ವೀರಾಜಪೇಟೆ, ಜೂ. ೧೧: ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷ ಇಲ್ಲವಾದರೆ ಅದು ಆಡಳಿತ ಪಕ್ಷದ ಸರ್ವಾಧಿಕಾರಿ ಧೋರಣೆಗೆ ಕಾರಣ ವಾಗುತ್ತದೆ. ಜನರೇ ಚುನಾವಣೆಯಲ್ಲಿ ಸಮತೋಲಿತ ತೀರ್ಪು ನೀಡಿದ್ದಾರೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.

ವೀರಾಜಪೇಟೆಯಲ್ಲಿನ ತಮ್ಮ ಗೃಹ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಪೊನ್ನಣ್ಣ, ಮೊದಲ ಹಂತದಲ್ಲಿನ ಚುನಾವಣೆಯಲ್ಲಿ ಮೈಸೂರು ಸೇರಿ ೧೪ ಕ್ಷೇತ್ರದಲ್ಲಿ ನಡೆದ ಚುನಾವಣೆ ನಮಗೆ ನಿರಾಶೆ ತಂದಿದೆ. ಅಲ್ಲಿ ೧೪ ಸ್ಥಾನದ ಪೈಕಿ ೨ ಸ್ಥಾನ ಮಾತ್ರ ಗಳಿಸಲು ಸಾಧ್ಯವಾಯಿತು. ಎರಡನೇ ಹಂತದಲ್ಲಿ ನಮಗೆ ೭ ಸ್ಥಾನ ಬಂದಿದೆ. ಒಟ್ಟಾರೆ ಸರಕಾರದ ಜನಪರ ಕೆಲಸಕ್ಕೆ ಮತದಾನದÀಲ್ಲಿ ಶೇಕಡವಾರು ಏರಿಕೆ ನಿದರ್ಶನವಾಗಿದೆ. ಆದರೆ ರಾಜ್ಯದ ದಕ್ಷಿಣ ಭಾಗದಲ್ಲಿ ನಾವು ಬಿಜೆಪಿ ಹಾಗೂ ಜಾತ್ಯತೀತ ಜನತಾದಳದ ಹೊಂದಾಣಿಕೆಯನ್ನು ಸರಿಯಾಗಿ ಗುರುತಿಸಿ ವಿಶ್ಲೇಷಿಸುವಲ್ಲಿ ವಿಫಲರಾ ಗಿದ್ದೇವೆ ಎಂದು ಹೇಳಿದರು.

ವೀರಾಜಪೇಟೆಯಲ್ಲಿ ನಮಗೆ ನಿರೀಕ್ಷಿತ ಮತÀ ಲಭಿಸಿಲ್ಲ, ನಮ್ಮ ನಿರೀಕ್ಷೆಗೂ ಮೀರಿ ಬಿಜೆಪಿಗೆ ಹೆಚ್ಚು ಮತ ಲಭ್ಯವಾಗಿದೆ. ನೂತನ ಸಂಸದ ಯದು ವೀರ್ ಅವರಿಂದ ಈ ಕ್ಷೇತ್ರಕ್ಕೆ ಜನಪರ ಕೆಲಸಗಳು ಅಗಬೇಕು. ಅಭಿವೃದ್ದಿ ನಡೆಯಬೇಕು ಮತ್ತು ಜನರ ಸಮಸ್ಯೆ ಗಳಿಗೆ ನಿತ್ಯ ಸ್ವಂದಿಸುವ ಕೆಲಸ ಆಗಬೇಕೆಂದು ಅಶಿಸುತ್ತೇನೆ ಎಂದರು.

ಗ್ಯಾರAಟಿ ನಿಲ್ಲುವುದಿಲ್ಲ

ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶಾಸಕ ಪೊನ್ನಣ್ಣ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೆ ನಿಲ್ಲುವುದಿಲ್ಲ. ಈ ಬಾರಿ ಕಳೆದ ೧೯ ನೇ ಸಾಲಿನ ಲೋಕಸಭೆ ಚುನಾ ವಣೆಯಲ್ಲಿ ನಮ್ಮ ಪಕ್ಷ ಶೇ. ೩೨ ರಷ್ಟು ಮತಗಳಿಸಿದ್ದು ಲೋಕಸಭೆಯಲ್ಲಿ ಅದು ಶೇ. ೪೪.೬ ಕ್ಕೆ ಏರಿಕೆಯಾಗಿರುವುದೆ ಗ್ಯಾರಂಟಿ ಯೋಜನೆಗಳ ಯಶಸ್ವಿಗೆ ಸಾಕ್ಷಿ ಎಂದು ಎ.ಎಸ್. ಪೊನ್ನಣ್ಣ ಹೇಳಿದರು.

ಭಾಗ್ಯಗಳು ರಾಜ್ಯಮಟ್ಟದ ನಿರ್ಣಯ ವಾಗಿದ್ದು ಅದನ್ನು ರೂಪಿಸಿದವರು ಅವರೇ ಆಗಿದ್ದಾರೆ. ಅದನ್ನು ತೆಗೆಯುವ, ಬಿಡುವ ನಿರ್ಧಾರ ಮುಖ್ಯಮಂತ್ರಿಗಳು ಹಾಗೂ ಶಾಸಕಾಂಗಕ್ಕೆ ಸೇರಿದೆ. ಯಾರು ಅದರ ಬಗ್ಗೆ ಮಾತನಾಡುವಂತಿಲ್ಲ. ಅದು ಮುಂದುವರಿಯುತ್ತದೆ. ಲೋಪವಿದ್ದರೆ ಮಾತ್ರ ಸರಿಪಡಿಸಿ ಮುನ್ನಡೆಸುತ್ತೇವೆ ಎಂದು ಸ್ಪಷ್ಟಪಡಿಸಿದರು. ವೀರಾಜಪೇಟೆ ರಸ್ತೆ ವಿಸ್ತರಣೆ ವಿಚಾ ರದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿ ಬಹು ತೇಕ ಗೊಂದಲ ನಿವಾರಣೆಯಾಗಿದ್ದು ಮಳೆ ನಿಂತ ಬಳಿಕ ಕಾಮಗಾರಿ ನಡೆಯ ಲಿದೆ. ಅದೇ ರೀತಿ ವೀರಾಜಪೇಟೆ ಸರಕಾರಿ ಆಸ್ವತ್ರೆಯಲ್ಲಿ ಹಲವಾರು ಕೊರತೆಗಳಿದ್ದು ಅಪಘಾತವಾಗಿರುವ ತುರ್ತು ಚಿಕಿತ್ಸಾ ವಾಹನ ಪೊಲೀಸ್ ವಶದಲ್ಲಿದ್ದು ಎರಡು ತಿಂಗಳಾದರೂ ಅದರ ಬಿಡುಗಡೆಗೆ ಕ್ರಮ ಕೈಗೊಂಡಿಲ್ಲ. ರೋಗಿಗಳಿಗೆ ತುರ್ತು ಚಿಕಿತ್ಸಾ ವಾಹನ ಇಲ,್ಲ ಆಸ್ಪತ್ರೆಯಲ್ಲಿ ರೋಗಿಗಳಿಗೆ ನಿರೀಕ್ಷಿತ ಸೇವೆ ಲಭಿಸು ತ್ತಿಲ್ಲ. ವೈದ್ಯರ ಕೊರತೆ ಅವರಿಗೆ ವಸತಿ ಕೊರತೆ ಬಗ್ಗೆ ತಕ್ಷಣ ಆಸ್ವತ್ರೆಯ ರಕ್ಷಾ ಸಮಿತಿ ಸಭೆ ಕರೆದು ಕ್ರಮ ಕೈಗೊಳ್ಳು ವುದಾಗಿ ಪೊನ್ನಣ್ಣ ಹೇಳಿದರು.

ವಿದ್ಯುತ್ ಸಮಸ್ಯೆ ಬಗ್ಗೆ ಕೇಳಿದಾಗ ವೀರಾಜಪೇಟೆಗೆ ಹೊಸದಾಗಿ ೩೦ ಮಂದಿ ಲೈನ್ ಮ್ಯಾನ್‌ಗಳ ನಿಯುಕ್ತಿ ಆಗಿದ್ದು ಹಂತ ಹಂತವಾಗಿ ಸಮಸ್ಯೆ ಬಗೆ ಹರಿ ಯಲಿದೆ. ಚುನಾವಣೆ ಪ್ರಕ್ರಿಯೆ ದೀರ್ಘ ಕಾಲ ನಡೆದ ಕಾರಣ ಅಧಿಕಾರಿಗಳು ಚುನಾವಣೆ ಗುಂಗಿನಲ್ಲಿದ್ದ ಕಾರಣ ಆಗಿರುವ ವ್ಯವಸ್ಥೆಯ ಲೋಪಗಳನ್ನು ಸರಿಪಡಿಸಿ ಸಮಸ್ಯೆಗಳನ್ನು ಸರಿಪಡಿಸುವ, ಜನಪರ ಕೆಲಸ, ಅಭಿವೃದ್ದಿ ಕೆಲಸಗಳಿಗೆ ವೇಗ ನೀಡುವುದಾಗಿ ಹೇಳಿದರು.

ಗೋಷ್ಠಿಯಲ್ಲಿ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ, ಪುರಸಭೆ ಸದಸ್ಯರಾದ ಮನೆಯಪಂಡ ದೇಚಮ್ಮ, ಎಸ್.ಎಚ್. ಮತೀನ್, ರಾಜೇಶ್ ಪದ್ಮನಾಭ ಉಪಸ್ಥಿತರಿದ್ದರು.