ಚೆಟ್ಟಳ್ಳಿ, ಜೂ. ೯: ಕೊಡವ ಎಜುಕೇಷನ್ ಸೊಸೈಟಿಯ ಮಹತ್ವಾಕಾಂಕ್ಷೆಯ ಕೊಡಗಿನ ಪೊನ್ನಂಪೇಟೆಯ ಹಳ್ಳಿಗಟ್ಟುವಿನ ಸಿಐಟಿ ಕಾಲೇಜು ಸ್ಥಾಪನೆಯಾಗಿ ೨೫ ವರ್ಷಗಳಾಗಿದ್ದು, ಬೆಳ್ಳಿ ಮಹೋತ್ಸವದ ಸಂಭ್ರಮದಲ್ಲಿದೆ. ಈ ಪ್ರಯುಕ್ತ ತಾ. ೧೦ ರಿಂದ (ಇಂದಿನಿAದ) ತಾ. ೧೪ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಕಾಲೇಜಿನ ಹಿನ್ನೆಲೆ: ೩೪ ಎಕರೆ ವಿಶಾಲವಾದ ಭೂಮಿಯಲ್ಲಿ ೧೯೯೯ ರಲ್ಲಿ ಸ್ಥಾಪನೆಯಾದ ಈ ಕಾಲೇಜಿನ ಸ್ಥಾಪನೆಗೆ ಅನೇಕ ಮಹನೀಯರ ಅವಿರತ ಶ್ರಮ ಮತ್ತು ಕೊಡುಗೆ ಮಹತ್ವದಾಗಿದೆ. ೧೯೯೭ ರಲ್ಲಿ ಕೊಡವ ಸಮಾಜ ಬೆಂಗಳೂರಿನ (ಏSಃ) ನಿಯೋಗವು ಮಡಿಕೇರಿಯಲ್ಲಿ ಕೂರ್ಗ್ ಎಜುಕೇಶನ್ ಫಂಡ್ (ಅಇಈ) ನೊಂದಿಗೆ ಜಂಟಿ ಸಭೆಯನ್ನು ನಡೆಸಿತು.ಕೊಡಗಿನಲ್ಲಿ ವೃತ್ತಿಪರ ಕಾಲೇಜನ್ನು ಆರಂಭಿಸಬೇಕು ಇದರಿಂದ ಕೊಡಗಿನ ವಿದ್ಯಾರ್ಥಿಗಳಿಗೆ ವಿಪುಲ ಉದ್ಯೋಗಾವಕಾಶ ದೊರಕುತ್ತದೆ ಎಂಬ ನಿಲುವಿನೊಂದಿಗೆ ಹೊಸ ಕಾಲೇಜಿನ ಆರಂಭದ ಕುರಿತು ಪ್ರಸ್ತಾವನೆ ಮುಂದಿಡಲಾಯಿತು. ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಈ ಸಂದರ್ಭದಲ್ಲಿ ಸಿ.ಪಿ.ಬೆಳ್ಳಿಯಪ್ಪ ಅವರು ಸಿ.ಇ.ಎಫ್‌ನ ಸದಸ್ಯರಾಗಿ ಈ ಸಭೆಯಲ್ಲಿ ಹಾಜರಿದ್ದರು. ಈ ಯೋಜನೆಗೆ ಸದಸ್ಯರೆಲ್ಲರೂ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದರು. ನಂತರ ಕಾಲೇಜು ಸ್ಥಾಪಿಸುವ ಸಲುವಾಗಿ ಭೂಮಿ ಗುರುತಿಸುವುದು ಮತ್ತು ಸ್ವಾಧೀನಪಡಿಸಿಕೊಳ್ಳುವುದು ಹಾಗೂ ಹಣಕಾಸನ್ನು ಜೊತೆಗೂಡಿಸಿಕೊಳ್ಳುವುದು ಮುಂದಿನ ಸವಾಲಾಗಿತ್ತು.

ಈ ಸಂದರ್ಭದಲ್ಲಿ ಗೋಣಿಕೊಪ್ಪಲಿನ ಕಾವೇರಿ ಎಜುಕೇಷನ್ ಸೊಸೈಟಿಯ ಸಲಹೆ ಮಾರ್ಗದರ್ಶನವನ್ನು ಪಡೆಯಲಾಯಿತು. ದಕ್ಷಿಣ ಕೊಡಗು ತಾಂತ್ರಿಕ ಶಿಕ್ಷಣ ಸಂಸ್ಥೆಯನ್ನು ಆರಂಭಿಸಲು ಸೂಕ್ತವಾದ ಸ್ಥಳವೆಂದು ಅಭಿಪ್ರಾಯ ವ್ಯಕ್ತಪಡಿಸಲಾಯಿತು. ಈ ಯೋಜನೆ ಕುರಿತು ಕೊಡವ ಸಮಾಜ ಬೆಂಗಳೂರು ಮತ್ತು ಕೂರ್ಗ್ ಎಜುಕೇಷನ್ ಫಂಡ್ ಹಾಗೂ ಕಾವೇರಿ ಎಜುಕೇಷನ್ ಸೊಸೈಟಿಯ ಸದಸ್ಯರು ಹಲವಾರು ಸಭೆಯನ್ನು ನಡೆಸಿದರು.ಹೊಸ ಕಾಲೇಜು ಆರಂಭದ ಸಂದರ್ಭದಲ್ಲಿ ಪ್ರತ್ಯೇಕವಾದ ಕೊಡವ ಸಮುದಾಯದ ಸೊಸೈಟಿಯನ್ನು ರಚನೆ ಮಾಡುವುದು ಸೂಕ್ತವೆಂಬ ನಿರ್ಧಾರಕ್ಕೆ ಬರಲಾಯಿತು. ಹೀಗೆ ರೂಪುಗೊಂಡ ಸಮಾಜವು ಉನ್ನತ ಶಿಕ್ಷಣ ನೀಡುವ ಧ್ಯೇಯೋದ್ದೇಶದೊಂದಿಗೆ ಕೊಡಗಿನಲ್ಲಿ ಹಲವಾರು ಕಾಲೇಜನ್ನು ಆರಂಭಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕೆಂಬ ನಿಲುವು ವ್ಯಕ್ತಪಡಿಸಲಾಯಿತು. ಹೀಗೆ ರೂಪುಗೊಂಡ ಹೊಸ ಸಮಾಜವೇ ಕೂರ್ಗ್ ಎಜುಕೇಷನ್ ಸೊಸೈಟಿ (ಏಇS) ೧೯೯೭ ರಲ್ಲಿ ಅಸ್ತಿತ್ವಕ್ಕೆ ಬಂದಿತು.

ಕೊಡಗಿನ ಶಿಕ್ಷಣತಜ್ಞರಲ್ಲಿ ಪ್ರಮುಖರಾದ ಡಾ.ಮುಕ್ಕಾಟೀರ ಎಂ.ಚAಗಪ್ಪ ಅವರು ಹೊಸದಾಗಿ ರೂಪುಗೊಂಡ ಕೊಡವ ಎಜುಕೇಷನ್ ಸೊಸೈಟಿಯ ಸಂಸ್ಥಾಪಕ ಅಧ್ಯಕ್ಷರಾಗಿ ಚೆರಿಯಪಂಡ ಕೆ.ಪೂವಪ್ಪ ಅವರು ಸೊಸೈಟಿಯ ಸಂಸ್ಥಾಪಕ ಗೌರವ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದರು. ಕಟ್ಟೇರ ಎನ್.ಉತ್ತಪ್ಪ ಅವರನ್ನು ಕೋಶಾಧ್ಯಕ್ಷರನ್ನಾಗಿ ನೇಮಿಸಲಾಯಿತು. ಕೆ.ಎಸ್.ಬಿ. ಅಧ್ಯಕ್ಷರು ಕೆ.ಇ.ಎಸ್.ನ ಖಾಯಂ ಪದನಿಮಿತ್ತ ಉಪಾಧ್ಯಕ್ಷರಾಗಲು ನಿರ್ಧರಿಸಲಾಯಿತು.ಈ ೧೯ ಕಾರ್ಯಕಾರಿ ಮಂಡಳಿಯ ಸದಸ್ಯರೊಂದಿಗೆ ಎರಡನೇ ಉಪಾಧ್ಯಕ್ಷರಾಗಿ ಸಿ.ಪಿ.ಬೆಳ್ಳಿಯಪ್ಪನವರು ನಾಮ ನಿzðೆÃಶನಗೊಂಡರು. ನಂತರ ಹೊಸ ಕಾಲೇಜಿಗೆ ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿ (ಸಿ.ಐ.ಟಿ) ಎಂಬ ಹೆಸರಿಡಲಾಯಿತು. ಈ ಕಾಲೇಜಿನ ನಿಮಾರ್ಣಕ್ಕಾಗಿ ನಿಧಿ ಸಂಗ್ರಹ ಕಾರ್ಯ ಆರಂಭಿಸಲಾಯಿತು. ಈ ನಿಧಿ ಸಂಗ್ರಹ ಕಾರ್ಯದಲ್ಲಿ ಡಾ.ಮುಕ್ಕಾಟೀರ ಎಂ.ಚAಗಪ್ಪ, ಚೆರಿಯಪಂಡ ಕೆ.ಪೂವಪ್ಪ, ಕಟ್ಟೇರ ಎನ್. ಉತ್ತಪ್ಪ, ಚೆರಿಯಪಂಡ ರಾಜಾ ನಂಜಪ್ಪ, ಅಜ್ಜಿಕುಟ್ಟೀರ ಎಸ್.ಸನ್ನಿ, ಕೊಳುವಂಡ ಪಿ.ಸುಬ್ರಮಣಿ ಸೇರಿದಂತೆ ಹಲವಾರು ಮಂದಿ ತೊಡಗಿಸಿಕೊಂಡರು. ಈ ಸಂದರ್ಭದಲ್ಲಿ ಮುಲ್ಲೇಂಗಡ ಎನ್.ಬೆಳ್ಳಿಯಪ್ಪ ಅವರ ಅಧ್ಯಕ್ಷತೆಯಲ್ಲಿ ಕೆ.ಎಸ್. ಬಿ. ಕೊಡವ ಸದಸ್ಯರನ್ನು ಕೆಇಎಸ್‌ಗೆ ಬೆಂಗಳೂರಿನಲ್ಲಿ ದಾಖಲಿಸಲಾಯಿತು. ವೋಲ್ಕಾರ್ಟ್ ಫೌಂಡೇಶನ್, ಟಾಟಾ, ಐಸಿಐಸಿಐ ಬ್ಯಾಂಕ್, ಟಾಟಾ ಕಾಫಿ ಲಿಮಿಟೆಡ್ ಹೀಗೆ ಅನೇಕ ಸಂಘ ಸಂಸ್ಥೆಗಳು ಉದಾರವಾಗಿ ದೇಣಿಗೆಯನ್ನು ನೀಡಿದವು. ಆರಂಭಿಕ ಹಂತದಲ್ಲಿ ಕೆ.ಎಸ್.ಬಿ. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮವನ್ನು ಆಯೋಜಿಸಿ, ಸ್ಮರಣ ಸಂಚಿಕೆ ಹೊರ ತಂದು ಅದರಿಂದ ಸಂಗ್ರಹವಾದ ೧೬ ಲಕ್ಷ ರೂಪಾಯಿಯನ್ನು ಕೊಡವ ಎಜುಕೇಷನ್ ಸೊಸೈಟಿಗೆ ನೀಡಿತು. ಕಾಲೇಜಿನ ನಿರ್ಮಾಣಕ್ಕೆ ೨೩ ಎಕರೆ ಭೂಮಿ ಸ್ವಾಧೀನ ಪಡಿಸಿಕೊಡುವುದರಲ್ಲಿ ಚೆರಿಯಪಂಡ ಕೆ.ಪೂವಪ್ಪ ಪಾತ್ರ ಮಹತ್ವದಾಗಿದೆ ಹಾಗೂ ಇದೇ ಸಮಯದಲ್ಲಿ ಚೋಡುಮಾಡ ಅಪ್ಪಯ್ಯ ಅವರು ಕಾಲೇಜಿನ ನಿರ್ಮಾಣಕ್ಕೆ ತಮ್ಮ ೧೧.೪೭ ಎಕರೆ ಭೂಮಿಯನ್ನು ಉದಾರವಾಗಿ ನೀಡಿ ಹೃದಯ ವೈಶಾಲ್ಯತೆಯನ್ನು ಮೆರೆದಿದ್ದಾರೆ.

ಸಿ.ಐ.ಟಿ. ಕಾಲೇಜು ಸುಸಜ್ಜಿತ ಕಟ್ಟಡ, ಕ್ರೀಡಾಂಗಣ, ಪ್ರಾಯೋಗಾಲಯ ನಿರ್ಮಾಣ ಕಾರ್ಯ ಪ್ರಾರಂಭವಾಯಿತು. ಈ ಹಂತದಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜಿನಲ್ಲಿ ಆರಂಭಿಕ ಹಂತದ ತರಗತಿಗಳನ್ನು ನಡೆಸಲಾಯಿತು. ಭೂ ಪರಿವರ್ತಿಸುವ ಸಮಯದಲ್ಲಿ ಬೊಳ್ಳಚೆಟ್ಟಿರ ಮೇಜರ್ ಅಪ್ಪಚ್ಚು ಮತ್ತು ಅಜ್ಜಿಕುಟ್ಟೀರ ಶಾಂತು ಅಪ್ಪಯ್ಯ ಅವರ ಪಾತ್ರ ಮಹತ್ವದಾಗಿದೆ. ಹೀಗೆ ಸಿ.ಐ.ಟಿ ಕಾಲೇಜು ಕಂಪ್ಯೂಟರ್ ಸೈನ್ಸ್ ಆಂಡ್ ಇಂಜಿನಿಯರಿAಗ್ , ಎಲೆಕ್ಟಾçನಿಕ್ ಆಂಡ್ ಕಮ್ಯುನಿಕೇಶನ್ ಇಂಜಿನಿಯರಿAಗ್ , ಟೆಲಿಕಾಂ ಇಂಜಿನಿಯರಿAಗ್ ಮತ್ತು ಇನ್‌ಫಾರ್‌ಮೇಶನ್ ಸೈನ್ಸ್ ಆಂಡ್ ಇಂಜಿನಿಯರಿAಗ್ ಎಂಬ ನಾಲ್ಕು ವಿಭಾಗಗಳೊಂದಿಗೆ ಆರಂಭವಾಯಿತು. ಕಾಲೇಜಿನ ಮೊದಲ ಪ್ರಾಂಶುಪಾಲರಾಗಿ ಪ್ರಾಧ್ಯಾಪಕ ಚೆಲುವೆಗೌಡ ಕಾರ್ಯನಿರ್ವಹಿಸಿದರು. ಂIಅಖಿಇ ಚಿಟಿಜ ಗಿಖಿU ಅಧೀನದಲ್ಲಿ ಸಿ.ಐ.ಟಿ.ಕಾಲೇಜು ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕದ ಪ್ರತಿಷ್ಠಿತ ಇಂಜಿನಿಯರಿAಗ್ ಕಾಲೇಜಿನ ಪೈಕಿ ಒಂದಾಗಿದೆ. ಕೋಡಿಮಣಿಯಂಡ ಅನಿತಾ ಮತ್ತು ರಘು ಮಾದಪ್ಪ ಅವರು ತಮ್ಮ ಮಕ್ಕಳಾದ ಅಶ್ವಥ್ ಅಯ್ಯಪ್ಪ ಮತ್ತು ಅಖಿಲ್ ಕುಟ್ಟಪ್ಪ ಸ್ಮರಣಾರ್ಥ ಸುಸಜ್ಜಿತ ಜಿಮ್ನಾಷಿಯಂ ನ್ನು ಕಾಲೇಜಿಗೆ ನೀಡಿದ್ದಾರೆ. ಚೋಡುಮಾಡ ಅಪ್ಪಯ್ಯ ಮತ್ತು ಶಾಂತಿ ಅಪ್ಪಯ್ಯ ಸಂಸ್ಥಾಪಕ ದಾನಿಗಳು ಸೆಮಿನಾರ್ ಮತ್ತು ಮೆಕ್ಯಾನಿಕಲ್ ವಿಭಾಗವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ೨೦೧೦ರಲ್ಲಿ ಮೆಕ್ಯಾನಿಕಲ್ ಇಂಜಿನಿಯರಿAಗ್ ಮತ್ತು ೨೦೧೪ ರಲ್ಲಿ ಸಿವಿಲ್ ಇಂಜಿನಿಯರಿAಗ್ ವಿಭಾಗವನ್ನು ನಂತರ ಂI ಚಿಟಿಜ ಒಐ ,ಡೇಟಾ ಸೈನ್ಸ್ ,ಸೈಬರ್ ಸೆಕ್ಯುರಿಟಿ ಎಂಬ ಪ್ರಚಲಿತದಲ್ಲಿರುವ ವಿಭಾಗವನ್ನು ಜೊತೆಗೂಡಿಸಿಕೊಳ್ಳಲಾಗಿದೆ.

ಸಿ.ಐ.ಟಿ.ಕಾಲೇಜು ಆವರಣದಲ್ಲಿ ಸೋಲಾರ್ ವಿದ್ಯುತ್ ಸ್ಥಾವರವನ್ನು ಅಳವಡಿಸಿಕೊಂಡಿದೆ.ಇದರಿAದ ಗ್ರೀನ್ ಕ್ಯಾಂಪಸ್ ಹೆಗ್ಗಳಿಕೆಗೂ ಪಾತ್ರವಾಗಿದೆ. ಈ ಯೋಜನೆಯಿಂದಾಗಿ ಹಗಲಿನಲ್ಲಿ ಕಾಲೇಜಿನ ಅಗತ್ಯಕ್ಕೆ ವಿದ್ಯುತ್ತನ್ನು ಬಳಸಿಕೊಂಡು ,ಹೆಚ್ಚುವರಿ ವಿದ್ಯುತ್ ಶಕ್ತಿಯನ್ನು ಗ್ರೀಡ್‌ಗೆ ರವಾನಿಸಲಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣಕರ್ತರು ಕೆ.ಇ.ಎಸ್.ನ ನಿzðÉÃಶಕ ಕರ್ತಮಾಡ ಎಸ್.ತಿಮ್ಮಯ್ಯ ಇವರು ಸೋಲಾರ್ ಅಳವಡಿಸಿಕೊಳ್ಳಲು ಟಾಟಾ ಟ್ರಸ್ಟ್ ನಿಂದ ಹಣಕಾಸಿನ ಅನುದಾನವನ್ನು ಪಡೆಯಲು ಸಹಕರಿಸಿದ್ದರು.

ಈ ಕಾಲೇಜಿನಲ್ಲಿ ಒಟ್ಟು ೨೦ ಬ್ಯಾಚ್‌ನ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಪೂರ್ಣಗೊಳ್ಳಿಸಿ ಇಂಜಿನಿಯರಿAಗ್ ಪದವಿಯನ್ನು ಪಡೆದಿದ್ದಾರೆ. ಜೊತೆಗೆ ದೇಶ , ವಿದೇಶಗಳಲ್ಲಿ ಅತ್ಯುನ್ನತ ಮಟ್ಟದಲ್ಲಿ ಉದ್ಯೋಗಾವಕಾಶ ಪಡೆದು ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಭಾರತೀಯ ಸೇನೆ , IಂS , IPS ಹೀಗೆ ಭಾರತೀಯ ನಾಗರಿಕ ಸೇವಾವಲಯದಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ ಹಾಗೂ ಅನೇಕರು ಸ್ವಯಂ ಉದ್ಯಮವನ್ನು ಸ್ಥಾಪಿಸಿದ್ದಾರೆ. ಸಿ.ಐ.ಟಿ.ಕಾಲೇಜು ವಿದ್ಯಾರ್ಥಿಗಳು ಸಾಂಸ್ಕೃತಿಕ, ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಕ್ರೀಡೆ , ಸಂಶೋಧನೆ , ಆವಿಷ್ಕಾರಗಳಲ್ಲಿ ರಾಜ್ಯ, ರಾಷ್ಟçಮಟ್ಟದಲ್ಲಿ ಸ್ಥಾನವನ್ನು ಪಡೆದಿದ್ದಾರೆ. ಬೋಧಕ ವೃಂದದವರು ಕೂಡ ನೂತನ ಸಂಶೋಧನೆ ಆವಿಷ್ಕಾರದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.

ಕೊಡವ ಎಜುಕೇಷನ್ ಸೊಸೈಟಿಯು ತನ್ನ ಪ್ರಾಥಮಿಕ ಉದ್ದೇಶದಂತೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಸದ್ದುದೇಶದಿಂದ ೨೦೧೭ ರಲ್ಲಿ ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಪಿ.ಯು.ಕಾಲೇಜನ್ನು ಆರಂಭಿಸಿದೆ. ೨೦೨೨-೨೩ ನೇ ಸಾಲಿನಲ್ಲಿ ಸಿ.ಐ.ಟಿ.ಕಾಲೇಜು ತನ್ನ ಮೊಟ್ಟಮೊದಲ ಪ್ರಯತ್ನದಲ್ಲಿ ಓಂAಅ ಸಮಿತಿಯಿಂದ ಂ ಗ್ರೇಡ್ ಪಡೆಯುವಲ್ಲಿ ಯಶಸ್ವಿಯಾಯಿತು.ಪ್ರಸಕ್ತ ವರ್ಷ ಸಿ.ಐ.ಟಿ.ಕಾಲೇಜು ೨೫ ವರ್ಷಗಳ ಸುದೀರ್ಘ ಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಬೆಳ್ಳಿಮಹೋತ್ಸವದ ಸಂಭ್ರಮಕ್ಕೆ ನವೆಂಬರ್ ತಿಂಗಳಿನಲ್ಲಿ ಲಾಂಛನವನ್ನು ಬಿಡುಗಡೆ ಮಾಡುವ ಮೂಲಕ ವಿದ್ಯುಕ್ತ ಚಾಲನೆಯನ್ನು ನೀಡಲಾಗಿತ್ತು ಮತ್ತು ೧೦ ಕಿ.ಮೀ. ಮ್ಯಾರಥಾನ್ ಕೂಡ ಆಯೋಜಿಸಲಾಗಿತ್ತು.

ಕೊಡಗಿನಲ್ಲಿ ಪ್ರಪ್ರಥಮ ಬಾರಿಗೆ ರಾಜ್ಯಮಟ್ಟದ ಬೃಹತ್ ಕೃಷಿ ಯಂತ್ರ ಮೇಳವನ್ನು ನವೆಂಬರ್ ೫,೬,೭ ರಂದು ಮೂರು ದಿನಗಳ ಕಾಲ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ರಾಜ್ಯದ ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಚಾಲನೆಯನ್ನು ನೀಡಿದ್ದರು. ಇದೇ ಸಂದರ್ಭ ಕರ್ನಾಟಕದ ಪ್ರಸಿದ್ಧ ಕೋಳಲು ವಾದಕ ಪ್ರವೀಣ್ ಗೋಡ್ಕಿಂಡಿ ಅವರ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಇದೇ ರೀತಿ ಬೆಳ್ಳಿ ಮಹೋತ್ಸವ ಸಂಭ್ರಮದ ಸಲುವಾಗಿ ಜೂನ್ ೩ ರಂದು ಇಂಟರ್ ನ್ಯಾಷನಲ್ ಪೇಪರ್ ಪ್ರೆಸೆಂಟ್ ಸ್ಟೇಷನ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾಲೇಜಿನ ಸ್ಥಾಪನೆಗೆ ಭದ್ರ ಬುನಾದಿ ಹಾಕಿರುವ ಮಹನೀಯರನ್ನು ಸ್ಮರಿಸುವ ಸಲುವಾಗಿ ಜೂನ್ ೧೦ ರಂದು (ಇಂದು) ಸಂಸ್ಥಾಪಕರ ದಿನವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭ ಇದುವರೆಗೆ ಸೇವೆ ಸಲ್ಲಿಸಿದ ಕಾಲೇಜಿನ ಆಡಳಿತ ಮಂಡಳಿಯ ನಿರ್ದೇಶಕರುಗಳನ್ನು ಹಾಗೂ ಪ್ರಾಂಶುಪಾಲರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ. ಜೂನ್ ೧೨ ರಂದು ಎಥ್‌ನಿಕ್ ಡೇ ಆಚರಿಸಲಾಗುತ್ತಿದ್ದು, ವಿವಿಧ ರೀತಿಯ ಸಾಂಪ್ರದಾಯಿಕ ಉಡುಗೆ-ತೊಡುಗೆಯಲ್ಲಿ ವಿದ್ಯಾರ್ಥಿಗಳು ಕಂಗೊಳಿಸಲಿದ್ದಾರೆ.

ಜೂನ್ ೧೧ ಮತ್ತು ೧೨ರಂದು ಇಂಟರ್ ಕಾಲೇಜ್ ಫೆಸ್ಟ್ ಆಯೋಜಿಸಲಾಗಿದೆ. ಜೂನ್ ೧೩ ರಂದು ಸಿಐಟಿ ಕಾಲೇಜ್ ಡೇ ಆಚರಿಸುತ್ತಿದ್ದು, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಇದೇ ಕಾಲೇಜಿನಲ್ಲಿ ವಿದ್ಯಾರ್ಜನೆ ಮಾಡಿದ ಕಲ್ಬುರ್ಗಿಯ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಮತ್ತು ಪೊಲೀಸ್ ಕಮೀಷನರ್ ಆರ್. ಚೇತನ್ ಮತ್ತು ತನುಷ್ ಬಿದ್ದಪ್ಪ ಡೈರೆಕ್ಟರ್ ಡೇಟಾ ಸೈನ್ಸ್ ಒIಕಿ Iಟಿಜiಚಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕನ್ನಡದ ಹೆಸರಾಂತ ಹಿನ್ನೆಲೆ ಗಾಯಕ ವಿಜಯಪ್ರಕಾಶ್ ಒಳಗೊಂಡAತೆ ಕನ್ನಡದ ಜನಪ್ರಿಯ ಹಿನ್ನೆಲೆ ಗಾಯಕಿ ಐಶ್ವರ್ಯ ರಂಗರಾಜನ್, ದಿವ್ಯರಾಮಚಂದ್ರ ಅವರ ತಂಡದಿAದ ಜೂನ್ ೧೩ ರಂದು ಸಂಜೆ ೭ ಗಂಟೆಗೆ ಸಂಗೀತ ಕಾರ್ಯಕ್ರಮ ನಡೆಯಲಿದೆ.

-ವಿಶೇಷ ವರದಿ: ಪುತ್ತರಿರ ಕರುಣ್ ಕಾಳಯ್ಯ ಲಾಂಛನವನ್ನು ಬಿಡುಗಡೆ ಮಾಡುವ ಮೂಲಕ ವಿದ್ಯುಕ್ತ ಚಾಲನೆಯನ್ನು ನೀಡಲಾಗಿತ್ತು ಮತ್ತು ೧೦ ಕಿ.ಮೀ. ಮ್ಯಾರಥಾನ್ ಕೂಡ ಆಯೋಜಿಸಲಾಗಿತ್ತು.

ಕೊಡಗಿನಲ್ಲಿ ಪ್ರಪ್ರಥಮ ಬಾರಿಗೆ ರಾಜ್ಯಮಟ್ಟದ ಬೃಹತ್ ಕೃಷಿ ಯಂತ್ರ ಮೇಳವನ್ನು ನವೆಂಬರ್ ೫,೬,೭ ರಂದು ಮೂರು ದಿನಗಳ ಕಾಲ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ರಾಜ್ಯದ ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಚಾಲನೆಯನ್ನು ನೀಡಿದ್ದರು. ಇದೇ ಸಂದರ್ಭ ಕರ್ನಾಟಕದ ಪ್ರಸಿದ್ಧ ಕೋಳಲು ವಾದಕ ಪ್ರವೀಣ್ ಗೋಡ್ಕಿಂಡಿ ಅವರ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಇದೇ ರೀತಿ ಬೆಳ್ಳಿ ಮಹೋತ್ಸವ ಸಂಭ್ರಮದ ಸಲುವಾಗಿ ಜೂನ್ ೩ ರಂದು ಇಂಟರ್ ನ್ಯಾಷನಲ್ ಪೇಪರ್ ಪ್ರೆಸೆಂಟ್ ಸ್ಟೇಷನ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾಲೇಜಿನ ಸ್ಥಾಪನೆಗೆ ಭದ್ರ ಬುನಾದಿ ಹಾಕಿರುವ ಮಹನೀಯರನ್ನು ಸ್ಮರಿಸುವ ಸಲುವಾಗಿ ಜೂನ್ ೧೦ ರಂದು (ಇಂದು) ಸಂಸ್ಥಾಪಕರ ದಿನವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭ ಇದುವರೆಗೆ ಸೇವೆ ಸಲ್ಲಿಸಿದ ಕಾಲೇಜಿನ ಆಡಳಿತ ಮಂಡಳಿಯ ನಿರ್ದೇಶಕರುಗಳನ್ನು ಹಾಗೂ ಪ್ರಾಂಶುಪಾಲರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ. ಜೂನ್ ೧೨ ರಂದು ಎಥ್‌ನಿಕ್ ಡೇ ಆಚರಿಸಲಾಗುತ್ತಿದ್ದು, ವಿವಿಧ ರೀತಿಯ ಸಾಂಪ್ರದಾಯಿಕ ಉಡುಗೆ-ತೊಡುಗೆಯಲ್ಲಿ ವಿದ್ಯಾರ್ಥಿಗಳು ಕಂಗೊಳಿಸಲಿದ್ದಾರೆ.

ಜೂನ್ ೧೧ ಮತ್ತು ೧೨ರಂದು ಇಂಟರ್ ಕಾಲೇಜ್ ಫೆಸ್ಟ್ ಆಯೋಜಿಸಲಾಗಿದೆ. ಜೂನ್ ೧೩ ರಂದು ಸಿಐಟಿ ಕಾಲೇಜ್ ಡೇ ಆಚರಿಸುತ್ತಿದ್ದು, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಇದೇ ಕಾಲೇಜಿನಲ್ಲಿ ವಿದ್ಯಾರ್ಜನೆ ಮಾಡಿದ ಕಲ್ಬುರ್ಗಿಯ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಮತ್ತು ಪೊಲೀಸ್ ಕಮೀಷನರ್ ಆರ್. ಚೇತನ್ ಮತ್ತು ತನುಷ್ ಬಿದ್ದಪ್ಪ ಡೈರೆಕ್ಟರ್ ಡೇಟಾ ಸೈನ್ಸ್ ಒIಕಿ Iಟಿಜiಚಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕನ್ನಡದ ಹೆಸರಾಂತ ಹಿನ್ನೆಲೆ ಗಾಯಕ ವಿಜಯಪ್ರಕಾಶ್ ಒಳಗೊಂಡAತೆ ಕನ್ನಡದ ಜನಪ್ರಿಯ ಹಿನ್ನೆಲೆ ಗಾಯಕಿ ಐಶ್ವರ್ಯ ರಂಗರಾಜನ್, ದಿವ್ಯರಾಮಚಂದ್ರ ಅವರ ತಂಡದಿAದ ಜೂನ್ ೧೩ ರಂದು ಸಂಜೆ ೭ ಗಂಟೆಗೆ ಸಂಗೀತ ಕಾರ್ಯಕ್ರಮ ನಡೆಯಲಿದೆ.

-ವಿಶೇಷ ವರದಿ: ಪುತ್ತರಿರ ಕರುಣ್ ಕಾಳಯ್ಯ