ನವದೆಹಲಿ, ಜೂ. ೯: ಭಾರತದ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿಯವರು ಮೂರನೇ ಬಾರಿಗೆ ದೇವರ ಹೆಸರಿನಲ್ಲಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟçಪತಿ ಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ನರೇಂದ್ರ ಮೋದಿ ಸೇರಿದಂತೆ ೭೨ ನೂತನ ಸಚಿವರಿಗೆ ರಾಷ್ಟçಪತಿ ದ್ರೌಪದಿ ಮುರ್ಮು ಪ್ರಮಾಣ ವಚನ ಬೋಧಿಸಿದರು. ಕರ್ನಾಟಕದಿಂದ ಐವರಿಗೆ ಸಚಿವ ಸ್ಥಾನ ಸಿಕ್ಕಿದ್ದು, ಮಂಡ್ಯ ಸಂಸದ ಹೆಚ್.ಡಿ. ಕುಮಾರಸ್ವಾಮಿ, ಧಾರವಾಡ ಸಂಸದ ಪ್ರಹ್ಲಾದ್ ಜೋಷಿ, ರಾಜ್ಯಸಭಾ ಸದಸ್ಯೆ ನಿರ್ಮಲಾ ಸೀತಾರಾಮನ್ ಸಂಪುಟ ದರ್ಜೆ ಸಚಿವರಾಗಿ, ಬೆಂಗಳೂರು ಉತ್ತರ ಸಂಸದೆ ಶೋಭಾ ಕರಂದ್ಲಾಜೆ, ತುಮಕೂರು ಸಂಸದ ವಿ. ಸೋಮಣ್ಣ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಎನ್.ಡಿ.ಎ. ನೇತೃತ್ವದ ಸಂಪುಟದಲ್ಲಿ ೩೦ ಸಂಪುಟ ದರ್ಜೆ, ೩೬ ಮಂದಿ ರಾಜ್ಯ ಸಚಿವರು, ೫ ಮಂದಿ ಸ್ವತಂತ್ರ ರಾಜ್ಯ ಖಾತೆ ಸಚಿವರುಗಳಾಗಿ ಅಧಿಕಾರ ಸ್ವೀಕರಿಸಿದರು.

ಸಂಪುಟ ದರ್ಜೆ ಸಚಿವರು

ರಾಜನಾಥ್ ಸಿಂಗ್ (ಬಿಜೆಪಿ), ಅಮಿತ್ ಶಾ (ಬಿಜೆಪಿ), ನಿತಿನ್ ಗಡ್ಕರಿ (ಬಿಜೆಪಿ), ಜೆ.ಪಿ ನಡ್ಡಾ (ಬಿಜೆಪಿ), ಶಿವರಾಜ್ ಸಿಂಗ್ ಚೌಹಾಣ್ (ಬಿಜೆಪಿ), ನಿರ್ಮಲಾ ಸೀತಾರಾಮನ್ (ಬಿಜೆಪಿ), ಎಸ್. ಜೈಶಂಕರ್ (ಬಿಜೆಪಿ), ಮನೋಹರ್ ಲಾಲ್ ಖಟ್ಟರ್ (ಬಿಜೆಪಿ), ಎಚ್‌ಡಿ ಕುಮಾರಸ್ವಾಮಿ (ಜೆಡಿಎಸ್), ಪಿಯೂಷ್ ಗೋಯಲ್ (ಬಿಜೆಪಿ), ಧರ್ಮೇಂದ್ರ ಪ್ರಧಾನ್ (ಬಿಜೆಪಿ), ಜಿತನ್ ರಾಮ್ ಮಾಂಝಿ (ಹೆಚ್‌ಎಎಂ), ರಾಜೀವ್ ರಂಜನ್ ಸಿಂಗ್ (ಜೆಡಿಯು), ಸರ್ಬಾನಂದ್ ಸೋನೋವಾಲ್ (ಬಿಜೆಪಿ), ಡಾ. ವೀರೇಂದ್ರ ಕುಮಾರ್ (ಬಿಜೆಪಿ), ರಾಮ್ ಮೋಹನ್ ನಾಯ್ಡು (ಟಿಡಿಪಿ), ಪ್ರಹ್ಲಾದ್ ಜೋಷಿ (ಬಿಜೆಪಿ), ಜುಯಲ್ ಓರಮ್ (ಬಿಜೆಪಿ), ಗಿರಿರಾಜ್ ಸಿಂಗ್ (ಬಿಜೆಪಿ), ಅಶ್ವಿನಿ ವೈಷ್ಣವ್ (ಬಿಜೆಪಿ), ಜ್ಯೋತಿರಾಧಿತ್ಯ ಸಿಂಧಿಯಾ (ಬಿಜೆಪಿ), ಭೂಪೇಂದರ್ ಯಾದವ್ (ಬಿಜೆಪಿ), ಗಜೇಂದ್ರ ಸಿಂಗ್ ಶೇಖಾವತ್ (ಬಿಜೆಪಿ), ಅನ್ನಪೂರ್ಣ ದೇವಿ (ಬಿಜೆಪಿ), ಕಿರಣ್ ರಿಜಿಜು (ಬಿಜೆಪಿ), ಹರ್ದೀಪ್ ಸಿಂಗ್ ಪುರಿ (ಬಿಜೆಪಿ), ಡಾ. ಮನ್ಸೂಖ್ ಮಾಂಡವಿಯಾ (ಬಿಜೆಪಿ), ಜಿ. ಕಿಶನ್ ರೆಡ್ಡಿ (ಬಿಜೆಪಿ), ಚಿರಾಗ್ ಪಾಸ್ವಾನ್ (ಎಲ್‌ಜೆಪಿ-ರಾಮ್ ವಿಲಾಸ್), ಸಿ.ಆರ್ ಪಾಟೀಲ್ (ಬಿಜೆಪಿ).

ಸ್ವತಂತ್ರ ಖಾತೆ ರಾಜ್ಯ ಸಚಿವರು

ರಾವ್ ಇಂದರ್‌ಜಿತ್ ಸಿಂಗ್ (ಬಿಜೆಪಿ), ಡಾ. ಜಿತೇಂದ್ರ ಸಿಂಗ್ (ಬಿಜೆಪಿ), ಅರ್ಜುನ್ ರಾಮ್ ಮೇಘವಾಲ್ (ಬಿಜೆಪಿ), ಪ್ರತಾಪ್ ಜಾಧವ್ (ಶಿವಸೇನೆ), ಜಯಂತ್ ಚೌಧರಿ (ಆರ್‌ಎಲ್‌ಡಿ).

ರಾಜ್ಯ ಸಚಿವರು

ಜಿತಿನ್ ಪ್ರಸಾದ್ (ಬಿಜೆಪಿ), ಶ್ರೀಪಾದ್ ನಾಯಕ್ (ಬಿಜೆಪಿ), ಕಿಶನ್ ಪಾಲ್ ಗುರ್ಜರ್ (ಬಿಜೆಪಿ), ಪಂಕಜ್ ಚೌಧರಿ (ಬಿಜೆಪಿ), ರಾಮದಾಸ್ ಅಠಾವಳೆ (ಖPI), ರಾಮನಾಥ್ ಠಾಕೂರ್ (ಜೆಡಿಯು), ನಿತ್ಯಾನಂದ ರೈ (ಬಿಜೆಪಿ), ಅನುಪ್ರಿಯಾ ಪಟೇಲ್ (ಅಪ್ನಾ ದಳ), ವಿ ಸೋಮಣ್ಣ (ಬಿಜೆಪಿ), ಚಂದ್ರಶೇಖರ್ ಪೆಮ್ಮಸಾನಿ (ಟಿಡಿಪಿ), ಎಸ್ಪಿ ಸಿಂಗ್ ಬಘೇಲ್ (ಬಿಜೆಪಿ), ಶೋಭಾ ಕರಂದ್ಲಾಜೆ (ಬಿಜೆಪಿ), ಕೀರ್ತಿವರ್ಧನ್ ಸಿಂಗ್ (ಬಿಜೆಪಿ), ಬಿಎಲ್ ವರ್ಮಾ (ಬಿಜೆಪಿ), ಶಾಂತನು ಠಾಕೂರ್ (ಬಿಜೆಪಿ), ಸುರೇಶ್ ಗೋಪಿ (ಬಿಜೆಪಿ), ಎಲ್ ಮುರುಗನ್ (ಬಿಜೆಪಿ), ಬಂಡಿ ಸಂಜಯ್ ಕುಮಾರ್ (ಬಿಜೆಪಿ), ಅಜಯ್ ತಮಟಾ (ಬಿಜೆಪಿ), ಭಗೀರಥ್ ಚೌಧರಿ (ಬಿಜೆಪಿ), ಕಮಲೇಶ್ ಪಾಸ್ವಾನ್ (ಬಿಜೆಪಿ), ಸತೀಶ್ ಚಂದ್ರ ದುಬೆ (ಬಿಜೆಪಿ), ಸಂಜಯ್ ಸೇಠ್ (ಬಿಜೆಪಿ), ರವನೀತ್ ಸಿಂಗ್ ಬಿಟ್ಟು (ಬಿಜೆಪಿ), ದುರ್ಗಾದಾಸ್ ಯುಕೆ (ಬಿಜೆಪಿ), ರಕ್ಷಾ ಖಡ್ಸೆ (ಬಿಜೆಪಿ), ಸುಕಾಂತ ಮಜುಂದಾರ್ (ಬಿಜೆಪಿ), ಸಾವಿತ್ರಿ ಠಾಕೂರ್ (ಬಿಜೆಪಿ), ತೋಖಾನ್ ಸಾಹು (ಬಿಜೆಪಿ), ರಾಜ್ ಭೂಷಣ್ ಚೌಧರಿ (ಬಿಜೆಪಿ), ಭೂಪತಿ ರಾಜು ಶ್ರೀನಿವಾಸ ವರ್ಮಾ (ಬಿಜೆಪಿ), ಹರ್ಷ್ ಮಲ್ಹೋತ್ರಾ (ಬಿಜೆಪಿ), ನಿಮುಬೆನ್ ಬಂಭನಿಯಾ (ಬಿಜೆಪಿ), ಮುರಳೀಧರ್ ಮೋಹನನ್ (ಬಿಜೆಪಿ), ಜಾರ್ಜ್ ಕುರಿಯನ್ (ಬಿಜೆಪಿ), ಪಬಿತ್ರಾ ಮಾರ್ಗರಿಟಾ (ಬಿಜೆಪಿ).

ಮೋದಿ ಸಂಪುಟದಲ್ಲಿ ೬೧ ಮಂದಿ ಬಿಜೆಪಿ, ೧೧ ಎನ್‌ಡಿಎ ಮೈತ್ರಿಕೂಟದ ಸಂಸದರಿಗೆ ಸಚಿವ ಸ್ಥಾನದೊಂದಿಗೆ ೨೪ ರಾಜ್ಯಗಳಿಗೆ ಪ್ರಾತಿನಿಧ್ಯ ನೀಡಲಾಗಿದೆ. ೨೭ ಒಬಿಸಿ, ೧೦ ಎಸ್‌ಸಿ, ೫ ಎಸ್‌ಟಿ, ೭ ಮಹಿಳೆಯರು, ೫ ಅಲ್ಪಸಂಖ್ಯಾತ ವರ್ಗಕ್ಕೆ ಅವಕಾಶ ನೀಡಲಾಗಿದೆ. ಕಾರ್ಯಕ್ರಮದಲ್ಲಿ ಭಾರತದ ನೆರೆ ರಾಷ್ಟçಗಳಾದ ಮಾಲ್ಡೀವ್ಸ್ ನ ಅಧ್ಯಕ್ಷ ಮೊಹಮ್ಮದ್ ಮುಯಿಝು, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ‘ಪ್ರಚಂಡ', ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ, ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನಾಥ್, ಭೂತಾನ್ ಪ್ರಧಾನಿ ತ್ಶೇರಿಂಗ್ ಮತ್ತು ಸೆಶೆಲ್ಸ್ನ ಉಪಾಧ್ಯಕ್ಷ ಅಹ್ಮದ್ ಅಫೀಫ್ ಅವರು ಸಮಾರಂಭದಲ್ಲಿ ವಿಶೇಷ ಅತಿಥಿಗಳಾಗಿದ್ದರು.

ಉಪರಾಷ್ಟçಪತಿ ಜಗದೀಪ್ ಧನಕರ್, ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ಟಿಡಿಪಿ ಮುಖ್ಯಸ್ಥ ಮತ್ತು ಆಂಧ್ರಪ್ರದೇಶದ ನಿಯೋಜಿತ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪೇಜಾವರ ಶ್ರೀಗಳು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಚಿತ್ರನಟರಾದ ರಜನಿಕಾಂತ್, ಶಾರುಖ್ ಖಾನ್, ಮುಖೇಶ್ ಅಂಬಾನಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.