ಮೈಸೂರು, ಜೂ. ೧೪ : ಬ್ಯಾಂಕಿನವರAತೆ ಮಾತಾಡಿ, ಆನ್‌ಲೈನ್ ಉದ್ಯೋಗ, ಷೇರು ಮಾರುಕಟ್ಟೆ ಹಣದ ಅಮಿಷ ಒಡ್ಡಿ ಹಣ ದೋಚುವ ಗ್ಯಾಂಗ್‌ನ ವಂಚಕರು ಇದೀಗ ಅರಣ್ಯ ಇಲಾಖೆಯ ಆನ್‌ಲೈನ್ ರಿಸರ್ವೇಶನ್‌ಗೂ ನಕಲಿ ವೆಬ್‌ಸೈಟ್ ತೆರೆದು ಹಣ ದೋಚುತ್ತಿರುವ ಬಗ್ಗೆ ಅರಣ್ಯ ಇಲಾಖೆಯು ಪ್ರವಾಸಿಗರಿಗೆ ಎಚ್ಚರಿಸಿದೆ.

ಕಳೆದ ಜನವರಿ ತಿಂಗಳಿನಲ್ಲಿ ನಾಗರಹೊಳೆ ನ್ಯಾಷನಲ್ ಪಾರ್ಕ್ ಎಂಬ ನಕಲಿ ವೆಬ್‌ಸೈಟ್ ತೆರೆದು ಪ್ರವಾಸಿಗರಿಗೆ ಸಫಾರಿ ಹಾಗೂ ರೂಂ ಬುಕಿಂಗ್ ಎಂದು ಹಣ ವಂಚಿಸುತ್ತಿದ್ದ ಗ್ಯಾಂಗ್ ಇದೀಗ ಮತ್ತೆ ಸಕ್ರಿಯವಾಗಿದೆ. ನಾಗರಹೊಳೆಯ ಕಾಕನಕೋಟೆ, ವೀರನಗೊಸಳ್ಳಿ ಮತ್ತು ನಾಣಚ್ಚಿ ಕೇಂದ್ರಗಳ ಮೂಲಕ ಸಫಾರಿಗೆ ತೆರಳಲು ಪ್ರವಾಸಿಗರಿಗೆ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ ಇದೆ. ಈ ಹಿಂದೆ ಜನವರಿಯಲ್ಲಿ ನಕಲಿ ವೆಬ್‌ಸೈಟ್ ಮೂಲಕ ಇಲ್ಲಿಗೆ ಬುಕ್ಕಿಂಗ್ ಮಾಡಿಕೊಂಡು ಪ್ರವಾಸಿಗರಿಗೆ ಸಾವಿರಾರು ರೂಪಾಯಿ ವಂಚನೆ ಮಾಡಲಾಗಿತ್ತು. ಪ್ರವಾಸಿಗರು ಬುಕಿಂಗ್ ಮಾಡಿದ ಹಿನ್ನೆಲೆಯಲ್ಲಿ ಆರಾಮವಾಗಿ ಸಫಾರಿ ಕೇಂದ್ರಕ್ಕೆ ಬಂದಾಗಲೇ ನಕಲಿ ಬುಕ್ಕಿಂಗ್ ವಂಚನೆ ಬಯಲಾಗುತ್ತಿತ್ತು.

ಎಚ್ಚೆತ್ತ ಅರಣ್ಯ ಇಲಾಖೆ ಕೊಡಗು ಜಿಲ್ಲಾ ಪೊಲೀಸ್ ಅಧಿಕಾರಿಯವರಿಗೆ ಜನವರಿ ತಿಂಗಳಿನಲ್ಲೇ ದೂರು ಸಲ್ಲಿಸಿ ಸೂಕ್ತ ಕ್ರಮಕ್ಕೆ ಕೋರಿತ್ತು. ಆಗ ಸ್ಥಗಿತಗೊಂಡಿದ್ದ ನಕಲಿ ವೆಬ್‌ಸೈಟ್‌ಗಳು ಈಗ ಪುನಃ ಆಟ ಶುರು ಮಾಡಿವೆ ಎಂದು ನಾಗರಹೊಳೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಕುಮಾರ್ ಚಿಕ್ಕನರಗುಂದ ತಿಳಿಸಿದ್ದಾರೆ. ಬರೀ ನಾಗರಹೊಳೆ ಅಲ್ಲದೆ, ಬಂಡೀಪುರ, ವೈನಾಡು, ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್, ಕಾಜೀರಂಗ ಅಭಯಾರಣ್ಯ ಈ ರೀತಿ ದೇಶದ ಎಲ್ಲಾ ಅರಣ್ಯಗಳ ನಕಲಿ ವೆಬ್‌ಸೈಟ್ ಮಾಡಿಕೊಂಡು ಪ್ರವಾಸಿಗರನ್ನು ವಂಚಿಸುವುದೇ ಅಲ್ಲದೆ ಅವರ ಪ್ರವಾಸ ಯೋಜನೆ, ಅಮೂಲ್ಯ ಸಮಯವನ್ನೂ ದುಷ್ಕರ್ಮಿಗಳು ಹಾಳು ಮಾಡುತಿದ್ದಾರೆ ಎಂದು ಹರ್ಷ ತಿಳಿಸಿದರು. ಈಗ ಅರಣ್ಯ ಇಲಾಖೆ ಪುನಃ ಪೊಲೀಸ್ ಇಲಾಖೆಗೆ ಪತ್ರ ಬರೆದಿದೆ.

ನಾಗರಹೊಳೆ ರಾಷ್ಟಿçÃಯ ಉದ್ಯಾನವನದ ಚಿತ್ರ, ಆನೆ, ಹುಲಿ ಮತ್ತು ಇತರ ಪ್ರಾಣಿಗಳ ಚಿತ್ರ ಇರುವ ನಕಲಿ ವೆಬ್‌ಸೈಟ್‌ನಲ್ಲಿ ರಿಸರ್ವೇಶನ್ (ಕಾಯ್ದಿರಿಸುವಿಕೆ) ಮಾಡಿಕೊಳ್ಳ ಲಾಗುತ್ತಿತ್ತು. ರಿಸರ್ವೇಷನ್ ಆಗಿರುವ ಕುರಿತು ಮೊಬೈಲ್‌ಗೆ ಸಂದೇಶ ಬರುವಂತೆಯೂ ವಂಚಕರು ಮಾಡಿಕೊಂಡಿದ್ದಾರೆ. ನಾಗರ ಹೊಳೆಯ ಅಧಿಕೃತ ವೆಬ್‌ಸೈಟ್ ನಾಗರಹೊಳೆ ಟೈಗರ್ ರಿಸರ್ವ್ ಮಾತ್ರ ಆಗಿದ್ದು (hಣಣಠಿs://ತಿತಿತಿ. ಟಿಚಿgಚಿಡಿಚಿhoಟeಣigeಡಿಡಿeseಡಿve. ಛಿom/) ಇತರ ಯಾವುದೇ ವೆಬ್‌ಸೈಟ್‌ಗಳಲ್ಲಿ ರಿಸರ್ವೇಷನ್ ಮಾಡಿಸದಂತೆ ಹರ್ಷಕುಮಾರ್ ಪ್ರವಾಸಿಗರಿಗೆ ಎಚ್ಚರಿಸಿದ್ದಾರೆ.

ನಕಲಿ ವೆಬ್‌ಸೈಟ್‌ನಲ್ಲಿ ನೀಡಿರುವ ಸಂಖ್ಯೆಗೆ ಕರೆ ಮಾಡಿದರೆ ಅಲ್ಲಿ ಬರೀ ಹಿಂದಿಯಲ್ಲಿ ಮಾತಾಡುತ್ತಿದ್ದಾರೆ. ಇದರಿಂದಲೇ ವಂಚಕರೆAಬುದು ಸ್ಪಷ್ಟವಾಗುತ್ತಿದ್ದು, ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಿರುವ ಮೊಬೈಲ್‌ನಲ್ಲಿ ಕನ್ನಡದಲ್ಲಿ ಮಾತಾಡಿ ನಂತರ ಬುಕ್ಕಿಂಗ್ ಖಚಿತಪಡಿಸಿ ಕೊಳ್ಳಿ ಎಂದು ಇಲಾಖೆ ಎಚ್ಚರಿಸಿದೆ.

- ಕೋವರ್ ಕೊಲ್ಲಿ ಇಂದ್ರೇಶ್