ಕುಶಾಲನಗರ: ಗಿಡ-ಮರಗಳನ್ನು ನೆಡುವ ಮೂಲಕ ಅವುಗಳನ್ನು ಬೆಳೆಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಕುಶಾಲನಗರ ತಾಲೂಕು ತಹಶೀಲ್ದಾರ್ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆಡಳಿತ ಅಧಿಕಾರಿ ಕಿರಣ್ ಗೌರಯ್ಯ ಕರೆ ನೀಡಿದರು.

ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕುಶಾಲನಗರ ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿ ಹಬ್ಬ ಪ್ರಯುಕ್ತ ಕುಶಾಲನಗರ ಅರಣ್ಯ ಇಲಾಖೆ, ಕೊಡಗು ಜಿಲ್ಲಾ ಸೌಂದರ್ಯ ತಜ್ಞರ ವೇದಿಕೆ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಮತ್ತು ಡ್ರೀಮ್ಸ್ ಡೇ ಕೇರ್ ಸಹಯೋಗದೊಂದಿಗೆ ನಡೆದ ಗಿಡ ನೆಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ನೆಟ್ಟು ಬೆಳೆಸಿದ ಗಿಡವನ್ನು ವೈಯಕ್ತಿಕವಾಗಿ ನಿರ್ವಹಣೆ ಮಾಡುವ ಮೂಲಕ ಬೆಳೆಸುವ ಪಣತೊಡಬೇಕು ಎಂದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕುಶಾಲನಗರ ವಲಯ ಅರಣ್ಯಾಧಿಕಾರಿ ರತನ್ ಕುಮಾರ್ ಮಾತನಾಡಿ, ಇಲಾಖೆ ಮೂಲಕ ಹಲವು ಯೋಜನೆಗಳಲ್ಲಿ ಹಸಿರೀಕರಣ ಕೆಲಸ ನಿರಂತರವಾಗಿ ನಡೆಯುತ್ತಿದೆ. ಪ್ರಕೃತಿ ಸಂರಕ್ಷಣೆಯಲ್ಲಿ ನಾಗರಿಕರು ಕೈಜೋಡಿಸಬೇಕು ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಮತ್ತು ಕೊಡಗು ಜಿಲ್ಲಾ ಸೌಂದರ್ಯ ತಜ್ಞರ ವೇದಿಕೆಯ ಜಿಲ್ಲಾಧ್ಯಕ್ಷೆ ರತ್ನ ಯತೀಶ್ ಅವರುಗಳು ದಿನದ ಮಹತ್ವದ ಬಗ್ಗೆ ಮಾತನಾಡಿದರು.

ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿ, ಕೃಷಿ ಮಾರುಕಟ್ಟೆ ಆವರಣದಲ್ಲಿ ಕಳೆದ ಹಲವು ವರ್ಷಗಳಿಂದ ಇಲಾಖೆಯ ಸಹಯೋಗದೊಂದಿಗೆ ನೂರಾರು ಗಿಡಗಳನ್ನು ನೆಟ್ಟು ಬೆಳೆಸಲಾಗಿದೆ. ನೆಟ್ಟು ಬೆಳೆಸಿದ ಗಿಡಗಳು ಹಾನಿಯಾಗದಂತೆ ಪ್ರತಿಯೊಬ್ಬರು ಎಚ್ಚರ ವಹಿಸಬೇಕು ಎಂದರು. ಆವರಣದಲ್ಲಿ ೨೫ಕ್ಕೂ ಅಧಿಕ ಗಿಡಗಳನ್ನು ನೆಡಲಾಯಿತು.

ಈ ಸಂದರ್ಭ ಪತ್ರಕರ್ತ ಸಂಘದ ಉಪಾಧ್ಯಕ್ಷ ರಾಜು ರೈ, ಖಜಾಂಚಿ ಕುಡೆಕಲ್ ಗಣೇಶ್, ಪ್ರಧಾನ ಕಾರ್ಯದರ್ಶಿ ವನಿತಾ ಚಂದ್ರಮೋಹನ್, ಪತ್ರಕರ್ತರ ಸಂಘದ ಜಿಲ್ಲಾ ತಾಲೂಕು ಪದಾಧಿಕಾರಿಗಳು, ನಿರ್ದೇಶಕರು, ಸದಸ್ಯರುಗಳು, ಅರಣ್ಯ ಇಲಾಖೆ ಉಪವಲಯ ಅರಣ್ಯಾಧಿಕಾರಿಗಳಾದ ಅನಿಲ್ ಡಿಸೋಜಾ, ದೇವಯ್ಯ, ಸಿಬ್ಬಂದಿಗಳು ಜಿಲ್ಲಾ ಸೌಂದರ್ಯ ತಜ್ಞರ ವೇದಿಕೆಯ ಪ್ರಮುಖರಾದ ಪವಿತ್ರ ರಾಜೇಶ್, ನಾಗಮಣಿ, ಕಾವೇರಿ ಪರಿಸರ ರಕ್ಷಣಾ ಬಳಗದ ಡಿ.ಆರ್. ಸೋಮಶೇಖರ್, ಕಾರ್ಯಕ್ರಮ ಸಂಚಾಲಕಿ ಚೈತನ್ಯ ಮತ್ತಿತರರು ಇದ್ದರು.ವೀರಾಜಪೇಟೆ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವೀರಾಜಪೇಟೆಯ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ವೀರಾಜಪೇಟೆ ಪ್ರಾದೇಶಿಕ ಅರಣ್ಯ ವಲಯದ ವತಿಯಿಂದ ವಿಶ್ವ ಪರಿಸರ ದಿನ ಆಚರಿಸಲಾಯಿತು.

ಆಸ್ಪತ್ರೆ ಆವರಣದಲ್ಲಿ ವಿವಿಧ ಗಿಡಗಳನ್ನು ನೆಡಲಾಯಿತು. ಈ ಸಂದರ್ಭ ವೀರಾಜಪೇಟೆ ಡಿ.ಸಿ.ಎಫ್. ಜಗನ್ನಾಥ್ ಎನ್.ಹೆಚ್., ಎಸಿಎಫ್ ನೆಹರು ಕೆ.ಎ., ಪ್ರೊಬೆಷನರಿ ಎಸಿಎಫ್ ಮಹಾಲಕ್ಷಿö್ಮ, ಆರ್.ಎಫ್.ಓ. ದೇವಯ್ಯ ಕೆ.ಎಂ., ಉಪವಲಯ ಅರಣ್ಯಾಧಿಕಾರಿ ಆನಂದ್ ಕೆ.ಆರ್., ಮೋನಿಷಾ ಎಂ.ಎಸ್., ಸಚಿನ್ ನಿಂಬಾಳ್ಕರ್, ಜನಾರ್ಧನ, ಸಂಜಿತ್ ಡಿ.ಪಿ., ಗಸ್ತು ಅರಣ್ಯ ಪಾಲಕರಾದ ಚಂದ್ರಶೇಖರ ಅಮರಗೋಳ, ಸಾರ್ವಜನಿಕ ಆಸ್ಪತ್ರೆಯ ಶಸ್ತçಚಿಕಿತ್ಸಕ ಡಾ. ಪ್ರಜ್ವಲ್, ಸೂಪರಿಂಟೆAಡೆAಟ್ ಲೀನಾ, ವೀರಾಜಪೇಟೆ ಅರಣ್ಯ ಇಲಾಖೆ ಸಿಬ್ಬಂದಿಗಳು, ಆಸ್ಪತ್ರೆ ಸಿಬ್ಬಂದಿ ವರ್ಗದವರು ಇದ್ದರು.ಮಹಾಲಕ್ಷಿö್ಮ, ಆರ್.ಎಫ್.ಓ. ದೇವಯ್ಯ ಕೆ.ಎಂ., ಉಪವಲಯ ಅರಣ್ಯಾಧಿಕಾರಿ ಆನಂದ್ ಕೆ.ಆರ್., ಮೋನಿಷಾ ಎಂ.ಎಸ್., ಸಚಿನ್ ನಿಂಬಾಳ್ಕರ್, ಜನಾರ್ಧನ, ಸಂಜಿತ್ ಡಿ.ಪಿ., ಗಸ್ತು ಅರಣ್ಯ ಪಾಲಕರಾದ ಚಂದ್ರಶೇಖರ ಅಮರಗೋಳ, ಸಾರ್ವಜನಿಕ ಆಸ್ಪತ್ರೆಯ ಶಸ್ತçಚಿಕಿತ್ಸಕ ಡಾ. ಪ್ರಜ್ವಲ್, ಸೂಪರಿಂಟೆAಡೆAಟ್ ಲೀನಾ, ವೀರಾಜಪೇಟೆ ಅರಣ್ಯ ಇಲಾಖೆ ಸಿಬ್ಬಂದಿಗಳು, ಆಸ್ಪತ್ರೆ ಸಿಬ್ಬಂದಿ ವರ್ಗದವರು ಇದ್ದರು.ಸೋಮವಾರಪೇಟೆ: ತಾಲೂಕಿನ ಐಗೂರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಭುವನಕ್ಕೊಂದು ಸದನ ಇಕೋ ಕ್ಲಬ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನ ಆಚರಿಸಲಾಯಿತು.

ಈ ಸಂದರ್ಭ ಮುಖ್ಯ ಶಿಕ್ಷಕ ಎಂ.ಎA. ಯಶ್ವಂತ್ ಕುಮಾರ್, ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಕೂಡಿಗೆ: ಕರ್ನಾಟಕ ಕಾವಲುಪಡೆ ಮತ್ತು ಜಗದೀಶ ಚಂದ್ರಬೋಸ್ ಇಕೋ ಕ್ಲಬ್ ವತಿಯಿಂದ ಪರಿಸರ ದಿನಾಚರಣೆಯನ್ನು ಮುಳ್ಳುಸೋಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಿಡಗಳನ್ನು ನೆಡುವ ಮೂಲಕ ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಕರ್ನಾಟಕ ಕಾವಲು ಪಡೆ ಜಿಲ್ಲಾ ಅಧ್ಯಕ್ಷ ಎಂ. ಕೃಷ್ಣ ಚಾಲನೆ ನೀಡಿದರು. ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯಿನಿ ಭಾಗ್ಯ, ಸಹ ಶಿಕ್ಷಕರಾದ ಶಿವಲಿಂಗು, ಮೇರಿ ಮಾರ್ಗರೇಟ್, ವಿಜಯ, ರಾಗಿಣಿ ಸೇರಿದಂತೆ ಕಾವಲು ಪಡೆಯ ಸದಸ್ಯರು ಹಾಜರಿದ್ದರು.ಚೆಯ್ಯಂಡಾಣೆ: ನಾಪೋಕ್ಲು ಗ್ರಾಮ ಪಂಚಾಯಿತಿ ವತಿಯಿಂದ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಇಂದಿರಾ ನಗರದಲ್ಲಿರುವ ಪಂಚಾಯಿತಿಯ ಉದ್ಯಾನವನದಲ್ಲಿ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಗಿಡ ನೆಡುವುದರ ಮೂಲಕ ಚಾಲನೆ ನೀಡಿದರು.

ಈ ಸಂದರ್ಭ ಉಪಾಧ್ಯಕ್ಷೆ ಕುಲ್ಲೇಟಿರ ಹೇಮಾವತಿ, ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ, ಸದಸ್ಯರಾದ ಕುಲ್ಲೇಟಿರ ಅರುಣ್ ಬೇಬ, ಮಹಮ್ಮದ್ ಖುರೇಶಿ ಗ್ರಾಮಸ್ಥರಾದ ಚುಕ್ಕಂಡ ಉಂಬಾಯಿ, ಶರೀಫ, ಓಂಪ್ರಕಾಶ್ ಮತ್ತಿತರರು ಹಾಜರಿದ್ದರು.ವೀgಐಗೂರು: ಕಾಜೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ದಿನದ ಅಂಗವಾಗಿ ಸ್ಥಳೀಯ ಟಾಟಾ ಕಾಫಿ ಸಂಸ್ಥೆಯ ಫೀಲ್ಡ್ ಆಫೀಸರ್ (ಡಿವಿಜನ್ ಇನ್‌ಚಾರ್ಜ್) ಸಚಿನ್ ಅವರು ಜಂಬುನೇರಳೆ ಸಸ್ಯವನ್ನು ನೆಡುವುದರ ಮೂಲಕ ಕಾರ್ಯಕ್ರಮಕ್ಕೆ Áಜಪೇಟೆ: ಬಾಳುಗೋಡು ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆಯನ್ನು ಗಿಡ ನೆಡುವುದರ ಮೂಲಕ ಆಚರಿಸಲಾಯಿತು. ಈ ಸಂದರ್ಭ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಪ್ರಭಾಕರ್, ವೀರಾಜಪೇಟೆ ಸಹಾಯಕ ಕೃಷಿ ನಿರ್ದೇಶಕ ಶಿವಮೂರ್ತಿ, ಮೋಹನ್ ಕುಮಾರ್ ಹಾಗೂ ಪ್ರಾಂಶುಪಾಲ ಡಾ. ದಿಲನ್ ಐ.ಎಂ., ಶಿಕ್ಷಕರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.ಚಾಲನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಫೀಲ್ಡ್ ಆಫೀಸರ್ ಸಚಿನ್, ಮುಖ್ಯ ಶಿಕ್ಷಕಿ ಸರಳ ಕುಮಾರಿ, ಟಾಟಾ ಕಾಫಿಯ ಚಾಲಕ ಪೂವಪ್ಪ, ಸಂಸ್ಥೆಯ ಸಂತೋಷ್, ಲೋಕೇಶ್, ಶಿಕ್ಷಕ ಅಜಿತ್ ಕುಮಾರ್, ಶಿಕ್ಷಕಿಯರಾದ ಅನಸೂಯ, ಭಾರತಿ, ಇಂದಿರಾ, ವೇದಾವತಿ, ವಿದ್ಯಾಶ್ರೀ ಮತ್ತು ಸಹಾಯಕಿ ದೀಪಿಕಾ ಹಾಜರಿದ್ದರು.ವೀರಾಜಪೇಟೆ: ಮಾನವನು ಪರಿಸರದ ಒಂದು ಅಂಗವಾಗಿದ್ದು, ಪರಿಸರ ಉಳಿದರೆ ಮಾನವ ಸಂಕುಲ ಉಳಿಯಲು ಸಾಧ್ಯ. ಇಲ್ಲದಿದ್ದರೆ ವಿನಾಶ ಖಂಡಿತ ಎಂದು ಮುಲ್ಲೇಂಗಡ ಮಧೋಶ್ ಪೂವಯ್ಯ ಹೇಳಿದರು.

ವೀರಾಜಪೇಟೆಯ ಕಾವೇರಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನ ಆಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾಲೇಜು ಆವರಣದಲ್ಲಿ ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಗಿಡ-ಮರಗಳ ಅತಿಯಾದ ನಾಶದಿಂದ ಇಂದು ಜಾಗತಿಕ ಮಟ್ಟದಲ್ಲಿ ತಾಪಮಾನ ವಿಪರೀತವಾಗಿ ಏರಿಕೆಯಾಗುತ್ತಿದೆ. ಇದೇ ರೀತಿ ತಾಪಮಾನವು ಏರಿಕೆ ಆದರೆ ಜಗತ್ತಿನ ಯಾವ ಜೀವಸಂಕುಲವೂ ಉಳಿಯಲು ಸಾಧ್ಯವಿಲ್ಲ. ಆದ್ದರಿಂದ ಗಿಡ-ಮರಗಳನ್ನು ಉಳಿಸಿ-ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ಗಿಡ-ಮರಗಳು ಉಳಿದರೆ ಜೀವ ಸಂಕುಲ ಉಳಿಯುವುದು ಎಂದರು.

ಕಾಲೇಜು ಪ್ರಾಂಶುಪಾಲರಾದ ಬೆನಡಿಕ್ಟ್ ಆರ್. ಸಲ್ಡಾನ ಮಾತನಾಡಿ, ಪರಿಸರ ದಿನದಂದು ನಾವು ಎಷ್ಟು ಗಿಡಗಳನ್ನು ನೆಡುತ್ತೇವೆ ಎಂಬುದು ಮುಖ್ಯವಲ್ಲ. ನೆಟ್ಟಂತಹ ಗಿಡಗಳನ್ನು ಹೇಗೆ ಪೋಷಣೆ ಮಾಡಿ ಮುಂದಿನ ಪೀಳಿಗೆಗೆ ನೀಡುತ್ತೇವೆ ಎಂಬುದು ಬಹಳ ಮುಖ್ಯ. ಆದ್ದರಿಂದ ಪ್ರತಿಯೊಬ್ಬರೂ ಒಂದೊAದು ಗಿಡ ನೆಟ್ಟು ಬೆಳೆಸುವ ಕಾರ್ಯವನ್ನು ಮಾಡಬೇಕೆಂದರು. ನಂತರ ಕಾಲೇಜಿನ ಆವರಣದಲ್ಲಿ ವಿವಿಧ ಗಿಡಗಳನ್ನು ನೆಡಲಾಯಿತು.

ಈ ಸಂದರ್ಭ ಕಾಲೇಜಿನ ಐ.ಕ್ಯೂ.ಎ.ಸಿ. ಸಂಚಾಲಕಿ ಡಾ. ವೀಣಾ, ವಿದ್ಯಾರ್ಥಿ ಕ್ಷೇಮ ಪಾಲನಾ ಸಂಘದ ಸಂಚಾಲಕಿ ಅಂಬಿಕಾ, ಎನ್.ಎಸ್.ಎಸ್. ಅಧಿಕಾರಿ ಸುನಿಲ್‌ಕುಮಾರ್, ಎನ್.ಸಿ.ಸಿ. ಅಧಿಕಾರಿ ಬೋಜಮ್ಮ, ವಿದ್ಯಾರ್ಥಿಗಳು, ಉಪನ್ಯಾಸಕರು, ಆಡಳಿತ ಸಿಬ್ಬಂದಿಗಳು ಇದ್ದರು.ವೀರಾಜಪೇಟೆ: ಪ್ರತಿಯೊಬ್ಬರಿಗೂ ಪರಿಸರ ಅವಶ್ಯಕತೆವಿರುವುದರಿಂದ ಎಲ್ಲರು ಪರಿಸರವನ್ನು ಸಂರಕ್ಷಣೆ ಮಾಡಬೇಕಾಗಿದೆ ಎಂದು ೨ನೇ ಅಪರ ಜಿಲ್ಲಾ ಸತ್ರ ನ್ಯಾಯಾಧೀಶೆ ಎಸ್. ಸುಜಾತ ಹೇಳಿದರು.

ತಾಲೂಕು ಕಾನೂನು ಸೇವೆಗಳ ಸಮಿತಿ, ವೀರಾಜಪೇಟೆ ವಕೀಲರ ಸಂಘ ಹಾಗೂ ಅರಣ್ಯ ಇಲಾಖೆ ವೀರಾಜಪೇಟೆ ಪ್ರಾದೇಶಿಕ ವಲಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನ್ಯಾಯಾಲಯದ ಆವರಣದಲ್ಲಿ ಗಿಡ ನೆಟ್ಟು ನೀರು ಎರೆದು ಬಳಿಕ ಮಾತನಾಡಿದ ಅವರು, ಕಾಡು ಮನುಷ್ಯನಿಗೆ ಬೇಕಾದ ವಸ್ತುಗಳನ್ನು ನೀಡುತ್ತಿದೆ. ಪ್ರಾಣಿ-ಪಕ್ಷಿಗಳು ಸೇರಿದಂತೆ ಅನೇಕ ಜೀವರಾಶಿಗಳು ಅರಣ್ಯದಲ್ಲಿ ಜೀವಿಸುವುದರಿಂದ ನಾವುಗಳು ಪರಿಸರವನ್ನು ರಕ್ಷಣೆ ಮಾಡುವುದು ನಮ್ಮ ಕರ್ತವ್ಯ ಆಗಿದೆ. ವಿಶ್ವಸಂಸ್ಥೆ ಕೈಗೊಂಡಿರುವ ವಿಶ್ವ ಪರಿಸರ ದಿನಾಚರಣೆಯನ್ನು ಪ್ರತಿಯೊಬ್ಬರು ಗಿಡ ನೆಡುವ ಮೂಲಕ ಆಚರಣೆ ಮಾಡಬೇಕಾಗಿದೆ ಎಂದರು

ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಹೆಚ್. ಜಗನಾಥ್ ಮಾತನಾಡಿ, ಕೊಡಗು ಜಿಲ್ಲೆಯ ಶೇ. ೪೮ ರಷ್ಟು ಅರಣ್ಯ ಮತ್ತು ಹಸಿರು ಹೊದಿಕೆಯನ್ನು ನಾವುಗಳು ಉಳಿಸಿಕೊಳ್ಳುವುದರೊಂದಿಗೆ ರಕ್ಷಿಸಬೇಕು. ಕೃಷಿ ಅರಣ್ಯವನ್ನು ಕಾಪಾಡಿಕೊಂಡು ಗಿಡಗಳನ್ನು ನೆಡುವುದು ಮತ್ತು ಅದನ್ನು ಪೋಷಿಸಬೇಕು, ಅರಣ್ಯವನ್ನು ರಕ್ಷಿಸುವುದರಿಂದ ಕಾಲಕಾಲಕ್ಕೆ ಮಳೆ ಬೆಳೆ ಸಾಧ್ಯ. ನೀರನ್ನು ಭೂಮಿಗೆ ಹಿಂಗಿಸುವುದರಿAದ ಜಲ ಸಂರಕ್ಷಣೆ ಆಗಲಿದೆ ಎಂದ ಅವರು ಕೊಡಗು ಜಿಲ್ಲೆಯ ಕೃಷಿಕರಿಗೆ ಈ ಸಾಲಿನಲ್ಲಿ ೮೦ ಸಾವಿರ ಗಿಡಗಳನ್ನು ವಿತರಿಸುವುದಾಗಿ ತಿಳಿಸಿದರು.

ಗಿಡ ನೆಡುವ ಸಂದರ್ಭ ಹಿರಿಯ ಸಿವಿಲ್ ನ್ಯಾಯಾಧೀಶ ಆರ್. ಮಂಜುನಾಥ್, ಪ್ರಧಾನ ಸಿವಿಲ್ ನ್ಯಾಯಾಧೀಶ ಸಂತೋಷ ಕೊಠಾರಿ, ವಕೀಲರ ಸಂಘದ ಕಾರ್ಯದರ್ಶಿ ವಿ.ಜಿ. ರಾಕೇಶ್, ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ ನೆಹರು, ವಲಯ ಅರಣ್ಯಾಧಿಕಾರಿ ದೇವಯ್ಯ, ಎ.ಸಿ.ಎಫ್. ಮಹಾಲಕ್ಷಿö್ಮ, ಉಪ ವಲಯ ಅರಣ್ಯಾಧಿಕಾರಿ ಆನಂದ ಕೆ.ಆರ್., ಮೋನಿಷಾ ಎಂ.ಎಸ್. ಸಚಿನ್ ನಿಂಬಾಳ್ಕರ್, ಜನಾರ್ಧನ, ಸಂಜಿತ್ ಡಿ.ಪಿ., ಗಸ್ತು ಅರಣ್ಯಾ ಪಾಲಕರಾದ ಚಂದ್ರಶೇಖರ ಅಮರಗೋಳ, ಅರಣ್ಯ ಇಲಾಖೆಯ ಸಿಬ್ಬಂದಿ, ನ್ಯಾಯಾಲಯದ ಸಿಬ್ಬಂದಿ ಹಾಜರಿದ್ದರು.ಹೊದಿಕೆಯನ್ನು ನಾವುಗಳು ಉಳಿಸಿಕೊಳ್ಳುವುದರೊಂದಿಗೆ ರಕ್ಷಿಸಬೇಕು. ಕೃಷಿ ಅರಣ್ಯವನ್ನು ಕಾಪಾಡಿಕೊಂಡು ಗಿಡಗಳನ್ನು ನೆಡುವುದು ಮತ್ತು ಅದನ್ನು ಪೋಷಿಸಬೇಕು, ಅರಣ್ಯವನ್ನು ರಕ್ಷಿಸುವುದರಿಂದ ಕಾಲಕಾಲಕ್ಕೆ ಮಳೆ ಬೆಳೆ ಸಾಧ್ಯ. ನೀರನ್ನು ಭೂಮಿಗೆ ಹಿಂಗಿಸುವುದರಿAದ ಜಲ ಸಂರಕ್ಷಣೆ ಆಗಲಿದೆ ಎಂದ ಅವರು ಕೊಡಗು ಜಿಲ್ಲೆಯ ಕೃಷಿಕರಿಗೆ ಈ ಸಾಲಿನಲ್ಲಿ ೮೦ ಸಾವಿರ ಗಿಡಗಳನ್ನು ವಿತರಿಸುವುದಾಗಿ ತಿಳಿಸಿದರು.

ಗಿಡ ನೆಡುವ ಸಂದರ್ಭ ಹಿರಿಯ ಸಿವಿಲ್ ನ್ಯಾಯಾಧೀಶ ಆರ್. ಮಂಜುನಾಥ್, ಪ್ರಧಾನ ಸಿವಿಲ್ ನ್ಯಾಯಾಧೀಶ ಸಂತೋಷ ಕೊಠಾರಿ, ವಕೀಲರ ಸಂಘದ ಕಾರ್ಯದರ್ಶಿ ವಿ.ಜಿ. ರಾಕೇಶ್, ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ ನೆಹರು, ವಲಯ ಅರಣ್ಯಾಧಿಕಾರಿ ದೇವಯ್ಯ, ಎ.ಸಿ.ಎಫ್. ಮಹಾಲಕ್ಷಿö್ಮ, ಉಪ ವಲಯ ಅರಣ್ಯಾಧಿಕಾರಿ ಆನಂದ ಕೆ.ಆರ್., ಮೋನಿಷಾ ಎಂ.ಎಸ್. ಸಚಿನ್ ನಿಂಬಾಳ್ಕರ್, ಜನಾರ್ಧನ, ಸಂಜಿತ್ ಡಿ.ಪಿ., ಗಸ್ತು ಅರಣ್ಯಾ ಪಾಲಕರಾದ ಚಂದ್ರಶೇಖರ ಅಮರಗೋಳ, ಅರಣ್ಯ ಇಲಾಖೆಯ ಸಿಬ್ಬಂದಿ, ನ್ಯಾಯಾಲಯದ ಸಿಬ್ಬಂದಿ ಹಾಜರಿದ್ದರು.ಮದೆ ಮಹೇಶ್ವರ ಪದವಿಪೂರ್ವ ಕಾಲೇಜು

ಮಡಿಕೇರಿ: ಮದೆ ಮಹೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಕಾಲೇಜಿನಲ್ಲಿ ವಿದ್ಯಾರ್ಥಿಗಳು, ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಸೇರಿ ಆಚರಿಸಿದರು.

ಕಾಲೇಜಿನ ಪ್ರಾಂಶುಪಾಲ ಸಿದ್ದರಾಜು ಬೆಳ್ಳಯ್ಯ ಅವರು ಪರಿಸರ ದಿನಾಚರಣೆ ಮಹತ್ವ ಕುರಿತು ಮಾತನಾಡಿ, ಇಡೀ ವಿಶ್ವಕ್ಕೆ ಇರುವುದು ಒಂದೇ ಭೂಮಿ, ಆದರೆ ಭೂಮಿಯ ಮೇಲೆ ವಾಸಿಸುವ ಸುಮಾರು ೭೦೦ ಕೋಟಿ ಜನಸಂಖ್ಯೆಗೆ ಇರುವುದು ಒಂದೇ ಭೂಮಿ ಈ ಭೂಮಿಯನ್ನು ರಕ್ಷಿಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು. ಮನುಕುಲಕ್ಕೆ ಸಂಸ್ಕಾರ ಪ್ರಾರಂಭವಾಗುವುದು ಮನೆಯಿಂದಲೇ ಈ ಸಂಸ್ಕಾರದಲ್ಲಿ ಪರಿಸರ ಸಂರಕ್ಷಣೆ ಒಂದಾಗಿದ್ದು ನಾವು ಪರಿಸರವನ್ನು ಸಂರಕ್ಷಿಸಿದರೆ ಪರಿಸರವು ನಮ್ಮನ್ನು ಸಂರಕ್ಷಿಸುತ್ತದೆ. ನೆಲ ಜಲ ಮತ್ತು ಭೂಮಿಯು ಮನುಕುಲಕ್ಕೆ ಎಲ್ಲವನ್ನು ಪರಿಶುದ್ಧವಾದದ್ದನ್ನೇ ನೀಡಿದೆ ಎಂದರು.

ಕಾರ್ಯಕ್ರಮದಲ್ಲಿ ಅರ್ಥಶಾಸ್ತç ಉಪನ್ಯಾಸಕಿ ವಾಣಿ, ರಾಜ್ಯಶಾಸ್ತç ಉಪನ್ಯಾಸಕಿ ಯೋಗಿತ, ಇತಿಹಾಸ ಉಪನ್ಯಾಸಕ ಪರಶುರಾಮಪ್ಪ, ಕನ್ನಡ ಉಪನ್ಯಾಸಕ ಶ್ರೀನಿವಾಸ್ ಮತ್ತು ಧರ್ಮಸ್ಥಳ ಸ್ವಸಹಾಯ ಸಂಘದ ಕ್ಷೇತ್ರ ಸಹಾಯಕರಾದ ಸಬೀನಾ ಮತ್ತು ಸಂತೋಷ್ ಹಾಜರಿದ್ದರು.