ತ್ರಿಶೂರ್ ಡಿಸಿಸಿ ಕಚೇರಿಯಲ್ಲಿ ಜಗಳ: ಪ್ರಕರಣ ದಾಖಲು
ತ್ರಿಶೂರ್, ಜೂ. ೮: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ತ್ರಿಶೂರ್ ಕ್ಷೇತ್ರದಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದ್ದು, ಈ ಸೆಂಟ್ರಲ್ ಕ್ಷೇತ್ರದಿಂದ ಪಕ್ಷದ ನಾಯಕ ಕೆ. ಮುರಳೀಧರನ್ ಸೋಲು ಕಂಡಿರುವುದು ಇಲ್ಲಿನ ಕಾಂಗ್ರೆಸ್ ಡಿಸಿಸಿ ಕಚೇರಿಯಲ್ಲಿ ಜಗಳಕ್ಕೆ ಕಾರಣವಾಗಿದೆ. ಡಿಸಿಸಿ ಕಾರ್ಯದರ್ಶಿ ಸಜೀವನ್ ಕುರಿಯಾಚಿರಾ ಅವರು ನೀಡಿರುವ ದೂರಿನ ಮೇರೆಗೆ ತ್ರಿಶೂರ್ ಜಿಲ್ಲಾ ಕಾಂಗ್ರೆಸ್ ಸಮಿತಿ (ಡಿಸಿಸಿ) ಅಧ್ಯಕ್ಷ ಜೋಸ್ ವಲ್ಲೂರ್ ಮತ್ತು ಪಕ್ಷದ ಇತರ ೧೯ ಸದಸ್ಯರ ವಿರುದ್ಧ ಪೊಲೀಸರು ಶನಿವಾರ ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಶುಕ್ರವಾರ ಡಿಸಿಸಿ ಕಚೇರಿಯಲ್ಲಿ ವಲ್ಲೂರ್ ಮತ್ತು ಬೆಂಬಲಿಗರು ತನಗೆ ಥಳಿಸಿದ್ದಾರೆ ಎಂದು ಕುರಿಯಾಚಿರಾ ದೂರಿನಲ್ಲಿ ಆರೋಪಿಸಿದ್ದಾರೆ.
ಪೊಲೀಸ್ ಔಟ್‌ಪೋಸ್ಟ್, ಮನೆಗಳಿಗೆ ಉಗ್ರಗಾಮಿಗಳಿಂದ ಬೆಂಕಿ!
ಇAಫಾಲ್, ಜೂ. ೮: ಶಂಕಿತ ಉಗ್ರಗಾಮಿಗಳು ಶನಿವಾರ ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಪೊಲೀಸ್ ಔಟ್‌ಪೋಸ್ಟ್ ಮತ್ತು ಹಲವಾರು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬರಾಕ್ ನದಿಯ ದಡದಲ್ಲಿರುವ ಚೋಟೊಬೆಕ್ರಾ ಪ್ರದೇಶದಲ್ಲಿ ಮಧ್ಯರಾತ್ರಿ ೧೨.೩೦ ರ ಸುಮಾರಿಗೆ ಜಿರಿ ಪೊಲೀಸ್ ಔಟ್‌ಪೋಸ್ಟ್ಗೆ ಉಗ್ರರು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ ಎಂದು ಅವರು ತಿಳಿಸಿದ್ದಾರೆ. ರಾಜಧಾನಿ ಇಂಫಾಲ್‌ನಿAದ ಸುಮಾರು ೨೨೦ ಕಿಮೀ ದೂರದಲ್ಲಿರುವ ಜಿಲ್ಲೆಯ ಲಮ್ತೆöÊ ಖುನೌ ಮತ್ತು ಮೊಧುಪುರ್ ಪ್ರದೇಶಗಳಲ್ಲಿ ಕತ್ತಲೆಯ ಲಾಭ ಪಡೆದ ಬೆಟ್ಟ ಮೂಲದ ಬಂದೂಕುಧಾರಿ ಉಗ್ರರು ಅನೇಕ ದಾಳಿ ನಡೆಸಿದ್ದಾರೆ. ಜಿರಿಬಾಮ್ ಜಿಲ್ಲೆಯ ಹೊರವಲಯದಲ್ಲಿ ಹಲವಾರು ಮನೆಗಳು ಸುಟ್ಟುಹೋಗಿವೆ. ಆದರೆ, ನಿಖರವಾದ ಸಂಖ್ಯೆ ತಿಳಿದುಬಂದಿಲ್ಲ ಎಂದು ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.
ಮಾವೋವಾದಿಗಳಿಂದ ಪೊಲೀಸ್ ಮಾಹಿತಿದಾರನ ಹತ್ಯೆ
ಛತ್ತೀಸ್‌ಗಢ, ಜೂ. ೮: ಛತ್ತೀಸ್‌ಗಢದ ಕೊಂಡಗಾAವ್ ಜಿಲ್ಲೆಯಲ್ಲಿ ಪೊಲೀಸ್ ಮಾಹಿತಿದಾರನಾಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಮಾವೋವಾದಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಶುಕ್ರವಾರ ರಾತ್ರಿ ಧನೋರಾ ಪೊಲೀಸ್ ಠಾಣಾ ವ್ಯಾಪ್ತಿಯ ತಿಮ್ಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಹತ್ಯೆಗೀಡಾದ ವ್ಯಕ್ತಿಯನ್ನು ದಿನೇಶ್ ಮಾಂಡವಿ ಎಂದು ಗುರುತಿಸಲಾಗಿದೆ. ಈತ ಮದುವೆಗೆ ಹಾಜರಾಗಿ ಮನೆಗೆ ಹಿಂದಿರುಗು ತ್ತಿದ್ದಾಗ ದಾಳಿ ಮಾಡಿದ ಮಾವೋವಾದಿಗಳು ಗುಂಡಿಕ್ಕಿ ಹತ್ಯೆಮಾಡಿ ದ್ದಾರೆ. ಗುಂಡು ಹಾರಿಸಿದ ನಂತರ ಮಾಂಡವಿ ಅವರು ಗಂಭೀರವಾಗಿ ಗಾಯಗೊಂಡಿದ್ದು, ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ. ಆದರೆ, ಕೇಶ್ಕಲ್‌ನ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾರೆ.
ಇಬ್ಬರು ಪೊಲೀಸರು ಸೇರಿದಂತೆ ೪ ಸರ್ಕಾರಿ ನೌಕರರ ವಜಾ
ಜಮ್ಮು, ಜೂ. ೮: ಉಗ್ರರೊಂದಿಗೆ ನಂಟು ಆರೋಪದ ಮೇರೆಗೆ ಇಬ್ಬರು ಪೊಲೀಸರು ಸೇರಿದಂತೆ ನಾಲ್ವರು ಸರ್ಕಾರಿ ನೌಕರರನ್ನು ಸೇವೆಯಿಂದ ಜಮ್ಮು-ಕಾಶ್ಮೀರ ಆಡಳಿತ ಶನಿವಾg ವಜಾಗೊಳಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಾನ್‌ಸ್ಟೇಬಲ್‌ಗಳಾದ ಅಬ್ದುಲ್ ರೆಹಮಾನ್ ದಾರ್ ಮತ್ತು ಗುಲಾಮ್ ರಸೂಲ್ ಭಟ್, ಶಿಕ್ಷಕ ಶಬೀರ್ ಅಹ್ಮದ್ ಮತ್ತು ಜಲ ಶಕ್ತಿ ಇಲಾಖೆಯ ಸಹಾಯಕ ಲೈನ್‌ಮ್ಯಾನ್ ಅನಯತುಲ್ಲಾ ಶಾ ಪಿರ್ಜಾದಾ ಅವರನ್ನು ಸಂವಿಧಾನದ ೩೧೧ನೇ ವಿಧಿಯ ಅಡಿಯಲ್ಲಿ ಸೇವೆಯಿಂದ ವಜಾಗೊಳಿಸಲಾಗಿದೆ.