ಮಡಿಕೇರಿ, ಜೂ. ೧೨: ಸಿದ್ದಾಪುರದ ೨೪೦೦ ಎಕರೆ ಖಾಸಗಿ ಕಾಫಿ ತೋಟ ಸೇರಿದಂತೆ ಕೊಡಗು ಜಿಲ್ಲೆಯಾದ್ಯಂತ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ವಿರುದ್ಧ ಕೊಡವರು ಜಾಗೃತರಾಗದಿದ್ದರೆ ಅಪಾಯ ಕಾದಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.
ಸಿದ್ದಾಪುರದ ಕಾಫಿ ತೋಟದ ಬೃಹತ್ ಭೂಪರಿವರ್ತನೆ ಸೇರಿದಂತೆ ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿರುವ ಭೂಪರಿವರ್ತನೆಗಳ ವಿರುದ್ಧ ಸಿ.ಎನ್.ಸಿ. ಸಂಘಟನೆ ವತಿಯಿಂದ ಬಾಳೆಲೆಯಲ್ಲಿ ಆಯೋಜಿಸಿದ್ದ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಿದ್ದಾಪುರ ಖಾಸಾಗಿ ಕಾಫಿ ತೋಟದಲ್ಲಿ ಒಂದು ಸಾವಿರ ಮರಗಳನ್ನು ಕಡಿಯಲು ಅನುಮತಿ ಪಡೆದು ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಸುಮಾರು ೩ ರಿಂದ ೪ ಸಾವಿರ ಮರಗಳನ್ನು ಹನನ ಮಾಡಲಾಗಿದೆ. ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.
ಕಾಫಿ ತೋಟಗಳ ಭೂಪರಿವರ್ತನೆಯಿಂದ ಕೊಡಗಿನ ಎಲ್ಲಾ ಗ್ರಾಮಗಳು ನಾಶವಾಗುತ್ತಿವೆ. ಮಣ್ಣು ಅಗೆಯುವ ಕೆಲಸದಿಂದ ಬಹುವಾರ್ಷಿಕ ಜಲಮೂಲಗಳ ನರ ಕೇಂದ್ರಗಳು ಈಗಾಗಲೇ ಮುಚ್ಚಿವೆ. ಇದರಿಂದ ಕೊಡಗಿನ ಮೇಲಾಗುವ ಅಪಾಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕು. ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ, ಎಸ್.ಟಿ ಟ್ಯಾಗ್, ಕೊಡವರ ಆಂತರಿಕ ರಾಜಕೀಯ ಸ್ವಯಂ ನಿರ್ಣಯದ ಹಕ್ಕುಗಳನ್ನು ಮಾನ್ಯ ಮಾಡಿದಾಗ ಮಾತ್ರ ಪವಿತ್ರ ಕೊಡವ ಭೂಮಿಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದರು.
ತಾ. ೧೭ ರಂದು ಸಿದ್ದಾಪುರದಲ್ಲಿ
ಬೃಹತ್ ಭೂಪರಿವರ್ತನೆ ವಿರುದ್ಧ ತಾ. ೧೭ ರಂದು ಸಿದ್ದಾಪುರದಲ್ಲಿ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ. ಮುಂದಿನ ದಿನಗಳಲ್ಲಿ ಮಡಿಕೇರಿ, ಸುಂಟಿಕೊಪ್ಪ, ಮಾದಾಪುರ, ಚೆಟ್ಟಳ್ಳಿ, ಚೇರಂಬಾಣೆ, ಮೂರ್ನಾಡು, ಕಕ್ಕಬೆ, ನಾಪೋಕ್ಲು, ವೀರಾಜಪೇಟೆ, ಗೋಣಿಕೊಪ್ಪ, ತಿತಿಮತಿ, ಪೊನ್ನಂಪೇಟೆ, ಹುದಿಕೇರಿ, ಕುಟ್ಟ, ಶ್ರೀಮಂಗಲ, ಟಿ. ಶೆಟ್ಟಿಗೇರಿ ಮತ್ತಿತರೆಡೆ ಕೂಡ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ನಡೆಸಲಾಗುವುದು ಎಂದರು.
ಪೋಡಮಾಡ ಜಾನಕಿ, ಮಾಪಂಗಡ ಯಮುನಾ, ಗಾಂಡAಗಡ ಪ್ರತಿಮಾ, ಅಡ್ಡೇಂಗಡ ಪೊನ್ನಮ್ಮ, ಅಡ್ಡೇಂಗಡ ಗ್ರೀಷ್ಮಾ, ಮಲ್ಚಿರ ಕವಿತಾ ಬೋಜಪ್ಪ, ಮುಕ್ಕಾಟಿರ ಜಾನಕಿ ವಾಸು, ಅರ್ಮಣಮಾಡ ಮಮತಾ, ಕೊಕ್ಕೆಂಗಡ ಸ್ಮಿತ, ಅಡ್ಡೇಂಗಡ ಕಾವೇರಮ್ಮ, ಮಾಪಂಗಡ ಅಶೋಕ್, ಪೋಡಮಾಡ ಗಿರೀಶ್, ಕಾಂಡೇರ ಸುರೇಶ್, ಅಲ್ಮೇಂಗಡ ಬೋಸ್ ಮಂದಣ್ಣ, ಅಲ್ಮೇಂಗಡ ಪೊನ್ನಪ್ಪ, ಮಚ್ಚಮಾಡ ದೊರೆ ಉತ್ತಯ್ಯ, ಮೇಚಂಡ ಕಿಶು, ಚೆಕ್ಕೆರ ಸೂರ್ಯ ಅಯ್ಯಪ್ಪ, ಕಳ್ಳಿಚಂಡ ಪಾಪು, ಕೊಟ್ಟಂಗಡ ವೇಣು, ಅಡ್ಡೇಂಗಡ ಬೊಳ್ಳಿಕಟ್ಟಿ, ಮಲ್ಚಿರ ಡಾ. ಸುಬ್ರಮಣಿ, ಅಪ್ಪೇಂಗಡ ಮಾಲೆ, ಕಿರಿಯಮಾಡ ಶೆರಿನ್, ಪೊಡಮಾಡ ಸುಕೇಶ್, ಅಡ್ಡೇಂಗಡ ನವೀನ್, ಅಡ್ಡೇಂಗಡ ಅರುಣ್, ಅಡ್ಡೇಂಗಡ ರಾಖಿ, ಬಿಪ್ಪಮಾಡ ಪಾಪು, ಪಾರ್ವಂಗಡ ಕಿಶೋರ್, ಪಾರ್ವಂಗಡ ಸುಬ್ರಮಣಿ, ಅರ್ಮಣಮಾಡ ರೋಷನ್, ಕೊಕ್ಕೆಂಗಡ ರಂಜನ್, ಅಲ್ಮೇಂಗಡ ಸುರೇಶ್, ಚಿಂದಮಾಡ ಜಸ್ಸಿ, ಅಡ್ಡೇಂಗಡ ರಮೇಶ್, ಪರ್ವಂಗಡ ದಿಲ್ಲನ್, ಪರ್ವಂಗಡ ಮಿಲನ್, ಪರ್ವಂಗಡ ನವೀನ್, ಆದೇಂಗಡ ಶೇಖರ್, ಅಲಮೇಂಗಡ ರಿಕ್ಕಿ, ಮಾಚಂಗಡ ಡಿಕ್ಕಿ, ಮಾಚಂಗಡ ಹರೀಶ್, ಕಾಟಿಮಾಡ ಅಯ್ಯಣ್ಣ, ಕಳ್ಳಿಚಂಡ ಮುರುಳಿ, ಆದೇಂಗಡ ರಾಣಾ ಬೋಪಣ್ಣ, ಚಿಮ್ಮಣಮಾಡ ಕೃಷ್ಣ, ಕಾಂಡೇರ ಪ್ರಕಾಶ್, ಅರ್ಮಣಮಾಡ ಸುಗುಣ, ಮಂದೆಮಾಡ ಬೋಸ್, ಆದೇಂಗಣ ಪ್ರಕಾಶ್, ಅರ್ಮಣಮಾಡ ಕೃಷ್ಣ, ಕಾಂಡೇರ ಕಿರಣ್, ಪರ್ವಂಗಡ ಲವ, ಅಡ್ಡೇಂಗಡ ಅಜಯ್, ಪೋಡಮಾಡ ಮೋಹನ್, ಪರ್ವಂಗಡ ದಿಲನ್, ಚಿಂಡಮಾಡ ಜಗ ಮತ್ತಿತರರು ಮಾನವ ಸರಪಳಿ ನಿರ್ಮಿಸಿ ಬೃಹತ್ ಭೂಪರಿವರ್ತನೆ ವಿರುದ್ಧ ಮತ್ತು ಕೊಡವ ಲ್ಯಾಂಡ್ ಪರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.