ಕರಿಕೆ, ಜೂ. ೮: ತಲಕಾವೇರಿ ವನ್ಯಧಾಮದ ತಪ್ಪಲಿನಲ್ಲಿ ಸುರಿದ ಧಾರಾಕಾರ ಮಳೆ ಗಾಳಿಗೆ ಬೃಹತ್ ಗಾತ್ರದ ಮರ ಉರುಳಿ ಬಿದ್ದ ಪರಿಣಾಮ ಭಾಗಮಂಡಲ ಕರಿಕೆ ರಸ್ತೆ ಎರಡು ಗಂಟೆಗೂ ಅಧಿಕ ಸಮಯ ಬಂದ್ ಆಗಿತ್ತು.

ಭಾಗಮಂಡಲದಿAದ ಕರಿಕೆ ಮಾರ್ಗದ ಬಾಚಿಮಲೆ ಬಳಿ ತಲಕಾವೇರಿ ವನ್ಯಧಾಮದೊಳಗಿನಿಂದ ರಸ್ತೆಗೆ ಮರ ಉರುಳಿ ಬಿದ್ದಿದ್ದು, ಈ ಸಂದರ್ಭ ನಾಲ್ಕೆöÊದು ಸಣ್ಣ ಮರಗಳು ಕೂಡ ಬುಡ ಸಮೇತ ಧರೆಗೆ ಉರುಳಿ ಬಿದ್ದ ಪರಿಣಾಮ ವಾಹನ ಸವಾರರು ಪರದಾಡುವಂತಾಯಿತು. ಈ ಭಾಗದಲ್ಲಿ ಸಂಚರಿಸುವ ಖಾಸಗಿ ಬಸ್ ಸೇರಿದಂತೆ ಐವತ್ತಕ್ಕೂ ಅಧಿಕ ವಾಹನಗಳು ಸಾಲು ನಿಂತಿದ್ದವು. ತಲಕಾವೇರಿ ವನ್ಯಜೀವಿ ವಲಯದ ಅರಣ್ಯ ಸಿಬ್ಬಂದಿ ಹಾಗೂ ಪ್ರಯಾಣಿಕರ ಸಹಕಾರದಿಂದ ಮರಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

-ಸುಧೀರ್ ಹೊದ್ದೆಟ್ಟಿ