ಸುಂಟಿಕೊಪ್ಪ, ಜೂ.೮ : ಮತ್ತಿಕಾಡುವಿನ ಕಾಫಿ ತೋಟವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸುನಿತಾ ಎಂಬಾಕೆ ಮೇಲೆ ಕಾಡಾನೆಯೊಂದು ದಾಳಿ ನಡೆಸಿದ ಘಟನೆ ಸಂಭವಿಸಿದೆ.
(ಮೊದಲ ಪುಟದಿಂದ) ಇಂದು ಬೆಳಿಗ್ಗೆ ೧೦.೩೦ ರ ಸಂದರ್ಭ ಮತ್ತಿಕಾಡುವಿನ ಮುನ್ಸಿಪ್ ತೋಟದಲ್ಲಿ ೫ ಜನ ಕಾರ್ಮಿಕರು ಎಂದಿನAತೆ ತೋಟದ ಕೆಲಸದಲ್ಲಿ ನಿರತರಾಗಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಕಾಡಾನೆಯೊಂದು ಪ್ರತ್ಯಕ್ಷಗೊಂಡಿದೆ. ಇದರಿಂದ ಗಾಬರಿಗೊಂಡ ಕಾರ್ಮಿಕರು ೪ ಮಂದಿ ಕಿರುಚಿಕೊಂಡು ಓಡಿ ಹೋಗಿದ್ದು, ಅನತಿ ದೂರದಲ್ಲಿದ್ದ ಸುನಿತಾ (೩೨) ಎಂಬಾಕೆಯ ಮೇಲೆ ದಾಳಿ ನಡೆಸಲು ಮುಂದಾಗಿದೆ. ಜೊತೆಯಲ್ಲಿ ಕಾರ್ಮಿಕರ ಚೀರಾಟ ಕಿರುಚಾಟಕ್ಕೆ ಕಾಡಾನೆ ಅಲ್ಲಿಂದ ಕಾಲ್ಕಿತ್ತಿದೆ.
ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ಮಹಿಳೆಯನ್ನು ಅರಣ್ಯ ಇಲಾಖೆಯ ತಂಡದವರು ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಿದರು.
ಈ ಸಂದರ್ಭ ಸುಂಟಿಕೊಪ್ಪ ಗ್ರಾ.ಪಂ.ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್, ದಾದಿಯರು, ಡಿ ಗ್ರೂಪ್, ಆಶಾ ಕಾರ್ಯಕರ್ತೆಯರು ಇದ್ದರು.