ಮಡಿಕೇರಿ, ಜೂ. ೧೦: ದೇಶದಲ್ಲಿನ ವೈದ್ಯಕೀಯ ಶಿಕ್ಷಣ ಕಾಲೇಜುಗಳಲ್ಲಿ ಪದವಿ ಶಿಕ್ಷಣ ವ್ಯಾಸಂಗ ನಡೆಸಲು ಅರ್ಹತಾ ಪರೀಕ್ಷೆಯಾಗಿರುವ ನೀಟ್ (ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರೆನ್ಸ್ ಟೆಸ್ಟ್) ನಲ್ಲಿ ಜಿಲ್ಲೆಯ ವಿಘ್ನೇಶ್ ಎಂ.ಆರ್ ಅವರು ೭೨೦ ಕ್ಕೆ ೭೦೫ ಅಂಕಗಳನ್ನು ಗಳಿಸಿ ಸಾಧನೆ ಗೈದಿದ್ದಾರೆ. ದೇಶದ ಖಾಸಗಿ ವೈದ್ಯಕೀಯ ಪದವಿ ಶಿಕ್ಷಣ (ಎಂ.ಬಿ.ಬಿ.ಎಸ್, ಬಿ.ಡಿ.ಎಸ್) ಸಂಸ್ಥೆಗಳಿಗೆ ರಾಷ್ಟಿçÃಯ ಶಿಕ್ಷಣ ಇಲಾಖೆ ವತಿಯಿಂದ ಪ್ರತಿವರ್ಷ ಈ ಪರೀಕ್ಷೆ ನಡೆಸಲಾಗುತ್ತದೆ. ವಿಘ್ನೇಶ್ ಅವರು ಪರೀಕ್ಷೆಯ ಭೌತಶಾಸ್ತç ವಿಭಾಗದಲ್ಲಿ ೯೯.೮೯, ರಸಾಯನ ಶಾಸ್ತçದಲ್ಲಿ ೯೯.೫೩, ಜೀವಶಾಸ್ತçದಲ್ಲಿ ೯೯.೬೩ ಪರ್ಸೆಂಟೇಜ್ ಪಡೆದು ಒಟ್ಟು ೯೯.೯೪ ಪರ್ಸೆಂಟೇಜ್ ಗಳಿಸಿದ್ದಾರೆ. ೭೨೦ ಕ್ಕೆ ೭೦೫ ಅಂಕಗಳಿಸಿ ಆಲ್ ಇಂಡಿಯಾ ರ‍್ಯಾಂಕ್ ೧,೧೧೪ ಗಳಿಸಿ ಸಾಧನೆಗೈದಿದ್ದಾರೆ. ಇವರು ಕೊಡಗು ಗೌಡ ವಿದ್ಯಾಸಂಘದ ವ್ಯವಸ್ಥಾಪಕ ಮತ್ತಾರಿ ರಮೇಶ್ ಹಾಗೂ ಮಹಾಲಕ್ಷಿö್ಮ ಕೆ.ಕೆ. ದಂಪತಿಯ ಪುತ್ರ.