ಗೋಣಿಕೊಪ್ಪಲು, ಜೂ. ೧೦: ಸಾರ್ವಜನಿಕರು ಮುಂಜಾನೆ ವಾಯುವಿಹಾರಕ್ಕೆ ತೆರಳುವ ವೇಳೆ ಒಂದಷ್ಟು ಎಚ್ಚರ ವಹಿಸುವುದು ಒಳಿತು. ಮುಂಜಾನೆ ೪.೩೦ರ ವೇಳೆ ಗೋಣಿಕೊಪ್ಪ - ಪೊನ್ನಂಪೇಟೆ ಮುಖ್ಯ ರಸ್ತೆಯ ಕಾಫಿ ಬೋರ್ಡ್ ಬಳಿ ಬೃಹತ್ ಗಾತ್ರದ ಒಂಟಿ ಸಲಗವೊಂದು ನಾಗರಿಕರಿಗೆ ಕಾಣಿಸಿಕೊಂಡಿದೆ.

ಕಳೆದ ೨ ದಿನಗಳ ಹಿಂದೆ ಗೋಣಿಕೊಪ್ಪ ಕಾವೇರಿ ಕಾಲೇಜು ಮುಂಭಾಗದಲ್ಲಿರುವ ಕುಪ್ಪಂಡ ದತ್ತಾತ್ರಿಯವರ ಮನೆಯ ಅಂಗಳದಲ್ಲಿ ಒಂಟಿ ಸಲಗವು ಮಧ್ಯರಾತ್ರಿ ೧೨.೩೦ರ ಸುಮಾರಿಗೆ ಕಾಣಿಸಿಕೊಂಡಿದ್ದು, ಮನೆಯ ಅಂಗಳದಿAದ ಇಳಿದ ಆನೆ ಸಮೀಪದ ಭತ್ತದ ಗದ್ದೆಯ ಮೂಲಕ ಹಾದು ಅರುವತ್ತೊಕ್ಕಲು ಬಳಿಯ ಕಾಫಿ ತೋಟದಲ್ಲಿ ಕಾಣಿಸಿಕೊಂಡಿದೆ. ಇದೇ ಕಾಡಾನೆಯು ಮುಂಜಾನೆ ವೇಳೆ ಕಾಫಿ ಬೋರ್ಡ್ ಮುಖ್ಯರಸ್ತೆಯ ಬಳಿಯ ತರಕಾರಿ ಅಂಗಡಿಗೆ ಲಗ್ಗೆಇಟ್ಟು ನಂತರ ಸಮೀಪದ ಕಾಫಿ ತೋಟಕ್ಕೆ ತೆರಳಿದೆ.

ಸಹಜವಾಗಿ ಮುಂಜಾನೆ ೫ ಗಂಟೆಯ ನಂತರ ಪೊನ್ನಂಪೇಟೆ-ಗೋಣಿಕೊಪ್ಪ ಮುಖ್ಯ ರಸ್ತೆಯಲ್ಲಿ ವಯೋವೃದ್ದರು, ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಮಂದಿ ವಾಕಿಂಗ್ ಮಾಡುತ್ತಿರುತ್ತಾರೆ.

ಪ್ರತ್ಯಕ್ಷದರ್ಶಿ ಗೋಣಿಕೊಪ್ಪಲುವಿನ ದಿನಪತ್ರಿಕೆ ವಿತರಕ ಜಮುನ ವಸಂತ್ ಮುಂಜಾನೆ ೪.೩೦ರ ವೇಳೆಗೆ ಪೊನ್ನಂಪೇಟೆಯಿAದ ಗೋಣಿಕೊಪ್ಪ ನಗರದಲ್ಲಿರುವ ಪೇಪರ್ ಅಂಗಡಿಗೆ ತನ್ನ ಸ್ಕೂಟರ್‌ನಲ್ಲಿ ಆಗಮಿಸುತ್ತಿದ್ದ ವೇಳೆ ಕಾಫಿಬೋರ್ಡ್ ಬಳಿ ಒಂಟಿ ಸಲಗವನ್ನು ಕಂಡು ಗಾಬರಿಗೊಂಡಿದ್ದಾರೆ. ಅಲ್ಲದೆ ತಮ್ಮ ಮೊಬೈಲ್ ಮೂಲಕ ಸಾರ್ವಜನಿಕವಾಗಿ ಓಡಾಟ ನಡೆಸುವವರು ಎಚ್ಚರ ವಹಿಸುವಂತೆ ಸಂದೇಶ ರವಾನಿಸಿದ್ದರು. ಪಟ್ಟಣದಲ್ಲಿಯೇ ಕಾಡಾನೆಗಳು ಮುಂಜಾನೆ ವೇಳೆ ಕಾಣಿಸಿಕೊ ಳ್ಳುತ್ತಿರುವುದರಿಂದ ವಾಯುವಿಹಾರಕ್ಕೆ ತೆರಳುತ್ತಿರುವವರು ಒಂದಷ್ಟು ಮುಂಜಾಗ್ರತೆ ವಹಿಸುವುದು ಒಳಿತು. -ಹೆಚ್.ಕೆ. ಜಗದೀಶ್