ವರದಿ : ಚಂದ್ರಮೋಹನ್

ಕುಶಾಲನಗರ, ಜೂ. ೧೨: ಕುಶಾಲನಗರ ಬಳಿ ಹರಳು ಕಲ್ಲು ಸಾಗಾಟ ಪ್ರಕರಣಕ್ಕೆ ಸಂಬAಧಿಸಿದAತೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಮಡಿಕೇರಿ ಬಳಿಯ ಮೇಕೇರಿ ವ್ಯಾಪ್ತಿಯಲ್ಲಿ ಖಾಸಗಿ ತೋಟ ಒಂದರಿAದ ಭಾರೀ ಪ್ರಮಾಣದ ಹರಳು ಕಲ್ಲುಗಳು ಸಂಗ್ರಹ ಮಾಡಲಾಗಿದ್ದು, ಅಲ್ಲಿಂದ ಮೈಸೂರು ಕಡೆಗೆ ಅಕ್ರಮವಾಗಿ ಸಾಗಾಟವಾಗುತ್ತಿರುವ ಬಗ್ಗೆ ಅರಣ್ಯಾಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ.

ಸ್ಥಳಕ್ಕೆ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಮಂಗಳವಾರ ಮುಂಜಾನೆ ಪಿಕ್‌ಅಪ್ ವಾಹನ ಒಂದರಲ್ಲಿ ಸುಮಾರು ೨೫೦೦ ಕೆಜಿ ಪ್ರಮಾಣದ ಹರಳು ಕಲ್ಲುಗಳನ್ನು ಸಾಗಿಸುತ್ತಿದ್ದ ಸಂದರ್ಭ ಕುಶಾಲನಗರ -ಕೊಪ್ಪ ಗಡಿಭಾಗದ ಅರಣ್ಯ ತಪಾಸಣಾ ಗೇಟ್ ಸಿಬ್ಬಂದಿಗಳು ವಾಹನಗಳನ್ನು ಬೆನ್ನಟ್ಟಿ ಎರಡು ವಾಹನಗಳೊಂದಿಗೆ ಹರಳು ಕಲ್ಲು ಸಹಿತ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಪಿಕಪ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಹರಳು ಕಲ್ಲುಗಳ ಮೇಲೆ ತರಕಾರಿ ಖಾಲಿ ಕ್ರೇಟ್‌ಗಳನ್ನು ತುಂಬಲಾಗಿತ್ತು.

(ಮೊದಲ ಪುಟದಿಂದ) ಪ್ರಕರಣಕ್ಕೆ ಸಂಬAಧಿಸಿದAತೆ ಮಡಿಕೇರಿಯ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎ. ಗೋಪಾಲ್ ತಿಳಿಸಿದ್ದಾರೆ.

ಹೆಚ್ಚಿನ ತನಿಖೆ ಮುಂದುವರಿಸಿದ ಕುಶಾಲನಗರ ವಲಯ ಅರಣ್ಯಾಧಿಕಾರಿ ರತನ್ ಕುಮಾರ್ ಪ್ರಕರಣದ ಹೆಚ್ಚಿನ ತನಿಖೆಗಾಗಿ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ

ವರದಿ ನೀಡಿದ್ದು ಡಿಎಫ್‌ಓ ಭಾಸ್ಕರ್ ನೇತೃತ್ವದಲ್ಲಿ ಮೇಕೇರಿ

ಬಳಿಯ ಮೊಣ್ಣಪ್ಪ ಎಂಬುವರಿಗೆ ಸೇರಿದ ತೋಟಕ್ಕೆ ಸ್ಥಳೀಯ ಅಧಿಕಾರಿಗಳು, ಸಿಬ್ಬಂದಿಗಳೊAದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಈ ಬಗ್ಗೆ ಶಕ್ತಿಯೊಂದಿಗೆ ಮಾತನಾಡಿದ ಡಿಎಫ್‌ಓ ಭಾಸ್ಕರ್, ಮೇಕೇರಿಯಲ್ಲಿ ಸ್ಥಳ ಪರಿಶೀಲನೆ ಸಂದರ್ಭ ಹಸಿರು ಕಲ್ಲುಗಳ ಸಂಗ್ರಹದ ರಾಶಿ ಕಂಡು ಬಂದಿದೆ. ಪ್ರಕರಣವನ್ನು ಮುಂದಿನ ಕ್ರಮಕ್ಕಾಗಿ ಕಲ್ಲು ಮತ್ತು ಗಣಿಗಾರಿಕೆ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಈ ಹಿಂದೆ ೨೦೦೧ರಲ್ಲಿ ಇದೇ ತೋಟದಿಂದ ಹರಳುಕಲ್ಲು ಸಾಗಾಟವಾಗಿರುವ ಬಗ್ಗೆ ಪ್ರಕರಣ ಒಂದು ದಾಖಲಾಗಿತ್ತು.

ಈ ಹಿಂದೆ ಭಾಗಮಂಡಲ, ಸಂಪಾಜೆ ವ್ಯಾಪ್ತಿಯ ಮೀಸಲು ಅರಣ್ಯಗಳ ಭಾಗದಿಂದ ಅಕ್ರಮವಾಗಿ ಹರಳು ಕಲ್ಲುಗಳ ಅಕ್ರಮ ಸಾಗಾಟ ಯಥೇಚ್ಛವಾಗಿ ನಡೆಯುತ್ತಿತ್ತು.

ಆ ಸಂದರ್ಭ ಶಕ್ತಿಯಲ್ಲಿ ಪ್ರಕಟಗೊಂಡ ಅಕ್ರಮ ಹರಳು ಕಲ್ಲು ಸಾಗಾಟ ಪ್ರಕರಣದ ತನಿಖಾ ವರದಿ ಬೆನ್ನಲ್ಲೇ ಕೆಲವು ಇಲಾಖೆ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳುವ ಮೂಲಕ ಸಾಗಾಟಕ್ಕೆ ಶಾಶ್ವತ ಕಡಿವಾಣ ಬೀಳಲು ಕಾರಣವಾಗಿರುವುದನ್ನು ಸ್ಮರಿಸಬಹುದು.