ಪೊನ್ನಂಪೇಟೆ, ಜೂ. ೯: ಥ್ರೋಬಾಲ್ ಪಂದ್ಯದಲ್ಲಿ ಸಾಧನೆ ಮಾಡಿ ರಾಷ್ಟçಮಟ್ಟಕ್ಕೆ ಆಯ್ಕೆಯಾಗಿ, ಆರ್ಥಿಕ ತೊಂದರೆ ಇದ್ದ ಕಾರಣ ಗೋವಾ ರಾಜ್ಯದಲ್ಲಿ ನಡೆಯಲಿರುವ ರಾಷ್ಟçಮಟ್ಟದ ಥ್ರೋಬಾಲ್ ಪಂದ್ಯಾವಳಿಗೆ ತೆರಳಲು ಹಿಂದೇಟು ಹಾಕಿದ್ದ ಬಾಲಕಿಗೆ ಮಾನವೀಯ ಸ್ನೇಹಿತರ ಒಕ್ಕೂಟದ ವತಿಯಿಂದ ಆರ್ಥಿಕ ಸಹಾಯ ನೀಡಲಾಯಿತು.
ಕುಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ೭ನೇ ತರಗತಿ ವಿದ್ಯಾರ್ಥಿನಿ, ನಾಗರಹೊಳೆ ಹಾಡಿಯ ಜೇನು ಕುರುಬರ ಕರಿಯ ಹಾಗೂ ಪಾರ್ವತಿ ದಂಪತಿಯ ಪುತ್ರಿ ಜೆ.ಕೆ ಚೈತ್ರ ರಾಜ್ಯಮಟ್ಟದ ಥ್ರೋಬಾಲ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ರಾಷ್ಟçಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದಳು.
ಈಕೆ ಜೂನ್ ೭ ರಿಂದ ೯ ರವರೆಗೆ ಗೋವಾದಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಭಾಗವಹಿಸಬೇಕಾಗಿತ್ತು. ಆದರೆ ಆರ್ಥಿಕ ಸಂಕಷ್ಟದಲ್ಲಿರುವ ಬಡ ಕುಟುಂಬದ ಈ ಬಾಲಕಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಹಣಕಾಸಿನ ವ್ಯವಸ್ಥೆ ಇಲ್ಲದೆ, ನಿರಾಶಳಾಗಿದ್ದಳು. ಈ ಬಗ್ಗೆ ಮಾನವೀಯ ಸ್ನೇಹಿತರ ಒಕ್ಕೂಟದ ಪ್ರತಿನಿಧಿ ಕುಟ್ಟ ಸರ್ಕಾರಿ ಶಾಲೆಯ ಶಿಕ್ಷಕಿ ಅಲಿಮಾ ಅವರು ಮಾನವೀಯ ಸ್ನೇಹಿತರ ಒಕ್ಕೂಟಕ್ಕೆ ಮಾಹಿತಿ ನೀಡಿ ಒಕ್ಕೂಟದಿಂದ ಆರ್ಥಿಕ ನೆರವನ್ನು ಕೋರಿದ್ದರು. ಈ ಕೋರಿಕೆಯನ್ನು ಪರಿಗಣಿಸಿದ ಮಾನವೀಯ ಸ್ನೇಹಿತರ ಒಕ್ಕೂಟದ ಅಡ್ಮಿನ್ ಬಳಗ ಚರ್ಚಿಸಿ ಬಾಲಕಿ ಚೈತ್ರಳಿಗೆ ನೆರವು ನೀಡಲು ನಿರ್ಧರಿಸಿ, ಬಾಲಕಿಯ ಕ್ರೀಡಾ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿ, ರಾಷ್ಟçಮಟ್ಟದ ಪಂದ್ಯದಲ್ಲಿ ಭಾಗವಹಿಸಲು ತಗುಲುವ ಸಂಪೂರ್ಣ ವೆಚ್ಚವನ್ನು ಮಾನವೀಯ ಸ್ನೇಹಿತರ ಒಕ್ಕೂಟದ ವತಿಯಿಂದ ಶಿಕ್ಷಕಿ ಅಲಿಮಾ ಅವರ ಮೂಲಕ ಬಾಲಕಿಗೆ ತಲುಪಿಸಲಾಯಿತು.
ಗೋವಾದಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ಭಾಗವಹಿಸಲು ಶಿಕ್ಷಕಿ ಅಲೀಮಾ ಮತ್ತು ತರಬೇತುದಾರ ಸುರೇಶ್ ಅವರ ನೇತೃತ್ವದ ತಂಡದೊAದಿಗೆ ತಾ. ೬ ರಂದು ಚೈತ್ರ ತೆರಳಿದ್ದಾಳೆ.