ರಕ್ತ ಸಂಬAಧಗಳ ಮೀರಿದ ಬಂಧವಿದು.. ಯಾವ ಬಿಂದುವಿನಲ್ಲಿ ಸಂಧಿಸಿಹುದು.. ನಿಜ ಅಲ್ವಾ.. ಸ್ನೇಹ ಎನ್ನುವ ಬಂಧನ ಎಲ್ಲಾ ಗಡಿ ರೇಖೆಗಳಿಗೂ ಮೀರಿದ್ದು ಹಾಗೂ ಯಾವ ಅಂಕೆ, ಆಮಿಷಗಳಿಗೂ ಒಳಪಡದ ಸಂಬAಧವಿದು. ಜೀವ ಸಂಕುಲದಲ್ಲಿ ಈ ಸ್ನೇಹವೆಂಬ ಬಾಂಧವ್ಯವಿಲ್ಲದೇ ಹೋದಲ್ಲಿ ನಮ್ಮ ಬದುಕಿನ ಸ್ವರೂಪವೇ ಅಯೋಮಯವಾಗಿರುತ್ತಿತ್ತು ಎಂದೆನಿಸುತ್ತದೆ. ಜೀವ ಸಂಕುಲದ ಜೀವನಾಡಿ ಎಂದರೆ ಯಾವುದೇ ಕ್ಲಿಷ್ಟ ಸಂದರ್ಭದಲ್ಲಿಯೂ ಸದಾ ನಿನ್ನೊಂದಿಗೆ ನಾನಿದ್ದೇನೆ ಎಂಬ ಅಭಯ ಹಸ್ತವನ್ನು ನೀಡುವ ಒಡನಾಡಿಗಳು. ನಾವೆಲ್ಲಿಯೋ ಸೋಲುತ್ತಿದ್ದೇವೆ ಎಂಬ ಅವ್ಯಕ್ತ ಭಯ ಮನದಾಳದಲ್ಲಿ ಮೂಡಿದ ಮರುಕ್ಷಣದಲ್ಲಿಯೇ ಹುಲ್ಲುಕಡ್ಡಿಯ ಭರವಸೆಯನ್ನು ನೀಡಬಲ್ಲ ಶಕ್ತಿ ಎಂದಾದರೆ ಅದುವೇ ಸ್ನೇಹ ಸಂಜೀವಿನಿ. ಬದುಕಿನಲ್ಲಿ ತನ್ನವರೆಂಬ ಕುರುಹುಗಳನ್ನೇ ಕಾಣದ ಎಷ್ಟೋ ಅನಾಥ ಜೀವಗಳು ಕೂಡ ನೆಮ್ಮದಿಯಾಗಿ ಬದುಕಿನ ಸವಿಯನ್ನು ಸವಿಯಲು ನಿಜವಾಗಿಯೂ ಕಾರಣವಾದವರು ಆತ್ಮೀಯ ಸ್ನೇಹಿತರ ವಲಯ. ಈ ಬಂಧ ಬೆಸೆಯಲು ಸಮಾನ ಮನಸ್ಥಿತಿಯಿದ್ದರೆ ಸಾಕು. ಬೇರಾವ ಮಾನದಂಡದ ಅವಶ್ಯಕತೆ ಬರಲಾರದು ನಿಷ್ಕಲ್ಮಶ ಸ್ನೇಹಕ್ಕೆ. ಕೃಷ್ಣ ಕುಚೇಲರು, ಕೃಷ್ಣಾರ್ಜುನರು, ಕರ್ಣ - ದುರ್ಯೋಧನರು, ಅಕ್ಬರ್ - ಬೀರಬಲ್ಲರು ಹೀಗೇ ಇತಿಹಾಸ, ಪುರಾಣಗಳಲ್ಲಿ ಹಲವು ಆದರ್ಶ ಸ್ನೇಹ ಅಮರ ಸಂಬAಧದ ಕುರುಹುಗಳಾಗಿ ಉಳಿದಿವೆ. ಮಕ್ಕಳಿಗೆ ನೀತಿ ಪಾಠಗಳನ್ನು ಹೇಳುವಾಗ ಕಾಡಿನಲ್ಲಿ ವಾಸವಿರುವ ಪ್ರಾಣಿಗಳ ಸ್ನೇಹ ಸಂಬAಧಗಳನ್ನೇ ಉದಾಹರಿಸಿ ಮಕ್ಕಳಲ್ಲಿ ವಿಭಿನ್ನ ವ್ಯಕ್ತಿತ್ವದಲ್ಲಿಯೂ ಸ್ನೇಹ ಭಾವ ಮೂಡಲು ಸಾಧ್ಯವೆಂಬ ಅರಿವನ್ನು ಮೂಡಿಸುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಮೊಸಳೆ ಹಾಗೂ ಮಂಗನ ಕಥೆ ಓದುವಾಗ ಈಗಲೂ ಸ್ನೇಹದ ಬಗ್ಗೆ ಅಭಿಮಾನ ಮೂಡುತ್ತದೆ. ತನ್ನನ್ನು ನಂಬಿದ ಜೀವವನ್ನು ಸದಾ ಕಾಪಾಡುವ ಕಾಳಜಿಯನ್ನು ಮಾತ್ರ ನೈಜ ಸ್ನೇಹ ಹೊಂದಿರುತ್ತದೆ. 'ನಿನ್ನ ಸ್ನೇಹಿತರನ್ನು ತೋರಿಸು, ಆಗ ನೀನಾರೆಂದು ನಾನು ಹೇಳುವೆ' ಎಂಬ ಸಾಲಿನಲ್ಲಿರುವ ಗೂಢಾರ್ಥವೂ ಇದುವೇ. ಅಂದರೆ ನಮ್ಮ ವ್ಯಕ್ತಿತ್ವದ ಮೇಲೆ ಸ್ನೇಹಿತರ ಕೂಟ ಒಂದಲ್ಲಾ ಒಂದು ರೀತಿಯಲ್ಲಿ ಪ್ರಭಾವ ಬೀರುತ್ತಲೇ ಇರುತ್ತದೆ. ಇದನ್ನು ನಿಯಂತ್ರಿಸಿಕೊAಡು ನಮ್ಮಂತೆ ನಾವು ಬದುಕುವುದು ಎಲ್ಲರಿಂದಲೂ ಸಾಧ್ಯವಾಗದ ಮಾತು. ಹಾಗಾಗಿ ನಮ್ಮ ಆಯ್ಕೆ ಸರಿಯಾಗಿದ್ದಲ್ಲಿ ಆಗುವ ಅಡ್ಡ ಪರಿಣಾಮಗಳನ್ನು ನಿಯಂತ್ರಣಕ್ಕೆ ತಂದುಕೊಳ್ಳಲು ಸಾಧ್ಯ. ಉತ್ತಮ ಸ್ನೇಹ ಸಂಪಾದನೆಯೆAದರೆ ಅದು ಒಂದು ದೊಡ್ಡ ಸಾಧನೆಯೇ ಸರಿ. ನಮ್ಮ ಏಳಿಗೆಯನ್ನು ಸದಾ ಬಯಸುವ ಮನಸ್ಸಿಗರು ಇದಕ್ಕೆ ಅರ್ಹರು. ಈಗಿನ ಜಗತ್ತು ನಿಂತಿರುವುದೇ ವ್ಯಾವಹಾರಿಕತೆ ಎಂಬ ಆಧಾರಸ್ಥಂಭದಲ್ಲಿ. ಎಲ್ಲಾ ಸಂಬAಧಗಳೂ ಕೇವಲ ವ್ಯವಹಾರಗಳಿಗೆ ಸೀಮಿತವಾಗಿವೆ. ಕಾರ್ಯಗಳು ತೀರಿದವೆಂದರೆ ಸ್ನೇಹವೂ ಮುಗಿದಂತೆ. ಸ್ನೇಹದ ಹೆಸರಿನಲ್ಲಿ ನಡೆಯುವ ಮೈತ್ರಿ ಕೂಟಗಳು ಯಾವುದೋ ಒಂದು ಉದ್ದೇಶ ಸಾಧನೆಗಾಗಿ ಮಾತ್ರವೇ ನಿಗದಿಯಾಗಿರುತ್ತವೆ. ಉದ್ದೇಶ ಈಡೇರಿಕೆಯಾಯಿತೆಂದರೆ ಅಲ್ಲಿಗೆ ಸ್ನೇಹಕ್ಕೂ ಎಳ್ಳು ನೀರು ಬಿಟ್ಟ ಹಾಗೇ. ಅಂದರೆ ಪ್ರತಿಯೊಬ್ಬರೂ ತಮ್ಮ ಸುಖಕ್ಕೆ ಮಾತ್ರವೇ ಸ್ನೇಹವನ್ನು ಬಳಸಿಕೊಂಡಲ್ಲಿ ಸ್ನೇಹದ ಮೂಲ ಮಂತ್ರ ಸಹಕಾರ ಜೀವನಕ್ಕೆ ಧಕ್ಕೆ ಯಾಗದೆ ಇನ್ನೇನು? ನಾವೀಗ ನೋಡುತ್ತಿರುವ ಉದಾಹರಣೆಗಳು ನಮ್ಮ ಪೀಳಿಗೆಗೆ ಇದೇ ಪಾಠವನ್ನು ಕಲಿಸುತ್ತಿವೆ. ವ್ಯಕ್ತಿ ವ್ಯಕ್ತಿಗಳ ಸ್ನೇಹ ಸಂಬAಧದಲ್ಲಿಯೂ ನಂಬಿಕೆಯಿಡಲು ಹೆಣಗಾಡುವಂತಾಗಿದೆ. ದಿನಬೆಳಗಾದರೆ ನೋಡುವ, ಕಾಣುವ ಸುದ್ದಿ ಎಂದರೆ ಅದು ಮೋಸ, ವಂಚನೆಯ ಸುಳಿಗೆ ಸಿಕ್ಕ ಅಪರಾಧಗಳ ಪಟ್ಟಿ. ಹೀಗಿದ್ದಾಗ ಸ್ನೇಹ ಸಂಬAಧ ಶಾಶ್ವತವಾಗಿ ಉಳಿಯಲು ಸಾಧ್ಯವೇ? ಸ್ನೇಹಕ್ಕೆ ಸಂಪೂರ್ಣವಾಗಿ ಸ್ವತಂತ್ರ ಪ್ರವೃತ್ತಿಯುಳ್ಳವರು ಅರ್ಹ ರಾಗಿರುತ್ತಾರೆ. ಸ್ನೇಹ ಜೀವಿಗಳು ಸದಾ ತಮ್ಮ ಸುತ್ತ ಮುತ್ತಲಿನ ಸಾಮಾಜಿಕ ಸಂಬAಧಗಳನ್ನು ಅತ್ಯತ್ತಮವಾಗಿ ಕಾಪಾಡಿಕೊಂಡಿರುತ್ತಾರೆ. ಹಾಗಾಗಿಯೇ ಜನರ ಮನಸ್ಸನ್ನು ಬೇಗನೆ ಗೆಲ್ಲುವ ಕೌಶಲ್ಯ ಇವರಿಗೆ ಸದಾ ಒಲಿದಿರುತ್ತದೆ. ಪ್ರತಿಯೊಬ್ಬರ ನಾಡಿಮಿಡಿತವನ್ನು ಅರ್ಥೈಸಿಕೊಂಡು ಬಾಳುವುದು ನಿಜವಾದ ಬದುಕಿನ ಕಲೆ. ಬಲ್ಲವನೆ ಬಲ್ಲ ಬೆಲ್ಲದ ಸವಿರುಚಿಯನ್ನು. ಸ್ನೇಹದ ಸವಿಯೂ ಇದಕ್ಕೆ ಹೊರತಲ್ಲ. ತಮ್ಮ ಎಲ್ಲಾ ವ್ಯಕ್ತಿತ್ವ ದೋಷಗಳನ್ನೂ ಪರಿಗಣಿಸಿಯೂ ಪ್ರೀತಿಯಲ್ಲಾಗಲಿ ಸ್ನೇಹದಲ್ಲಾಗಲಿ ಲವಲೇಶವೂ ಕುಂದುAಟಾಗದAತೆ ಕಾಪಾಡಿಕೊಳ್ಳಬಹುದಾದ ಸಂಬAಧವೆAದರೆ ಅದು ಸ್ನೇಹಸಂಬAಧ ಮಾತ್ರ. ಬೇರೆಲ್ಲಾ ಮನುಷ್ಯ ಸಂಬAಧಗಳೂ ಒಂದು ರೀತಿಯಲ್ಲಿ ಪಕ್ವತೆಯನ್ನು, ಸರಿಯಾದುದಕ್ಕೆ ಮಾತ್ರವೇ ಒತ್ತು ನೀಡುವಂತದ್ದು. ಸ್ನೇಹ ಸಂಬAಧ ಮಾತ್ರ ವಿಭಿನ್ನ. ಕುಂದು ಕೊರತೆಗಳ ಮಧ್ಯೆಯೂ ಗಟ್ಟಿಯಾಗಿ ಉಳಿಯಬಲ್ಲ ಆಶಾದಾಯಕ ಸಂಬAಧವಿದು. ಈ ಸ್ನೇಹಕ್ಕೆ ಸೋಲದವರಿಲ್ಲ. ಎಂಥ ಉನ್ನತ ಹುದ್ದೆ, ಅಧಿಕಾರದಲ್ಲಿಯೇ ಇರಲಿ ಎಲ್ಲರಿಂದಲೂ ಗೌರವ, ಅಭಿಮಾನ ಪಡೆಯುವ ಹಾಗೂ ಸ್ಥಾನಮಾನದಲ್ಲಿ ಗಾಂಭೀರ್ಯತೆ ಕಾಪಾಡಿಕೊಳ್ಳಬೇಕಾದವರು ಕೂಡ ತಮ್ಮ ತಮ್ಮ ಆತ್ಮೀಯ ಸ್ನೇಹಿತರ ಕೂಟದೊಳಗೆ ಎಲ್ಲರೊಳಗೊಂದಾಗುವ ಪರಿ ಮನಸ್ಸಿಗೆ ಮುದ ನೀಡುವ ವಿಚಾರ. ಕಾರಣ ಸ್ನೇಹವೆನ್ನುವುದು ವ್ಯಕ್ತಿಯ ವ್ಯಕ್ತಿತ್ವದ ನೈಜತೆಗೆ ಕಾರಣವಾಗುವ ಸಂಬAಧವಿದು. ಇಲ್ಲಿ ಕೃತಕತೆಗೆ ಸ್ಥಾನವಿಲ್ಲ. ಹಾಗಾಗಿ ಪ್ರತಿಯೊಬ್ಬರೂ ಸ್ನೇಹ ಸಂಬAಧದಲ್ಲಿ ಬೇರೆಲ್ಲಾ ಸಂಬAಧಗಳಿಗಿAತಲೂ ಅತ್ಯುತ್ತಮ ವಿಧದ ಸುರಕ್ಷಿತಭಾವವನ್ನು ಅನುಭವಿಸುತ್ತಾರೆ. ಇಲ್ಲಿ ಅರ್ಥ ಮಾಡಿಕೊಳ್ಳುವ ಮನಸ್ಸು ಬಹಳ ಮುಖ್ಯ ಪಾತ್ರ ವಹಿಸುವುದು. ಎಲ್ಲಾ ವಿಧದ ಸಂಬAಧಗಳಿಗೂ ಸ್ನೇಹವೇ ಅಸ್ಥಿ ಭಾರವಾದರೆ ಖಂಡಿತಾ ಅಲ್ಲಿಯೂ ಸಂಬAಧಗಳು ಹಿತಕರವಾಗಿರುತ್ತವೆ. ಪೋಷಕರು - ಮಕ್ಕಳ ಸಂಬAಧದಲ್ಲಿ ಪ್ರಮುಖವಾಗಿ ಸ್ನೇಹ ಅಡಿಗಲ್ಲಾದರೆ ಮಕ್ಕಳಲ್ಲಿ ಅಪ್ಪ ಅಮ್ಮನಲ್ಲಿ ಯಾವುದೇ ಸಮಸ್ಯೆ, ಪ್ರಶ್ನೆಗಳನ್ನು ಮುಕ್ತವಾಗಿ ಮುಜುಗರವಿಲ್ಲದೆ ಹಂಚಿಕೊಳ್ಳಲು ಸಾಧ್ಯ. ಎಷ್ಟೋ ಮಕ್ಕಳ ಅವ್ಯಕ್ತ ಸಮಸ್ಯೆಗಳು ಸುಲಭವಾಗಿ ಪರಿಹಾರವಾಗುತ್ತವೆ. ಇದನ್ನೇ ದಾಂಪತ್ಯ ಬದುಕಿನಲ್ಲಿಯೂ ಅನ್ವಯ ಮಾಡಿಕೊಂಡರೆ ಮನಸ್ಸುಗಳ ಮಧ್ಯೆ ನಡೆಯುವ ತಾಕಲಾಟಗಳಿಗೆ ಅಂತ್ಯ ಹಾಡಬಹುದು. ಕಚೇರಿಗಳಲ್ಲಿ, ವೃತ್ತಿ ಕ್ಷೇತ್ರಗಳಲ್ಲಿಯೂ ಸ್ನೇಹ ಸಂಬAಧಗಳು ಪ್ರಧಾನ ಪಾತ್ರ ವಹಿಸಿದ್ದೇ ಆದಲ್ಲಿ ಆ ವಾತಾವರಣವೇ ಅಹ್ಲಾದಕರವಾಗಿರುತ್ತದೆ. ಮನುಷ್ಯ ಅದರಲ್ಲಿಯೂ ಸ್ನೇಹಜೀವಿ, ಸಂಘಜೀವಿ. ಹಾಗಾಗಿ ಅವನ ವ್ಯಕ್ತಿತ್ವದಲ್ಲಿ ಸ್ನೇಹಭಾವ ಹಾಸುಹೊಕ್ಕಾಗಿರಬೇಕು. ಸ್ನೇಹಕ್ಕೆ ಎಂತಹ ಕಟು ಮನಸ್ಸನ್ನೂ ಕರಗಿಸುವ ಶಕ್ತಿಯಿದೆ. ಧರ್ಮ, ಜಾತಿ, ಲಿಂಗ, ಅಂತಸ್ತುಗಳಲ್ಲಿನ ಎಲ್ಲಾ ಅಸಮಾನತೆಗಳನ್ನೂ ಮೀರಿ ಬೆಳೆಯುವ, ಉಳಿಸಿಕೊಳ್ಳಲು ಸಾಧ್ಯವಾಗುವ ಏಕೈಕ ಸಂಬAಧ ಸ್ನೇಹ ಬಂಧ. ಇಲ್ಲಿ ಹೆಣ್ಣು- ಗಂಡು, ದೇಶ, ಭಾಷೆ, ವಯಸ್ಸು, ವೃತ್ತಿಕ್ಷೇತ್ರ ಯಾವುದೂ ಗಣನೆಗೆ ಬರಲಾರದು. ಸಮಾನ ಮನಸ್ಸು, ಪರಸ್ಪರರ ಬಗ್ಗೆ ಇರುವ ಗೌರವ, ವಿಶ್ವಾಸಗಳೇ ಪ್ರಧಾನ ಪಾತ್ರ ವಹಿಸುತ್ತವೆ. ಸರ್ವರಿಗೂ ಸಲ್ಲುವ ಈ ಗೌರವ ಪೂರ್ವಕ ಸಂಬAಧಕ್ಕೆ ಪ್ರತಿಯೊಬ್ಬರೂ ತೆರೆದ ಮನಸ್ಸಿನಿಂದ ಒಪ್ಪಿಕೊಳ್ಳೋಣ. ಸ್ನೇಹವನ್ನು ಅಪ್ಪಿಕೊಳ್ಳೋಣ.

-ಪ್ರತಿಮಾ ಹರೀಶ್ ರೈ, ಉಪನ್ಯಾಸಕರು., ಸೈಂಟ್ ಆನ್ಸ್ ಪದವಿ ಕಾಲೇಜು.

ವೀರಾಜಪೇಟೆ.