ಸೋಮವಾರಪೇಟೆ,ಜೂ.೯: ಸಮೀಪದ ಐಗೂರು ಗ್ರಾಮದಲ್ಲಿ ಜೀರ್ಣೋದ್ದಾರಗೊಂಡಿರುವ ಶ್ರೀ ಮುತ್ತಪ್ಪ ದೇವಾಲಯದ ಲೋಕಾರ್ಪಣಾ ಮಹೋತ್ಸವ ಹಲವು ಧಾರ್ಮಿಕ ವಿಧಿವಿಧಾನಗಳೊಂದಿಗೆ ಶಾಸ್ತೊçÃಕ್ತವಾಗಿ ನೆರವೇರಿತು. ಕೇರಳದ ಪನ್ನಿಯೋಟ್ ಇಲ್ಲತ್ ಶ್ರೀ ಮಾಧವನ್ ನಂಬೂದರಿ ಅವರ ಪೌರೋಹಿತ್ಯದಲ್ಲಿ ಪೂಜಾ ಮಹೋತ್ಸವಗಳು, ದೇವಾಲಯ ಲೋಕಾರ್ಪಣೆ, ಶ್ರೀ ಮುತ್ತಪ್ಪ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠಾಪನಾ ಮಹೋತ್ಸವ ನೆರವೇರಿದವು.
ನಿನ್ನೆ ಸಂಜೆಯಿAದಲೇ ಪೂಜಾ ಕೈಂಕರ್ಯಗಳಿಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ದೇವಾಲಯದಲ್ಲಿ ಪುಣ್ಯಾಹ, ಆಚಾರ್ಯ ಭರಣ ಕ್ರಿಯಾ ಮತ್ತು ಪ್ರಸಾದ ಪೀಠ ಪರಿಗ್ರಹ ಹಾಗೂ ವಾಸ್ತು ಪೂಜೆ, ಇಂದು ಬೆಳಿಗ್ಗೆಯಿಂದ ಗಣಪತಿ ಹೋಮ, ದೇವರ ಆವಾಹನೆ, ಪ್ರತಿಷ್ಠಾಪನೆ, ಜೀವ ಕಳಶಾಭಿಷೇಕಂ ನಡೆದವು.
ನಂತರ ಮಲಯರಕ್ಕಲ್ ಮತ್ತು ಮುತ್ತಪ್ಪನ್ ವೆಳ್ಳಾಟಂ, ತಿರುವಪ್ಪನ್ ವೆಳ್ಳಾಟಂ, ಕುಟ್ಟಿಚಾತನ್ ವೆಳ್ಳಾಟಂ, ಗುಳಿಗ ವೆಳ್ಳಾಟಂ, ಕಳಿಕ್ಕಾಪಾಟ್, ಪೋದಿ ವೆಳ್ಳಾಟಂ ಮತ್ತು ಕಳಸ ಆಗಮನ ನೆರವೇರಿತು.
ತಾ. ೧೦ ರಂದು(ಇAದು) ಗುಳಿಗನ ಕೋಲ, ಮುತ್ತಪ್ಪ ದೇವರ ಕೋಲ, ತಿರುವಪ್ಪನ ಕೋಲ, ೬ ಗಂಟೆಗೆ ಕುಟ್ಟಿಚಾತನ್ ಕೋಲ, ೯ ಗಂಟೆಗೆ ಪೋದಿ ಕೋಲ, ೧೧.೩೦ ಗಂಟೆಗೆ ಗುರುಶ್ರೀ ದರ್ಪಣ ನಡೆಯಲಿದೆ. ಇದರೊಂದಿಗೆ ಸಾರ್ವಜನಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ. ದೇವಾಲಯ ಸಮಿತಿ ಅಧ್ಯಕ್ಷ ಮಹೇಶ್ ಸೇರಿದಂತೆ ಸಮಿತಿ ಪದಾಧಿಕಾರಿಗಳು, ನೂರಾರು ಮಂದಿ ಭಕ್ತಾದಿಗಳು ದೇವಾಲಯ ಲೋಕಾರ್ಪಣಾ ಮಹೋತ್ಸವದಲ್ಲಿ ಭಾಗಿಯಾಗಿದ್ದರು.