ಚೆಟ್ಟಳ್ಳಿ, ಜೂ. ೧೨: ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ, ಭಾ.ಕ್ರ.ಅ.ಪ- ತೋಟಗಾರಿಕಾ ಸಂಶೋಧನಾ ಸಂಸ್ಥೆ ಚೆಟ್ಟಳ್ಳಿಯಲ್ಲಿ ತಾ. ೧೫ರಂದು ಬೆಣ್ಣೆಹಣ್ಣಿನ ಕ್ಷೇತ್ರೋತ್ಸವ ಹಾಗೂ ವೈವಿಧ್ಯತಾ ಮೇಳ ನಡೆಯಲಿದೆ ಎಂದು ಕೇಂದ್ರದ ಮುಖ್ಯಸ್ಥ ಡಾ ರಾಜೇಂದ್ರನ್ ತಿಳಿಸಿದ್ದಾರೆ.

ಅವಕಾಡೋ, ಬಟರ್‌ಫ್ರೂಟ್ ಎಂದೇ ಹೆಸರುಗಳಿಸಿರುವ ಬೆಣ್ಣೆಹಣ್ಣಿನ ಸಮಯವಾಗಿದ್ದು, ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ವಿವಿಧ ಬಗೆಯ ದೇಶೀ ಹಾಗೂ ವಿದೇಶೀ ಅವಕಾಡೋ ತಳಿಗಳ ಅಭಿವೃದ್ಧಿಪಡಿಸಲಾಗಿದೆ. ಉತ್ತಮ ಇಳುವರಿ ಪಡೆಯುವ ಕೂರ್ಗ್ ಅರ್ಕಾ ರವಿ, ಅರ್ಕಾ ಸುಪ್ರೀಮ್ ಹಾಗೂ ನೂತನ ತಳಿಗಳ ಅಭಿವೃದ್ಧಿಪಡಿಸಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಕೇಂದ್ರದಲ್ಲಿ ಬೆಣ್ಣೆಹಣ್ಣಿನ ಕ್ಷೇತ್ರೋತ್ಸವ ಹಾಗು ವೈವಿಧ್ಯತಾ ಮೇಳವನ್ನು ನಡೆಸುವ ಮೂಲಕ ಬೆಳೆಗಾರರಿಗೆ ಹಣ್ಣಿನ ಬೆಳೆಯ ಅಭಿವೃದ್ಧಿಯ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ತೋಟಗಾರಿಕೆ ಇಲಾಖಾ ಮಹಾನಿರ್ದೇಶಕ ವಿಜ್ಞಾನಿ ಡಾ. ಎಸ್.ಕೆ. ಸಿಂಗ್, ಡಾ. ವಿಜ್ಞಾನಿ ಕೆ.ಎಸ್. ವರ್ಮ ಭಾಗವಹಿಸಲಿದ್ದಾರೆ.

ವಿಷಯ ಮಂಡನೆ: ಭಾರತದಲ್ಲಿ ಬೆಣ್ಣೆಹಣ್ಣಿನ ಕೃಷಿ ನಿರೀಕ್ಷೆಗಳು ಹಾಗೂ ಸಮಸ್ಯೆಗಳ ಬಗ್ಗೆ ಕೇಂದ್ರದ ಹಣ್ಣು ವಿಜ್ಞಾನಿ ಡಾ. ಮುರುಳೀಧÀರ್ ಬಿ.ಎಂ ಹಾಗೂ ಬೆಣ್ಣೆಹಣ್ಣಿನಲ್ಲಿ ಪ್ರಮುಖ ಕೀಟ ಮತ್ತು ರೋಗಗಳು ಅವುಗಳ ನಿರ್ವಹಣೆಯ ಬಗ್ಗೆ ಕೀಟ ವಿಜ್ಞಾನಿ ಡಾ. ರಾಣಿ ಎ.ಟಿ ಮಾಹಿತಿ ನೀಡಲಿದ್ದಾರೆ.

ಕಾರ್ಯಕ್ರಮದ ಅಂಗವಾಗಿ ಬೆಳೆಗಾರರು ಬೆಳೆದ ವಿವಿಧ ತಳಿಗಳ ಬೆಣ್ಣೆಹಣ್ಣಿನ ಪ್ರದರ್ಶನ ನಡೆಯಲಿದೆ. ರೈತ-ವಿಜ್ಞಾನಿಗಳ ಸಂವಾದ ಕಾರ್ಯಕ್ರಮ ನಡೆಯಲಿದ್ದು, ಕೇಂದ್ರದಲ್ಲಿ ಬೆಳೆಯಲಾದ ಬಟರ್ ಫ್ರೂಟ್ ಹಣ್ಣಿನ ಕ್ಷೇತ್ರದ ಭೇಟಿ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ೭೮೯೨೮೮೨೩೫೧/೯೦೦೫೮೪೭೨೮೩ ಸಂಪರ್ಕಿಸಬಹುದಾಗಿದೆ.

ಸAಘದ ಉದ್ಘಾಟನೆ

ಬೆಳೆಗಾರರಿಗೆ ಅನುಕೂಲವಾಗುವ ಅಧಿಕ ಮೌಲ್ಯದ ವಿದೇಶೀ ತೋಟಗಾರಿಕಾ ಬೆಳೆಗಳ ಅಭಿವೃದ್ಧಿ ಸಂಘವನ್ನು ನೋಂದಣಿ ಮಾಡಲಾಗಿದ್ದು ಕಾರ್ಯಕ್ರಮದ ದಿನದಂದು ಉದ್ಘಾಟಿಸಲಾಗುವುದು. ಲೋಗೋ, ವೆಬ್‌ಸೈಟ್‌ಗಳ ಅನಾವರಣ ಮಾಡಲಾಗುವುದು.