ಮಡಿಕೇರಿ, ಜೂ. ೯: ವೀರಾಜಪೇಟೆ ಸಂತ ಅನ್ನಮ್ಮ ಕಾಲೇಜಿನ ಉಪನ್ಯಾಸಕಿ ಪ್ರತಿಮಾ ಹರೀಶ್ ರೈ ವಿರಚಿತ ಅಂತರಗAಗೆ ಕೃತಿ ಲೋಕಾರ್ಪಣೆ ಕಾರ್ಯಕ್ರಮ ನಗರದ ರೆಡ್ ಬ್ರಿಕ್ಸ್ನ ಸತ್ಕಾರ್ ಸಭಾಂಗಣದಲ್ಲಿ ನಡೆಯಿತು.

ಸಮಾರಂಭದಲ್ಲಿ ಕೃತಿಯ ಬಗ್ಗೆ ಮಾತನಾಡಿದ ಚಿಕ್ಕಅಳುವಾರ ಕೊಡಗು ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ. ಜಮೀರ್ ಅಹಮ್ಮದ್, ಸಾಮಾಜಿಕ ಹೊಣೆಗಾರಿಕೆ ಹೆಚ್ಚಿಸುವಲ್ಲಿ ಪುಸ್ತಕಗಳ ಪಾತ್ರ ಮಹತ್ವದ್ದಾಗಿದ್ದು, ಬಾಲ್ಯದಿಂದಲೇ ಮಕ್ಕಳಲ್ಲಿ ಉತ್ತಮ ಸಂಸ್ಕಾರ ರೂಪಿಸುವ ನಿಟ್ಟಿನಲ್ಲಿ ಒಳ್ಳೆಯ ಮಾಹಿತಿಯುಳ್ಳ ಕೃತಿಗಳು ತಮ್ಮದೇ ಕೊಡುಗೆ ನೀಡುತ್ತವೆ ಎಂದರು.

ಅಂತರಗAಗೆ ಕೃತಿಯು ಸಮಾಜಮುಖಿ ಬರಹಗಳನ್ನು ಒಳಗೊಂಡಿದ್ದು, ಸಮಾಜದ ಒಳಿತಿಗಾಗಿ ಮಾಹಿತಿಯುಕ್ತ ಲೇಖನ ಗಳನ್ನು ಈ ಲೇಖನಗಳ ಸಂಗ್ರಹ ಒಳಗೊಂಡಿದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಮಹಿಳಾ ಬರಹಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ೨೦೦೨ ರಿಂದ ಕನ್ನಡ ಸಾಹಿತ್ಯ ಪರಿಷತ್ ಕೊಡಗಿನ ಗೌರಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ದತ್ತಿನಿಧಿಗೆ ಈವರೆಗೂ ೨೧ ಲೇಖಕಿಯರು ಅರ್ಹರಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಲೇಖಕಿಯರನ್ನು ಪ್ರೋತ್ಸಾಹಿಸುವ ಕೆಲಸವನ್ನು ಕಸಾಪ ಮಾಡುತ್ತಿದೆ. ಕೊಡಗು ಜಿಲ್ಲೆಯ ಲೇಖಕ, ಲೇಖಕಿಯರಿಂದ ರಚನಾತ್ಮಕ, ಗುಣಾತ್ಮಕ ಕೃತಿಗಳು ಪ್ರಕಟವಾಗುತ್ತಿರು ವುದು ಶ್ಲಾಘನೀಯ ಎಂದು ಹೇಳಿದರು,

ಅತಿಥಿಗಳಾಗಿ ಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಮಾತನಾಡಿ, ಸಪ್ತನದಿಗಳಲ್ಲಿ ಪ್ರಮುಖಳಾಗಿರುವ ಗಂಗೆಯು ಪವಿತ್ರ ನದಿಯಾಗಿ ಖ್ಯಾತಿ ಪಡೆದಿದ್ದು, ಮನುಷ್ಯನ ಮನಸ್ಸನ್ನು ವಿಚಾರಗಳ ಮೂಲಕ ಶುಚಿಗೊಳಿಸುವಂಥ ಅಂಶಗಳು ಅಂತರಗAಗೆಯಲ್ಲಿದೆ. ಮನಸ್ಸಿನ ಜಾಗೃತಿಗೆ ಕಾರಣವಾಗ ಬಲ್ಲಂತ ಕಾರ್ಯ ಸಾಹಿತ್ಯ ಕೃಷಿಯಿಂದ ಆಗಬೇಕೆಂದರು.

ಕೃತಿ ಲೋಕಾರ್ಪಣೆ ಮಾಡಿದ ಶನಿವಾರಸಂತೆಯ ಉಪನ್ಯಾಸಕಿ, ಸಾಹಿತಿ ಶ.ಗ ನಯನತಾರಾ ಮಾತನಾಡಿ, ನಿತ್ಯದ ಜೀವನದಲ್ಲಿ ಅನುಭವಿಸುವಂಥ ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ವಿಚಾರಗಳೊಂದಿಗೆ ಜೀವನದಲ್ಲಿ ಸಂಕಷ್ಟ ಎದುರಿ ಸುತ್ತಿರುವವರಿಗೆ ಅಂತರಗAಗೆ ಯಲ್ಲಿನ ಲೇಖನಗಳು ಗುಣಾತ್ಮಕ ಅಂಶಗಳ ಮಾಹಿತಿಯೊಂದಿಗೆ ಮಾರ್ಗದರ್ಶನ ನೀಡುವಂಥವು ಎಂದು ಅಭಿಪ್ರಾಯಪಟ್ಟರು.

ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಹೆಚ್.ಟಿ, ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಪ್ರತೀ ೧೫ ದಿನಕ್ಕೊಮ್ಮೆ ಹೊಸ ಕೃತಿಗಳು ಲೋಕಾರ್ಪಣೆಯಾಗುತ್ತಿವೆ. ಆದರೆ ಆಸಕ್ತ ಓದುಗರಿಗೆ ಕೃತಿಗಳನ್ನು ತಲುಪಿಸಲು ಸೂಕ್ತ ವ್ಯವಸ್ಥೆ ಇಲ್ಲದಾಗಿದೆ, ಈ ನಿಟ್ಟಿನಲ್ಲಿ ಕಸಾಪ ಸೇರಿದಂತೆ ಆಸಕ್ತ ಸಂಘಸAಸ್ಥೆಗಳು ಮೂರು ತಿಂಗಳಿಗೊಮ್ಮೆಯಾದರೂ ಜಿಲ್ಲೆಯ ೫ ತಾಲೂಕಿನಲ್ಲಿ ಪುಸ್ತಕ ಸಂತೆ ಆಯೋಜಿಸುವ ಮೂಲಕ ಪ್ರಕಟಿತ ಪುಸ್ತಕಗಳನ್ನು ಓದುಗರಿಗೆ ತಲುಪಿಸುವ ಯೋಜನೆ ರೂಪಿಸುವಂತಾಗ ಬೇಕೆಂದರು.

ಮಡಿಕೇರಿ ಆಕಾಶವಾಣಿಯ ಉದ್ಘೋಷಕ ಸುಬ್ರಾಯ ಸಂಪಾಜೆ ಮಾತನಾಡಿ, ಅಂತರಗAಗೆ ಹೆಸರಿನಲ್ಲಿಯೇ ವಿಶಿಷ್ಟö್ಯತೆ ಇದೆ, ಶುದ್ದತೆಯ ಪ್ರತೀಕವಾಗಿದ್ದ ಗಂಗೆಯನ್ನು ಲೋಕಶುದ್ದತೆಯ ಕಾರಣಕ್ಕಾಗಿ ಆಕಾಶಗಂಗೆಯಾಗಿ ದೇವಾನುದೇವತೆಗಳು ಬಳಸಿದ್ದರು ಎಂದರು,

ಕೊಡಗು ಬಂಟರ ಸಂಘದ ಅಧ್ಯಕ್ಷ ಜಗದೀಶ್ ರೈ ಮಾತನಾಡಿ, ಅಂತರಗAಗೆ ಕೃತಿಯು ಓದುಗರಿಗೆ ಪ್ರಯೋಜನಕಾರಿಯಾಗಲಿ ಎಂದು ಹೇಳಿದರು.

ಕೇರಳದ ಮಂಜೇಶ್ವರದ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಅರವಿಂದಾಕ್ಷ ಭಂಡಾರಿ ಮಾತನಾಡಿ, ಅಂತರರಾಜ್ಯದ ಗಡಿ ಭಾಗದಲ್ಲಿ ಕನ್ನಡ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆಯುಂಟಾಗಿ ಮುಚ್ಚುವ ಹಂತ ತಲುಪಿದೆ ಎಂದು ಆತಂಕ ವ್ಯಕ್ತಪಡಿಸಿದರಲ್ಲದೇ, ಮಾದಕ ವ್ಯಸನಗಳಿಗೆ ದಾಸರಾಗುತ್ತಿರುವ ಯುವ ಜನಾಂಗದ ಬಗ್ಗೆ ಪೋಷಕರು ಈಗಿನಿಂದಲೇ ಎಚ್ಚರಗೊಳ್ಳದಿದ್ದರೆ ದುರಂತ ಕಾದಿದೆ ಎಂದು ಎಚ್ಚರಿಸಿದರು,

ಅಂತರಗAಗೆ ಲೇಖಕಿ ಪ್ರತಿಮಾ ಹರೀಶ್ ರೈ ಮಾತನಾಡಿ, ಸಮಾಜದಲ್ಲಿ ಇರುವ ಉತ್ತಮ ಅಂಶಗಳನ್ನು ಪರಿಗಣಿಸಲು ನಾವು ನೋಡುವ ದೃಷ್ಟಿಕೋನ ಕೂಡ ಉತ್ತಮವಾಗಿರಬೇಕೆಂದು ಅಭಿಪ್ರಾಯಪಟ್ಟರಲ್ಲದೇ, ನೈಜ ಜೀವನದ ಆನಂದಕ್ಕಾಗಿ ಸಾಹಿತ್ಯ ಕೃತಿಗಳ ಅಗತ್ಯವಿದೆ ಎಂದರು.

ಶಿಕ್ಷಕಿ ಕಾವೇರಮ್ಮ ಸ್ವಾಗತಿಸಿ, ಉಪನ್ಯಾಸಕಿ ಕೆ. ಜಯಲಕ್ಷಿö್ಮ ನಿರೂಪಿಸಿದರು, ಪ್ರತಿಭಾ ಮಧುಕರ್ ಪ್ರಾರ್ಥಿಸಿ, ಸೌಮ್ಯ ಸತೀಶ್ ರೈ ವಂದಿಸಿದರು. ನಮಿತಾ ಶೆಣೈ ಮತ್ತು ಅಕ್ಷರ ಅವರಿಂದ ಸ್ವಾಗತ ನೃತ್ಯ ನಡೆಯಿತು. ಬಿ.ಬಿ. ಹರೀಶ್ ರೈ ಹಾಜರಿದ್ದರು. ಗಾಯತ್ರಿದೇವಿ ನಿರೂಪಣೆಯಲ್ಲಿ ಮೂಡಿ ಬಂದ ಗಾನಕಾವೇರಿ ತಂಡದ ಸಂಗೀತ ಕಾರ್ಯಕ್ರಮದಲ್ಲಿ ಜಿಲ್ಲೆಯ ಗಾಯಕ ಗಾಯಕಿಯರಾದ ಅನ್ವಿತ್, ಟಿ.ಡಿ. ಮೋಹನ್, ಅಜಿತ್, ಅಮೃತ್ ರಾಜ್, ಅನಿತ್ ರಾಜ್ನ, ಸ್ನೇಹ ಮಧುಕರ್, ರಚನ್ ಪೊನ್ನಪ್ಪ, ಬಿ, ಜಿ ಅನಂತಶಯನ, ಅವರುಗಳಿಂದ ವೈವಿಧ್ಯಮಯ ಹಾಡುಗಾರಿಕೆ ನಡೆೆಯಿತು.