ಮಡಿಕೇರಿ, ಜೂ. ೧೩ : ಕೂಡಿಗೆಯ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ಮೂರನೇ ವಾರ್ಷಿಕೋತ್ಸವದ ಅಂಗವಾಗಿ ಜುಲೈ ೬ ಮತ್ತು ೭ರಂದು ಕುಶಾಲನಗರದಲ್ಲಿ ಡ್ಯಾನ್ಸ್ v/s ಡ್ಯಾನ್ಸ್ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಅಕಾಡೆಮಿಯ ಪ್ರಮುಖ ಅಕ್ತರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕುಶಾಲನಗರದ ರೈತ ಸಹಕಾರ ಭವನದಲ್ಲಿ ಸ್ಪರ್ಧೆ ನಡೆಯಲಿದ್ದು, ಸೋಲೋ, ಕಪಲ್, ಗುಂಪು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ವಿಜೇತರಿಗೆ ನಗದು ಹಾಗೂ ಟ್ರೋಫಿಯನ್ನು ನೀಡಲಾಗುತ್ತದೆ. ರಾಜ್ಯದ ವಿವಿಧಡೆಗಳಿಂದ ಹೆಸರಾಂತ ನೃತ್ಯ ತಂಡಗಳು ಭಾಗವಹಿಸಲಿದ್ದು, ಟಿವಿ ರಿಯಾಲಿಟಿ ಶೋಗಳಲ್ಲಿ ವಿಜೇತರಾದ ಕಲಾವಿದರುಗಳು, ರಾಷ್ಟçಮಟ್ಟದಲ್ಲಿ ಹೆಸರು ಮಾಡಿರುವ ತೀರ್ಪುಗಾರರು, ನೃತ್ಯ ಸಂಯೋಜಕರುಗಳು ಪಾಲ್ಗೊಳ್ಳಲಿದ್ದಾರೆ. ಬೆಸ್ಟ್ ಕೊರಿಯೊಗ್ರಾಫರ್, ಬೆಸ್ಟ್ ಪರ್ಫಾಮರ್, ಬೆಸ್ಟ್ ಟೀಮ್ ಬಹುಮಾನಗಳೊಂದಿಗೆ ಅತೀ ಹೆಚ್ಚಿನ ಸಂಖ್ಯೆಯ ಕಲಾವಿದರೊಂದಿಗೆ ಭಾಗವಹಿಸುವ ತಂಡಕ್ಕೆ ಪ್ರಶಸ್ತಿ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗೆ ೯೬೦೬೩೦೨೯೬೩, ೬೩೬೨೨೫೭೦೮೪ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ತಂಡಗಳು ಹೆಸರು ನೋಂದಾಯಿಸಲು ತಾ. ೨೫ ಕೊನೆಯ ದಿನವಾಗಿದೆ. ನೃತ್ಯ ಸ್ಪರ್ಧೆ ವೀಕ್ಷಿಸಲು ಸಾರ್ವಜನಿಕರಿಗೆ ಉಚಿತ ಪ್ರವೇಶಾವಕಾಶ ಕಲ್ಪಿಸಲಾಗುತ್ತದೆ ಎಂದು ಅಕ್ತರ್ ಹೇಳಿದರು. ಗೋಷ್ಠಿಯಲ್ಲಿ ಅಕಾಡೆಮಿಯ ಶಶಾಂಕ್, ಸೂರ್ಯ, ಅರುಣ್, ಕೃತಿಕ್ ಉಪಸ್ಥಿತರಿದ್ದರು.