ಮಡಿಕೇರಿ, ಜೂ. ೧೨: ವಿಶಿಷ್ಟ ಸಂಸ್ಕೃತಿ, ಆಚಾರ-ವಿಚಾರ, ಪದ್ಧತಿ, ಪರಂಪರೆಯಿAದ ಪ್ರಪಂಚವ್ಯಾಪಿ ಗಮನ ಸೆಳೆಯುತ್ತಿರುವ ಕೊಡವ ಜನಾಂಗದ ಹಿನ್ನೆಲೆಯನ್ನು ಬೇರೆ ಜಿಲ್ಲೆ, ರಾಜ್ಯ, ದೇಶದ ಪ್ರವಾಸಿಗರಿಗೆ ಪರಿಚಯಿಸುವ ನಿಟ್ಟಿನಲ್ಲಿ ರೂಪಿಸಲಾದ ‘ಕೊಡವ ಹೆರಿಟೇಜ್’ ಯೋಜನೆ ೨೦೧೧ರಿಂದಲೂ ನಡೆಯುತ್ತಲೇ ಇದೆ.! ಕಟ್ಟಡ ತಲೆಎತ್ತಿ ನಿಂತರೂ ಇತರ ಕಾಮಗಾರಿ ಪೂರ್ಣಗೊಳ್ಳದೆ ಕೊಡವ ಪಾರಂಪರಿಕ ತಾಣ ಜನರ ದರ್ಶನಕ್ಕೆ ಸಿಗದೆ ಅನಾಥ ಸ್ಥಿತಿಯಲ್ಲಿದೆ. ಅಲ್ಲದೇ, ಶಿಥಿಲಗೊಂಡು ಹಾಳಾಗುವ ಭೀತಿಯೂ ಸೃಷ್ಟಿಯಾಗಿದೆ.
ಪ್ರವಾಸಿಗರ ಸ್ವರ್ಗ, ಮಂಜಿನನಗರಿ ಎಂದು ಕರೆಸಿಕೊಳ್ಳುವ ಮಡಿಕೇರಿ ನಗರದಿಂದ ಅನತಿ ದೂರದ ಕರವಲೆ ಬಾಡಗ ಗ್ರಾಮದಲ್ಲಿ (ವಿದ್ಯಾನಗರ) ನೂತನವಾಗಿ ನಿರ್ಮಾಣವಾದ ಜಿಲ್ಲಾ ನ್ಯಾಯಾಲಯ ಸಮೀಪದಲ್ಲಿಯೇ ೫ ಎಕರೆ ಜಾಗದಲ್ಲಿ ೨೦೦೯-೧೦ರಲ್ಲಿ ಯೋಜನೆ ಕಾರ್ಯಗತಕ್ಕೆ ಮಂಜೂರಾತಿ ಪಡೆದುಕೊಂಡು ೨೦೧೧ರಲ್ಲಿ ಕೆಲಸ ಆರಂಭಗೊAಡರು ಇಂದಿಗೂ ಕಾಮಗಾರಿ ಪೂರ್ಣ ಗೊಳ್ಳದೆ ತೆವಳುತ್ತ ಸಾಗುತ್ತಿದೆ. ‘ಕೊಡವ ಹೆರಿಟೇಜ್ ಎಂದು ಪೂರ್ಣಗೊಳ್ಳುತ್ತೆ?’ ಎಂದು ಚಾತಕ ಪಕ್ಷಿಯಂತೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
೧೪ ವರ್ಷದಿಂದಲೂ ಕಾಮಗಾರಿ ಅಂತ್ಯವಾಗದೆ ಇದೀಗ ಕೆಲಸ ಸ್ಥಗಿತಗೊಂಡಿದೆ. ನಿರ್ಮಾಣ ಹಂತದಿAದಲೂ ಒಂದಿಲ್ಲೊAದು ಸಮಸ್ಯೆಗಳು, ಕಳಪೆ ಕಾಮಗಾರಿ, ಗುತ್ತಿಗೆದಾರರ ಬದಲಾವಣೆ ಇದರೊಂದಿಗೆ ಅಧಿಕಾರಿ, ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಕೆಲಸ ತಡವಾಗುತ್ತಲೇ ಹೋಗುತ್ತಿದೆ. ಇದೀಗ ಕಾಮಗಾರಿಗೆ ಹೆಚ್ಚುವರಿಯಾಗಿ ರೂ. ೪.೯೫ ಕೋಟಿಯ ಅವಶ್ಯಕತೆ ಇದ್ದು, ಪ್ರವಾಸೋದ್ಯಮ ಇಲಾಖೆ ಅನುದಾನ ಕೋರಿ ಸರಕಾರಕ್ಕೆ ಪತ್ರ ವ್ಯವಹಾರ ನಡೆಸಿದೆ.
ಅನನ್ಯ ಸಂಸ್ಕೃತಿಯನ್ನು ಹೊಂದಿರುವ ಕೊಡವ ಜನಾಂಗದ ಸಾಂಸ್ಕೃತಿಕ ಶ್ರೀಮಂತಿಕೆ, ಜೀವನ ಶೈಲಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಕೊಡವ ಹೆರಿಟೇಜ್ ಸೆಂಟರ್ ಸ್ಥಾಪಿಸಲು ಚಿಂತನೆ ನಡೆಸಲಾಗಿತ್ತು. ಐನ್ಮನೆ, ಸಭಾಂಗಣ, ಕೊಡವರ, ಸಂಸ್ಕೃತಿ, ಪದ್ಧತಿ, ಪರಂಪರೆಯ ಅನಾವರಣ, ಉಡುಗೆ-ತೊಡುಗೆ, ಆಭರಣಗಳ ಪ್ರದರ್ಶನ, ಕೊಡಗಿನ ಪ್ರಮುಖ ಬೆಳೆ ಹಾಗೂ ಕೊಡವರ ಪೂರ್ವಿಕರು ಬಳಸುತ್ತಿದ್ದ ಪಾರಂಪರಿಕ ವಸ್ತುಗಳ ಪ್ರದರ್ಶನ ಇಡಲು ವಸ್ತು ಸಂಗ್ರಹಾಲಯ ಹಾಗೂ ಇನ್ನಿತರ ವ್ಯವಸ್ಥೆಗಳೊಂದಿಗೆ ಕೊಡವರ ಸಂಸ್ಕೃತಿ ಬಗ್ಗೆ ಪೂರಕ ಮಾಹಿತಿ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.
ಕೊಡವ ಹೆರಿಟೇಜ್ ಸೆಂಟರ್ ನಿರ್ಮಾಣ ಕಾಮಗಾರಿಯಲ್ಲಿ ಪ್ರಮುಖವಾಗಿ ಗೋಡೆಗಳಿಗೆ ಪಾಲಿಷಿಂಗ್ ಆಗಬೇಕಿದ್ದು, ಕಟ್ಟಡದ ಮುಂಭಾಗ ಗೇಟ್ ಮತ್ತು ಸುತ್ತ ಗೋಡೆ ನಿರ್ಮಿಸಬೇಕಿದೆ. ಮೆಟ್ಟಿಲುಗಳಿಗೆ ರೇಲಿಂಗ್ಸ್ ಮತ್ತು ಪ್ಲೋರಿಂಗ್ ಮಾಡಬೇಕಿದೆ. ರಂಗಮAದಿರಕ್ಕೆ ಮೇಲ್ಛಾವಣಿ ಅಳವಡಿಕೆ ಹಾಗೂ ಇತರ ಕೆಲಸಗಳು ಬಾಕಿ ಇವೆ. ಇದರೊಂದಿಗೆ ರಸ್ತೆ, ಪಾರ್ಕಿಂಗ್ ವ್ಯವಸ್ಥೆ, ವಿದ್ಯುತ್, ನೀರು ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಬೇಕಾಗಿದೆ.
ಕೊಡವ ಹೆರಿಟೇಜ್ ಸೆಂಟರ್ ನಿರ್ಮಾಣ ಸಂಬAಧ ರೂ. ೩,೩೦,೪೫,೧೧೦ ರೂ.ಗಳ ಕಾಮಗಾರಿಗೆ ಅನುಮೋದನೆ ದೊರೆತು
(ಮೊದಲ ಪುಟದಿಂದ) ಸದ್ಯಕ್ಕೆ ೨ ಐನ್ಮನೆಗಳ ಕೆಲಸ, ಪ್ರವೇಶ ದ್ವಾರ, ಅಡುಗೆ ಕೊಠಡಿ, ಮೆಟ್ಟಿಲು ಗಳು, ಗ್ರಂಥಾಲಯ, ರಂಗ ಮಂದಿರ, ವಿದ್ಯುದೀಕರಣ, ಕಿಟಕಿ, ಬಾಗಿಲುಗಳ ಕೆಲಸ ಸೇರಿದಂತೆ ಮತ್ತಿತರ ಕಾಮಗಾರಿಗಳು ನಡೆ ದಿವೆ. ಇನ್ನೂ ಅನೇಕ ಕೆಲಸಗಳು ಬಾಕಿ ಉಳಿದುಕೊಂಡಿವೆ.
ಕೊಡವ ಪಾರಂಪರಿಕ ಕೇಂದ್ರವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಲಹಾ ಸಮಿತಿ ಮತ್ತು ಕಾರ್ಯಕಾರಿ ಸಮಿತಿಯನ್ನು ನೇಮಿಸುವ ಸಂಬAಧ ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಯೂ ಕಡತ ದಲ್ಲಿಯೇ ಧೂಳು ಹಿಡಿಯುತ್ತಿದ್ದು, ಸಮಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಅಧ್ಯಕ್ಷರಾಗಿ, ಜಿಲ್ಲೆಯ ಜನಪ್ರತಿನಿಧಿಗಳು ಸದಸ್ಯರಾಗಿ ಕಾರ್ಯ ನಿರ್ವಹಿಸಬೇಕಾಗಿತ್ತು. ಆದರೆ, ಈ ಸಮಿತಿಯನ್ನು ಇನ್ನೂ ಕಾರ್ಯೋನ್ಮುಖಗೊಳಿಸಲು ಸಾಧ್ಯವಾಗಲಿಲ್ಲ.
ಅನುದಾನ ಬಿಡುಗಡೆಯಾಗಿದ್ದೆಷ್ಟು.?
ಯೋಜನೆ ರೂಪಿಸಿದಾಗಲಿಂದ ಹಂತಹAತಗಳಲ್ಲಿ ಅನುದಾನ ಬಿಡುಗಡೆಯಾಗಿದೆ. ಈ ಪೈಕಿ ಮೊದಲ ಕಂತಾಗಿ ರೂ. ೩೩.೫೪ ಲಕ್ಷವನ್ನು ಬಿಡುಗಡೆ ಮಾಡ ಲಾಯಿತು. ಎರಡನೇ ಕಂತಾಗಿ ರೂ.೨೦ ಲಕ್ಷವನ್ನು ಜಿಲ್ಲಾಧಿಕಾರಿಗೆ, ೭.೬.೨೦೧೪ ರಂದು ಮೂರನೇ ಕಂತಾಗಿ ರೂ. ೧ ಕೋಟಿ, ೭.೨.೨೦೧೫ ರಂದು ನಾಲ್ಕನೇ ಕಂತಾಗಿ ರೂ. ೧ ಕೋಟಿ, ೮.೧೨.೨೦೨೧ ರಂದು ಐದನೇ ಕಂತಾಗಿ ರೂ. ೨೯ ಲಕ್ಷ, ಹೀಗೆ ಒಟ್ಟು ರೂ. ೩.೩೦ ಕೋಟಿ ವೆಚ್ಚ ಬಳಸಿಕೊಂಡು ಕಾಮ ಗಾರಿಯನ್ನು ಲೋಕೋಪಯೋಗಿ ಇಲಾಖೆ ಮೂಲಕ ಪೂರ್ಣ ಗೊಳಿಸಲಾಗಿದೆ.
ಎದುರಾದ ವಿಘ್ನಗಳು
ಕಾಮಗಾರಿ ಮಂದಗತಿಯಲ್ಲಿ ರಂದು ನಾಲ್ಕನೇ ಕಂತಾಗಿ ರೂ. ೧ ಕೋಟಿ, ೮.೧೨.೨೦೨೧ ರಂದು ಐದನೇ ಕಂತಾಗಿ ರೂ. ೨೯ ಲಕ್ಷ, ಹೀಗೆ ಒಟ್ಟು ರೂ. ೩.೩೦ ಕೋಟಿ ವೆಚ್ಚ ಬಳಸಿಕೊಂಡು ಕಾಮ ಗಾರಿಯನ್ನು ಲೋಕೋಪಯೋಗಿ ಇಲಾಖೆ ಮೂಲಕ ಪೂರ್ಣ ಗೊಳಿಸಲಾಗಿದೆ.
ಎದುರಾದ ವಿಘ್ನಗಳು
ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದ ಕಾರಣಕ್ಕೆ ಗುತ್ತಿಗೆದಾರರಿಗೆ ನೋಟೀಸ್ ನೀಡಿದರು ಕೂಡ ಕಾಮಗಾರಿ ನಿಗದಿತ ಸಮಯದಲ್ಲಿ ಪೂರ್ಣಗೊಳಿಸದ ಕಾರಣಕ್ಕಾಗಿ ೨೦೧೮ರಲ್ಲಿ ಗುತ್ತಿಗೆದಾರರನ್ನು ಬದಲಾವಣೆ ಮಾಡಲಾಯಿತು. ಇದರಿಂದ ಗುತ್ತಿಗೆದಾರರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಮಳೆಗಾಲ ಹಾಗೂ ಕೋವಿಡ್ ಪರಿಸ್ಥಿತಿಯಿಂದ ಕೂಡ ಕಾಮಗಾರಿ ಮತ್ತಷ್ಟು ತಡವಾಯಿತು.
ಕೊಡವ ಪಾರಂಪರಿಕ ತಾಣ ಇದೀಗ ಅನಾಥವಾಗಿದೆ. ಗೇಟ್ ಹಾಗೂ ಸೂಕ್ತ ಭದ್ರತೆ ಇಲ್ಲದಿರುವುದು ಆಡಳಿತ ಹಾಗೂ ಜನಪ್ರತಿ ನಿಧಿಗಳ ಇಚ್ಛಾಶಕ್ತಿಗೆ ಕೈಗನ್ನಡಿ ಹಿಡಿದಂತಾಗಿದೆ. ಯಾರು ಬೇಕಾದರೂ ಇಲ್ಲಿಗೆ ನಿರ್ಭೀತಿಯಿಂದ ಯಾವ ಸಮಯಕ್ಕೂ ತೆರಳಬಹುದಾದ ಸ್ಥಿತಿ ಸೃಷ್ಟಿಯಾಗಿದೆ. ಜೊತೆಗೆ ಹೆರಿಟೇಜ್ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಡುವ ಮೊದಲು ಇಲಾಖೆ ಇದಕ್ಕೆ ಸೂಕ್ತ ಭದ್ರತೆ ಕಲ್ಪಿಸಬೇಕು. ಬೆಲೆಬಾಳುವ ಹೆಂಚು, ಕಬ್ಬಿಣ ವಸ್ತುಗಳು ಕೂಡ ಇದ್ದು ಭದ್ರತೆಯ ಅವಶ್ಯಕತೆಯೂ ಇದೆ. ಕೂಡಲೇ ಜಿಲ್ಲಾಡಳಿತ ಈ ಬಗ್ಗೆ ಎಚ್ಚೆತ್ತು ಕಾಮ ಗಾರಿ ಚುರುಕು ಗೊಳಿಸಲು ಮುಂದಾ ಗಬೇಕಾಗಿದೆ.
ಟಿ ಹೆಚ್.ಜೆ. ರಾಕೇಶ್