದಿಕಿ ೨೨೮ ಮತಗಳನ್ನು ಪಡೆದುಕೊಂಡರು. ೫,೧೧೫ ಮತಗಳು ಅಸಿಂಧುಗೊAಡವು.