ಪೊನ್ನAಪೇಟೆ, ಜೂ. ೧೪: ಪೊನ್ನಂಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಬೇಗೂರು ಸಮೀಪದ ಚೀನಿವಾಡ ಗ್ರಾಮದ ಎ. ಎಂ.ಮಹಮದ್ ಮುಸ್ತಕ್ ಎಂಬವರ ಮನೆಯಿಂದ ಕರಿ ಮೆಣಸು ಕಳವು ಮಾಡಿ

ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿ ಮಾಪಿಳ್ಳೆ ತೋಡು ಗ್ರಾಮದ ಜಿಯಾದ್ ಎಂಬಾತನನ್ನು ಪೊನ್ನಂಪೇಟೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.

ಏಪ್ರಿಲ್ ೩ ರಂದು ಮಹಮದ್ ಮುಸ್ತಕ್ ಎಂಬವರ ಮನೆಯಲ್ಲಿ ಆರೋಪಿ ಜಿಯಾದ್, ತನ್ನ ಸಂಗಡಿಗರಾದ ಅಶ್ರಫ್ ಮತ್ತು ಜಮೀರ್ ಎಂಬವರ ಜೊತೆ ಸೇರಿ ೫ ಚೀಲ ಕರಿಮೆಣಸು ಕಳವು ಮಾಡಿದ್ದನು. ಮೇ ೨೨ ರಂದು ಪೊಲೀಸರು ಅಶ್ರಫ್ ಮತ್ತು ಜಮೀರ್‌ನನ್ನು ಬಂಧಿಸಿದ್ದರು. ಈ ಸಂದರ್ಭ ಪ್ರಮುಖ ಆರೋಪಿ ಜಿಯಾದ್ ಪೊಲೀಸರ ಕೈಗೆ ಸಿಗದೇ ತಲೆ ಮರೆಸಿ ಕೊಂಡಿದ್ದ. ತನಿಖೆ ಮುಂದುವರೆಸಿದ್ದ ಪೊಲೀಸರು ತಾ.೧೪ ರಂದು ಬಂಧಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಅವರ ನಿರ್ದೇಶನದ ಮೇರೆಗೆ, ವೀರಾಜಪೇಟೆ ತಾಲೂಕು ಡಿವೈಎಸ್‌ಪಿ ಮೋಹನ್ ಕುಮಾರ್, ಗೋಣಿಕೊಪ್ಪ ಸರ್ಕಲ್ ಇನ್ಸ್ಪೆಕ್ಟರ್ ಶಿವರಾಜ್ ಮುಧೋಳ್ ಮಾರ್ಗದರ್ಶನದಲ್ಲಿ, ಪೊನ್ನಂಪೇಟೆ ಠಾಣಾಧಿಕಾರಿ ನವೀನ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.