ಮೈಸೂರು, ಜೂ. ೮: ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಜನರಿಗೆ ಇಷ್ಟ ಆಗಿಲ್ಲ. ಹೀಗಾಗಿ ಯೋಜನೆಗಳನ್ನು ನಿಲ್ಲಿಸುವುದೇ ಒಳ್ಳೆಯದು ಎಂದು ಕಾಂಗ್ರೆಸ್ ನಾಯಕ ಹಾಗೂ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಎಂ. ಲಕ್ಷ್ಮಣ್ ಹೇಳಿದ್ದಾರೆ.

ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಮೊದಲ ಬಾರಿಗೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಲಕ್ಷö್ಮಣ್, ‘‘ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ನಿಲ್ಲಿಸುವುದೇ ಒಳ್ಳೆಯದು. ಜನರಿಗೆ ಕಾಂಗ್ರೆಸ್ ಗ್ಯಾರಂಟಿ ಇಷ್ಟ ಆಗಿಲ್ಲ. ಗ್ಯಾರಂಟಿ ಇಷ್ಟವಿಲ್ಲ ವೆಂದು ಫಲಿತಾಂಶ ಮೂಲಕ ತೋರಿಸಿ ದ್ದಾರೆ. ಬಿಜೆಪಿಗರು ಗ್ಯಾರಂಟಿ ವಿರುದ್ಧ ಮಾತಾಡ್ತಿದ್ರೂ ಜನ ಬೆಂಬಲಿಸಿದ್ದಾರೆ. ಹಾಗಾಗಿ ಜನರಿಗೆ ನಮ್ಮ ಗ್ಯಾರಂಟಿ ಇಷ್ಟ ಆಗಿಲ್ಲ ಅಂತಾನೇ ಅಲ್ವಾ? ಎಂದ ಅವರು ಗ್ಯಾರಂಟಿ ಯೋಜನೆ ಬಗ್ಗೆ ಸಿಎಂ ಮರು ಪರಿಶೀಲನೆ ಮಾಡಬೇಕು ಎಂದು ಹೇಳಿದ್ದಾರೆ.

ಶೇ.೭೦ರಷ್ಟು ಮೇಲ್ವರ್ಗದವರು ಈ ಗ್ಯಾರಂಟಿ ಯೋಜನೆ ಫಲಾನುಭವಿಗಳು. ೨೫ ಸಾವಿರ ರೂ. ಸಂಬಳ ಪಡೆಯುವ ವ್ಯಕ್ತಿಗೆ ಫ್ರೀ ಕರೆಂಟ್ ಕೊಟ್ರೆ ಹೇಗೆ? ಈಗಲೂ ಗ್ಯಾರಂಟಿ ಹಣದಿಂದಲೇ ಜೀವನ ನಡೆಸುವ ಜನ ಇದ್ದಾರೆ. ಅಂತವರನ್ನು ನೋಡಿ ಗ್ಯಾರಂಟಿ ರೀ ಲುಕ್ ಮಾಡುವ ಅಗತ್ಯ ಇದೆ. ಹುಣಸೂರಿನ ಹಲವು

(ಮೊದಲ ಪುಟದಿಂದ) ಹಳ್ಳಿಗಳಲ್ಲಿ ಒಂದೇ ಸಮುದಾಯದವರಿದ್ದಾರೆ. ಆ ಹಳ್ಳಿಗಳಲ್ಲಿ ಬಿಜೆಪಿ ಅಭ್ಯರ್ಥಿಗೆ ೬೦೦ಕ್ಕೂ ಹೆಚ್ಚು ಮತ ನೀಡಿದರೆ ನನಗೆ ಕೇವಲ ಮೂರು, ಏಳು ಮತಗಳನ್ನ ನೀಡಿದ್ದಾರೆ. ಆ ಮೂಲಕ ಬಹಿರಂಗವಾಗಿ ಒಕ್ಕಲಿಗರ ವಿರುದ್ದ ಅಸಮಾಧಾನ ಹೊರ ಹಾಕಿದ್ದಾರೆ ಎಂದು ಕಿಡಿಕಾರಿದರು.

‘ನನ್ನನ್ನು ಸೋಲಿಸಿ ಬೇಜಾರಿಲ್ಲ. ಆದರೆ ಸಿದ್ದರಾಮಯ್ಯ ಏನ್ ತಪ್ಪು ಮಾಡಿದ್ದಾರೆ. ತವರು ಜಿಲ್ಲೆಯಲ್ಲೇ ಎಷ್ಟು ಬಾರಿ ಅಪಮಾನ ಮಾಡುತ್ತೀರಿ?, ಇಷ್ಟರ ಮಟ್ಟಿಗೆ ಸ್ಯಾಡಿಸ್ಟಿಕ್ ನೇಚರ್ ಇದ್ದರೆ ಹೇಗೆ? ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದರು. ಐದು ರೂಪಾಯಿ ಕೊಟ್ಟಿದ್ರಾ? ಆದರೆ ಸಿದ್ದರಾಮಯ್ಯ ಎಷ್ಟು ಕೆಲಸ ಮಾಡಿದ್ದಾರೆ. ಜಯದೇವ ಆಸ್ಪತ್ರೆ ಸೇರಿದಂತೆ ಮೈಸೂರಿಗೆ ಎಷ್ಟು ಕೊಡುಗೆ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರಂಥ ಕ್ಲೀನ್ ಇಮೇಜ್ ಇರುವ ಸಿಎಂ ದೇಶದಲ್ಲಿ ಬೇರೆ ಎಲ್ಲಾದ್ರೂ ಇದ್ದಾರಾ? ಸಾಹೇಬರು ಯಾವುದನ್ನೂ ಹೇಳಿಕೊಳ್ಳೋದಿಲ್ಲ. ಆದರೆ ಮೈಸೂರಿನ ಜನ ಸಿದ್ದರಾಮಯ್ಯ ಅವರಿಗೆ ಎಷ್ಟು ಬಾರಿ ನೋವು ಕೊಡ್ತೀರಿ ಎಂದು ಮತದಾರರ ವಿರುದ್ಧ ಲಕ್ಷö್ಮಣ್ ಆಕ್ರೋಶ ವ್ಯಕ್ತಪಡಿಸಿದರು.