ಕುಶಾಲನಗರ, ಜೂ.೧೩: ಕುಶಾಲನಗರ ಪಟ್ಟಣದ ಮೊಬೈಲ್ ಅಂಗಡಿಯಲ್ಲಿ ಗ್ರಾಹಕನ ಸೋಗಿನಲ್ಲಿ ಬಂದ ಯುವಕನೊಬ್ಬ ಸಾವಿರಾರು ಮೌಲ್ಯದ ಮೊಬೈಲ್ ಅನ್ನು ಅಂಗಡಿಯಿAದ ಅಪಹರಿಸಿದ ಪ್ರಕರಣ ನಡೆದಿದೆ.

ಗುರುವಾರ ಕುಶಾಲನಗರ ಹೃದಯ ಭಾಗದ ಅಂಗಡಿಗೆ ಬಂದ ಯುವಕ ಮೊಬೈಲನ್ನು ಪರಿಶೀಲಿಸುವ ನೆಪದಲ್ಲಿ ಹಣ ಪಾವತಿಸದೆ ತನ್ನ ಜೇಬಿಗಿಳಿಸುವಲ್ಲಿ ಯಶಸ್ವಿಯಾಗಿರೋದು ಅಂಗಡಿಯ ಸಿಸಿ ಕ್ಯಾಮೆರಾ ದೃಶ್ಯಾವಳಿಯಲ್ಲಿ ಗೋಚರಿಸಿದೆ. ಅಂಗಡಿ ಮಾಲೀಕರು ಘಟನೆ ಬಗ್ಗೆ ಕುಶಾಲನಗರ ಪಟ್ಟಣ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.