ಮಡಿಕೇರಿ, ಜೂ. ೧೦: ಸೌಹಾರ್ದತೆಯ ಸಮಾಜ ನಿರ್ಮಾಣ ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವಾಗಿದೆ ಎಂದು ಸೇವ್ ದಿ ಡ್ರೀಮ್ಸ್ ಮುಖ್ಯಸ್ಥ ಜಾಬಿರ್ ನಿಝಾಮಿ ಅಭಿಪ್ರಾಯಪಟ್ಟರು. ಕಂಡಕರೆಯಲ್ಲಿ ನಡೆದ ಗಾಂಧಿ ಯುವಕ ಸಂಘ ಹಾಗೂ ಸರ್ವಧರ್ಮೀಯ ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಆಚರಣಾ ಸಮಿತಿ ವತಿಯಿಂದ ಸರ್ವಧರ್ಮೀಯ ಬಡಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಮೊದಲ ಹಂತ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಭಾರತ ದೇಶವು, ಎಲ್ಲಾ, ಜಾತಿ ಧರ್ಮಗಳನ್ನೊಳಗೊಂಡ ದೇಶವಾಗಿದೆ. ಸಮಾಜದಲ್ಲಿ ಸೌಹಾರ್ದತೆ ಸ್ಥಾಪಿಸಲು ಎಲ್ಲರೂ ಶ್ರಮಿಸಬೇಕಾಗಿದೆ. ಸೌಹಾರ್ದ ನಮ್ಮ ಉದ್ದೇಶ, ಸೌಹಾರ್ದತೆ ನಮ್ಮ ಸಂದೇಶ, ಎಂಬ ಅಮೂಲ್ಯವಾದ ಧ್ಯೇಯವಾಕ್ಯದೊಂದಿಗೆ ಗಾಂಧಿ ಯುವಕ ಸಂಘವು ಸರ್ವಧರ್ಮೀಯ ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ.

ವೈಯಕ್ತಿಕವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ವಿರೋಧಿಸುವವನು. ಆದರೆ ಗಾಂಧಿ ಯುವಕ ಸಂಘವು ಬಡ, ಅನಾಥ ಹೆಣ್ಣುಮಗಳನ್ನು ಗುರುತಿಸಿ, ಅರ್ಹರಿಗೆ ಸಹಾಯ ಮಾಡುವ ಮೂಲಕ ಸಾಮೂಹಿಕ ವಿವಾಹ ಯಾವ ರೀತಿಯಲ್ಲಿ ನಡೆಸಬೇಕೆಂದು ಎಲ್ಲರಿಗೂ ಮಾರ್ಗದರ್ಶನವಾಗಿ ಕಾರ್ಯನಿರ್ವಹಿಸುತ್ತಿದೆ. ಸೌಹಾರ್ದ ಸಮಾಜವನ್ನು ಸೃಷ್ಟಿಸಲು ಸಮಾಜದಲ್ಲಿ ಯುವಕ ಸಂಘಗಳ ಪಾತ್ರ ಬಹುಮುಖ್ಯವಾಗಿದೆ. ಮುಂದಿನ ದಿನಗಳಲ್ಲಿ ಗಾಂಧಿ ಯುವಕ ಸಂಘದ ಎಲ್ಲಾ ಸಾಮಾಜಿಕ ಚಟುವಟಿಕೆಗಳಿಗೆ ಸೇವ್ ದಿ ಡ್ರೀಮ್ಸ್ ಕೈ ಜೋಡಿಸಲಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ, ಅಂತರರಾಷ್ಟಿçÃಯ ಮಾಜಿ ರಗ್ಬಿ ಆಟಗಾರ ಹಾಗೂ ವೀರಾಜಪೇಟೆ ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ, ಗಾಂಧಿ ಯುವಕ ಸಂಘದ ಯುವಕರು, ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಸಂಘದ ಮುಖಾಂತರ ಇಡೀ ಜಿಲ್ಲೆಯಲ್ಲಿ ಮಾದರಿ ಕಾರ್ಯಕ್ರಮ ಆಯೋಜಿಸಿದ್ದು ಕೊಡಗಿನ ಯುವ ಜನರಿಗೆ ಮಾದರಿಯಾಗಿದೆ.

ಗಾಂಧಿ ಯುವಕ ಸಂಘದ ಎಲ್ಲಾ ಕಾರ್ಯಕ್ರಮಗಳಿಗೆ ಮುಂದಿನ ದಿನಗಳಲ್ಲಿ ನನ್ನ ಎಲ್ಲಾ ರೀತಿಯ ಸಹಕಾರ, ಬೆಂಬಲ ಇರಲಿದೆ ಎಂದು ಹೇಳಿದರು. ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಸಲಹೆಗಾರ, ಹಾಗೂ ಎಸ್.ಎನ್.ಡಿ.ಪಿ ಮಡಿಕೇರಿ ಶಾಖಾ ಅಧ್ಯಕ್ಷ ಟಿ.ಆರ್ ವಾಸುದೇವ್ ಮಾತನಾಡಿ, ಜನಸೇವೆಯೇ ಜನಾರ್ದನ ಸೇವೆ. ಬಡಕುಟುಂಬದಲ್ಲಿ ಒಂದು ಹೆಣ್ಣುಮಗಳಿಗೆ ಮದುವೆ ನಡೆಸಿಕೊಡಲು, ಪೋಷಕರ ಕಷ್ಟವನ್ನು ಅರಿತುಕೊಂಡು ಗಾಂಧಿ ಯುವಕ ಸಂಘ ಬಡಹೆಣ್ಣುಮಕ್ಕಳ ವಿವಾಹವನ್ನು ನಡೆಸಿಕೊಡುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ.

ಸಮಾಜದಲ್ಲಿ ನೈಜ ಬಡವರಿಗೆ ಸಹಾಯ ಮಾಡಬೇಕಾಗಿದೆ. ಮುಂದಿನ ದಿನಗಳಲ್ಲಿ ಗಾಂಧಿ ಯುವಕ ಸಂಘದ ಎಲ್ಲಾ ರೀತಿಯ ಕಾರ್ಯಕ್ರಮಗಳಿಗೆ ಕೈ ಜೋಡಿಸುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮ ಕುರಿತು ಪ್ರಾಸ್ತಾವಿಕ ಮಾತನಾಡಿದ, ಗಾಂಧಿ ಯುವಕ ಸಂಘದ ಅಧ್ಯಕ್ಷ ಇಸ್ಮಾಯಿಲ್ ಕಂಡಕರೆ, ಮೊದಲ ಹಂತದಲ್ಲಿ ಒಂದು ಬಡ ಹೆಣ್ಣುಮಗಳ ವಿವಾಹವನ್ನು ನೆರವೇರಿಸಿಕೊಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಎರಡು ಬಡಹೆಣ್ಣುಮಕ್ಕಳ ವಿವಾಹವನ್ನು ಸಂಘದಿAದ ನೆರವೇರಿಸಿಕೊಡುತ್ತೇವೆ. ಕಳೆದ ಮೂರು ವರ್ಷಗಳಿಂದ ಗಾಂಧಿ ಯುವಕ ಸಂಘವು ಹಲವಾರು ಸಮಾಜಮುಖಿ ಸೇವೆಗಳನ್ನು ಮಾಡುತ್ತಾ ಬಂದಿದೆ. ಬಡರೋಗಿಗಳಿಗೆ ಹಾಗೂ ಬಡವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಸಂಘವು ನೆರವಾಗಿದೆ.

ವಿರೋಧಿಗಳಿಗೆ ನಾವು ಕಾರ್ಯಕ್ರಮದ ಮೂಲಕ ಉತ್ತರ ಕೊಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಸಂಘದ ಚಟುವಟಿಕೆಗಳು ನಿರಂತರವಾಗಿ ನಡೆಯಲಿದೆ.ಕಳೆದ ಮೂರು ವರ್ಷಗಳ ಕಾಲ ಗಾಂಧಿ ಯುವಕ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ ಪ್ರತಿಯೊಬ್ಬರಿಗೂ ಅಭಾರಿಯಾಗಿದ್ದೇನೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಸುಂಟ್ಟಿಕೊಪ್ಪ, ಕೊಡಗು ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಾಸೀರ್ ಮೂರ್ನಾಡು, ಕೊಡಗು ಜಿಲ್ಲಾ ಎಸ್.ಡಿ.ಪಿ.ಐ ಅಧ್ಯಕ್ಷ ಅಬ್ದುಲ್ ಅಡ್ಕರ್, ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಸಿ.ಇ ತೀರ್ಥಕುಮಾರ್, ಎಸ್.ಎಸ್.ಎಫ್ ಕಂಡಕರೆ ಯೂನಿಟ್ ಅಧ್ಯಕ್ಷ ಬಿ.ಎಂ. ಇಬ್ರಾಹಿಂ ಸಖಾಫಿ ಕಂಡಕರೆ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಪ್ರಧಾನ ಕಾರ್ಯದರ್ಶಿ ಷರೀಫ್ ಪಿ.ಎಂ ವಹಿಸಿದ್ದರು. ರಾಹುಲ್ ವೀರಾಜಪೇಟೆ ನಿರೂಪಿಸಿದರು. ನಿಖಾಹ್ ಕಾರ್ಯಕ್ರಮಕ್ಕೆ ಕಂಡಕರೆ ಮಹಲ್ ಖತೀಬರಾದ ಮುಸ್ತಫಾ ಸಖಾಫಿ ನೇತೃತ್ವ ವಹಿಸಿದ್ದರು.

ವೇದಿಕೆಯಲ್ಲಿ ಕಂಡಕರೆ ಯೂನಿಟ್ ಎಸ್‌ಕೆಎಸ್‌ಎಸ್‌ಎಫ್ ಅಧ್ಯಕ್ಷ ಸಿ.ಕೆ ಷಂಶುದ್ದೀನ್, ಪ್ರಧಾನ ಕಾರ್ಯದರ್ಶಿ ಹಾರಿಸ್ ಬಾಖವಿ,ಪೊನ್ನಂಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಂಕಿತ್ ಪೊನ್ನಪ್ಪ,ಉದ್ಯಮಿ ಕೆ.ಎಂ ಫೈಜಲ್, ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯ ಜಿನಾಸುದ್ದೀನ್, ಕಂಡಕರೆ ಮಹಲ್ ಅಧ್ಯಕ್ಷ ಕೆ.ಹೆಚ್ ಗಫೂರ್, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ರಫಿ, ಕಂಡಕರೆ ಬಿಜೆಪಿ ಬೂತ್ ಅಧ್ಯಕ್ಷ ಜಗನ್ ನೂಜಿಬೈಲು, ಪತ್ರಕರ್ತ ಜಯಪ್ರಕಾಶ್, ಗ್ರಾಮ ಪಂಚಾಯತಿ ಸದಸ್ಯ ಮುಸ್ತಫಾ, ಮಾಜಿ ಸದಸ್ಯ ಆಬಿದ್ ಕಂಡಕರೆ ಇದ್ದರು. ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮೊದಲ ಹಂತದಲ್ಲಿ ಒಂದು ಜೋಡಿ ಬಡಹೆಣ್ಣಿಗೆ ಗಾಂಧಿ ಯುವಕ ಸಂಘದಿAದ ೫ ಪವನ್ ಚಿನ್ನ(೪೦ಗ್ರಾಂ) ಹಾಗೂ ವಧುವಿಗೆ ಮದುವೆ ಬಟ್ಟೆಯನ್ನು ನೀಡಲಾಯಿತು. ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ೮೦೦ಕ್ಕೂ ಅಧಿಕ ಜನರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.