ಕಣಿವೆ, ಜೂ. ೮: ಕೆಲವು ವರ್ಷಗಳ ಹಿಂದೆ ಕೊಡಗು ಜಿಲ್ಲೆಯಲ್ಲಿ ಘಟಿಸಿದ ಜಲಪ್ರವಾಹದಿಂದ ಅಪಾರ ಆಸ್ತಿ - ಪಾಸ್ತಿ ಹಾಗೂ ಅಮೂಲ್ಯವಾದ ಜೀವಗಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮತ್ತು ಆಘಾತ ಇನ್ನೂ ಮಾಸಿಲ್ಲ.

ಇಂತಹ ಪರಿಸ್ಥಿತಿಯಲ್ಲಿ ಕೊಡಗು ಜಿಲ್ಲಾಡಳಿತ ಭವಿಷ್ಯದಲ್ಲಿ ಸಂಭವಿಸ ಬಹುದಾದ ಪ್ರಕೃತಿ ವಿಕೋಪಗಳನ್ನು ಎದುರಿಸಲು ಜನಜೀವನದ ಮೇಲೆ ಮಾರಕ ಪರಿಣಾಮಗಳು ಸಂಭವಿಸದAತೆ ತಡೆಯಲು ರಾಷ್ಟಿçÃಯ ವಿಪತ್ತು ನಿರ್ವಹಣಾ ಪಡೆಯ ತಂಡವನ್ನು ಸನ್ನದ್ಧಗೊಳಿಸಿದೆ.

ಈಗಾಗಲೇ ೨೫ ಮಂದಿಯುಳ್ಳ ಈ ತಂಡ ಕೊಡಗು ಜಿಲ್ಲೆಗೆ ಆಗಮಿಸಿದ್ದು, ಜಿಲ್ಲೆಯ ಹಾರಂಗಿ ಹಾಗೂ ಕಾವೇರಿ ನದಿಗಳ ಸಂಗಮ ಕೂಡಿಗೆಯಲ್ಲಿ ವಾಸ್ತವ್ಯ ಹೂಡಿದೆ.

ಪೊಲೀಸ್ ಇನ್ಸ್ಪೆಕ್ಟರ್ ಹುದ್ದೆಗೆ ಸಮನಾದ ಕಮಾಂಡರ್ ಹುದ್ದೆಯ ಅಜಯ್ ಕುಮಾರ್ ನೇತೃತ್ವದಲ್ಲಿ ಈ ೨೫ ಮಂದಿಯುಳ್ಳ ಕಾರ್ಯಪಡೆ ಕೂಡಿಗೆಯ ಕೃಷಿ ಇಲಾಖೆಯ ವಸತಿ ನಿಲಯದಲ್ಲಿ ತಂಗಿದ್ದು, ಜಿಲ್ಲೆಯಲ್ಲಿ ಯಾವುದೇ ಸಂದರ್ಭ ಅದೆಂತಹುದೇ ದುರ್ಘಟನೆ ನಡೆದರೂ ಕೂಡ ಕ್ಷಣಾರ್ಧದಲ್ಲಿ ಅಲ್ಲಿಗೆ ಧಾವಿಸಿ ಅಲ್ಲಿನ ಮಂದಿಗೆ ಧೈರ್ಯ ಹಾಗೂ ಸ್ಥೆöÊರ್ಯ ತುಂಬುವುದರೊAದಿಗೆ ಆ ಮಂದಿಯನ್ನು ರಕ್ಷಿಸುವ ಸಾಹಸೀ ಕೆಲಸಕ್ಕೆ ಈ ತಂಡ ಮುಂದಾಗಲಿದೆ.

ಜಿಲ್ಲೆಯಾದ್ಯAತ ಪರಿಶೀಲನೆ

ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಪಡುವ ಪ್ರವಾಹ ಪೀಡಿತ ಪ್ರದೇಶಗಳು ಹಾಗೂ ಸಂಭವನೀಯ ಬರೆ ಕುಸಿತದ ಸ್ಥಳಗಳಿಗೆ ಖುದ್ದು ತೆರಳಿ ಸ್ಥಳ ಪರಿಶೀಲನೆ ನಡೆಸಿರುವ ಈ ಕಾರ್ಯಪಡೆ ಮಳೆಗಾಲ ಮುಗಿಯುವ ತನಕವೂ ಕೊಡಗು ಜಿಲ್ಲೆಯಲ್ಲಿಯೇ ಬಿಡಾರ ಹೂಡಲಿದೆ.

ಅಗತ್ಯ ಪರಿಕರಗಳೊಂದಿಗೆ

ನುರಿತ ತಜ್ಞರು

೨೫ ಮಂದಿಯುಳ್ಳ ಈ ವಿಪತ್ತು ಕಾರ್ಯಪಡೆ ತಂಡದಲ್ಲಿ ದೇಶದ ಹಲವು ರಾಜ್ಯಗಳ ನುರಿತ ತಜ್ಞರು ಇದ್ದಾರೆ.

ಮಳೆಹಾನಿ ಪ್ರದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ ಜನರನ್ನು ರಕ್ಷಿಸುವ, ಬರೆ ಕುಸಿದು ಮಣ್ಣಿನಡಿ ಸಿಲುಕುವ ಮಂದಿ ಹಾಗೂ ಮುಗ್ಧ ಪ್ರಾಣಿಗಳನ್ನು ರಕ್ಷಿಸುವ ನುರಿತ ತರಬೇತುದಾರರು ತಂಡದಲ್ಲಿದ್ದಾರೆ.

ಅಷ್ಟೇ ಅಲ್ಲ, ಒಂದು ವೇಳೆ ರೈಲ್ವೆ ಅವಘಡ ಸಂಭವಿಸಿ ರೈಲ್ವೆ ಹಳಿಯಡಿ ಮಂದಿ ಸಿಲುಕಿದಲ್ಲಿ ರೈಲ್ವೆ ಹಳಿಯನ್ನು ತುಂಡರಿಸಿ ಜನರ ಜೀವ ರಕ್ಷಿಸುವ ಆಧುನಿಕ ಯಂತ್ರಗಳು ಹಾಗೂ ಅಗತ್ಯ ಪರಿಕರಗಳನ್ನು ಈ ತಂಡ ಒಳಗೊಂಡಿದೆ.

ಜಲಾಶಯ ಹಾಗೂ ನದಿ ತೀರಗಳ ಪರಿಶೀಲನೆ

ಕೊಡಗು ಜಿಲ್ಲೆಯ ಜನರ ಜೀವ ರಕ್ಷಣೆಗಾಗಿ ಕೇಂದ್ರದಿAದ ಆಗಮಿಸಿರುವ ಈ ತಂಡ ಈಗಾಗಲೇ ಹಾರಂಗಿ ಜಲಾಶಯ ಕ್ಕೆ ತೆರಳಿ ಅಲ್ಲಿನ ಸ್ಥಿತಿ ಗತಿಗಳನ್ನು ಅಧ್ಯಯನ ಮಾಡಿದೆ.

ಜೊತೆಗೆ ಕುಶಾಲನಗರ ವ್ಯಾಪ್ತಿಯಲ್ಲಿ ಮಳೆಗಾಲದ ಸಂದರ್ಭ ಮೈದುಂಬಿ ಹರಿಯುವ ಕಾವೇರಿ ನದಿ ಮೈಗೊಡವಿದಾಗ ನದಿಯಂಚಿನ ತಗ್ಗು ಪ್ರದೇಶಗಳ ಜನರಿಗೆ ಸಂಭವಿಸ ಬಹುದಾದ ಅವಘಡಗಳಿಂದ ಜನರ ಜೀವ ರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಂಪೂರ್ಣವಾಗಿ ಅಧ್ಯಯನ ನಡೆಸಿದೆ.

ಅಲ್ಲದೇ ಮಡಿಕೇರಿ, ವೀರಾಜಪೇಟೆ,

(ಮೊದಲ ಪುಟದಿಂದ) ಮುಕ್ಕೋಡ್ಲು, ಮೇಘತ್ತಾಳು, ಮೊಣ್ಣಂಗೇರಿ ಮೊದಲಾದ ಅಪಾಯಕಾರಿ ಸ್ಥಳಗಳಿಗೂ ತೆರಳಿರುವ ತಂಡ ಇಡೀ ಜಿಲ್ಲೆಯ ಭೌಗೋಳಿಕ ಸಮೀಕ್ಷೆ ನಡೆಸಿದೆ.

ತಹಶೀಲ್ದಾರರ ಉಸ್ತುವಾರಿ

ಸದ್ಯದ ಪರಿಸ್ಥಿತಿಯಲ್ಲಿ ಕುಶಾಲನಗರ ತಾಲೂಕಿನ ಕೂಡಿಗೆಯ ಕೃಷಿ ಇಲಾಖೆಯ ತರ ಬೇತಿ ಭವನದಲ್ಲಿ ವಾಸ್ತವ್ಯ ಹೂಡಿ ರುವ ೨೫ ಮಂದಿಯ ಈ ವಿಪತ್ತು ತಡೆ ತಂಡದ ಉಸ್ತುವಾರಿಯನ್ನು ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಕುಶಾಲನಗರ ತಹಶೀಲ್ದಾರ್ ವಹಿಸಿಕೊಂಡಿದ್ದಾರೆ.

ತAಡದಲ್ಲಿ ಪ್ರತ್ಯೇಕ ಓರ್ವ ಅಡುಗೆ ಸಿಬ್ಬಂದಿಯೂ ಇದ್ದು, ಅಗತ್ಯ ಊಟೋಪಚಾರ ಹಾಗು ವಸತಿ ವ್ಯವಸ್ಥೆಯನ್ನು ಕಾರ್ಯಪಡೆ ತಂಡವೇ ನಿರ್ವಹಿಸುತ್ತಿದೆ.

ಮಳೆಗಾಲ ಮುಗಿಯು ವವರೆಗೂ ಜಿಲ್ಲೆಯಲ್ಲೇ ಇದ್ದು ಸಂಭವನೀಯ ಮಳೆ ಹಾನಿ ಪ್ರದೇಶಗಳ ಮಾಹಿತಿ ಬಂದೊಡನೆ ಘಟನಾ ಸ್ಥಳಗಳಿಗೆ ತೆರಳುವ ವಾಹನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ವರದಿ : ಕೆ.ಎಸ್.ಮೂರ್ತಿ